Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ಉದ್ಯೋಗಿಗಳನ್ನು ನೇಮಿಸಿ, ಉಳಿಸಿಕೊಳ್ಳಿ ಮತ್ತು ರಿವಾರ್ಡ್‌ ನೀಡಿ

ನೇಮಕಾತಿ, ಉತ್ಪಾದಕತೆ ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಗುರಿಗಳು, ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ಬೆಂಬಲಿಸುವ ಅನುಕೂಲಕರ ಪ್ರಯೋಜನಗಳು ಮತ್ತು ಸೌಲಭ್ಯಗಳೊಂದಿಗೆ ಉದ್ಯೋಗಿಗಳ ಅನುಭವವನ್ನು ಉನ್ನತೀಕರಿಸಿ.

Uber for Business ನೊಂದಿಗೆ ಉನ್ನತ ಪ್ರತಿಭೆಗಳನ್ನು ಆಕರ್ಷಿಸಿ

ನಮ್ಮ ಬಳಸಲು ಸುಲಭವಾದ ಪ್ಲಾಟ್‌ಫಾರ್ಮ್‌ನೊಂದಿಗೆ, ಅಸ್ತಿತ್ವದಲ್ಲಿರುವ ತಂಡದ ಸದಸ್ಯರನ್ನು ಅವರು ಎಲ್ಲಿದ್ದರೂ ಖುಷಿಯಾಗಿರಿಸಿ, ಅವರು ಉತ್ತಮವಾಗಿ ತೊಡಗಿಸಿಕೊಳ್ಳುವಂತೆ ಮತ್ತು ಬದ್ಧತೆಯಿಂದಿರುವಂತೆ ಮಾಡಿ. ಜೊತೆಗೆ ನೀವು ಜಾಗತಿಕ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು ಆಕರ್ಷಿಸಬಹುದು.

ನೇಮಿಸಿ

ಉದ್ಯೋಗ ಅಭ್ಯರ್ಥಿಗಳಿಗೆ ಸಂದರ್ಶನಗಳಿಗೆ ಹಾಜರಾಗಲು ಪ್ರಯಾಣ ವೋಚರ್‌ಗಳನ್ನು ನೀಡಿ ಮತ್ತು ಈ ಮೂಲಕ ಅವರು ಮೌಲ್ಯಯುತವಾಗಿದ್ದಾರೆಂದು ತೋರಿಸಿ ಹಾಗೂ ಅವರ ಒಟ್ಟಾರೆ ಅನುಭವವನ್ನು ಸುಧಾರಿಸಿ.

Shopifyಉನ್ನತ ಪ್ರತಿಭೆಗಳನ್ನು ಆಕರ್ಷಿಸಲು Uber for Business ಅನ್ನು ಹೇಗೆ ಬಳಸುತ್ತದೆ ಎಂಬುದನ್ನು

ಇಲ್ಲಿ ಅನ್ವೇಷಿಸಿ.

ಉಳಿಸಿಕೊಳ್ಳಿ

ನಿಮ್ಮ ಉದ್ಯೋಗಿಗಳು ಎಲ್ಲಿಯೇ ಕೆಲಸ ಮಾಡುತ್ತಿರಲಿ, Uber Eats ನೊಂದಿಗೆ ಊಟಗಳನ್ನು ನೀಡುವ ಮೂಲಕ ನೀವು ಅವರ ಬಗ್ಗೆ ಕಾಳಜಿ ಹೊಂದಿದ್ದೀರಿ ಎಂಬುದನ್ನು ತೋರಿಸಿ. ಅಥವಾ ಕಚೇರಿಗೆ, ಕೆಲಸಕ್ಕೆ ಸಂಬಂಧಿಸಿದ ಈವೆಂಟ್‌ಗಳಿಗೆ ಮತ್ತು ಇನ್ನಷ್ಟು ಕಡೆಗಳಿಗೆ ಹೋಗಲು ಮತ್ತು ಹಿಂತಿರುಗಲು ಸವಾರಿಗಳನ್ನು ಒದಗಿಸಿ.

TerminusUber Eats ನಲ್ಲಿ ಬಳಸಲು $100 ಮಾಸಿಕ ಸ್ಟೈಪೆಂಡ್ ನೀಡುವ ಮೂಲಕ COVID-19 ಸಮಯದಲ್ಲಿ ತನ್ನ ಉದ್ಯೋಗಿಗಳನ್ನು ಹೇಗೆ ಬೆಂಬಲಿಸಿದೆ ಎಂಬುದನ್ನು ತಿಳಿಯಲು

ಇಲ್ಲಿ ನೋಡಿ.

ರಿವಾರ್ಡ್

ಒಂದು ರಿವಾರ್ಡ್ ಬಹಳಷ್ಟನ್ನು ಸಾಧಿಸಬಹುದು. ಚೆನ್ನಾಗಿ ಮಾಡಿದ ಕೆಲಸಕ್ಕೆ ಊಟದ ವೋಚರ್‌ಗಳನ್ನು ನೀಡುವ ಮೂಲಕ ಕೆಲಸದ ಸ್ಥಳದಲ್ಲಿ ಸಂತೃಪ್ತಿಯನ್ನು ಹೆಚ್ಚಿಸಿ. ಅಥವಾ ಗಿಫ್ಟ್‌ ಕಾರ್ಡ್‌ಗಳನ್ನು ನೀಡುವ ಮೂಲಕ ಉದ್ಯೋಗಿಗಳ ಸಾಧನೆಯ ಮೈಲಿಗಲ್ಲುಗಳನ್ನು ಸಂಭ್ರಮಿಸಿ. ನೀವು ಊಟ ಮತ್ತು ತಿಂಡಿಗಳಿಗೆ ಮಾಸಿಕ ಸ್ಟೈಪೆಂಡ್‌ಗಳನ್ನು ಸಹ ನೀಡಬಹುದು.

ತನ್ನ ಕ್ಲೈಂಟ್‌ಗಳು ಮತ್ತು ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ವೋಚರ್‌ಗಳು ಮತ್ತು ಗಿಫ್ಟ್‌ ಕಾರ್ಡ್‌ಗಳನ್ನು Riskalyze ಹೇಗೆ ಬಳಸುತ್ತದೆ ಎಂಬುದನ್ನು ತಿಳಿಯಲು

ಇಲ್ಲಿ ನೋಡಿ.

ಕೆಲಸಕ್ಕೆ ಹಿಂತಿರುಗಿ

ನಿಮ್ಮ ಉದ್ಯೋಗಿಗಳು ಪೂರ್ಣ-ಸಮಯ ಅಥವಾ ಹೈಬ್ರಿಡ್ ವೇಳಾಪಟ್ಟಿಯಲ್ಲಿ ಕೆಲಸ ಮಾಡಲು ಕಚೇರಿಗೆ ಹಿಂತಿರುಗುತ್ತಿರಲಿ, Uber ನೊಂದಿಗೆ ಸವಾರಿಗಳಿಗಾಗಿ ವೋಚರ್‌ಗಳೊಂದಿಗೆಪರಿವರ್ತನೆಯನ್ನು (ಮತ್ತು ಪ್ರಯಾಣ) ಸುಲಭಗೊಳಿಸಿ.

Eatalyಸಾಂಕ್ರಾಮಿಕದ ನಡುವೆ ಕೆಲಸ ಮಾಡಿದ ಉದ್ಯೋಗಿಗಳು ಸುರಕ್ಷಿತ ಭಾವನೆ ಹೊಂದಲು Uber for Business ಅನ್ನು ಹೇಗೆ ಬಳಸಿತು ಎಂಬುದನ್ನು ತಿಳಿಯಲು

ಇಲ್ಲಿ ಪರಿಶೀಲಿಸಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ ನೋಡಿ

ಎಲ್ಲವೂ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುತ್ತದೆ. ಪ್ರಯಾಣ, ಊಟ ಮತ್ತು ಹೆಚ್ಚಿನವುಗಳಿಗಾಗಿ ಪ್ರೋಗ್ರಾಂಗಳನ್ನು ಆ್ಯಕ್ಸೆಸ್‌ ಮಾಡಲು ಮತ್ತು ಕಸ್ಟಮೈಸ್ ಮಾಡಲು ಇದು ನಿಮ್ಮ ಕೇಂದ್ರವಾಗಿದೆ. ನೀವು ನೈಜ-ಸಮಯದ ವರದಿ ಮಾಡುವಿಕೆ ಮತ್ತು ಬಳಕೆಯ ಅಪ್‌ಡೇಟ್‌ಗಳನ್ನು ಸಹ ಪಡೆಯಬಹುದು.

ನಿಮ್ಮ ಮಿತಿಗಳನ್ನು ಸೆಟ್ ಮಾಡಿ

ದಿನ, ಸಮಯ, ಸ್ಥಳ ಮತ್ತು ಬಜೆಟ್ ಆಧರಿಸಿ ಸವಾರಿ ಮತ್ತು ಆಹಾರದ ಮಿತಿಗಳನ್ನು ಹೊಂದಿಸಿ. ಕಂಪನಿಯ ಒಂದೇ ಖಾತೆಗೆ ಅಥವಾ ಕಾರ್ಪೊರೇಟ್ ಕಾರ್ಡ್‌ಗಳಿಗೆ ಶುಲ್ಕ ವಿಧಿಸಲು ಸಹ ನೀವು ನಿಮ್ಮ ತಂಡಕ್ಕೆ ಅನುಮತಿಸಬಹುದು.

ಅರ್ಹ ಉದ್ಯೋಗಿಗಳನ್ನು ಆಹ್ವಾನಿಸಿ

ಕಂಪನಿಯ ಪ್ರೊಫೈಲ್‌ಗೆ ಸೇರಲು ಆಹ್ವಾನಿಸುವ ಮೂಲಕ ನಿಮ್ಮ ತಂಡವನ್ನು ಆನ್‌ಬೋರ್ಡ್‌ ಮಾಡಿ. ಅವರು ಇಮೇಲ್ ಅಥವಾ ಪಠ್ಯ ಸಂದೇಶದ ಮೂಲಕ ತಮ್ಮ ವೈಯಕ್ತಿಕ Uber ಪ್ರೊಫೈಲ್ ಮತ್ತು ಕಂಪನಿಯ Uber for Business ಪ್ರೊಫೈಲ್ ಅನ್ನು ಕನೆಕ್ಟ್‌ ಮಾಡಬಹುದು.

ಮುಂದೆ ಸಾಗುತ್ತಿರಿ

ಉದ್ಯೋಗಿಗಳು ತಮ್ಮ ಬ್ಯುಸಿನೆಸ್ ಪ್ರೊಫೈಲ್‌ಗೆ ತ್ವರಿತ ಟಾಗಲ್ ಮಾಡುವ ಮೂಲಕ ಸವಾರಿಗಳನ್ನು ಮತ್ತು ಆಹಾರದ ಡೆಲಿವರಿಯನ್ನು ಆನಂದಿಸಬಹುದು, ಅದೇ ಸಮಯ ನೀವು ಡ್ಯಾಶ್‌ಬೋರ್ಡ್‌ನಿಂದ ಬಳಕೆ ಮತ್ತು ವೆಚ್ಚದಂತಹ ವಿವರಗಳನ್ನು ಮೇಲ್ವಿಚಾರಣೆ ಮಾಡಬಹುದು.

ವೆಚ್ಚಗಳನ್ನು ಟ್ರ್ಯಾಕ್ ಮಾಡಿ

ರಸೀತಿಗಳನ್ನು ಉಳಿಸುವ ಕುರಿತು ಮರೆತುಬಿಡಿ. ಸುಲಭ ಬಜೆಟ್ ಟ್ರ್ಯಾಕಿಂಗ್‌ಗಾಗಿ ವಾರಕ್ಕೊಮ್ಮೆ ಅಥವಾ ಮಾಸಿಕವಾಗಿ ಪರಿಶೀಲಿಸಬಹುದಾದ ಖರ್ಚುಮಾಡುವಿಕೆ ವ್ಯವಸ್ಥೆಗಳಿಗೆ ಪ್ರತಿ ಟ್ರಿಪ್ ಮತ್ತು ಆಹಾರವನ್ನು ಸ್ವಯಂಚಾಲಿತವಾಗಿ ಸೇರಿಸಿ.

"ಜನರನ್ನು ನಮ್ಮೊಂದಿಗೆ ಉಳಿಸಿಕೊಳ್ಳಲು ಕೆಲವು ಹೊಸ ಪರಿಕಲ್ಪನೆಗಳು ಮತ್ತು ಸೃಜನಾತ್ಮಕ ಮಾರ್ಗಗಳನ್ನು ಹೊಂದಲು ನಾವು ಶ್ರಮಿಸುತ್ತಿದ್ದೇವೆ. ನಾನು ನಮ್ಮ ಕೆಲವು ರಿಮೋಟ್ ಸಿಬ್ಬಂದಿಗೆ UberEats ಅನ್ನು ಕಳುಹಿಸಿದ್ದೇನೆ. ಆದ್ದರಿಂದ, ನಾವು ಕಚೇರಿಯಲ್ಲಿ ಏನಾದರೂ ಮಾಡಿದಾಗ ಅವರು ತಮ್ಮ ಸ್ಥಳದಿಂದಲೇ ಭಾಗವಹಿಸಬಹುದು. ಉದ್ಯೋಗಿಗಳನ್ನು ಉಳಿಸಿಕೊಳ್ಳುವುದನ್ನು ಉತ್ತೇಜಿಸಲು ಮತ್ತು ಇದು ನಮ್ಮ ಸಂಸ್ಥೆ ಎಂಬ ಭಾವನೆಯನ್ನು ಅವರಲ್ಲಿ ಬೆಳೆಸಲು ಇದು ಮತ್ತೊಂದು ಸಾಧನವಾಗಿದೆ."

ಮಿರಿಯಮ್ ಲೆವಿಸ್, HR ಮ್ಯಾನೇಜರ್, ZaneRay ಗ್ರೂಪ್

ನಿಮ್ಮ ಉದ್ಯೋಗಿಗಳ ಉತ್ಪಾದಕೀಯತೆ, ಚಲನಶೀಲತೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಿ

ಹೆಚ್ಚುವರಿ ಸಂಪನ್ಮೂಲಗಳನ್ನು ಅನ್ವೇಷಿಸಿ

ನಿಮ್ಮ ಉದ್ಯೋಗಿಗಳು ಎಲ್ಲಿಯೇ ಕೆಲಸ ಮಾಡುತ್ತಿದ್ದರೂ ಅವರಿಗೆ ಧನ್ಯವಾದ ಹೇಳಿ

ಈ 5 ನವೀನ ಗಿಫ್ಟ್‌ ಐಡಿಯಾಗಳೊಂದಿಗೆ ಕಚೇರಿಯಲ್ಲಿ ಮತ್ತು ಕಚೇರಿಯ ಹೊರಗೆ ನಿಮ್ಮ ತಂಡಗಳಿಗೆ ಮೆಚ್ಚುಗೆಯನ್ನು ತೋರಿಸಿ.

ನಿಮ್ಮ ಉದ್ಯೋಗಿಗಳು ಹೇಗೆ ಪ್ರಯಾಣಿಸುತ್ತಾರೆ ಎಂಬುದನ್ನು ಮರುಕಲ್ಪಿಸಿ

ಪರಿಸರ ಪ್ರಜ್ಞೆಯೊಂದಿಗೆ ಮತ್ತು ಬಜೆಟ್ ಸ್ನೇಹಿ ಆಯ್ಕೆಗಳೊಂದಿಗೆ ತಮ್ಮ ತಂಡಗಳು ಕೆಲಸ ಮಾಡುವ ರೀತಿಯನ್ನು ಸಂಸ್ಥೆಗಳು ಹೇಗೆ ಆಮೂಲಾಗ್ರವಾಗಿ ಪರಿವರ್ತಿಸಬಹುದು ಎಂಬುದನ್ನು ಕಂಡುಕೊಳ್ಳಿ.

ಒಂದು ಕಂಪನಿಯು Uber for Business ಅನ್ನು ಹೇಗೆ ಬಳಸುತ್ತದೆ ಎಂಬುದನ್ನು ನೋಡಿ

BetterHelp ಪ್ರಪಂಚದಾದ್ಯಂತ ಇರುವ ತನ್ನ ರಿಮೋಟ್ ಉದ್ಯೋಗಿಗಳಿಗೆ ಮೌಲ್ಯಯುತ ಸವಲತ್ತು ಒದಗಿಸುವ ಉದ್ದೇಶದಿಂದ ಊಟದ ಪ್ರೋಗ್ರಾಂಗಳನ್ನು ರಚಿಸಲು Uber for Business ಅನ್ನು ಹೇಗೆ ಬಳಸುತ್ತದೆ ಎಂಬುದನ್ನು ತಿಳಿಯಿರಿ.

Uber for Business ನೊಂದಿಗೆ ನಿಮ್ಮ ತಂಡವನ್ನು ನಿರ್ವಹಿಸಿ

ನಿಮ್ಮ ಉದ್ಯೋಗಿಗಳಿಗೆ ಸೂಕ್ತ ರಿವಾರ್ಡ್ ನೀಡಲು ನೀವು ಯಾವುದನ್ನು ಆಯ್ಕೆ ಮಾಡಿದರೂ, ನಮ್ಮಲ್ಲಿ ಅದು ಲಭ್ಯವಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو