Please enable Javascript
Skip to main content

Uber ನ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆ ವರದಿ

Uber ಪ್ಲಾಟ್‌ಫಾರ್ಮ್ ಸೇವೆ ಸಲ್ಲಿಸಿದ ಟ್ರಿಪ್‌ಗಳಿಂದ ಆದ ಪರಿಸರ ಪರಿಣಾಮವು ಮುಖ್ಯವಾಗಿದೆ. Uber ನ ನೈಜ-ಪ್ರಪಂಚದ ಬಳಕೆಯಿಂದ ಸಂಗ್ರಹಿಸಿದ ಡೇಟಾವನ್ನು ಮೌಲ್ಯಮಾಪನ ಮಾಡುವ ಮೂಲಕ ಆ ಪರಿಣಾಮವನ್ನು ಅಳೆಯುವುದು, ಹೆಚ್ಚಿನ ಪಾರದರ್ಶಕತೆಗಾಗಿ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಮತ್ತು ನಮ್ಮ ಹವಾಮಾನ ಕಾರ್ಯಕ್ಷಮತೆಯನ್ನು ಸುಧಾರಿಸಲು ಕಾರ್ಯನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ.

ನವೆಂಬರ್ 2024 ನವೀಕರಣ: ಈ ಪುಟವು 2021 ರ ಮೊದಲ ತ್ರೈಮಾಸಿಕದ ಆರಂಭದಿಂದ 2024 ರ ಮೂರನೇ ತ್ರೈಮಾಸಿಕದ ಅಂತ್ಯದವರೆಗೆ ಆಂತರಿಕ ದಹನಕಾರಿ ಎಂಜಿನ್ (ICE) ವಾಹನಗಳು ಮತ್ತು ಶೂನ್ಯ-ಹೊರಸೂಸುವಿಕೆ ವಾಹನಗಳು (ZEV ಗಳು, ಬ್ಯಾಟರಿ EV ಗಳಂತಹವು) Uber ನಲ್ಲಿ ಪೂರ್ಣಗೊಳಿಸಿದ ಟ್ರಿಪ್‌ಗಳಿಗಾಗಿನ ಮೆಟ್ರಿಕ್‌ಗಳನ್ನು ಒಳಗೊಂಡಿರುತ್ತದೆ. ಈ ವರದಿಯ ವ್ಯಾಪ್ತಿಯು Uber ‌ನ ಮೊಬಿಲಿಟಿ ವ್ಯವಹಾರವನ್ನು (ರೈಡ್‌ಶೇರಿಂಗ್) ಮಾತ್ರ ಒಳಗೊಂಡಿದೆ ಎಂಬುದನ್ನು ಗಮನಿಸಿ.

"ಶೂನ್ಯ ಹೊರಸೂಸುವಿಕೆಗಳ ಹಾದಿಗೆ ಪಾರದರ್ಶಕತೆ ಮತ್ತು ವರ್ಷದಿಂದ ವರ್ಷಕ್ಕೆ ಪ್ರಗತಿಗೆ ಉತ್ತರದಾಯಿತ್ವ ಹೊಂದಿರುವ ಅಗತ್ಯವಿದೆ. ಗ್ರಾಹಕರಿಂದ ನಮ್ಮ ಉತ್ಪನ್ನಗಳ ನೈಜ-ಪ್ರಪಂಚದ ಬಳಕೆಯಿಂದ ಹೊರಸೂಸುವಿಕೆಯನ್ನು ಅಳೆಯುವ ಮತ್ತು ವರದಿ ಮಾಡುವ ಮೊದಲ ಸಂಚಾರ ಸೌಲಭ್ಯದ ಪ್ಲಾಟ್‌ಫಾರ್ಮ್ ಆಗಿರುವುದಕ್ಕೆ Uber ಹೆಮ್ಮೆಪಡುತ್ತದೆ."

ದಾರಾ ಖೋಸ್ರೋಶಾಹಿ, CEO, Uber

ZEV ಚಾಲಕರು

ಜಾಗತಿಕವಾಗಿ, ತಿಂಗಳಿಗೆ ಸರಾಸರಿಯಾಗಿ 182,000 ZEV ಚಾಲಕರು, Q3 2024 ರಲ್ಲಿ Uber ನ ಆ್ಯಪ್ ಅನ್ನು ಆಕ್ಟಿವ್ ಆಗಿ ಬಳಸಿದ್ದಾರೆ. ಅದು ಒಂದು ವರ್ಷದ ಹಿಂದಿನ ಇದೇ ಅವಧಿಗಿಂತ 75% ಹೆಚ್ಚಾಗಿದೆ ಮತ್ತು 3 ವರ್ಷಗಳ ಹಿಂದಿನ ಇದೇ ಅವಧಿಯ ಅಂಕಿಅಂಶಕ್ಕಿಂತ 13 ಪಟ್ಟು ಹೆಚ್ಚಾಗಿದೆ.

ಮೆಟ್ರಿಕ್: ನಮ್ಮಸುಸ್ಥಿರತೆಯ ಗುರಿಗಳನ್ನು ಘೋಷಿಸಿದ ನಂತರದ ಮೊದಲ ಪೂರ್ಣ ಕ್ಯಾಲೆಂಡರ್ ವರ್ಷದ ಆರಂಭವಾದ, Q1 2021 ಸಮಯದಿಂದ, Uber ‌ನಲ್ಲಿ ಸರಾಸರಿ ಮಾಸಿಕ ಆಕ್ಟಿವ್ ZEV ಚಾಲಕರು. Uber ಆ್ಯಪ್ ಬಳಸುತ್ತಿರುವ ಚಾಲಕರನ್ನು ಒಂದು ವೇಳೆ ಅವರು ಒಂದು ಕ್ಯಾಲೆಂಡರ್ ತಿಂಗಳಲ್ಲಿ ಕನಿಷ್ಠ ಒಂದು ಟ್ರಿಪ್ ಅನ್ನು ಪೂರ್ಣಗೊಳಿಸಿದ್ದರೆ, ಆ ತಿಂಗಳಲ್ಲಿ ಆಕ್ಟಿವ್ ಆಗಿದ್ದಾರೆಂದು ಪರಿಗಣಿಸಲಾಗುತ್ತದೆ.

ZEV ಟ್ರಿಪ್‌ಗಳು

Q3 2024 ರಲ್ಲಿ, ZEV ಚಾಲಕರು ಜಾಗತಿಕವಾಗಿ Uber ಬಳಸಿ ಸುಮಾರು 86 ಮಿಲಿಯನ್ ಟೈಲ್‌ಪೈಪ್-ಹೊರಸೂಸುವಿಕೆ-ಮುಕ್ತ ಟ್ರಿಪ್‌ಗಳನ್ನು ಒದಗಿಸಿದ್ದಾರೆ. ಅದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ Uber ‌ನಲ್ಲಿ ಪೂರ್ಣಗೊಂಡ ZEV ಟ್ರಿಪ್‌ಗಳ ಸಂಖ್ಯೆಗಿಂತ 70% ಹೆಚ್ಚು ಮತ್ತು 3 ವರ್ಷಗಳ ಹಿಂದಿನ ಇದೇ ಅವಧಿಯ ಸಂಖ್ಯೆಗಿಂತ 14 ಪಟ್ಟು ಹೆಚ್ಚು.

ಮೆಟ್ರಿಕ್: Q1 2021 ರಿಂದ ತ್ರೈಮಾಸಿಕದೊಳಗೆ, Uber ಆ್ಯಪ್‌ನಲ್ಲಿ ವ್ಯವಸ್ಥೆ ಮಾಡಲಾದ ಮತ್ತು ZEV ಚಾಲಕರು ಪೂರೈಸಿದ ಟ್ರಿಪ್‌ಗಳ ಸಂಖ್ಯೆ.

ZEV ಅಪ್‌ಟೇಕ್

Q3 2024 ರಲ್ಲಿ, ZEV ಚಾಲಕರು ಯುರೋಪ್‌ನಲ್ಲಿ ಎಲ್ಲಾ ಆನ್-ಟ್ರಿಪ್ ಮೈಲುಗಳಲ್ಲಿ 11.7% ಮತ್ತು ಕೆನಡಾ ಮತ್ತು US ನಲ್ಲಿ ಎಲ್ಲಾ ಆನ್-ಟ್ರಿಪ್ ಮೈಲುಗಳಲ್ಲಿ 8.8% ಅನ್ನು ಪೂರ್ಣಗೊಳಿಸಿದ್ದಾರೆ. ಅದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅನುಕ್ರಮವಾಗಿ 3.5 ಮತ್ತು 2.3 ಶೇಕಡಾವಾರು ಪಾಯಿಂಟ್‌ಗಳ ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಈ ಫಲಿತಾಂಶಗಳು ಇತ್ತೀಚಿನ BloombergNEF ವರದಿಯಲ್ಲಿ ಪ್ರಕಟವಾದ ಅಂಕಿಅಂಶಗಳನ್ನು ಸೂಚಿಸುತ್ತದೆ ಮತ್ತು ಇದು ಯುರೋಪ್‌ನಲ್ಲಿ Uber ಚಾಲಕರಿಂದ ZEV ಅಪ್‌ಡೇಕ್ ಸಾಮಾನ್ಯ ಜನರಲ್ಲಿನ ಚಾಲಕರಿಗಿಂತ ಸುಮಾರು 5 ಪಟ್ಟು ವೇಗವಾಗಿ ನಡೆಯುತ್ತಿದೆ ಎಂದು ತೋರಿಸುತ್ತದೆ.

ಮೆಟ್ರಿಕ್: Q1 2021 ರಿಂದ ತ್ರೈಮಾಸಿಕದ ವೇಳೆಗೆ, Uber ಆ್ಯಪ್ ವ್ಯವಸ್ಥೆ ಮಾಡಿದ ಎಲ್ಲಾ ಟ್ರಿಪ್ ಮೈಲುಗಳಿಗೆ ಹೋಲಿಸಿದರೆ, ZEV ಗಳಲ್ಲಿ ಪೂರ್ಣಗೊಳಿಸಿದ ಟ್ರಿಪ್‌ಗಳಲ್ಲಿನ ಮೈಲುಗಳ ಪಾಲು. ಕೆನಡಾ, US ಮತ್ತು ಯುರೋಪಿಯನ್ ಮಾನದಂಡದ ಡೇಟಾವು 2023 ರ ಪ್ರಕಾರ ಆಗಿದೆ ಮತ್ತು ಇದನ್ನು ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ ಇಂದ ಪಡೆದುಕೊಳ್ಳಲಾಗಿದೆ. "BEV" ಎಂದರೆ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು.

ಪ್ರಯಾಣಿಕ ಇಂಗಾಲದ ತೀವ್ರತೆ

2023 ರಲ್ಲಿ, Uber ‌ನಲ್ಲಿ ಪ್ರಯಾಣಿಕರು ಪ್ರಯಾಣಿಸಿದ ಪ್ರತಿ ಮೈಲಿಯು ಯುರೋಪ್‌ನಲ್ಲಿ ಸರಾಸರಿ 191 ಗ್ರಾಂ CO₂ (ಅಥವಾ ಪ್ರತಿ ಕಿಲೋಮೀಟರ್‌ಗೆ 119 ಗ್ರಾಂ CO₂) ಮತ್ತು US ಮತ್ತು ಕೆನಡಾದಲ್ಲಿ 307 ಗ್ರಾಂ CO₂ (ಅಥವಾ ಪ್ರತಿ ಕಿಲೋಮೀಟರ್‌ಗೆ 192 ಗ್ರಾಂ CO₂) ಉತ್ಪಾದನೆಗೆ ಕಾರಣವಾಗಿದೆ. 2021 ಕ್ಕೆ ಹೋಲಿಸಿದರೆ, ಈ ಪ್ರಯಾಣಿಕರ ಇಂಗಾಲದ ತೀವ್ರತೆಯ ಮೆಟ್ರಿಕ್ ಯುರೋಪ್‌ನಲ್ಲಿ 16% ಮತ್ತು US ಮತ್ತು ಕೆನಡಾದಾದ್ಯಂತ 15% ರಷ್ಟು ಕಡಿಮೆಯಾಗಿದೆ.

US ಮತ್ತು ಕೆನಡಾ
Clear valueopen

ಮೆಟ್ರಿಕ್: ಪ್ರಯಾಣಿಕರ ಇಂಗಾಲದ ತೀವ್ರತೆ, ಅಥವಾ ಪ್ರತಿ ಪ್ರಯಾಣಿಕರು ಪ್ರಯಾಣಿಸಿದ ಮೈಲಿಗೆ CO₂ ನ ಅಂದಾಜು ಮಾಡಲಾದ ಗ್ರಾಂಗಳು, Uber ಬಳಸುವ —ಮತ್ತು,ಹೆಚ್ಚುತ್ತಿರುವಂತೆ, ಪ್ರಪಂಚದಾದ್ಯಂತ ಸರ್ಕಾರಗಳು ಮತ್ತು ಕಂಪನಿಗಳು ಬಳಸುವ ವಾರ್ಷಿಕ ಹವಾಮಾನ ಮತ್ತು ದಕ್ಷತೆಯ ಮೆಟ್ರಿಕ್ ಆಗಿದೆ . ರೈಡ್‌ಶೇರಿಂಗ್ ಅಥವಾ ಯಾವುದೇ ಬೇಡಿಕೆಯ ಮೇರೆಗೆ ಮೊಬಿಲಿಟಿ ಸೇವೆಯ ಸಂದರ್ಭದಲ್ಲಿ, ಯಾವುದೇ "ಡೆಡ್‌ಹೆಡ್" ಮೈಲುಗಳಿಂದ ಉತ್ಪತ್ತಿಯಾಗುವ ಹೊರಸೂಸುವಿಕೆಗಳು— ಪ್ರಯಾಣಿಕರಿಲ್ಲದೆ ಪ್ರಯಾಣಿಸಿದ ವಾಹನ ಮೈಲುಗಳನ್ನು—ಲೆಕ್ಕಾಚಾರವಾಗಿ ಫ್ಯಾಕ್ಟರ್‌ಗೊಳಿಸಲಾಗಿದೆ.

ಪ್ರಯಾಣಿಕರ ಇಂಗಾಲದ ತೀವ್ರತೆಯನ್ನು ನಾವು ಹೇಗೆ ಲೆಕ್ಕ ಹಾಕುತ್ತೇವೆ ಎಂಬುದರ ಕುರಿತು ಹೆಚ್ಚಿನ ವಿವರಗಳಿಗಾಗಿ, ನಮ್ಮ ಕಾರ್ಯವಿಧಾನದ ದಾಖಲೆ ಎಂಬಲ್ಲಿಗೆ ಹೋಗಿ. US ಮತ್ತು ಕೆನಡಾಗೆ ಹೋಲಿಸಿದರೆ ಯುರೋಪಿನಲ್ಲಿ Uber ನಲ್ಲಿ ವಾಹನಗಳಿಗೆ ಗಣನೀಯವಾಗಿ ಕಡಿಮೆ ಸರಾಸರಿಯ ಇಂಧನ ಎಕಾನಮಿಯು ಈ ಎರಡು ಭೌಗೋಳಿಕ ಪ್ರದೇಶಗಳಲ್ಲಿ ಇಂಗಾಲದ ತೀವ್ರತೆಯಲ್ಲಿನ ಹೆಚ್ಚಿನ ವ್ಯತ್ಯಾಸವನ್ನು ವಿವರಿಸುತ್ತದೆ ಎಂಬುದನ್ನು ಗಮನಿಸಿ. ಹೆಚ್ಚಿನ ಪ್ರಮಾಣದಲ್ಲಿ ZEV ಗಳು ಮತ್ತು ಹೈಬ್ರಿಡ್‌ಗಳೊಂದಿಗೆ ಯುರೋಪ್‌ನಲ್ಲಿ ಚಾಲಕರು Uber ಆ್ಯಪ್‌ನಲ್ಲಿ ಬಳಸುವ ವಾಹನಗಳ ಸಂಯೋಜನೆಯು ಹೆಚ್ಚು ಪರಿಣಾಮಕಾರಿಯಾಗಿದ್ದು, US ನಲ್ಲಿ ಹೆಚ್ಚು ಕಠಿಣ ಇಂಧನ ಆರ್ಥಿಕ ವರದಿ ಮಾಡುವ ಮಾನದಂಡಗಳು ಸಹ ಈ ವ್ಯತ್ಯಾಸಕ್ಕೆ ಕಾರಣವಾಗಿವೆ. ಇದರ ಜೊತೆಗೆ, 2021 ಕ್ಕೂ ಮೊದಲು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪೂರ್ಣಗೊಂಡ ಟ್ರಿಪ್‌ಗಳಿಗೆ ಪ್ರಯಾಣಿಕರ ಇಂಗಾಲದ ತೀವ್ರತೆಯನ್ನು ಲೆಕ್ಕಾಚಾರ ಮಾಡಲು ನಮಗೆ ಸಾಕಷ್ಟು ಇನ್‌ಪುಟ್ ಡೇಟಾ ಪ್ರವೇಶವಿಲ್ಲ.

ಒಳನೋಟಗಳು ಮತ್ತು ಆಳವಾದ ಅಧ್ಯಯನ

1/9
1/5
1/3

ಆಗಾಗ ಕೇಳಲಾಗುವ ಪ್ರಶ್ನೆಗಳು

  • ನಮ್ಮ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆಯ ವರದಿಯು ನಗರ ಅಧಿಕಾರಿಗಳು, ಪರಿಸರದ ಕುರಿತಾಗಿ ವಕಾಲತ್ತು ಮಾಡುವವರು, ಬಳಕೆದಾರರು ಮತ್ತು ಇತರ ಪಾಲುದಾರರಿಗೆ Uber ಆ್ಯಪ್‌ನಿಂದ ಸಕ್ರಿಯಗೊಳಿಸಲಾದ ಪ್ರಯಾಣಿಕರ ವಾಹನ ಟ್ರಿಪ್‌ಗಳಿಗೆ ಹೊರಸೂಸುವಿಕೆ ಮತ್ತು ವಿದ್ಯುದೀಕರಣದ ಕುರಿತು ಕಾರ್ಯಕ್ಷಮತೆ ಆಧಾರಿತ ಮೆಟ್ರಿಕ್‌ಗಳನ್ನು ಒದಗಿಸುತ್ತದೆ.

  • Uber ಆ್ಯಪ್‌ನೊಂದಿಗೆ ಪೂರ್ಣಗೊಳಿಸಿದ ಟ್ರಿಪ್‌ಗಳಿಂದ ಆದ ಪರಿಸರದ ಪರಿಣಾಮವು ಮುಖ್ಯವಾಗಿದೆ. ಕಾರ್ಯನಿರ್ವಹಣೆಯ ಬಗ್ಗೆ ಪಾರದರ್ಶಕವಾಗಿ ವರದಿ ಮಾಡುವುದು ಮತ್ತು ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಪ್ಲಾಟ್‌ಫಾರ್ಮ್ ಬಳಕೆಯಿಂದ ಉಂಟಾಗುವ ಹೊರಸೂಸುವಿಕೆಗಳು Uber ನ ಇಂಗಾಲದ ಹೆಜ್ಜೆಗುರುತಿನ ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ನಮ್ಮ ವಿಶ್ಲೇಷಣೆ ತೋರಿಸುತ್ತವೆ. ನಮ್ಮ ಪ್ಲಾಟ್‌ಫಾರ್ಮ್‌ನ ನೈಜ-ಪ್ರಪಂಚದ ಬಳಕೆಯ ಆಧಾರದ ಮೇಲಿನ ಈ ವರದಿಯು, ನಮ್ಮ ಹವಾಮಾನದ ಪ್ರಭಾವದ ಕುರಿತು ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸುತ್ತದೆ ಮತ್ತು ZEV ಗಳಿಗೆ ನ್ಯಾಯಯುತ ಪರಿವರ್ತನೆ ಹೊಂದಲು ಚಾಲಕರಿಗೆ ಬೆಂಬಲ ನೀಡುವ ಮತ್ತು ಸವಾರಿಗಳಿಂದ ಉಂಟಾಗುವ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಮ್ಮ ಪ್ರಯತ್ನಗಳನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ.

    ನಮ್ಮ ಮೊದಲ ವರದಿಯನ್ನು (2020) ನೀವು ಇಲ್ಲಿ ಮತ್ತು ನಮ್ಮ ಎರಡನೆಯ ವರದಿಯನ್ನು (2021) ಇಲ್ಲಿ ನೀವು ಓದಬಹುದು. ನಮ್ಮ 2021 ರ ವರದಿಯ ನಂತರ, ನಾವು ಈ ವೆಬ್ ಪುಟದಲ್ಲಿ ನವೀಕರಣಗಳನ್ನು ಮಾತ್ರ ಪ್ರಕಟಿಸಿದ್ದೇವೆ.

  • ಮೆಟ್ರಿಕ್ಸ್ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

    • 2040 ರ ವೇಳೆಗೆ ಜಾಗತಿಕವಾಗಿ Uber ನಲ್ಲಿ 100% ಶೂನ್ಯ-ಹೊರಸೂಸುವಿಕೆ ಚಲನಶೀಲತೆಯ ನಮ್ಮ ಗುರಿಯತ್ತ ನಮ್ಮ ಪ್ರಗತಿಯನ್ನು ಅಳೆಯುವ Uber ನಲ್ಲಿನ ಚಾಲಕರ ZEV ಅಪ್‌ಟೇಕ್ (ZEV ಗಳಲ್ಲಿ ಪೂರ್ಣಗೊಂಡಿರುವ ಆನ್-ಟ್ರಿಪ್ ಮೈಲಿಗಳು ಅಥವಾ ಕಿಲೋಮೀಟರ್‌ಗಳ ಪಾಲು)
    • ಪ್ರಯಾಣಿಕ ಇಂಗಾಲದ ತೀವ್ರತೆ, ಇದು ಪ್ರತಿ ಪ್ರಯಾಣಿಕರ ಮೈಲಿಯಿಂದ ಉಂಟಾಗುವ ಹೊರಸೂಸುವಿಕೆಯನ್ನು ಅಳೆಯುತ್ತದೆ
  • ಟ್ರಿಪ್‌ಗಳ ಪ್ರಯಾಣಿಕರ ಇಂಗಾಲದ ತೀವ್ರತೆಯನ್ನು ಕಡಿಮೆ ಮಾಡುವ ಮತ್ತು Uber ‌ನಲ್ಲಿ ಶೂನ್ಯ-ಹೊರಸೂಸುವಿಕೆ ವಾಹನಗಳ ಬಳಕೆಯನ್ನು ಹೆಚ್ಚಿಸುವ ದಿಟ್ಟ ಮಹತ್ವಾಕಾಂಕ್ಷೆಗಳನ್ನು ನಾವು ಹೊಂದಿದ್ದೇವೆ. ನೀವು ನಿರ್ವಹಿಸುವುದನ್ನು ಅಳೆಯುವುದು ಮತ್ತು ಪ್ರಗತಿಯಲ್ಲಿ ಪಾರದರ್ಶಕವಾಗಿರುವುದು ಪ್ರಯಾಣದ ಸಮಯದಲ್ಲಿ ಪ್ರಮುಖ ಹಂತಗಳಾಗಿವೆ.

  • Uber ಆ್ಯಪ್ ‌ನೊಂದಿಗೆ ಸವಾರಿಗಳು ಸವಾರಿಗಾಗಿ ಹುಡುಕುತ್ತಿರುವ ಜನರಿಗೆ ಲಭ್ಯವಿರುವ ಹಲವು ಸಾರಿಗೆ ಆಯ್ಕೆಗಳಲ್ಲಿ ಒಂದಾಗಿದೆ. ಟ್ರಿಪ್ ಆಯ್ಕೆಯು ವಿವಿಧ ಸ್ಥಳೀಯ ಮಾರುಕಟ್ಟೆ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. US ನ್ಯಾಷನಲ್ ಹೌಸ್‌ಹೋಲ್ಡ್ ಟ್ರಾವೆಲ್ ಸಮೀಕ್ಷೆಯ ಡೇಟಾದ ನಮ್ಮ ವಿಶ್ಲೇಷಣೆ, ಅತ್ಯಂತ ಸುಸ್ಥಿರ ಸಾರಿಗೆ ವಿಧಾನಗಳ (ಸಾರಿಗೆ, ನಡಿಗೆ ಮತ್ತು ಬೈಕಿಂಗ್) ಹೆಚ್ಚಿನ ಪ್ರತಿ ಮನೆಯ ಬಳಕೆಯು ರೈಡ್‌ಶೇರಿಂಗ್ ಮತ್ತು ಇತರ ಬೇಡಿಕೆಯ ಮೇರೆಗಿನ ಪರಿಹಾರಗಳ ಹೆಚ್ಚಿನ ಬಳಕೆಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ತೋರಿಸುತ್ತದೆ.

  • ನಮ್ಮಮೊದಲ ವರದಿ 2020 ರಲ್ಲಿ ಪ್ರಕಟವಾಗಿದ್ದು, US ಮತ್ತು ಕೆನಡಾವನ್ನು ಒಳಗೊಂಡಿದೆ. ನಾವು 2021 ರಲ್ಲಿ ಪ್ರಕಟವಾದ ನಮ್ಮ ಎರಡನೇ ವರದಿಗೆ ಪ್ರಮುಖ ಯುರೋಪಿಯನ್ ಮಾರುಕಟ್ಟೆಗಳನ್ನು ಸೇರಿಸಿದ್ದೇವೆ. ಮೇಲಿನ ಹಲವು ಮೆಟ್ರಿಕ್‌ಗಳು ಈಗ ಜಾಗತಿಕವಾಗಿ Uber ಆ್ಯಪ್ ಮೂಲಕ ಪೂರ್ಣಗೊಳಿಸಿದ ಎಲ್ಲಾ ಪ್ರಯಾಣಿಕರ ಟ್ರಿಪ್‌ಗಳನ್ನು ಒಳಗೊಂಡಿರುತ್ತವೆ. Uber ನಲ್ಲಿನ ಟ್ರಿಪ್‌ಗಳ ಪರಿಣಾಮವಾಗಿ ಉಂಟಾಗುವ ಹವಾಮಾನ ಹೊರಸೂಸುವಿಕೆಗಳು ಮತ್ತು ಇತರ ಬಾಧಿತ ಕ್ಷೇತ್ರಗಳ ಕುರಿತು ನಿಯಮಿತವಾಗಿ ವರದಿ ಮಾಡಲು ನಾವು ಬದ್ಧರಾಗಿದ್ದೇವೆ. ZEV ಅಪ್‌ಟೇಕ್ ಮತ್ತು ಪ್ರಯಾಣಿಕರ ಇಂಗಾಲದ ತೀವ್ರತೆ ಸೇರಿದಂತೆ ನಮ್ಮ ಎಲ್ಲಾ ವರದಿ ಮಾಡುವ ಮೆಟ್ರಿಕ್‌ಗಳಿಗಾಗಿ ವರದಿಯಲ್ಲಿ ಒಳಗೊಂಡಿರುವ ಮಾರುಕಟ್ಟೆಗಳ ಭೌಗೋಳಿಕ ವ್ಯಾಪ್ತಿಯನ್ನು ಕಾಲಾನಂತರದಲ್ಲಿ ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ.

  • ನಾವು ಕನಿಷ್ಠ ವಾರ್ಷಿಕವಾಗಿ ಎಲ್ಲಾ ಮೆಟ್ರಿಕ್‌ಗಳನ್ನು ನವೀಕರಿಸುತ್ತೇವೆ ಮತ್ತು ಕೆಲವು ಮೆಟ್ರಿಕ್‌ಗಳನ್ನು ಆಗಾಗ್ಗೆ ನವೀಕರಿಸಬಹುದು. ಕ್ಯಾಲೆಂಡರ್ ವರ್ಷದ ಪ್ರಕಾರ ವಾರ್ಷಿಕವಾಗಿ ಒಟ್ಟುಗೂಡಿಸಲಾದ ಹೊರಸೂಸುವಿಕೆಗಳ ಮೆಟ್ರಿಕ್‌ಗಳನ್ನು (ಪ್ರಯಾಣಿಕರ ಇಂಗಾಲದ ತೀವ್ರತೆ) ನಾವು ಬಿಡುಗಡೆ ಮಾಡುತ್ತೇವೆ.

  • ನಾವು ಕ್ಯಾಲಿಫೋರ್ನಿಯಾ ಏರ್ ರಿಸೋರ್ಸಸ್ ಬೋರ್ಡ್ (CARB) ಮತ್ತು ಯುರೋಪ್ಸ್ ಟ್ರಾನ್ಸ್‌ಪೋರ್ಟ್& ಎನ್ವಿರಾನ್‌ಮೆಂಟ್ (T&E) ಮಾಡುವ ರೀತಿಯಲ್ಲಿಯೇ "ಶೂನ್ಯ-ಹೊರಸೂಸುವಿಕೆ ವಾಹನ" (ZEV) ಎಂಬ ಪದವನ್ನು ಬಳಸುತ್ತೇವೆ: ಇದನ್ನು ಆನ್-ಬೋರ್ಡ್ ಪವರ್ ಮೂಲದಿಂದ ನೇರವಾಗಿ CO₂ ಹೊರಸೂಸುವಿಕೆಗಳು ಅಥವಾ ಇತರ ಮಾನದಂಡದ ಮಾಲಿನ್ಯಕಾರಕಗಳನ್ನು ಹೊಂದಿರದ ವಾಹನಗಳನ್ನು (ಉದಾಹರಣೆಗೆ, NOx, ಪರ್ಟಿಕ್ಯುಲೇಟ್ ಮ್ಯಾಟರ್, CO₂ ಮತ್ತು SOx) ಉಲ್ಲೇಖಿಸಲು ಮಾಡಲಾಗುತ್ತದೆ. ಪ್ರಾದೇಶಿಕ ವ್ಯತ್ಯಾಸಗಳನ್ನು ಓದುಗರ ವಿವೇಚನೆಯಲ್ಲಿ ಪರಿಗಣಿಸಬೇಕು.

    Uber ನ ಆ್ಯಪ್ ಬಳಸುತ್ತಿರುವ ಚಾಲಕರು ಇಂದು 2 ರೀತಿಯ ZEV ಗಳನ್ನು ಬಳಸುತ್ತಾರೆ: ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು (ಬ್ಯಾಟರಿ EV ಗಳು) ಮತ್ತು ತೀರಾ ಸಾಂದರ್ಭಿಕವಾಗಿ, ಹೈಡ್ರೋಜನ್-ಚಾಲಿತ ಇಂಧನ ಸೆಲ್ ಎಲೆಕ್ಟ್ರಿಕ್ ವಾಹನಗಳು (FCEV ಗಳು).

    ಖಂಡಿತವಾಗಿ, ZEV ಯಲ್ಲಿನ "ಶೂನ್ಯ" ಎಂಬುದು ವಾಹನದ ಪ್ರೊವರ್ಬಿಯಲ್ "ಟೈಲ್‌ಪೈಪ್" ನಿಂದ ಯಾವುದೇ ಹೊರಸೂಸುವಿಕೆಗಳನ್ನು ಉಲ್ಲೇಖಿಸುವುದಿಲ್ಲ ಮತ್ತು ವಾಹನದ ಪ್ರೊಡಕ್ಷನ್‌ನಿಂದ ಹಿಡಿದು ಅದರ ವಿಲೇವಾರಿ ಮತ್ತು ಶಕ್ತಿಯ ಮೂಲದಿಂದ ಲೆಕ್ಕಹಾಕಬಹುದಾದ ಎಲ್ಲಾ ಹೊರಸೂಸುವಿಕೆಗಳನ್ನು ಅಗತ್ಯವಾಗಿ ಉಲ್ಲೇಖಿಸುವುದಿಲ್ಲ. ಗಣನೆಗೆ ತೆಗೆದುಕೊಳ್ಳುವ ಎಲ್ಲವೂ, ಆದಾಗ್ಯೂ, ಸ್ವತಂತ್ರ ತಜ್ಞರ ಜೀವನ-ಆವರ್ತನ ವಿಶ್ಲೇಷಣೆಗಳು"ಇಂದು ನೋಂದಾಯಿಸಲಾದ ಸರಾಸರಿ ಮಧ್ಯಮ-ಗಾತ್ರದ ಬ್ಯಾಟರಿ EV ಗಳ ಜೀವಿತಾವಧಿಯಲ್ಲಿ ಹೊರಸೂಸುವಿಕೆಗಳು ಈಗಾಗಲೇ ಯುರೋಪ್‌ನಲ್ಲಿ ಹೋಲಿಸಬಹುದಾದ ಗ್ಯಾಸೋಲಿನ್ ಕಾರುಗಳಿಗಿಂತ 66%-69% ರಷ್ಟು, ಯುನೈಟೆಡ್ ಸ್ಟೇಟ್ಸ್‌ನಲ್ಲಿ 60%-68% , ಚೀನಾದಲ್ಲಿ 37%-45% ಮತ್ತು ಭಾರತದಲ್ಲಿ 19%-34% ರಷ್ಟು ಕಡಿಮೆಯಾಗಿದೆ" ಎಂದು ತೋರಿಸುತ್ತವೆ.”

  • ನಮ್ಮ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆಯ ವರದಿಯು ಪ್ರಸ್ತುತ ನಮ್ಮ ಮೊಬಿಲಿಟಿ ವ್ಯವಹಾರಕ್ಕೆ (ರೈಡ್‌ಶೇರಿಂಗ್) ಮಾತ್ರ ವಿದ್ಯುದೀಕರಣ ಮತ್ತು ಹೊರಸೂಸುವಿಕೆ ಮಾಪನಗಳನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಈ ಪರಿಸರ ಸುಸ್ಥಿರತೆಯ ವರದಿಯಲ್ಲಿ ನಮ್ಮ ಡೆಲಿವರಿ ಮತ್ತು ಸರಕು ಸಾಗಣೆ ವ್ಯವಹಾರಗಳನ್ನು ಸೇರಿಸುವ ಗುರಿಯನ್ನು ನಾವು ಹೊಂದಿದ್ದೇವೆ.

    ಡೆಲಿವರಿ ಮತ್ತು Uber Freight ನಾದ್ಯಂತ ನಾವು ತೆಗೆದುಕೊಳ್ಳುತ್ತಿರುವ ಹಂತಗಳನ್ನು ಅರ್ಥಮಾಡಿಕೊಳ್ಳಲು, ದಯವಿಟ್ಟು Uber ನ 2024 ಪರಿಸರ, ಸಾಮಾಜಿಕ ಮತ್ತು ಆಡಳಿತ ವರದಿ ಅನ್ನು ನೋಡಿ.

ಈ ಪುಟ ಮತ್ತು ಸಂಬಂಧಿತ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆಯ ವರದಿಗಳು ಮತ್ತು ಪರಿಸರ, ಸಾಮಾಜಿಕ ಮತ್ತು ಆಡಳಿತ ವರದಿಗಳು (“ವರದಿ”) ಅಪಾಯಗಳು ಮತ್ತು ಅನಿಶ್ಚಿತತೆಗಳನ್ನು ಒಳಗೊಂಡಿರುವ ನಮ್ಮ ಭವಿಷ್ಯದ ವ್ಯಾಪಾರದ ನಿರೀಕ್ಷೆಗಳು ಮತ್ತು ಗುರಿಗಳ ಬಗ್ಗೆ ಭವಿಷ್ಯದದಲ್ಲಿ ಎದುರು ನೋಡುವ ಸ್ಟೇಟ್‌ಮೆಂಟ್‌ಗಳನ್ನು ಒಳಗೊಂಡಿದೆ. ವಾಸ್ತವಿಕ ಫಲಿತಾಂಶಗಳು ನಿರೀಕ್ಷಿತ ಫಲಿತಾಂಶಗಳಿಂದ ವಸ್ತುಶಃ ಭಿನ್ನವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ವರದಿಗಳಿಗೆ ಹೋಗಿ.

ಈ ವರದಿಯಲ್ಲಿ ಬಹಿರಂಗಪಡಿಸಲಾದ ಕೆಲವು ಡೇಟಾವು LRQA ನಿಂದ ಸೀಮಿತ ಖಾತರಿಯನ್ನು ಪಡೆದಿವೆ. LRQA ನ ಪರಿಶೀಲನೆ ಸ್ಟೇಟ್‌ಮೆಂಟ್ ಅನ್ನು ಇಲ್ಲಿ ಕಾಣಬಹುದು.

Uber ನ ಇಂಗಾಲದ ಆಫ್‌ಸೆಟ್‌ಗಳ ಬಳಕೆಯ ಅವಲೋಕನವನ್ನು ಇಲ್ಲಿ ಕಾಣಬಹುದು.

ಈ ವರದಿಯಲ್ಲಿ "ಚಾಲಕರು," "ಡೆಲಿವರಿ ಪಾರ್ಟ್‌ನರ್‌ಗಳು," "ಗಳಿಕೆ," "ಶೂನ್ಯ-ಹೊರಸೂಸುವಿಕೆ ವಾಹನ," ಮತ್ತು "ಸುಸ್ಥಿರ ಪ್ಯಾಕೇಜಿಂಗ್" ಮುಂತಾದ ಪದಗಳ ಬಳಕೆಯು ಸಾಮಾನ್ಯವಾಗಿದೆ ಮತ್ತು Uber Technologies, Inc ‌ನ ಪದಗಳ ಸಾಮಾನ್ಯ ಬಳಕೆಯ ಸಂದರ್ಭವನ್ನು ಅನುಸರಿಸುತ್ತದೆ. ಪದಗಳ ಪ್ರಾದೇಶಿಕ ವ್ಯತ್ಯಾಸಗಳನ್ನು ಓದುಗರ ವಿವೇಚನೆಯಿಂದ ಪರಿಗಣಿಸಬೇಕು.