ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.
UberX ಶೇರ್
UberX ಶೇರ್ ಮೂಲಕ, UberX ಬಗ್ಗೆ ನೀವು ಇಷ್ಟಪಡುವ ಎಲ್ಲವನ್ನೂ ಹೆಚ್ಚು ಕೈಗೆಟುಕುವ ಬೆಲೆಗೆ ಪಡೆಯಿರಿ—ನಿಮ್ಮ ಮಾರ್ಗದಲ್ಲಿ ಸವಾರನೊಂದಿಗೆ ಮ್ಯಾಚ್ ಆದಾಗ 20% ತನಕ ಉಳಿಸಿ. ನಿಯಮಗಳನ್ನು ನೋಡಿ.**
UberX ಶೇರ್‌ನೊಂದಿಗೆ ಏಕೆ ಪ್ರಯಾಣಿಸಬೇಕು
ಹಣ ಉಳಿಸಿ
UberX ಶೇರ್ ಮೂಲಕ ನಿಮ್ಮ ಮಾರ್ಗದಲ್ಲಿ ಸವಾರರೊಂದಿಗೆ ಮ್ಯಾಚ್ ಆದಾಗ ನೀವು 20% ತನಕ ಉಳಿಸಬಹುದು. ನಿಯಮಗಳನ್ನು ನೋಡಿ.**
ವೇಳಾಪಟ್ಟಿಯನ್ನು ಕಾಯ್ದುಕೊಳ್ಳಿ
ಸರಾಸರಿಯಾಗಿ ನಿಮ್ಮ ಟ್ರಿಪ್‌ಗೆ 8 ನಿಮಿಷಗಳನ್ನು ಮೀರದ ಸಮಯ ಸೇರಿಸಲಾಗುವಂತೆ UberX ಶೇರ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಹವಾಮಾನ ಸ್ಮಾರ್ಟ್ ಆಗಿರಿ
ನಿಮ್ಮ ಸವಾರಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚುವರಿ ಪ್ರದೂಷಣೆಗಳು ಮತ್ತು ಕಾರು ಪ್ರಯಾಣವನ್ನು ತಪ್ಪಿಸಲು ನಿಮ್ಮ ನಗರಕ್ಕೆ ಸಹಾಯ ಮಾಡಿ.
ನೀವು ಸವಾರಿ ಮಾಡುತ್ತಿರುವಂತೆ ಇರಿಸಲು ಸಹಾಯ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ
ಒಂದು ಸೀಟ್ ಮಾತ್ರ ವಿನಂತಿಸಿ
UberX ಶೇರ್ ಮೂಲಕ ನೀವು ಒಂದು ಸೀಟ್ ಅನ್ನು ಮಾತ್ರ ವಿನಂತಿಸಬಹುದು. ನೀವು ಸ್ನೇಹಿತ ಅಥವಾ ಸ್ನೇಹಿತರ ಗುಂಪಿನೊಂದಿಗೆ ಸವಾರಿ ಮಾಡುತ್ತಿದ್ದರೆ, UberX ಅಥವಾ UberXL ಅನ್ನು ವಿನಂತಿಸಲು ಪರಿಗಣಿಸಿ.
ನಮ್ಮ ಮುಂಬದಿ ಸೀಟು ನೀತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ
ಇನ್ನು ಮುಂದೆ ನೀವು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಆದಾಗ್ಯೂ, ನಿಮ್ಮ ಚಾಲಕರಿಗೆ ಸ್ವಲ್ಪ ಸ್ಥಳಾವಕಾಶವನ್ನು ನೀಡಲು, ನಿಮಗೆ ಅಗತ್ಯವಿದ್ದರೆ ಮಾತ್ರ ಮುಂಭಾಗದ ಆಸನವನ್ನು ಬಳಸಲು ನಾವು ಕೇಳುತ್ತೇವೆ.
5 ಸ್ಟಾರ್ ಸವಾರರಾಗಿ
ನಮ್ಮ ಮಾರ್ಗಸೂಚಿಗಳು ಚಾಲಕರು ಮತ್ತು ಸಹ ಸವಾರರನ್ನು ಗೌರವದಿಂದ ನಡೆಸಿಕೊಳ್ಳುವಂತೆ, ಕಾನೂನನ್ನು ಅನುಸರಿಸುವಂತೆ ಮತ್ತು ಪರಸ್ಪರ ಸುರಕ್ಷಿತವಾಗಿರಲು ಸಹಾಯ ಮಾಡುವಂತೆ ನಿಮ್ಮನ್ನು ಕೇಳುತ್ತವೆ. ನಮ್ಮ ಯಾವುದೇ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದರೆ, ನಿಮ್ಮ Uber ಖಾತೆಗಳಿಗೆ ಪ್ರವೇಶವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು.
UberX ಶೇರ್ ಹೇಗೆ ಕಾರ್ಯನಿರ್ವಹಿಸುತ್ತದೆ
1. ವಿನಂತಿ
Uber ಆ್ಯಪ್ ತೆರೆಯಿರಿ, ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ ಮತ್ತು UberX ಶೇರ್ ಸವಾರಿ ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ.
2. ಸವಾರಿ
ನಿಮ್ಮದೇ ದಾರಿಯಲ್ಲಿ ಸಾಗುತ್ತಿರುವ ಇತರ ಸವಾರರೊಂದಿಗೆ ನಿಮ್ಮ ಕಾರನ್ನು ಮ್ಯಾಚ್ ಮಾಡಲು ಆ್ಯಪ್ ಪ್ರಯತ್ನಿಸುತ್ತದೆ. ನಿಮ್ಮನ್ನು ಸಹ-ಸವಾರರ ಜೊತೆಗೆ ಮ್ಯಾಚ್ ಮಾಡಿದರೆ ಹೆಚ್ಚುವರಿ ಉಳಿತಾಯಗಳನ್ನು ಪಡೆಯಿರಿ. ನಿಯಮಗಳನ್ನು ನೋಡಿ.**
3. ಹೊರಬನ್ನಿ
ನಿಮ್ಮದು 5 ಸ್ಟಾರ್‌ಗಳ ಟ್ರಿಪ್ ಆಗಿದ್ದರೆ, ನಿಮ್ಮ ಟ್ರಿಪ್ ಮುಗಿದ ಬಳಿಕ ಆ್ಯಪ್‌ನಲ್ಲಿನ ಚಾಲಕರಿಗೆ ಧನ್ಯವಾದಗಳನ್ನು ಹೇಳಲು ಮತ್ತು ಟಿಪ್ಸ್ ನೀಡಲು ಪರಿಗಣಿಸಿ.
ಆಗಾಗ ಕೇಳಲಾಗುವ ಪ್ರಶ್ನೆಗಳು
- ನನ್ನ ಟ್ರಿಪ್ ಎಷ್ಟು ಜನರು ಹಂಚಿಕೊಳ್ಳುತ್ತಾರೆ ಎಂಬ ಕುರಿತು ಮಿತಿ ಇದೆಯೇ?
ನಿಮ್ಮ ಟ್ರಿಪ್‌ನ ಯಾವುದೇ ಹಂತದಲ್ಲಿ ನೀವು ಒಬ್ಬ ಇತರ ಪ್ರಯಾಣಿಕರೊಂದಿಗೆ ಮಾತ್ರ ಸವಾರಿ ಮಾಡುತ್ತೀರಿ. ನಿಮ್ಮ ಮುಂದೆ ಸಹ-ಸವಾರರನ್ನು ಡ್ರಾಪ್ಆಫ್ ಮಾಡಿದರೆ, ಆ್ಯಪ್ ಮತ್ತೊಂದು ಸಹ-ಸವಾರರಿಗಾಗಿ ಹುಡುಕುವ ಸಾಧ್ಯತೆ ಇರುತ್ತದೆ, ಆದರೆ ಸವಾರಿಗೆ 8 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಸೇರಿಸುವುದನ್ನು ತಪ್ಪಿಸಲು ನಿಮ್ಮ ದಾರಿಯಲ್ಲಿ ಹೋಗುವ ಜನರನ್ನು ಮಾತ್ರ ಹುಡುಕಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಇತರ ಸವಾರರನ್ನು ಪಿಕಪ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
UberX ಶೇರ್ ಅನ್ನು ನಿಮ್ಮ ಟ್ರಿಪ್‌ಗೆ 8 ನಿಮಿಷಗಳಿಗಿಂತ ಹೆಚ್ಚು ಸೇರಿಸದಂತೆ ವಿನ್ಯಾಸಗೊಳಿಸಲಾಗಿದೆ (ಗಮನಿಸಿ: ಟ್ರಾಫಿಕ್ ಮತ್ತು ಇತರ ಸಂಭವನೀಯ ವಿಳಂಬಗಳ ಕಾರಣ, ಆಗಮನದ ಸಮಯವನ್ನು ನಾವು ಖಾತರಿಪಡಿಸುವುದಿಲ್ಲ). ನೀವು ಸವಾರಿ ಮಾಡಿದಂತೆ ನಿಮ್ಮ ಅಂದಾಜು ಆಗಮನದ ಸಮಯವನ್ನು ನೀವು ಯಾವಾಗಲೂ ಆ್ಯಪ್‍ನಲ್ಲಿ ಕಾಣುತ್ತೀರಿ.
- ನನ್ನನ್ನು ಮೊದಲು ಪಿಕಪ್ ಮಾಡಲಾಯಿತು. ನನ್ನನ್ನು ಎರಡನೆಯವನನ್ನಾಗಿ ಏಕೆ ಡ್ರಾಪ್ ಮಾಡಲಾಯಿತು?
ಪಿಕಪ್ ಮತ್ತು ಡ್ರಾಪ್‌ಆಫ್ ಆರ್ಡರ್ ಅನ್ನು ನೀವು ತಲುಪಬೇಕಾದ ಸ್ಥಳದ ಮಾರ್ಗದಲ್ಲಿ ಎಲ್ಲಿ ಬರುತ್ತದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ, ಮೊದಲು ಯಾರನ್ನು ಪಿಕಪ್ ಮಾಡಲಾಗಿದೆ ಎಂಬುದರ ಮೇಲೆ ಅಲ್ಲ.
- ನನ್ನ ಸಹ-ಸವಾರ ನಮ್ಮನ್ನು ದಾರಿ ತಪ್ಪಿಸಿದರೆ ಏನು ಮಾಡಬೇಕು?
ಯಾವುದೇ ಹೆಚ್ಚುವರಿ ಪಿಕಪ್‌ಗಳು ನಿಮ್ಮ ಅಂದಾಜು ಆಗಮನದ ಸಮಯವನ್ನು 8 ನಿಮಿಷಗಳಿಗಿಂತ ಹೆಚ್ಚು ಹೆಚ್ಚಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮದೇ ದಾರಿಯಲ್ಲಿ ಸಾಗುತ್ತಿರುವ ಸವಾರರ ಜೊತೆಗೆ ನಿಮ್ಮನ್ನು ಆ್ಯಪ್ ಮ್ಯಾಚ್ ಮಾಡುತ್ತದೆ.
- ನನ್ನ ಲಗೇಜ್ ಅನ್ನು ಇಡಲು ಸ್ಥಳವಿದೆಯೇ?
ಇದು ಕಾರಿನಲ್ಲಿರುವ ಸ್ಥಳಾವಕಾಶ ಮತ್ತು ಸವಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ನೀವು ಲಗೇಜ್‌ನೊಂದಿಗೆ ಪ್ರಯಾಣಿಸುತ್ತಿದ್ದರೆ, UberX ಶೇರ್ ಸವಾರಿಯ ಬದಲಿಗೆ UberX ಸವಾರಿಯನ್ನು ವಿನಂತಿಸಲು ನಾವು ಶಿಫಾರಸು ಮಾಡುತ್ತೇವೆ.
Uber ನಿಂದ ಇನ್ನಷ್ಟು
ನೀವು ಬಯಸಿದ ಸವಾರಿ ಮಾಡಿ.
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು
ಮೋಟೋ
ಕೈಗೆಟುಕುವ, ಅನುಕೂಲಕರ ಮೋಟಾರ್ಸೈಕಲ್ ಸವಾರಿಗಳು
Uber ಪ್ರಯಾಣ
Uber ಆ್ಯಪ್ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ಈ ವೆಬ್ ಪುಟದಲ್ಲಿ ನೀಡಲಾದ ವಿಷಯವು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರದೇಶ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿದೆ ಹಾಗೂ ಯಾವುದೇ ಸೂಚನೆಯನ್ನು ನೀಡದೆ ಅಪ್‌ಡೇಟ್ ಮಾಡಬಹುದು.
*Uber ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರೂ ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು.
**UberX ಶೇರ್ ವಿನಂತಿ ಮಾಡುವ ಮತ್ತು ಸಹ-ಸವಾರರೊಂದಿಗೆ ಮ್ಯಾಚ್ ಮಾಡುವ ಸವಾರರಿಗೆ ಮಾತ್ರ ಈ ಆಫರ್ ಮಾನ್ಯವಾಗಿರುತ್ತದೆ. ಸಹ-ಸವಾರರೊಂದಿಗೆ ಮ್ಯಾಚ್ ಮಾಡುವಿಕೆಯು ದಿನದ ಸಮಯ, ಟ್ರಾಫಿಕ್, ಸವಾರಿ ವಿನಂತಿಗಳ ಸಂಖ್ಯೆ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಲಭ್ಯವಿರುವ ಚಾಲಕರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. UberX ಶೇರ್ ಅನ್ನು ಬಳಸುವ ಸವಾರರು ಕನಿಷ್ಠ ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಸಹ-ಸವಾರರೊಂದಿಗೆ ಪ್ರಯಾಣಿಸಿದ ಸಮಯ ಮತ್ತು ದೂರದ ಆಧಾರದ ಮೇಲೆ ಹೆಚ್ಚಿನದನ್ನು ಪಡೆಯಬಹುದು. ವಿವರಗಳಿಗಾಗಿ ಆ್ಯಪ್ ನೋಡಿ.
ಕಂಪನಿ