Please enable Javascript
Skip to main content

ಆಡಿಯೋ ರೆಕಾರ್ಡಿಂಗ್

ಪ್ರತಿಯೊಬ್ಬರಿಗೂ ಆತ್ಮವಿಶ್ವಾಸದಿಂದ ಸವಾರಿ ಮಾಡುವ ಮತ್ತು ವಾಹನ ಚಲಾಯಿಸುವ ಹಕ್ಕಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ, ನಮ್ಮ ಗಮನವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಮ್ಮ ಸವಾರಿಗಳನ್ನು ಸುರಕ್ಷಿತವಾಗಿಸುವ ಮಾರ್ಗಗಳನ್ನು ಕಂಡುಕೊಳ್ಳುವುದರ ಮೇಲಿದೆ.

ನಿಮ್ಮ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ

ನಿಮ್ಮ ಸವಾರಿಯ ಸಮಯದಲ್ಲಿ ನಿಮಗೆ ಅನಾನುಕೂಲತೆ ಭಾವನೆ ಎದುರಾದರೆ, ಆ್ಯಪ್‌ನಲ್ಲಿಯೇ ನೀವು ಟ್ರಿಪ್‌ನ ಆಡಿಯೊ ರೆಕಾರ್ಡ್ ಅನ್ನು ಅಳಿಸಬಹುದು.

ಆಡಿಯೊ ರೆಕಾರ್ಡಿಂಗ್ ಆಯ್ಕೆಯನ್ನು ಪ್ರವೇಶಿಸಲು ಭದ್ರತಾ ವೈಶಿಷ್ಟ್ಯದ ಶೀಲ್ಡ್ ಐಕಾನ್ ಕ್ಲಿಕ್ ಮಾಡಿ. ಟ್ರಿಪ್ ಅನ್ನು ಆ್ಯಪ್‌ನಲ್ಲಿ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸವಾರಿ ಮುಗಿದ ಬಳಿಕ Uber ಜೊತೆಗೆ ಅದನ್ನು ಹಂಚಿಕೊಳ್ಳುವ ಆಯ್ಕೆ ನಿಮಗೆ ಬಿಟ್ಟಿದ್ದು.

ನಿಮ್ಮ ಗೌಪ್ಯತೆಯನ್ನು ಕಾಪಾಡಲಾಗಿದೆ

ವಾಹನದಲ್ಲಿ ಪ್ರಯಾಣಿಸುವ ಇತರೆ ವ್ಯಕ್ತಿಗಳಿಗೆ ಸೂಚಿಸಲಾಗುವುದಿಲ್ಲ. ಎಲ್ಲಾ ಆಡಿಯೊವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ನಿಮ್ಮ ಸಾಧನದಲ್ಲಿಯೇ ಇರುತ್ತದೆ. ಚಾಲಕರು ಅಥವಾ ಸವಾರರು ರೆಕಾರ್ಡಿಂಗ್ ಕೇಳಲು ಸಾಧ್ಯವಿಲ್ಲ.

ತನಿಖೆ ನಡೆಸಲು Uber ಗೆ ಸಹಾಯ ಮಾಡಿ

ನಾವು ಸುರಕ್ಷತಾ ವರದಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಒಂದು ವೇಳೆ ನೀವು ಆಡಿಯೋ ರೆಕಾರ್ಡ್‌ನ ಮೂಲಕ ದೂರನ್ನು ದಾಖಲಿಸಿದರೆ, ನಮ್ಮ ಮೀಸಲು ಸುರಕ್ಷತಾ ತಂಡವು ನೀವು ಲಗತ್ತಿಸಿರುವ ರೆಕಾರ್ಡಿಂಗ್ ಅನ್ನು ಪರಿಶೀಲಿಸುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

  • ಟ್ರಿಪ್‌ಗಳಲ್ಲಿ ಸುರಕ್ಷಿತ, ಆರಾಮದಾಯಕ ಸಂವಾದಗಳನ್ನು ಉತ್ತೇಜಿಸಲು ಆ್ಯಪ್‌ ಮೂಲಕ ವಿನ್ಯಾಸಗೊಳಿಸಲಾದ ಹೊಸ ಸಾಮರ್ಥ್ಯ ಆಡಿಯೋ ರೆಕಾರ್ಡಿಂಗ್ ಆಗಿದೆ. ರೆಕಾರ್ಡಿಂಗ್‌ಗಳನ್ನು ಬಳಕೆದಾರರು ಮಾತ್ರ ಸಕ್ರಿಯಗೊಳಿಸಬಹುದು ಮತ್ತು ಅವುಗಳನ್ನು ಸಾಧನದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಕೇಳಲು ಸಾಧ್ಯವಾಗುವುದಿಲ್ಲ ಮತ್ತು Uber ಆ್ಯಪ್ ಮೂಲಕ ಕಳುಹಿಸಲಾಗುವ ಸುರಕ್ಷತಾ ವರದಿಗೆ ಮಾತ್ರವೇ ಲಗತ್ತಿಸಬಹುದು. ಇದು ಸಂಭವಿಸದ ಹೊರತು, Uber ಗೆ ಯಾವುದೇ ವಿಷಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.

  • ಇದು ಸುರಕ್ಷತಾ ಟೂಲ್‌ಕಿಟ್ ಮೂಲಕ ಲಭ್ಯವಿದೆ. ಟ್ರಿಪ್ ತೆಗೆದುಕೊಳ್ಳುವಾಗ ನಕ್ಷೆಯಲ್ಲಿ ಶೀಲ್ಡ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಇದನ್ನು ಕಾಣಬಹುದು.

    ನಾವು ಸವಾರರಿಗಾಗಿ ಆಡಿಯೊ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪ್ರಸ್ತುತ ಅಪ್‌ಗ್ರೇಡ್ ಮಾಡುತ್ತಿದ್ದೇವೆ. ಇದು ಮುಂಬರುವ ವಾರಗಳಲ್ಲಿ ಮತ್ತೆ ಲಭ್ಯವಾಗಲಿದೆ

  • ವೈಶಿಷ್ಟ್ಯವು ಲಭ್ಯವಿರುವ ಆಯ್ದ ನಗರಗಳಲ್ಲಿ, ಸವಾರರು ಮತ್ತು ಚಾಲಕರು ತಮ್ಮದೇ ಆದ ಸ್ಮಾರ್ಟ್‌ಫೋನ್ ಮೂಲಕ ರೆಕಾರ್ಡಿಂಗ್ ಪ್ರಾರಂಭಿಸಬಹುದು. ಈ ಸಾಮರ್ಥ್ಯ ಲಭ್ಯವಿದೆ ಎಂದು ಎಲ್ಲಾ ಸವಾರರು ಮತ್ತು ಚಾಲಕರಿಗೆ ಮಾಹಿತಿ ನೀಡಲಾಗಿದ್ದರೂ ವಾಹನದಲ್ಲಿ ಪ್ರಯಾಣಿಸುವ ಇತರ ವ್ಯಕ್ತಿಗಳಿಗೆ ಸೂಚಿಸಲಾಗುವುದಿಲ್ಲ.

  • ಸವಾರರು ಮತ್ತು ಚಾಲಕರು ಇಬ್ಬರೂ ತಮ್ಮ ಸಾಧನದ ಮೂಲಕ ರೆಕಾರ್ಡ್ ಮಾಡಲು ಸ್ವತಂತ್ರರಾಗಿರುತ್ತಾರೆ. ಸುರಕ್ಷತಾ ವರದಿಗೆ ಸಂಬಂಧಿಸಿದ್ದರೆ ಮಾತ್ರ Uber ರೆಕಾರ್ಡಿಂಗ್ ಕೇಳಲು ಸಾಧ್ಯವಾಗುತ್ತದೆ. ಕಾನೂನುಬದ್ಧವಾಗಿ ಅಗತ್ಯವಿದ್ದರೆ, ಕಾನೂನು ಜಾರಿಗೊಳಿಸುವಂತಹ ಸಮರ್ಥ ಪ್ರಾಧಿಕಾರಕ್ಕೆ ಹಂಚಿದ ರೆಕಾರ್ಡಿಂಗ್ ಅನ್ನು Uber ಒದಗಿಸಬಹುದು.