Skip to main content

Uber Shuttle for Business ನೊಂದಿಗೆ ಉದ್ಯೋಗಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿ

ದೈನಂದಿನ ನಿಯಮಿತ ಪ್ರಯಾಣದಿಂದ ಹಿಡಿದು ಒಂದು ಕ್ಯಾಂಪಸ್‌ನಿಂದ ಇನ್ನೊಂದು ಕ್ಯಾಂಪಸ್‌ಗೆ ಓಡಾಟದವರೆಗೆ, Uber Shuttle for Business ಸಾಕಷ್ಟು ಸ್ಥಳಾವಕಾಶ ಹೊಂದಿರುವ ಮತ್ತು ಒತ್ತಡ-ರಹಿತ ಟ್ರಿಪ್‌ಗಳೊಂದಿಗೆ ನಿಮ್ಮ ಎಲ್ಲಾ ಸಮೂಹ ಸಾರಿಗೆ ಅಗತ್ಯತೆಗಳಿಗೆ ಸಹಾಯ ಮಾಡುತ್ತದೆ.

ನಿಮ್ಮ ಸಮೂಹ ಸಾರಿಗೆ ಅಗತ್ಯತೆಗಳಿಗೆ ಸರಿಹೊಂದುವಂತೆ ಉದ್ಯೋಗಿ ಶಟಲ್ ಸೇವೆಗಳನ್ನು ಕಸ್ಟಮೈಸ್ ಮಾಡಿ

  • ನೀವು ನಿಮ್ಮ ಸ್ವಂತ ಶಟಲ್‌ಗಳನ್ನು ಹೊಂದಿರಬಹುದು ಅಥವಾ ನಿಮಗೆ ಶಟಲ್ ಫ್ಲೀಟ್ ಪಾಲುದಾರರ ಅಗತ್ಯವಿರಬಹುದು. ನಿಮ್ಮ ಪರಿಸ್ಥಿತಿಗೆ ಸರಿಹೊಂದುವಂತೆ ನಮ್ಮ ವಿಧಾನವನ್ನು ಕಸ್ಟಮೈಸ್ ಮಾಡಲು ನಮ್ಮ ಪ್ಲಾಟ್‌ಫಾರ್ಮ್‌ ಸಹಾಯ ಮಾಡುತ್ತದೆ.

  • ಸವಾರರಿಗೆ Uber ಆ್ಯಪ್ ಅತ್ಯುತ್ತಮ ಅನುಭವ ಒದಗಿಸುತ್ತದೆ. ಆದರೆ, ಅವರು ಅದನ್ನೇ ಬಳಸಬೇಕಾಗಿಲ್ಲ. ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗಾಗಿ ಶಟಲ್‌ಗಳನ್ನು ಸ್ವಯಂಚಾಲಿತವಾಗಿ ಕಾದಿರಿಸುವ (ಆಟೋ ಬುಕ್) ಸಾಮರ್ಥ್ಯವನ್ನು ಹೊಂದಿದ್ದಾರೆ. ಇದರಿಂದ, ಉದ್ಯೋಗಿಗಳನ್ನು ಚಾಲಕರು ಚೆಕ್ ಇನ್ ಮಾಡಿಕೊಳ್ಳಬಹುದು ಹಾಗೂ ಅಡ್ಮಿನ್‌ಗಳಿಗೆ ಡೇಟಾ ಲಭ್ಯವಾಗುತ್ತದೆ.

ಉದ್ಯೋಗಿ ಶಟಲ್ ಸೇವೆಗಳನ್ನು ಬಳಸುವುದರಿಂದ ಇರುವ ಪ್ರಯೋಜನಗಳು

ನಿಮ್ಮ ಉದ್ಯೋಗಿ ಶಟಲ್ ಸೇವೆಗೆ ಹಾದಿ

ಹಂತ 1: ನಿಮ್ಮ ಗ್ರಾಹಕೀಯಗೊಳಿಸಿದ ಪ್ರೋಗ್ರಾಂ ರಚನೆ ಮಾಡಲು ಮತ್ತು ಅದಕ್ಕೆ ಕೊಡುಗೆ ನೀಡಲು ಸಹಾಯ ಮಾಡಿ.

ನಮ್ಮ ಪ್ರಶ್ನಾವಳಿಯನ್ನು ಪೂರ್ಣಗೊಳಿಸುವ ಮೂಲಕ ಪ್ರಾರಂಭಿಸಿ. ನಂತರ, ಆರಂಭಿಕ ಅನ್ವೇಷಣೆ ಅವಧಿಯ ನಂತರ, ನಾವು ಮಾರ್ಗಗಳು, ಸಮಯ ಮತ್ತು ಫ್ಲೆಕ್ಸಿಬಲ್‌ ವಾಹನ ಆಯ್ಕೆಗಳೊಂದಿಗೆ ಪರ್ಸನಲೈಸ್ ಮಾಡಿದ ಸೇವೆಯನ್ನು ವಿನ್ಯಾಸಗೊಳಿಸುತ್ತೇವೆ.

ಹಂತ 2: ಶಟಲ್ ಸವಾರಿಗಳನ್ನು ಹೇಗೆ ಒದಗಿಸಬೇಕೆಂದು ನಿರ್ಧರಿಸಿ

ಮಾರ್ಗ ವೇಳಾಪಟ್ಟಿಗಳನ್ನು ವೀಕ್ಷಿಸಲು ಮತ್ತು Uber ಆ್ಯಪ್‌ನಿಂದ ನೇರವಾಗಿ ಸೀಟುಗಳನ್ನು ವಿನಂತಿಸಲು ಉದ್ಯೋಗಿಗಳಿಗೆ ಸಾಧ್ಯವಾಗುತ್ತದೆ. ಉದ್ಯೋಗದಾತರು ಅನುಕೂಲಕರವಾಗಿ ಸವಾರರನ್ನು ಸ್ವಯಂಚಾಲಿತವಾಗಿ ಕಾದಿರಿಸಬಹುದು. ಇದರಿಂದ ಅವರ ಆಸನ ಎಂದಿಗೂ ರಿಸರ್ವ್‌ ಆಗಿರುತ್ತದೆ.

ಹಂತ 3: ನಿಮ್ಮ ಸೇವೆಯನ್ನು ಆಪ್ಟಿಮೈಸ್ ಮಾಡಿ

ಅನುಭವವನ್ನು ಉತ್ತಮಗೊಳಿಸಿ. ಮಾರ್ಗದ ಕಾರ್ಯಕ್ಷಮತೆ, ಸವಾರರ ಸಂಖ್ಯೆ, ಇತರ ವೆಚ್ಚಗಳು ಮತ್ತು ಇನ್ನಷ್ಟರ ಬಗ್ಗೆ ಡ್ಯಾಶ್‌ಬೋರ್ಡ್‌ಗಳು ಮೌಲ್ಯಯುತ ಒಳನೋಟಗಳನ್ನು ನೀಡುತ್ತವೆ. ಅಗತ್ಯಕ್ಕೆ ಅನುಗುಣವಾಗಿ ನೀವು ಮಾರ್ಗಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.

ಸಮೂಹ ಸಾರಿಗೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ

  • ಮಾರ್ಗಗಳ ಸಂಖ್ಯೆ, ಉದ್ಯೋಗಿ ಸವಾರರ ಸಂಖ್ಯೆ, ಆವರ್ತನ ಮುಂತಾದ ಅಂಶಗಳನ್ನು ಅವಲಂಬಿಸಿ ದರಗಳು ಬದಲಾಗಬಹುದು. ನಮ್ಮ ಸಂಪರ್ಕ ಫಾರ್ಮ್ ಬಳಸಿ ನಮ್ಮ ತಂಡದೊಂದಿಗೆ ಉಚಿತ ಸಮಾಲೋಚನೆಯನ್ನು ನಿಗದಿಪಡಿಸಿದರೆ, ನಿಮ್ಮ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಬಹುದು. ನಿಮಗೆ ಅಗತ್ಯವಿರುವುದಕ್ಕೆ ಮಾತ್ರ ನೀವು ಪಾವತಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಅಪ್ರೋಚ್ ಅನ್ನು ಕಸ್ಟಮೈಸ್‌ ಮಾಡಬಹುದು.

  • ನಿಮ್ಮ ಕಂಪನಿಯ ಅಗತ್ಯತೆಗಳಿಗೆ ಅನುಗುಣವಾಗಿ ಮತ್ತು ನಿಮ್ಮ ಉದ್ಯೋಗಿಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಆಧರಿಸಿ ಗರಿಷ್ಠ ಪ್ರಯೋಜನ ನೀಡುವ ನೆಟ್‌ವರ್ಕ್‌ ವಿನ್ಯಾಸಗೊಳಿಸಲು Uber for Business ಮೂಲಕ ಶಟಲ್ ಸೇವೆಗಳು Uber ನ ಆಧುನಿಕ ರೂಟಿಂಗ್ ಅಲ್ಗಾರಿಥಮ್‌ಗಳ ಪ್ರಯೋಜನ ಪಡೆಯುತ್ತವೆ. ಇತರ ಸೇವಾ ಪೂರೈಕೆದಾರರಿಗೆ ಹೋಲಿಸಿದಾಗ ಕಾರ್ಪೊರೇಟ್ ಶಟಲ್ ಅನ್ನು ಬಳಸುವುದು ಕಡಿಮೆ ವೆಚ್ಚದ ಪರಿಹಾರವಾಗಬಹುದು. ಅವುಗಳು ಕಡಿಮೆ ವಾಹನಗಳನ್ನು ಬಳಸುವುದು, ಕಿರು ಹಾದಿಗಳನ್ನು ರಚಿಸುವುದು ಹಾಗೂ ಹೆಚ್ಚು ಅನುಕೂಲಕರ ಪಿಕಪ್‌ ಪಾಯಿಂಟ್‌ಗಳನ್ನು ಹೊಂದಿರುವುದು ಇದಕ್ಕೆ ಕಾರಣ.

  • ಮಾರ್ಗಗಳು ಮತ್ತು ವೇಳಾಪಟ್ಟಿಗಳನ್ನು ಕ್ಲೈಂಟ್ ನಿರ್ವಾಹಕರ ಸಹಯೋಗದೊಂದಿಗೆ ಅವರ ಕಂಪನಿಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆ ಅಗತ್ಯತೆಗಳು ಬದಲಾದರೆ, ಹೊಸ ಪಿಕಪ್ ಪಾಯಿಂಟ್‌ಗಳನ್ನು ಸೇರಿಸುವುದು ಮತ್ತು ವೇಳಾಪಟ್ಟಿಗಳನ್ನು ಮಾರ್ಪಡಿಸುವಂತಹ ಬದಲಾವಣೆಗಳನ್ನು ನೆಟ್‌ವರ್ಕ್‌ಗೆ ಮಾಡಲು ಕ್ಲೈಂಟ್‌ ವಿನಂತಿಸಬಹುದು. ಉದ್ಯೋಗಿಗಳಿಗೆ ಪ್ರತಿದಿನ ತಮ್ಮ ಆಸನಗಳನ್ನು ತಮ್ಮ ಆದ್ಯತೆಯ ಶಟಲ್ ಮಾರ್ಗದಲ್ಲಿ ಬುಕ್ ಮಾಡುವ ಫ್ಲೆಕ್ಸಿಬಿಲಿಟಿ ಹೊಂದಿರುತ್ತಾರೆ.

  • ನಿಮ್ಮ ಕಾರ್ಯಾಚರಣೆಯ ಅಗತ್ಯಗಳು ಮತ್ತು ವೆಚ್ಚ ಹಾಗೂ ಅನುಕೂಲತೆಯ ಆದ್ಯತೆಗಳಿಗೆ ಅನುಗುಣವಾಗಿ Uber ಪರಿಹಾರಗಳನ್ನು ಒದಗಿಸುತ್ತದೆ. ನಾವು ನಿಮ್ಮ ಅಸ್ತಿತ್ವದಲ್ಲಿರುವ ನೆಟ್‌ವರ್ಕ್ ಅನ್ನು ‌ಈಗ ಇರುವ ಸ್ಥಿತಿಯಲ್ಲಿಯೇ ನಿರ್ವಹಿಸಬಹುದು ಅಥವಾ ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಲಾದ ನೆಟ್‌ವರ್ಕ್ ಅನ್ನು ವಿನ್ಯಾಸಗೊಳಿಸಬಹುದು. ನಮ್ಮ ಉತ್ಪನ್ನವು ಅನಾನುಕೂಲತೆಗಳನ್ನು ನಿಭಾಯಿಸಲು ಹಾಗೂ ಸವಾರರ ಮತ್ತು ಕೈಗಾರಿಕೆಗಳ ವಿಭಿನ್ನ ಪ್ರೊಫೈಲ್‌ಗಳನ್ನು ನಿಭಾಯಿಸಲು ವಿವಿಧ ಕಾನ್ಫಿಗರೇಶನ್‌ಗಳನ್ನು ಹೊಂದಿದೆ.

  • ಅನಿರೀಕ್ಷಿತ ಸಂದರ್ಭಗಳು ಶಟಲ್ ಪಿಕಪ್ ಸೇವೆಯಲ್ಲಿ ವ್ಯತ್ಯಯ ಉಂಟುಮಾಡಿದರೆ, ಸವಾರರು ತಮ್ಮ ತಲುಪಬೇಕಾದ ಸ್ಥಳಕ್ಕೆ ಕ್ಲಪ್ತ ಸಮಯದಲ್ಲಿ ತಲುಪುವಂತಾಗಲು ನಾವು UberX ಪ್ರೊಮೋ ಕೋಡ್‌ಗಳನ್ನು ತಕ್ಷಣವೇ ಒದಗಿಸುತ್ತೇವೆ (ಸ್ಥಳೀಯ UberX ಕವರೇಜ್‌ಗೆ ಒಳಪಟ್ಟಿರುತ್ತದೆ). ನಮ್ಮ ಲೈವ್ ಮಾನಿಟರಿಂಗ್ ಪರಿಕರಗಳು ಮತ್ತು ಬೆಂಬಲ ತಂಡವು ಯಾವುದೇ ಚಾಲಕ ಒಪ್ಪಿಕೊಳ್ಳದೇ ಇರುವುದನ್ನು ಸಕ್ರಿಯವಾಗಿ ಪತ್ತೆಹಚ್ಚುತ್ತದೆ ಹಾಗೂ ಶಟಲ್ ನಿರ್ಗಮನಗಳಿಗೆ ತ್ವರಿತ ಬದಲಿ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ.

  • ‌ Uber Shuttle ನೊಂದಿಗಿನ ಸೇವೆಗಳು ನಿಮಗಾಗಿ ಕಸ್ಟಮೈಸ್ ಮಾಡಿದ ಮತ್ತು ಆಪ್ಟಿಮೈಸ್ ಮಾಡಿದ ಸೇವೆಯನ್ನು ವಿನ್ಯಾಸಗೊಳಿಸಲು ನಿಮ್ಮ ಅಗತ್ಯತೆಗಳನ್ನು ಅವಲಂಬಿಸಿ ವಿವಿಧ ಸಾಮರ್ಥ್ಯಗಳ ವಾಹನಗಳನ್ನು ಒದಗಿಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಭಿನ್ನ ಬೇಡಿಕೆಯಿದ್ದಲ್ಲಿ ವಿಭಿನ್ನ ಮಾರ್ಗಗಳಿಗೆ ವಿಭಿನ್ನ ಸಾಮರ್ಥ್ಯದ ವಾಹನಗಳನ್ನು ಒದಗಿಸಿ ಸೇವೆ ಸಲ್ಲಿಸಲಾಗುವುದು.

  • ನಮ್ಮ ತಂಡದೊಂದಿಗೆ ಉಚಿತ ಸಮಾಲೋಚನೆಯನ್ನು ನಿಗದಿಪಡಿಸಲು ನಮ್ಮ ಸಂಪರ್ಕ ಫಾರ್ಮ್ ಭರ್ತಿ ಮಾಡಿ. ಅಲ್ಲಿಂದ, ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದಲ್ಲಿ ನಾವು ಹೇಗೆ ಸಂಭಾವ್ಯವಾಗಿ ಒಟ್ಟಾಗಿ ಕೆಲಸ ಮಾಡಬಹುದು ಎಂಬ ಕುರಿತು ನಾವು ನಿಮ್ಮೊಂದಿಗೆ ಚರ್ಚಿಸಬಹುದು.