Uber ನ ಆ್ಯಪ್‌ನಲ್ಲಿಯೇ ಟಿಪ್ಸ್ ಕೊಡುವ ಸೇವೆ
ಧನ್ಯವಾದ ಹೇಳಲು ಟಿಪ್ ನೀಡುವುದು ಸುಲಭ ಮಾರ್ಗವಾಗಿದೆ. ಸವಾರರು ಮತ್ತು Uber Eats ಗ್ರಾಹಕರು ಪ್ರತಿಯೊಂದು ಟ್ರಿಪ್ ಅಥವಾ ಡೆಲಿವರಿ ಮುಗಿದ ಕೂಡಲೇ ತಮ್ಮ ಆ್ಯಪ್‌ನಿಂದಲೇ ನೇರವಾಗಿ ಟಿಪ್ ನೀಡುವ ಆಯ್ಕೆಯನ್ನು ಹೊಂದಿರುತ್ತಾರೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಸುಲಭ ಮತ್ತು ಅನುಕೂಲಕರ ವಿಧಾನ
ಸುಗಮ, ತಡೆರಹಿತ ಸವಾರಿಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಟ್ರಿಪ್ ಮುಗಿದ ನಂತರ ನಿಮಗೆ ಅನುಕೂಲಕರವಾದ ಸಮಯದಲ್ಲಿ 30 ದಿನಗಳವರೆಗೆ ಚಾಲಕರಿಗೆ ಟಿಪ್ ನೀಡಬಹುದು.
ಶೂನ್ಯ ಸೇವಾ ಶುಲ್ಕಗಳು
ಟಿಪ್ಸ್ ಮೊತ್ತವು ನಿಮ್ಮ ಚಾಲಕರ ಖಾತೆಗೆ ಹೋಗುತ್ತದೆ; ಟಿಪ್ಸ್ ಮೇಲೆ ಯಾವುದೇ ಸೇವಾ ಶುಲ್ಕಗಳನ್ನು Uber ವಿಧಿಸುವುದಿಲ್ಲ.
ಗೌಪ್ಯತೆ
ಟಿಪ್ಸ್ ನೀಡುವುದು ನಿಮ್ಮ ಟ್ರಿಪ್‌ಗೆ ಸಂಬಂಧಿಸಿದ್ದು, ನಿಮ್ಮ ಹೆಸರಿಗಲ್ಲ.
ಆಗಾಗ ಕೇಳಲಾಗುವ ಪ್ರಶ್ನೆಗಳು
- ನಾನು ಟಿಪ್ಸ್ ನೀಡಲೇ ಬೇಕೇ?
ಟಿಪ್ಸ್ ನೀಡುವುದು ಐಚ್ಛಿಕ ಆಯ್ಕೆಯಾಗಿದೆ. ಟಿಪ್ಸ್ ಮೊತ್ತವನ್ನು ಸೇರಿಸಲು ನೀವು ಸ್ವತಂತ್ರರು ಮತ್ತು ನೀವು ನೀಡುವ ಟಿಪ್ಸ್ ಮೊತ್ತವನ್ನು ಸ್ವೀಕರಿಸುವುದು ಕೂಡ ಚಾಲಕರಿಗೆ ಬಿಟ್ಟಿದ್ದು.
- ನನ್ನ ಡ್ರೈವರ್ಗೆ ಟಿಪ್ಸ್ ಹಣವನ್ನು ಕೊಡುವುದು ಹೇಗೆ?
Down Small ಆ್ಯಪ್ ಮೂಲಕ ನಿಮ್ಮ ಚಾಲಕರಿಗೆ ಟಿಪ್ ನೀಡುವುದು ತುಂಬಾ ಸುಲಭ ಮಾರ್ಗ. ನಿಮ್ಮ ಟ್ರಿಪ್‌ನ ಕೊನೆಯಲ್ಲಿ, ನಿಮ್ಮ ಚಾಲಕನ ಕುರಿತು ರೇಟ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ರೇಟಿಂಗ್ ನೀಡಿದ ಬಳಿಕ, ಟಿಪ್ಸ್ ನೀಡುವ ಆಯ್ಕೆಯನ್ನು ನಿಮಗೇ ನೀಡಲಾಗುತ್ತದೆ. ನಿಮ್ಮ ಚಾಲಕರಿಗೆ ನೇರವಾಗಿ ಹಣವನ್ನು ನೀಡುವುದು ಕೂಡ ಒಂದು ಆಯ್ಕೆಯಾಗಿದೆ.
- ಟಿಪ್ಸ್ ಸೇರಿಸುವ ಆಯ್ಕೆಯು ನನಗೇಕೆ ಕಾಣಿಸುವುದಿಲ್ಲ?
Down Small ಟಿಪ್ಸ್ ನೀಡುವಿಕೆ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕಾದರೆ ನಿಮ್ಮ ಆ್ಯಪ್ ಅನ್ನು ಅಪ್‌ಡೇಟ್ ಮಾಡಬೇಕಾಗಬಹುದು. ಜೊತೆಗೆ, ಕೆಲವು ಚಾಲಕರು ಆ್ಯಪ್ ಮೂಲಕ ಟಿಪ್ಸ್ ಹಣವನ್ನು ಸ್ವೀಕರಿಸದಿರಲು ಆಯ್ಕೆ ಮಾಡಬಹುದು. ಅಥವಾ ನಿಮ್ಮ ಪ್ರದೇಶದಲ್ಲಿ ಟಿಪ್ಸ್ ನೀಡುವ ಸೌಲಭ್ಯವು ಇನ್ನೂ ಲಭ್ಯವಿಲ್ಲದೇ ಇರಬಹುದ'ು. ನೀವು ಬಯಸುವುದಾದರೆ, ನಗದು ರೂಪದಲ್ಲಿ ನಿಮ್ಮ ಚಾಲಕರಿಗೆ ಟಿಪ್ ನೀಡಬಹುದು.
- ನಾನು ಕೊಡುವ ಮೊತ್ತದಲ್ಲಿ ಎಷ್ಟು ಟಿಪ್ಸ್ ಚಾಲಕರ ಕೈಸೇರುತ್ತದೆ?
Down Small ಅದೆಲ್ಲವೂ ಕೂಡ. ಟಿಪ್ಸ್ ಮೇಲೆ Uber ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.
- ನನ್ನ ಚಾಲಕರಿಗೆ ಟಿಪ್ಸ್ ನೀಡಲು ನಾನು ಗಿಫ್ಟ್ ಕಾರ್ಡ್ ಅಥವಾ Uber Cash ಅನ್ನು ಬಳಸಬಹುದೇ?
Down Small Uber Cash ಮತ್ತು ಗಿಫ್ಟ್ ಕಾರ್ಡ್‌ಗಳನ್ನು ಬಳಸಿಕೊಂಡು ಟಿಪ್ಸ್ ನೀಡಬಹುದಾಗಿದೆ. ಆದರೂ, ನಿಮ್ಮ ಚಾಲಕರಿಗೆ ಟಿಪ್ ನೀಡಲು ಪ್ರಮೋಷನ್‌ಗಳನ್ನು ಬಳಸಲಾಗುವುದಿಲ್ಲ.
- ಹಿಂದಿನ ಟ್ರಿಪ್ಗಳಿಗೆ ಟಿಪ್ಸ್ ನೀಡುವುದು ಹೇಗೆ?
Down Small ಟ್ರಿಪ್ ಮುಗಿದ ಬಳಿಕ, ಆ್ಯಪ್‌ನಲ್ಲಿ, riders.uber.com ನಲ್ಲಿ ಅಥವಾ ನಿಮ್ಮ ಇಮೇಲ್ ಮಾಡಿದ ಟ್ರಿಪ್ ರಸೀತಿಯ ಮೂಲಕ 30 ದಿನಗಳವರೆಗೆ ಟಿಪ್ ಸೇರಿಸುವ ಆಯ್ಕೆ ನಿಮಗಿರುತ್ತದೆ.
- ಶುಲ್ಕ ವಿಭಜನೆ ವೈಶಿಷ್ಟ್ಯವನ್ನು ಬಳಸುವಾಗ ಟಿಪ್ಸ್ ನೀಡುವಿಕೆಯು ಹೇಗೆ ಪ್ರಯೋಜನಕ್ಕೆ ಬರುತ್ತದೆ?
Down Small ಟ್ರಿಪ್‌ಗೆ ಮೂಲತಃ ಯಾರು ವಿನಂತಿಸಿಕೊಂಡಿರುತ್ತಾರೋ ಆ ಸವಾರರು ಆ ಟ್ರಿಪ್‌ಗೆ ನೀಡಬೇಕೆಂದಿರುವ ಟಿಪ್ಸ್ ಮೊತ್ತವನ್ನು ಆಯ್ಕೆ ಮಾಡಬಹುದು. ಮೂಲತಃ ವಿನಂತಿಸಿಕೊಂಡಿರುವ ಸವಾರರು ಕೊಡುವ ಟಿಪ್ಸ್ ಮೊತ್ತವನ್ನು, ಇತರೆ ಪ್ರಯಾಣಿಕರ ನಡುವೆ ವಿಭಾಗಿಸುವುದಿಲ್ಲ.
ಆ್ಯಪ್ ವೈಶಿಷ್ಟ್ಯಗಳು
ವಿನಂತಿ ಮಾಡುವುದು ಸುಲಭ
ಅಡಚಣೆಯಿಲ್ಲದ ಪಾವತಿಗಳು
ತ್ವರಿತ ಪಿಕಪ್ಗಳು
ನಿಮ್ಮ ಟ್ರಿಪ್ ಅನ್ನು ಯೋಜಿಸಿ
ಸವಾರಿಯನ್ನು ಆನಂದಿಸಿ
ನಿಮ್ಮ ಸವಾರಿ ಕುರಿತು ರೇಟ್ ಮಾಡಿ
ಕಂಪನಿ