ವೈವಿಧ್ಯತೆ ಮತ್ತು ಸೇರ್ಪಡೆ
2020 ನೇ ಇಸವಿಯು ಐತಿಹಾಸಿಕ ಬದಲಾವಣೆಯ ಸಮಯವಾಗಿದೆ. ವರ್ಣಭೇದದ ಅನ್ಯಾಯ ಮತ್ತು COVID-19 ಸಾಂಕ್ರಾಮಿಕ ರೋಗದಂತಹ ಸವಾಲುಗಳು, ಇಡೀ ಜಾಗತಿಕ ಜನಸಮೂಹ ದಿಟ್ಟ ನಿರ್ಧಾರವನ್ನು ಕೈಗೊಳ್ಳಲು ಮುನ್ನುಡಿ ಬರೆಯಿತು. Uber ನಲ್ಲಿ, ಆಂತರಿಕವಾಗ ಕೇವಲ ವರ್ಣಭೇದದ ವಿರೋಧಿ ಕಂಪನಿಯಾಗಿರದೇ, ಜಗತ್ತಿನೆಲ್ಲೆಡೆ ಇರುವ ನಮ್ಮ ಸಮುದಾಯಗಳ ಮುಕ್ತ ಪ್ರಗತಿಗೂ ಸಹ ನಮ್ಮ ಪ್ಲಾಟ್ಫಾರ್ಮ್ಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮುಕ್ತವಾಗಿ ಸ್ಪಂದಿಸಿದ್ದೇವೆ.
ನಮ್ಮ 2020 ಜನರು ಮತ್ತು ಸಂಸ್ಕೃತಿ ವರದಿಯು, ನಮ್ಮ ಉದ್ಯೋಗಿಗಳ ಕುರಿತಾದ ಏಕತೆಯ ಮಾಹಿತಿಯನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ಉತ್ತಮ ಪ್ರಾತಿನಿಧ್ಯ ಮತ್ತು ಸುಧಾರಿತ ಅರ್ಥಕ್ಕೆ ಕಾರಣವಾಗುವ ದೀರ್ಘಕಾಲೀನ ವ್ಯವಸ್ಥಿತ ಬದಲಾವಣೆಗಳ ಬಗ್ಗೆಯೂ ಇದರಲ್ಲಿ ಸ್ವವಿವರವಾಗಿ ತಿಳಿಸಲಾಗಿದೆ. ನಮ್ಮ ಎಲ್ಲಾ ಕಾರ್ಯಗಳ ನಡುವೆಯೂ ಜನಾಂಗೀಯ ಮತ್ತು ಸಾಮಾಜಿಕ ಸಮಾನತೆಯೊಂದಿಗೆ ಮುಂದುವರಿಯುವುದು ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ.
Culture and belonging
COVID-19 ಸೋಂಕು, ನಾವು ಬದುಕುವ, ದುಡಿಯುವ ಮತ್ತು ಪ್ರಯಾಣಿಸುವ ವಿಧಾನವನ್ನು ಬದಲಿಸಿದೆ. ನಮ್ಮ ಕಾರ್ಯಪಡೆಯು ಕಚೇರಿಯಿಂದ ಮನೆಯಿಂದಲೇ ಕೆಲಸ ಮಾಡಲು ಸ್ಥಳಾಂತರಗೊಳ್ಳುವುದರ ಜೊತೆಗೆ, ಜನಸಮೂಹದ ಸಂಸ್ಕೃತಿಯನ್ನು ನಿರ್ವಹಿಸುವುದರ ಕುರಿತಂತೆ ಹೊಸ ಪರಿಗಣನೆಗಳು ಸಹ ಹುಟ್ಟಿಕೊಂಡವು. ಅದು ಪೋಷಕರು ಮತ್ತು ಪಾಲಕರಿಗೆ ಹೊಂದಿಕೆಯಾಗುವ ಕೆಲಸದ ಆಯ್ಕೆಗಳನ್ನು ಕ್ರೋಢೀಕರಿಸುವ ನೀತಿಗಳನ್ನು ಒಳಗೊಂಡಿದೆ, ಹೀಗಾಗಿ ಅವರು ಪ್ರೀತಿಪಾತ್ರರನ್ನು ಆರೈಕೆ ಮಾಡುತ್ತಲೇ ಕೆಲಸದ ಜೀವನವನ್ನು ಸಹ ಸಮತೋಲನಗೊಳಿಸಬಹುದು. ಪ್ರತಿಯೊಬ್ಬರ ಮನೆಯ ಸ್ಥಿತಿಗಳು ವಿಭಿನ್ನವಾಗಿರುತ್ತವೆ, ಹೀಗಾಗಿ ನಾವು 3 ಮುಕ್ತ ಆಯ್ಕೆಗಳನ್ನು ಸೃಷ್ಟಿಸಿದ್ದೇವೆ. ಅವುಗಳೆಂದರೆ: ಇಡೀ ದಿನ ತಮಗೆ ಬೇಕಾದಂತೆ ಕೆಲಸ ಮಾಡುವುದು, ಕೆಲಸದ ಅವಧಿಯನ್ನು ಹಂಚುವುದು ಮತ್ತು ಪಾಳಿ ಬದಲಾವಣೆಗಳು.
ಹೆಚ್ಚುವರಿಯಾಗಿ, ನಾವು ನಮ್ಮ ಮಾನಸಿಕ ಆರೋಗ್ಯ ಬೆಂಬಲವನ್ನು ಹೆಚ್ಚಿಸಿದ್ದೇವೆ, ಉದ್ಯೋಗಿಗಳಿಗೆ ವರ್ಕ್-ಫ್ರಮ್-ಹೋಮ್ ಸ್ಟೈಫಂಡ್ ನೀಡಿದ್ದೇವೆ ಮತ್ತು ಜನರು ರಿಮೋಟ್ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವಾಗ ವಿಮರ್ಶೆಗಳು ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಮಧ್ಯವಾರ್ಷಿಕ ಕಾರ್ಯಕ್ಷಮತೆ ವಿಮರ್ಶೆ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದೇವೆ. ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುವ ಮತ್ತು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಸಜ್ಜುಗೊಳಿಸುವ ಸ್ಥಳ Uber ಆಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ನಮ್ಮ ಶ್ರಮವನ್ನು ಮುಂದುವರಿಸುತ್ತೇವೆ.
Interfaith at Uber
Uber's community for people of various spiritual beliefs and cultures
Social impact
ಇಡೀ ಜಗತ್ತೇ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನಾವು—ಒಂದು ವ್ಯವಹಾರಿಕ ಪ್ರಗತಿಶೀಲ ಕಂಪನಿಯಾಗಿ—ಹೇಗೆ ನೆರವಿಗೆ ಧಾವಿಸಬಹುದು ಎಂಬುದನ್ನು ಬಲ್ಲೆವು. ನಮ್ಮ ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಪ್ರಯಾಣವನ್ನು ನಿಲ್ಲಿಸಿ ಮನೆಯಲ್ಲಿಯೇ ಇರುವಂತೆ ನಮ್ಮ ಜನರಲ್ಲಿ ಕೇಳಿಕೊಂಡೆವು, ಇದರ ಪರಿಣಾಮ ಅಗತ್ಯ ವಸ್ತುಗಳನ್ನು ಪೂರೈಸಲು ಅಂದರೆ: ಮೊದಲ ಪ್ರತಿಕ್ರಿಯೆ ನೀಡುವವರು (ಕೆಲಸ ಮಾಡಲು) ಮತ್ತು ಆಹಾರ (ಅಗತ್ಯವಿರುವವರಿಗೆ) ಡೆಲಿವರಿ ಮಾಡಲು ನಮಗೆ ಸಾಧ್ಯವಾಯಿತು.
ಸವಾರರು ತಮ್ಮ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಆರೋಗ್ಯ ಕಾರ್ಯಕರ್ತರು, ಐಸೋಲೇಟ್ ಆಗಿರುವ ಹಿರಿಯ ವ್ಯಕ್ತಿಗಳು, ವೈದ್ಯಕೀಯ ಔಷಧಿಗಳನ್ನು ಎದುರು ನೋಡುತ್ತಿರುವ ರೋಗಿಗಳು ಮತ್ತು ಸ್ಥಳೀಯ ಇಲ್ಲವೇ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರು ಸೇರಿದಂತೆ, ಜಗತ್ತಿನೆಲ್ಲೆಡೆ ತುರ್ತು ನೆರವಿಗಾಗಿ ಹಂಬಲಿಸುತ್ತಿದ್ದ ಜನರಿಗೆ 10 ಮಿಲಿಯನ್ ಉಚಿತ ಸವಾರಿಗಳು, ಆಹಾರ ಸೇವೆಗಳು ಮತ್ತು ಆಹಾರ ಡೆಲಿವರಿ ಕಾರ್ಯಗಳನ್ನು ನಡೆಸಲು ನಾವು ಬದ್ಧರಾಗಿದ್ದೆವು. ಮೊದಲ 3 ತಿಂಗಳುಗಳಲ್ಲೇ, Uber ಕಂಪನಿಯು ತನ್ನ ಬದ್ಧತೆಯನ್ನು ದ್ವಿಗುಣಗೊಳಿಸುವ ಮೂಲಕ 23 ಮಿಲಿಯನ್ ಉಚಿತ ಸವಾರಿಗಳು, ಆಹಾರಗಳು ಮತ್ತು ಡೆಲಿವರಿಗಳ ಕಾರ್ಯಗಳನ್ನು ಪೂರೈಸಿತು.
ಈ ಬಿಕ್ಕಟ್ಟಿನ ಪರಿಸ್ಥಿತಿಯುದ್ದಕ್ಕೂ ನಮ್ಮ ಡೆಲಿವರಿ ಪಾಲುದಾರರು ಮತ್ತು ಚಾಲಕರು ನಮ್ಮ ಸಮುದಾಯಗಳಿಗೆ ಸಹಾಯ ಮಾಡಿದಂತೆಯೇ, ಸುರಕ್ಷಿತವಾಗಿರಲು ಅವರಿಗೆ ಸಹಾಯ ಮಾಡುವುದು ಕೂಡ ನಮ್ಮ ಆದ್ಯತೆಯಾಗಿತ್ತು. ಹಾಗೆ ಮಾಡಲು, ನಾವು ಮಾಸ್ಕ್ಗಳು ಮತ್ತು ಸೋಂಕುನಿವಾರಕ ಸ್ಪ್ರೇ ಬಾಟಲಿಗಳನ್ನು ಪೂರೈಸಲು ಅವಿರತ ಶ್ರಮಿಸಿದ್ದೇವೆ, ಅಲ್ಲದೇ COVID-19 ಸೋಂಕು ಕಂಡುಬಂದ ವ್ಯಕ್ತಿಗಳಿಗೆ ಹಣಕಾಸಿನ ನೆರವು ನೀಡಿದ್ದೇವೆ ಅಥವಾ ಸ್ವಯಂ-ಐಸೋಲೇಟ್ ಆಗಿರುವಂತೆ ವಿನಂತಿಸಿಕೊಂಡಿದ್ದೇವೆ, ಜೊತೆಗೆ ನಮ್ಮ ಪ್ಲಾಟ್ಫಾರ್ಮ್ನ ಒಳಗೂ ಹೊರಗೂ ಇತರೆ ಕೆಲಸಗಳನ್ನು ಹುಡುಕಲು ಚಾಲಕರಿಗೆ ನೆರವು ನೀಡಿದ್ದೇವೆ. ನಗರಗಳು ನಿಧಾನವಾಗಿ ಮತ್ತೆ ತೆರೆದುಕೊಳ್ಳಲು ಆರಂಭಿಸಿದಂತೆ, ಈ ಸಾಂಕ್ರಾಮಿಕ ರೋಗದಿಂದ ಜರ್ಜರಿತವಾಗಿರುವ ಜನಸಮೂಹಕ್ಕೆ ನೀಡುವ ನಮ್ಮ ಬೆಂಬಲ ನಿರಂತರವಾಗಿರುತ್ತದೆ ಅಲ್ಲದೇ ಜಗತ್ತು ಮತ್ತೆ ಸುರಕ್ಷಿತವಾಗಿ ಮುನ್ನಡೆಯಲು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ.
Corporate leadership
ನಮ್ಮ ಜನಾಂಗೀಯ ಸಮಾನತೆ ಬದ್ಧತೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಜಾರಿಗೆ ತಂದ ಪ್ರಮುಖ ನೀತಿಯೆಂದರೆ, ಅದು ರೇಸಿಯಲ್ ಈಕ್ವಿಟ್ ಲೀಡರ್ಶಿಪ್ ಕೌನ್ಸಿಲ್ (RELC). ನಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಸಮರ್ಥನೆಗಳಲ್ಲಿ ಆಂತರಿಕವಾಗಿ ಮತ್ತು ಬಾಹ್ಯವಾಗಿ ಜನಾಂಗೀಯ ಸಮಾನತೆಯನ್ನು ನಿರ್ಮಿಸುವ ಬದ್ಧತೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಈ ಸ್ಟೀರಿಂಗ್ ಸಮಿತಿಯು ಹೊಂದಿದೆ. 2019 ರಲ್ಲಿ, ನಾವು ನಮ್ಮ D&I ಉದ್ದೇಶಗಳಿಗೆ ಕಾರ್ಯನಿರ್ವಾಹಕ ಪರಿಹಾರವನ್ನೂ ಸಂಯೋಜಿಸಿದ್ದೇವೆ, ಈ ಮಹತ್ವದ ಕೆಲಸಕ್ಕೆ ನಮ್ಮ ಕಂಪನಿಯ ನಾಯಕರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಂಡಿದ್ದೇವೆ. 2020 ಕ್ಕಾಗಿ, ನಾಯಕತ್ವದಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸುವ ಗುರಿಗಳನ್ನು ಸ್ಥಾಪಿಸಿದ್ದೇವೆ ಮತ್ತು ಕೆಲವು ಸಕಾರಾತ್ಮಕ ಪ್ರಗತಿಯನ್ನು ಕಂಡಿದ್ದೇವೆ, ವಿಶೇಷವಾಗಿ ಮಹಿಳೆಯರಿಗೆ—ಜೊತೆಗೆ ಕಡಿಮೆ ಪ್ರತಿನಿಧಿಸದ ಪ್ರತಿಭೆಗಳಿಗೆ ಸ್ವಲ್ಪ ಹೆಚ್ಚಳವಾಗಿದೆ.
“ಚಲನವಲನಗಳಿಗೆ ಶಕ್ತಿ ತುಂಬುವ ಕಂಪನಿಯಾಗಿ, ಪ್ರತಿಯೊಬ್ಬರೂ ದೈಹಿಕವಾಗಿ, ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಓಡಾಡುತ್ತಾರೆಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ನಮ್ಮ ಸಮಾಜದಲ್ಲಿರುವ ವರ್ಣಭೇದದ ವಿರುದ್ಧ ಹೋರಾಡಲು ಮತ್ತು ನಮ್ಮ ಕಂಪನಿಯ ಒಳಗೂ ಹೊರಗೂ ಸಮಾನತೆಯನ್ನು ಸಾಧಿಸಿ ತೋರಿಸಲು ನಮ್ಮ ಸಹಾಯಹಸ್ತ ಸದಾ ಮುಂದಿರುತ್ತದೆ.”
ಡ್ಯಾರಾ, ಖೋಶ್ರೋಶಾಹಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, Uber
“ಇತಿಹಾಸ ನಮಗೆ ಮರುರೂಪ ನೀಡುತ್ತದೆ ಎಂದು ನಾವು ನಂಬುತ್ತೇವೆಯಾದರೂ, ಅದೇ ಅಂಶಗಳನ್ನು ನಮ್ಮ ಕುರಿತು ವ್ಯಾಖ್ಯಾನಿಸುತ್ತವೆ ಎಂದರ್ಥವಲ್ಲ. ಕೇವಲ ಪಕ್ಷಪಾತವಿಲ್ಲದ ಹೆಚ್ಚಿನ ಸಮಾನತೆಯನ್ನು ಸಕ್ರಿಯವಾಗಿ ರಚಿಸುವ ವ್ಯವಹಾರವಾಗಿ, ಹೊಸ ವ್ಯಾಪಾರ ಮಾರ್ಗಗಳಿಗೆ ಜೀವ ತುಂಬಲು Uber ಬದ್ಧವಾಗಿದೆ. ”
ಬೊ ಯಂಗ್ ಲೀ, ವೈವಿಧ್ಯತೆ ಮತ್ತು ಸೇರ್ಪಡೆ ಮುಖ್ಯ ಅಧಿಕಾರಿ, Uber
ನಮ್ಮ ಉದ್ಯೋಗಿಗಳ ಮಾಹಿತಿ
ಬನ್ನಿ, ಕಳೆದ 2 ವರ್ಷಗಳಲ್ಲಿ ನಮ್ಮ ಉದ್ಯೋಗಿಗಳ ಪ್ರಾತಿನಿಧ್ಯವನ್ನು ಹತ್ತಿರದಿಂದ ನೋಡೋಣ
ಚಾರ್ಟ್ಗಳು | ಜಾಗತಿಕ ಸ್ತ್ರೀ/ಪುರುಷ ಮಾಹಿತಿ ಮತ್ತು ಯುಎಸ್ ಜನಾಂಗ/ಜನಾಂಗೀಯತೆ ಪ್ರಾತಿನಿಧ್ಯ
Global gender representation
US race and ethnicity representation²
Gender by region
ಚಾರ್ಟ್ಗಳು | ನಮ್ಮ ನಾಯಕತ್ವ ಪ್ರಾತಿನಿಧ್ಯ⁴
Global gender representation
ಯುಎಸ್ ಜನಾಂಗ/ಜನಾಂಗೀಯತೆ ಪ್ರಾತಿನಿಧ್ಯ⁵
ಜನರು ಮತ್ತು ಸಂಸ್ಕೃತಿ ವರದಿಯ 35 ಮತ್ತು 36 ಪುಟಗಳಲ್ಲಿ ಯುಎಸ್ನಲ್ಲಿರುವ ಜನಾಂಗದ ಪ್ರಾತಿನಿಧ್ಯದ ಪ್ರಕಾರವಾಗಿ ಸ್ತ್ರೀ/ಪುರುಷ ಮಾಹಿತಿ ಚಾರ್ಟ್ಗಳ ಮೇಲೆ ಕಣ್ಣಾಡಿಸಿ.
ಚಾರ್ಟ್ಗಳು | ನಮ್ಮ ಹೊಸ ನೇಮಕಾತಿಗಳ ಪ್ರಾತಿನಿಧ್ಯ⁶
Global gender representation
ಯುಎಸ್ ಜನಾಂಗ/ಜನಾಂಗೀಯತೆ ಪ್ರಾತಿನಿಧ್ಯ⁷
ಜನರು ಮತ್ತು ಸಂಸ್ಕೃತಿ ವರದಿಯ 37 ಮತ್ತು 38 ಪುಟಗಳಲ್ಲಿ ನಮ್ಮ ಹೊಸ ಯುಎಸ್ ನೇಮಕಾತಿಗಳ ಜನಾಂಗ ಪ್ರಾತಿನಿಧ್ಯದ ಪ್ರಕಾರವಾಗಿ ಸ್ತ್ರೀ/ಪುರುಷ ಮಾಹಿತಿ ಚಾರ್ಟ್ಗಳ ಮೇಲೆ ಕಣ್ಣಾಡಿಸಿ.
¹ಪ್ರಸ್ತುತ ಪ್ರಾತಿನಿಧ್ಯ ಮಾಹಿತಿಯು ಮಾರ್ಚ್ 2019 ಮತ್ತು ಆಗಸ್ಟ್ 2020 ರಂತೆ.
²ರೌಂಡಪ್ ಮಾಡುವ ಕಾರಣದಿಂದಾಗಿ, ಜನಾಂಗ ಮತ್ತು ಜನಾಂಗೀಯ ಪ್ರಮಾಣದ ಶೇಕಡಾವಾರು ಒಟ್ಟು 100% ಇಲ್ಲದಿರಬಹುದು.
³ನಮ್ಮ ಬೆಂಬಲ ಕಾರ್ಯಪಡೆ (ಸಾಮಾನ್ಯವಾಗಿ ಉದ್ಯಮದ ಪರಿಭಾಷೆಯಲ್ಲಿ ಗ್ರಾಹಕ ಸೇವಾ ಉದ್ಯೋಗಿಗಳು ಎಂದು ಕರೆಯಲಾಗುತ್ತದೆ) ನಮ್ಮ ಶ್ರೇಷ್ಠತೆ ಮತ್ತು ಗ್ರೀನ್ಲೈಟ್ ಕೇಂದ್ರಗಳ ಸಮುದಾಯ ತಜ್ಞರನ್ನು ಒಳಗೊಂಡಿದೆ.
⁴ನಾಯಕತ್ವವನ್ನು ನಿರ್ದೇಶಕರು ಮತ್ತು ಮೇಲಿನಂತೆ ವ್ಯಾಖ್ಯಾನಿಸಲಾಗಿದೆ.
⁵ರೌಂಡಪ್ ಮಾಡುವ ಕಾರಣದಿಂದಾಗಿ, ಜನಾಂಗ ಮತ್ತು ಜನಾಂಗೀಯ ಪ್ರಮಾಣದ ಶೇಕಡಾವಾರು ಒಟ್ಟು 100% ಇಲ್ಲದಿರಬಹುದು.
⁶ಆಗಸ್ಟ್ 2020 ರಂತೆ ಹೊಸ ನೇಮಕಾತಿ ಪ್ರಾತಿನಿಧ್ಯ ಮಾಹಿತಿ.
⁷ರೌಂಡಪ್ ಮಾಡುವ ಕಾರಣದಿಂದಾಗಿ, ಜನಾಂಗ ಮತ್ತು ಜನಾಂಗೀಯ ಪ್ರಮಾಣದ ಶೇಕಡಾವಾರು ಒಟ್ಟು 100% ಇಲ್ಲದಿರಬಹುದು.