Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಲಸಿಕೆಗಾಗಿ ಸವಾರಿಗಳು

COVID-19 ಲಸಿಕೆ ಸ್ವೀಕರಿಸಲು ಸಾರಿಗೆಯು ತಡೆಗೋಡೆಯಲ್ಲ ಎಂದು ಖಚಿತಪಡಿಸಲು ನಾವು ಶಿಕ್ಷಕರಿಂದ ಹಿರಿಯರವರೆಗೆ ಸಹಾಯ ಮಾಡುತ್ತಿದ್ದೇವೆ.

COVID-19 ಮೊದಲ ಅಲೆಯಲ್ಲಿ, ನಾವು ವಿಶ್ವದಾದ್ಯಂತ ಅಗತ್ಯ ಕಾರ್ಮಿಕರು ಮತ್ತು ದುರ್ಬಲ ಸಮುದಾಯಗಳಿಗೆ 10 ಮಿಲಿಯನ್ ಉಚಿತ ಸವಾರಿಗಳು, ಊಟ ಮತ್ತು ಡೆಲಿವರಿಗಳನ್ನು ಒದಗಿಸಿದ್ದೇವೆ.

ಲಸಿಕೆಗಳು ಲಭ್ಯವಾಗಲು ಪ್ರಾರಂಭಿಸಿದಾಗ, ಸಾಂಕ್ರಾಮಿಕ ರೋಗವು ಪ್ರಾರಂಭವಾದ ಕೇವಲ 12 ತಿಂಗಳುಗಳಲ್ಲಿ, COVID ವಿರುದ್ಧ ತ್ವರಿತ ಮತ್ತು ಸುರಕ್ಷಿತವಾಗಿ ವಿಶ್ವಾದ್ಯಂತ ಜನರು ಲಸಿಕೆ ಪಡೆಯುವ ಸಹಾಯಕ್ಕಾಗಿ ಲಸಿಕೆ ಅಪಾಯಿಂಟ್‌ಮೆಂಟ್‌ಗಳಿಗೆ ತೆರಳಲು ಮತ್ತು ಅಲ್ಲಿಂದ ವಾಪಸಾಗಲು 10 ಮಿಲಿಯನ್‌ ಹೆಚ್ಚುವರಿ ಉಚಿತ ಮತ್ತು ರಿಯಾಯಿತಿ ದರದ ಸವಾರಿಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ.

ಸಾಂಕ್ರಾಮಿಕದಿಂದಾಗಿ ವಿಪರೀತವಾಗಿ ಬಾಧಿಸಿದ ಸಮುದಾಯಗಳಿಗೆ ಆಳವಾದ ಒಪ್ಪಂದಗಳ ಜೊತೆಗೆ ಹಲವು ರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳ ಜೊತೆಗೆ ನಾವು ನವೀನ ಪ್ರೋಗ್ರಾಂಗಳನ್ನು ಸ್ಥಾಪಿಸಿದ್ದೇವೆ.

ಸಾರಿಗೆ ಸೌಲಭ್ಯವಿಲ್ಲದವರಿಗೆ ಲಸಿಕೆ ಅಪಾಯಿಂಟ್‌ಮೆಂಟ್ ಅನ್ನು ಪಡೆಯಲು ಸವಾರಿಗಳನ್ನು Uber ಒದಗಿಸುತ್ತಿದೆ.

ಅಮೆರಿಕದಲ್ಲಿ, ಲಸಿಕೆ ಅಪಾಯಿಂಟ್‌ಮೆಂಟ್‌ಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವುದಕ್ಕಾಗಿ ಇದು League of United Latin American Citizens, Morehouse School of Medicine, National Action Network, National Urban League, UNIDOS, ಹಾಗೂ ಇನ್ನಷ್ಟನ್ನು ಒಳಗೊಂಡಿದೆ.

ವಿಶ್ವಾದ್ಯಂತ ನಾವು ಲಸಿಕೆ ಪಡೆಯಲು ಸಾರಿಗೆಯು ಅಡ್ಡಿಯಲ್ಲ ಎಂಬುದನ್ನು ಖಚಿತಪಡಿಸುವುದಕ್ಕಾಗಿ, ಫ್ರಾನ್ಸ್‌ನಲ್ಲಿ la Croix-Rouge ಬ್ರೆಜಿಲ್‌ನಲ್ಲಿ, CUFA ಮತ್ತು HelpAge India, ಹಾಗೂ ಇತರೆಯವುಗಳ ಜೊತೆಗೆ ಹೊಸ ಕೆಲಸ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದೇವೆ.

ದುರ್ಬಲ ಮತ್ತು ಸೌಲಭ್ಯ ವಂಚಿತ ಸಮುದಾಯಗಳಿಗೆ ಲಸಿಕೆ ಸೌಲಭ್ಯ ಸಿಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಶ್ವಾದ್ಯಂತ ನಾವು ಕೆಲಸ ಮಾಡುವ ಹಲವು ಸಂಸ್ಥೆಗಳ ಪೈಕಿ 3 ಸಂಸ್ಥೆಗಳು ಇಲ್ಲಿವೆ:

ಅಂತರರಾಷ್ಟ್ರೀಯ ರಕ್ಷಣೆ ಸಮಿತಿ (US)

COVID-19 ಮೊದಲ ಅಲೆಯ ವೇಳೆ IRC ಜೊತೆಗೆ ಜಾಗತಿಕ ಪಾಲುದಾರಿಕೆಯನ್ನು ನಿರ್ಮಿಸುವುದರ ಜೊತೆಗೆ ನಿರ್ವಸತಿಗರಿಗೆ ಉಚಿತ ಸವಾರಿಗಳನ್ನು ಒದಗಿಸಿದ್ದೇವೆ.

LISC (US)

ಆರಂಭದಲ್ಲಿ $11 ಮಿಲಿಯನ್‌ಗೂ ಹೆಚ್ಚು ಹೂಡಿಕೆಯ ಜೊತೆಗೆ Uber ಲಸಿಕೆ ಸೌಲಭ್ಯ ನಿಧಿ ಅನ್ನು LISC, Walgreens, ಮತ್ತು PayPal, ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ.

UNESCO (ಜಾಗತಿಕ)

ಶಿಕ್ಷಣವು ಸಾಧ್ಯವಾದಷ್ಟೂ ಬೇಗ ಸಹಜ ಸ್ಥಿತಿಗೆ ಮರಳಲು ವಿಶ್ವಾದ್ಯಂತ ಶಿಕ್ಷಕರಿಗೆ 1 ಮಿಲಿಯನ್‌ ಸವಾರಿಗಳನ್ನು ನಾವು ಒದಗಿಸಿದ್ದೇವೆ.

ನಾವು ಏನು ಮಾಡಿದ್ದೇವೆ ಮತ್ತು ಮಾಡಲು ಯೋಜಿಸಿದ್ದೇವೆ ಎಂಬ ಬಗ್ಗೆ ಇನ್ನಷ್ಟು ಓದಲು ಶೀಘ್ರದಲ್ಲೇ ಪುನಃ ಪರಿಶೀಲಿಸಿ. ಈ ಮಧ್ಯೆ, ಚೇತರಿಕೆಗಾಗಿ ನಮ್ಮ ಸವಾರಿಗಳ ಕುರಿತು ನೀವು ಇನ್ನಷ್ಟನ್ನು ಇಲ್ಲಿಓದಬಹುದು.

ಪ್ರಭಾವ ಉಂಟುಮಾಡುವ ನಮ್ಮ ಕೆಲಸದ ಬಗ್ಗೆ ಇನ್ನಷ್ಟು ಓದಿ

ನಮ್ಮ ಬದ್ಧತೆಗಳು

ಸಂಚಾರವನ್ನು ಎಲ್ಲರಿಗೂ ಸಮಾನವಾಗಿರಿಸುವುದು.

ನ್ಯೂ ಯಾರ್ಕ್‌ನ ಹಾರ್ಲೆಮ್‌ನಲ್ಲಿ ಪಾಪ್-ಅಪ್ ರೆಸ್ಟೋರೆಂಟ್‌ಗಳು

ಚಳಿಗಾಲದ ತಿಂಗಳುಗಳಲ್ಲಿ ಕಾರ್ಯನಿರ್ವಹಿಸಲು ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳಿಗೆ ಸಹಾಯ ಮಾಡುವುದು.

ವರ್ಣಭೇದ ನೀತಿಗೆ ಶೂನ್ಯ ಸಹಿಷ್ಣುತೆ

ವರ್ಣಭೇದ ನೀತಿ ಮತ್ತು ತಾರತಮ್ಯಕ್ಕೆ ನಮ್ಮ ಜಗತ್ತಿನಲ್ಲಿ ಸ್ಥಾನವಿಲ್ಲ—ಅವರ ವಿರುದ್ಧ ಹೋರಾಡಲು ನಾವು ಏನು ಮಾಡುತ್ತಿದ್ದೇವೆ ಎಂಬುದು ಇಲ್ಲಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو