ಮುಖ್ಯ ವಿಷಯಕ್ಕೆ ತೆರಳಿ

ಶುಲ್ಕ ವಿಭಜನೆ

ಸ್ನೇಹಿತರು ಅಥವಾ ಗುಂಪುಗಳ ಜೊತೆಗೂಡಿ ಸವಾರಿ ಮಾಡುವಾಗ, ನೀವು ಯಾವಾಗಲೂ ಶುಲ್ಕವನ್ನು ವಿಭಜಿಸಬಹುದು. ಹಣವನ್ನು ವಿನಿಮಯ ಮಾಡಿಕೊಳ್ಳುವ ಅಗತ್ಯವಿಲ್ಲ—ನಿಮಗಾಗಿ ಶುಲ್ಕವನ್ನು ಲೆಕ್ಕಾಚಾರ ಮಾಡಿ ಬಿಲ್ ಅನ್ನು ಕಳುಹಿಸುವಂತೆ ಆ್ಯಪ್‌ಗೆ ತಿಳಿಸಿದರೆ ಸಾಕು.

ಅದು ಏಕೆ ಉಪಯುಕ್ತ

ಸ್ನೇಹಿತರ ಜೊತೆಗೆ ಸವಾರಿ ಮಾಡಿ

ಜನ ಹೆಚ್ಚಿದ್ದಷ್ಟೂ, ಅನುಕೂಲ ಹೆಚ್ಚು. ನಿಮ್ಮ ಸ್ನೇಹಿತರನ್ನು ಪಿಕಪ್ ಮಾಡಿ ಮತ್ತು ಎಲ್ಲರೂ ತಮ್ಮ ಪಾಲಿನ ಹಣವನ್ನು ಪಾವತಿಸುವಂತೆ ವಿನಂತಿಸಿ.

ಕ್ಯಾಶ್ ಅನ್ನು ಸ್ಕಿಪ್ ಮಾಡಿ

ಸವಾರಿಯ ವೆಚ್ಚವನ್ನು ಆ್ಯಪ್‌ನಲ್ಲಿ ನೇರವಾಗಿ ವಿಭಾಗಿಸಿ. ಇದು ಸುಲಭ ಮತ್ತು ಒತ್ತಡ ರಹಿತ ವಿಧಾನವಾಗಿದೆ.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಸವಾರಿಗೆ ವಿನಂತಿಸಿ

ಆ್ಯಪ್ ತೆರೆಯಲು ಒತ್ತಿ ಮತ್ತು ನೀವು ಸಾಮಾನ್ಯವಾಗಿ ವಿನಂತಿಸಿಕೊಳ್ಳುವಂತೆಯೇ ಸವಾರಿಗೆ ವಿನಂತಿಸಿಕೊಳ್ಳಿ.

ಗಮನಿಸಿ: ಶುಲ್ಕ ವಿಭಜನೆ ವೈಶಿಷ್ಟ್ಯವನ್ನು ಬಳಸಲು ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ನೀವು ಹೊಂದಿರಬೇಕಾಗುತ್ತದೆ.

ವಿಭಜನೆಯನ್ನು ಮಾಡಿ

ವಿನಂತಿಸಿದ ನಂತರ, ನಿಮ್ಮ ಆ್ಯಪ್‌ನಲ್ಲಿ ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ, ನಿಮ್ಮ ಆಯ್ಕೆ ಮಾಡಿದ ಪಾವತಿ ವಿಧಾನವನ್ನು ಒತ್ತಿ, ನಂತರ ಶುಲ್ಕ ವಿಭಜಿಸಿ ಒತ್ತಿ.

ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿ

ಇತರ ಸವಾರರ ಹೆಸರುಗಳು ಅಥವಾ ಫೋನ್ ನಂಬರ್‌ಗಳನ್ನು ನಮೂದಿಸಿ. ನೀವು ಸೇರಿಸುವ ಪ್ರತಿಯೊಬ್ಬರಿಗೂ ನಿಮ್ಮ ಆಹ್ವಾನವನ್ನು ಸ್ವೀಕರಿಸಲು ಒಂದು ಅಧಿಸೂಚನೆ ವಿನಂತಿಯನ್ನು ಕಳುಹಿಸಲಾಗುತ್ತದೆ.

ಆಗಾಗ ಕೇಳಲಾಗುವ ಪ್ರಶ್ನೆಗಳು

ಸವಾರರ ನಡುವೆ ಶುಲ್ಕವು ಸಮಾನವಾಗಿ ವಿಭಜನೆಯಾಗಿದೆಯೇ?

ಹೌದು. ಶುಲ್ಕ ವಿಭಜನೆ ಆಹ್ವಾನವನ್ನು ಸ್ವೀಕರಿಸುವ ಸವಾರರ ನಡುವೆ ಸವಾರಿಯ ವೆಚ್ಚವನ್ನು ಸಮಾನವಾಗಿ ವಿಭಜಿಸಲಾಗಿದೆ.

ಹೆಚ್ಚುವರಿ ಶುಲ್ಕವಿರುತ್ತದೆಯೇ?

ಹೌದು. ವಿಭಜಿಸುವಾಗ, ಭಾಗವಹಿಸುವ ಪ್ರತಿಯೊಬ್ಬ ಸವಾರನಿಗೆ 25 ಸೆಂಟ್‌ನಷ್ಟು ಶುಲ್ಕ ವಿಧಿಸಲಾಗುತ್ತದೆ. ನಿಮ್ಮ ರಸೀತಿಯು ಎಲ್ಲಾ ಸವಾರರ ಒಟ್ಟು ವಿಭಜಿತ ಶುಲ್ಕವನ್ನು ತೋರಿಸುತ್ತದೆ.

ಸವಾರರು ಶುಲ್ಕ ವಿಭಜನೆ ವಿನಂತಿಯನ್ನು ಸ್ವೀಕರಿಸದಿದ್ದರೆ ಏನಾಗುತ್ತದೆ?

ಒಬ್ಬ ಸವಾರ ವಿಭಜಿತ ಶುಲ್ಕವನ್ನು ಸ್ವೀಕರಿಸದಿರಲು ಆರಿಸಿದರೆ ಅಥವಾ ಮಾನ್ಯ ಪಾವತಿ 'ವಿಧಾನವನ್ನು ಹೊಂದಿಲ್ಲದಿದ್ದರೆ, ನಿಮ್ಮ 'ಮತ್ತು ಅವರ ಭಾಗದ ಶುಲ್ಕಗಳೆರಡನ್ನೂ ನಿಮಗೇ ವಿಧಿಸಲಾಗುತ್ತದೆ.

ನಾನು ಈಗಲೂ Apple Pay ಬಳಸಬಹುದೇ?

ನೀವು Apple Pay ಬಳಸುತ್ತಿದ್ದರೂ ಸವಾರಿಯ ವೆಚ್ಚವನ್ನು ವಿಭಾಗಿಸಲು ಬಯಸುವುದಾದರೆ, ಬೇರೊಂದು ಪಾವತಿ ವಿಧಾನವನ್ನು ನೀವು ಬಳಸಬೇಕಾಗಬಹುದು. ಮುಂದಿನ ಸವಾರಿಯಲ್ಲಿ Apple Pay ಗೆ ಮರಳಿ ಬದಲಾಯಿಸಬಹುದು.

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.

Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.

ಒಬ್ಬ ಸವಾರ ವಿಭಜಿತ ಶುಲ್ಕವನ್ನು ಸ್ವೀಕರಿಸದಿರಲು ಆರಿಸಿದರೆ ಅಥವಾ' ಮಾನ್ಯ ಪಾವತಿ ವಿಧಾನವನ್ನು ಹೊಂದಿಲ್ಲದಿದ್ದರೆ, ನಿಮ್ಮ 'ಮತ್ತು ಅವರ ಭಾಗದ ಶುಲ್ಕಗಳೆರಡನ್ನೂ ನಿಮಗೇ ವಿಧಿಸಲಾಗುತ್ತದೆ. ನಿಮ್ಮ ಖಾತೆಯಲ್ಲಿರುವ ಸಕ್ರಿಯ ಪ್ರಮೋಷನ್‌ಗಳು ನಿಮ್ಮ ದರದ ಪಾಲಿಗೆ ಮಾತ್ರ ಅನ್ವಯಿಸುತ್ತವೆ.

ಶುಲ್ಕ ವಿಭಜನೆ ಸೇವೆಯು ಎಲ್ಲಾ Uber ಆಯ್ಕೆಗಳಿಗೂ ಲಭ್ಯವಿಲ್ಲದಿರಬಹುದು. ಟ್ರಿಪ್ ಮುಗಿದ ಬಳಿಕ ಶುಲ್ಕವನ್ನು ವಿಭಜಿಸಲು ಆ್ಯಪ್‌ಗೆ ಸಾಧ್ಯವಾಗುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.