Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಆಡಿಯೋ ರೆಕಾರ್ಡಿಂಗ್

ನಿಮ್ಮ Uber ಅನುಭವವನ್ನು ಸುರಕ್ಷಿತಗೊಳಿಸಲು ಮತ್ತು ನೀವು ಆತ್ಮವಿಶ್ವಾಸದಿಂದ ಸವಾರಿ ಮಾಡಲು ಮತ್ತು ಚಾಲನೆ ಮಾಡಲು ನಾವು ಹೊಸ ತಂತ್ರಜ್ಞಾನಗಳನ್ನು ನಿರ್ಮಿಸುತ್ತಿದ್ದೇವೆ.

ನಿಮ್ಮ ಸವಾರಿಯ ಸಮಯದಲ್ಲಿ ನಿಮಗೆ ಅನಾನುಕೂಲ ಎನಿಸಿದರೆ, ಈಗ ನೀವು ಆ್ಯಪ್‌ನಲ್ಲಿಯೇ ಟ್ರಿಪ್‌ನ ಆಡಿಯೋ ರೆಕಾರ್ಡ್ ಮಾಡಬಹುದು.

ನಿಮ್ಮ ಸುರಕ್ಷತಾ ಟೂಲ್‌ಕಿಟ್ ತೆರೆಯಲು ಸುರಕ್ಷತಾ ಶೀಲ್ಡ್ ಟ್ಯಾಪ್ ಮಾಡಿದರೆ ಸಾಕು, ನಂತರ ಆಡಿಯೋ ರೆಕಾರ್ಡ್ ಮಾಡಿಆಯ್ಕೆಯನ್ನು ಪ್ರವೇಶಿಸಿ. ಟ್ರಿಪ್ ಅನ್ನು ಆ್ಯಪ್‌ನಲ್ಲಿ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸವಾರಿ ಮುಗಿದ ಬಳಿಕ ನೀವು ಅದನ್ನು Uber ಜೊತೆಗೆ ಹಂಚಿಕೊಳ್ಳಲು ಆಯ್ಕೆ ಮಾಡಬಹುದು.

ಎಲ್ಲರ ಸುರಕ್ಷತೆಗಾಗಿ

ಟ್ರಿಪ್‌ಗಳಲ್ಲಿ ಸುರಕ್ಷಿತ, ಆರಾಮದಾಯಕ ಸಂವಾದಗಳನ್ನು ಪ್ರೋತ್ಸಾಹಿಸಲು ಸಹಾಯ ಮಾಡಲು ಸವಾರರು ಮತ್ತು ಚಾಲಕರು ತಮ್ಮ ಆ್ಯಪ್ ಮೂಲಕ ಆಡಿಯೋವನ್ನು ರೆಕಾರ್ಡ್ ಮಾಡಬಹುದು. ಬಳಕೆದಾರರಿಗೆ ಈ ನಿಯಂತ್ರಣವನ್ನು ನೀಡುವ ಮೂಲಕ, Uber ಅವರಿಗೆ ಅನಾನುಕೂಲ ಸಂದರ್ಭಗಳ ಮೇಲ್ವಿಚಾರಣೆ ಮತ್ತು ವರದಿ ಮಾಡುವ ಅಧಿಕಾರ ನೀಡುತ್ತದೆ.

ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ

ಒಬ್ಬ ಸವಾರ ಅಥವಾ ಚಾಲಕ ಸವಾರಿಯ ಸಮಯದಲ್ಲಿ ಈ ವೈಶಿಷ್ಟ್ಯವನ್ನು ಬಳಸಿದಾಗ, ವಾಹನದಲ್ಲಿರುವ ಇತರ ಜನರಿಗೆ ಸೂಚಿಸಲಾಗುವುದಿಲ್ಲ. ಆಡಿಯೋ ರೆಕಾರ್ಡಿಂಗ್ ಅನ್ನು ಫೋನ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಇದರಿಂದ ಯಾರೂ—ರೆಕಾರ್ಡಿಂಗ್ ಪ್ರಾರಂಭಿಸಿದ ವ್ಯಕ್ತಿಯೂ ಸಹ— ಅದನ್ನು ಪ್ರವೇಶಿಸಲು ಸಾಧ್ಯವಿಲ್ಲ. ಬಳಕೆದಾರರು Uber ಜೊತೆಗೆ ಘಟನಾ ವರದಿಯನ್ನು ತೆರೆದರೆ ಮತ್ತು ಈ ಆಡಿಯೋ ಫೈಲ್ ಅನ್ನು ಅದರಲ್ಲಿ ಸೇರಿಸಿದರೆ ಮಾತ್ರ Uber ಅದನ್ನು ಪ್ರವೇಶಿಸಬಹುದು. ಇದು ಸಂಭವಿಸದ ಹೊರತು, Uber ಗೆ ಯಾವುದೇ ವಿಷಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.

ತನಿಖೆ ನಡೆಸಲು Uber ಗೆ ಸಹಾಯ ಮಾಡಿ

ನಾವು ಸುರಕ್ಷತಾ ವರದಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಬಳಕೆದಾರರೊಬ್ಬರು ಆಡಿಯೋ ಫೈಲ್‌ನೊಂದಿಗೆ ವರದಿ ಸಲ್ಲಿಸಿದರೆ, ಸುರಕ್ಷತಾ ತಂಡವು ಅದನ್ನು ಪರಿಶೀಲಿಸುತ್ತದೆ. ನಮ್ಮ ನೀತಿಗಳಿಗೆ ಅನುಸಾರವಾಗಿ Uber ಸೂಕ್ತ ಕ್ರಮ ಕೈಗೊಳ್ಳುತ್ತದೆ.

  • ಟ್ರಿಪ್‌ಗಳಲ್ಲಿ ಸುರಕ್ಷಿತ, ಆರಾಮದಾಯಕ ಸಂವಾದಗಳನ್ನು ಉತ್ತೇಜಿಸಲು ಆ್ಯಪ್‌ ಮೂಲಕ ವಿನ್ಯಾಸಗೊಳಿಸಲಾದ ಹೊಸ ಸಾಮರ್ಥ್ಯ ಆಡಿಯೋ ರೆಕಾರ್ಡಿಂಗ್ ಆಗಿದೆ. ರೆಕಾರ್ಡಿಂಗ್‌ಗಳನ್ನು ಬಳಕೆದಾರರು ಮಾತ್ರ ಸಕ್ರಿಯಗೊಳಿಸಬಹುದು ಮತ್ತು ಅವುಗಳನ್ನು ಸಾಧನದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಕೇಳಲು ಸಾಧ್ಯವಾಗುವುದಿಲ್ಲ ಮತ್ತು Uber ಆ್ಯಪ್ ಮೂಲಕ ಕಳುಹಿಸಲಾಗುವ ಸುರಕ್ಷತಾ ವರದಿಗೆ ಮಾತ್ರವೇ ಲಗತ್ತಿಸಬಹುದು. ಇದು ಸಂಭವಿಸದ ಹೊರತು, Uber ಗೆ ಯಾವುದೇ ವಿಷಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.

  • ಇದು ಸುರಕ್ಷತಾ ಟೂಲ್‌ಕಿಟ್ ಮೂಲಕ ಲಭ್ಯವಿದೆ. ಟ್ರಿಪ್ ಕೈಗೊಳ್ಳುವಾಗ ನಕ್ಷೆಯಲ್ಲಿ ಶೀಲ್ಡ್ ಐಕಾನ್ ಟ್ಯಾಪ್ ಮಾಡುವ ಮೂಲಕ ಇದನ್ನು ಕಾಣಬಹುದು.

    ಸವಾರರಿಗಾಗಿ ಆಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನಾವು ಪ್ರಸ್ತುತ ನವೀಕರಿಸುತ್ತಿದ್ದೇವೆ. ಇದು ಮುಂಬರುವ ವಾರಗಳಲ್ಲಿ ಮತ್ತೆ ಲಭ್ಯವಾಗಲಿದೆ.

  • ವೈಶಿಷ್ಟ್ಯವು ಲಭ್ಯವಿರುವ ಆಯ್ದ ನಗರಗಳಲ್ಲಿ, ಸವಾರರು ಮತ್ತು ಚಾಲಕರು ತಮ್ಮದೇ ಆದ ಸ್ಮಾರ್ಟ್‌ಫೋನ್ ಮೂಲಕ ರೆಕಾರ್ಡಿಂಗ್ ಪ್ರಾರಂಭಿಸಬಹುದು. ಈ ಸಾಮರ್ಥ್ಯ ಲಭ್ಯವಿದೆ ಎಂದು ಎಲ್ಲಾ ಸವಾರರು ಮತ್ತು ಚಾಲಕರಿಗೆ ಮಾಹಿತಿ ನೀಡಲಾಗಿದ್ದರೂ ವಾಹನದಲ್ಲಿ ಪ್ರಯಾಣಿಸುವ ಇತರ ವ್ಯಕ್ತಿಗಳಿಗೆ ಸೂಚಿಸಲಾಗುವುದಿಲ್ಲ.

  • ಸವಾರರು ಮತ್ತು ಚಾಲಕರು ಇಬ್ಬರೂ ತಮ್ಮ ಸಾಧನದ ಮೂಲಕ ರೆಕಾರ್ಡ್ ಮಾಡಲು ಸ್ವತಂತ್ರರಾಗಿರುತ್ತಾರೆ. ಸುರಕ್ಷತಾ ವರದಿಗೆ ಲಗತ್ತಿಸಲಾಗಿದ್ದರೆ ಮಾತ್ರ ರೆಕಾರ್ಡಿಂಗ್ ಕೇಳಲು Uber ಗೆ ಸಾಧ್ಯವಾಗುತ್ತದೆ. ಕಾನೂನಾತ್ಮಕವಾಗಿ ಅಗತ್ಯವಿದ್ದರೆ, ಕಾನೂನು ಜಾರಿಗೊಳಿಸುವಂತಹ ಸಮರ್ಥ ಪ್ರಾಧಿಕಾರಕ್ಕೆ ಹಂಚಿತ ರೆಕಾರ್ಡಿಂಗ್ ಅನ್ನು Uber ಒದಗಿಸಬಹುದು.

  • ಆಡಿಯೋ ರೆಕಾರ್ಡಿಂಗ್ ಪ್ರಸ್ತುತ ಬ್ರೆಜಿಲ್, ಮೆಕ್ಸಿಕೋ, ಡೊಮಿನಿಕನ್ ರಿಪಬ್ಲಿಕ್, ಗ್ವಾಟೆಮಾಲಾ, ಪರಾಗ್ವೆ, ಅರ್ಜೆಂಟೀನಾ, ಕೋಸ್ಟ ರಿಕಾ ಮತ್ತು ಎಲ್ ಸಾಲ್ವಡಾರ್‌ನಾದ್ಯಂತ ಲಭ್ಯವಿದೆ. ಚಿಲಿ, ಭಾರತ ಮತ್ತು ಪಾಕಿಸ್ತಾನದ ಆಯ್ದ ನಗರಗಳಲ್ಲಿ ಈ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ Uber ಜಾರಿಗೊಳಿಸುತ್ತಿದೆ ಮತ್ತು ಅದರ ಲಭ್ಯತೆಯನ್ನು ವಿಸ್ತರಿಸುವುದನ್ನು ಮುಂದುವರಿಸುತ್ತದೆ.

Uber‌ ನಲ್ಲಿ ಸುರಕ್ಷತೆಯ ಬಗ್ಗೆ ಇನ್ನಷ್ಟು ಮಾಹಿತಿ

ಚಾಲಕರ ಸುರಕ್ಷತೆ

24/7 ಬೆಂಬಲ ಮತ್ತು ತುರ್ತು ಸಹಾಯವನ್ನು ಪಡೆಯಿರಿ. ನಿಮ್ಮ ಟ್ರಿಪ್ ಅನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ನಿಮ್ಮ ಸುರಕ್ಷತೆಯತ್ತ ನಮ್ಮ ಗಮನವಿರುವುದರಿಂದ ಲಭ್ಯವಿರುವ ಅವಕಾಶಗಳತ್ತ ನೀವು ಗಮನವನ್ನು ಕೇಂದ್ರೀಕರಿಸಬಹುದು.

ಸವಾರರ ಸುರಕ್ಷತೆ

ಪ್ರತಿದಿನ ಲಕ್ಷಾಂತರ ಸವಾರಿಗಳನ್ನು ವಿನಂತಿಸಲಾಗುತ್ತದೆ. ಆ್ಯಪ್‌ನಲ್ಲಿ ಅಂತರ್ನಿರ್ಮಿತವಾಗಿರುವ ಸುರಕ್ಷತಾ ವೈಶಿಷ್ಟ್ಯಗಳಿಗೆ ಪ್ರತಿ ಸವಾರರೂ ಪ್ರವೇಶವನ್ನು ಹೊಂದಿರುತ್ತಾರೆ. ಮತ್ತು ನಿಮಗೆ ಅಗತ್ಯವಿದ್ದಲ್ಲಿ ಪ್ರತಿ ಸವಾರಿಗೆ ಒಂದು ಬೆಂಬಲ ತಂಡವಿರುತ್ತದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو