Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಪ್ರತಿ ಸವಾರಿಯಲ್ಲಿ ‌ಅಂತರ್ಗತವಾಗಿರುವ ಸುರಕ್ಷತಾ ವೈಶಿಷ್ಟ್ಯಗಳು

ಮಹಿಳೆಯರು ಸುರಕ್ಷಿತವೆಂದು ಭಾವಿಸುವ ಪ್ಲಾಟ್‌ಫಾರ್ಮ್ ನಿರ್ಮಿಸಲು‌ ನಾವು ಬದ್ಧರಾಗಿದ್ದೇವೆ. ಅದಕ್ಕಾಗಿಯೇ ನಾವು ನಮ್ಮ ಆ್ಯಪ್ ಬಳಸುವ ಮಹಿಳೆಯರು, ಮಹಿಳಾ ಸುರಕ್ಷತಾ ತಜ್ಞರು ಮತ್ತು ನಮ್ಮ ಬಳಕೆದಾರರ ಸಮುದಾಯವನ್ನು ಸಶಕ್ತಗೊಳಿಸುವ ನವೀನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನೀತಿಗಳನ್ನು ನಿರ್ಮಿಸಲು ಸಲಹೆ ನೀಡುವವರೊಂದಿಗೆ ಪಾಲುದಾರರಾಗುತ್ತೇವೆ ಮತ್ತು ಅವರಿಂದ ಕಲಿಯುತ್ತೇವೆ.

ಸವಾರರ ಖಾತೆಗಳು

ಆತ್ಮವಿಶ್ವಾಸದಿಂದ ಪಿಕಪ್‌ಗಳನ್ನು ನಡೆಸಲು ಮತ್ತು ಚಾಲಕರಿಗೆ ಸುರಕ್ಷಿತ ಸಮುದಾಯಗಳನ್ನು ನಿರ್ಮಿಸಲು ಸಹಾಯ ಮಾಡಲು ನಾವು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಹೊಂದಿದ್ದೇವೆ. ಉದಾಹರಣೆಗೆ, ಸವಾರರು Uber ಬಳಸುವ ಮೊದಲು, ಅವರು ಮಾನ್ಯವಾದ ಪಾವತಿ ವಿಧಾನವನ್ನು ಒದಗಿಸಬೇಕು ಮತ್ತು ನೋಂದಾಯಿಸಲು ತಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಬಳಸಬೇಕು.

ಫೋನ್ ಸಂಖ್ಯೆ ಅನಾಮಧೇಯಗೊಳಿಸುವಿಕೆ

Uber ಆ್ಯಪ್ ಬಳಸುವಾಗ ಬಳಕೆದಾರರು ಪರಸ್ಪರ ಸಂಪರ್ಕಿಸಿದಾಗ ಗೌಪ್ಯತೆ ಮತ್ತು ಕಾಂಟ್ಯಾಕ್ಟ್ ಮಾಹಿತಿಯನ್ನು ರಕ್ಷಿಸಲಾಗುತ್ತದೆ. ಫೋನ್ ಸಂಖ್ಯೆಗಳನ್ನು ಅನಾಮಧೇಯಗೊಳಿಸಲಾಗುತ್ತದೆ ಮತ್ತು ಇತರ ಯಾವುದೇ ಕಾಂಟ್ಯಾಕ್ಟ್ ವಿವರಗಳನ್ನು ಮರೆಮಾಡಲಾಗುತ್ತದೆ.

ನನ್ನ ರೈಡ್ ಫಾಲೋ ಮಾಡಿ/ನನ್ನ ಟ್ರಿಪ್‌ ಶೇರ್‌ ಮಾಡಿ

ಸ್ನೇಹಿತರು ಮತ್ತು ಕುಟುಂಬವು ನೈಜ ಸಮಯದಲ್ಲಿ ಟ್ರಿಪ್‌ಗಳನ್ನು ಅನುಸರಿಸಬಹುದು, ಆದ್ದರಿಂದ ಚಾಲಕರು, ಸವಾರರು ಮತ್ತು ಅವರ ಪ್ರೀತಿಪಾತ್ರರು ಪಿಕಪ್‌ನಿಂದ ಡ್ರಾಪ್ಆಫ್‌ವರೆಗೆ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸಬಹುದು.

RideCheck

ಸೆನ್ಸರ್‌ಗಳು ಮತ್ತು GPS ಡೇಟಾವನ್ನು ಬಳಸುವ ಮೂಲಕ, ಟ್ರಿಪ್ ಯೋಜಿಸಿದಂತೆ ನಡೆಯುತ್ತಿಲ್ಲದೇ ಇದ್ದರೆ ಕಂಡುಹಿಡಿಯಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಚಾಲಕರು ಮತ್ತು ಸವಾರರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಪರಿಶೀಲಿಸುತ್ತೇವೆ ಮತ್ತು ಅಗತ್ಯವಿದ್ದರೆ ತಕ್ಷಣದ ಸಹಾಯಕ್ಕಾಗಿ ತುರ್ತು ಸಹಾಯ ವೈಶಿಷ್ಟ್ಯಗಳಿಗೆ ಸುಲಭ ಆ್ಯಕ್ಸೆಸ್ ಒದಗಿಸುತ್ತೇವೆ.

24/7 ಸಹಾಯ ಸೇವೆಗಳು

ಅಗತ್ಯವಿರುವ ಸಮಯದಲ್ಲಿ ಅನುಭೂತಿ ಮತ್ತು ಕಾಳಜಿಯೊಂದಿಗೆ ಸವಾರರು ಮತ್ತು ಚಾಲಕರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಯಾವುದೇ ಘಟನೆ ಸಂಭವಿಸಿದಲ್ಲಿ, ಆ್ಯಪ್‌ನಲ್ಲಿನ ಬೆಂಬಲವು ದಿನದ 24 ಗಂಟೆಯೂ ಲಭ್ಯವಿರುತ್ತದೆ. ಸೂಕ್ಷ್ಮ ವರದಿಗಳನ್ನು ನಿರ್ವಹಿಸಲು ನಮ್ಮ ಸುರಕ್ಷತಾ ಏಜೆಂಟರ ವಿಶೇಷ ತಂಡಕ್ಕೆ ತರಬೇತಿ ನೀಡಲಾಗುತ್ತದೆ ಮತ್ತು ಈ ತಂಡ ಬೆಂಬಲಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಬಹುದು.

ತುರ್ತು ಸಹಾಯ

ಸವಾರರು ಮತ್ತು ಚಾಲಕರನ್ನು ಅವರ ಸ್ಥಳೀಯ ತುರ್ತು ಸಂಖ್ಯೆಗೆ ಬಟನ್ ಅನ್ನು ಸರಳವಾಗಿ ಟ್ಯಾಪ್ ಮಾಡುವ ಮೂಲಕ ಸಂಪರ್ಕಿಸಲು ಆ್ಯಪ್‌ನಲ್ಲಿ ತುರ್ತು ಬಟನ್ ಲಭ್ಯವಿದೆ. ಆ್ಯಪ್ ಸ್ಥಳ ಮತ್ತು ಟ್ರಿಪ್ ವಿವರಗಳನ್ನು ಪ್ರದರ್ಶಿಸುತ್ತದೆ, ಆದ್ದರಿಂದ ಚಾಲಕರು ಮತ್ತು ಸವಾರರು ಅವುಗಳನ್ನು ತುರ್ತು ಸೇವೆಗಳೊಂದಿಗೆ ತ್ವರಿತವಾಗಿ ಹಂಚಿಕೊಳ್ಳಬಹುದು.

"ನಾನು Uber ನೊಂದಿಗೆ ಚಾಲನೆ ಮಾಡಲು ಇಷ್ಟಪಡುತ್ತೇನೆ ಏಕೆಂದರೆ ನಾನು 24/7 ಲೈವ್ ಬೆಂಬಲಕ್ಕೆ ಆ್ಯಕ್ಸೆಸ್ ಹೊಂದಿದ್ದೇನೆ‌. ನಾನು ರಾತ್ರಿ ವೇಳೆ ಚಾಲನೆ ಮಾಡಲು ಇಷ್ಟಪಡುವುದರಿಂದ ಈ ಬೆಂಬಲ ಅದ್ಭುತವಾಗಿದೆ. ಮಹಿಳಾ ಚಾಲಕಿಯಾಗಿ, Uber ನನಗೆ ಸದಾ ಬೆಂಬಲ ನೀಡುತ್ತದೆ."

ಕ್ಯಾರೊಲಿನ್, ಜಾರ್ಜಿಯಾ, ಯುಎಸ್, 7 ವರ್ಷಗಳಿಂದ Uber ನೊಂದಿಗೆ ಚಾಲನೆ

ಗೌರವಾನ್ವಿತ ನಡವಳಿಕೆಯ ಕುರಿತು ಮಾರ್ಗಸೂಚಿಗಳು

ನಮ್ಮ ಸಮುದಾಯ ಮಾರ್ಗಸೂಚಿಗಳು Uber ಬಳಸುವಾಗ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ದುರ್ವರ್ತನೆಯನ್ನು ನಿಷೇಧಿಸುತ್ತವೆ. ವೈಯಕ್ತಿಕ ಸ್ಥಳ ಮತ್ತು ಗೌಪ್ಯತೆಯನ್ನು ಗೌರವಿಸಬೇಕು. ಏನಾದರೂ ಸಂಭವಿಸಿದಲ್ಲಿ, ನಿಮ್ಮ ಟ್ರಿಪ್‌ನ ಸಮಯದಲ್ಲಿ ಅಥವಾ ನಂತರ ನೀವು ಅದನ್ನು ಆ್ಯಪ್‌ನಲ್ಲಿ Uber ಗೆ ವರದಿ ಮಾಡಬಹುದು. ನಮ್ಮ ಪ್ಲಾಟ್‌ಫಾರ್ಮ್ ಅನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ನಾವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

ಸುರಕ್ಷತೆಯನ್ನು ಉತ್ತೇಜಿಸುವ ಮತ್ತು ಲೈಂಗಿಕ ದೌರ್ಜನ್ಯವನ್ನು ತಡೆಯಲು ಸಹಾಯ ಮಾಡುವ ಸಲಹೆಗಳು

ವ್ಯಕ್ತಿಯ ಸುರಕ್ಷತೆಯು ಹಂಚಿತ ಜವಾಬ್ದಾರಿಯಾಗಿರುತ್ತದೆ. ಆ ಕಾರಣದಿಂದಾಗಿ, ನಾವು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಲಹೆಗಳ ಕುರಿತು ಹಾಗೂ ಪರಸ್ಪರರ ಸುರಕ್ಷತೆಗಾಗಿ ಶ್ರಮಿಸಲು ನಾವೆಲ್ಲರೂ ಹೊಂದಿರುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಲು NO MORE ನಂತಹ ಸಂಸ್ಥೆಗಳೊಂದಿಗೆ ಪಾಲುದಾರರಾಗಿದ್ದೇವೆ.

ಸುರಕ್ಷತೆಗಾಗಿ ಪಾಲುದಾರರಾಗುವುದು

ಮಹಿಳಾ ಚಾಲಕರು, ತಜ್ಞರು ಮತ್ತು ಹೋರಾಟಗಾರರ ಪ್ರತಿಕ್ರಿಯೆಗೆ ಧನ್ಯವಾದಗಳು, ಸುರಕ್ಷತೆಯ ಕುರಿತು ಸಮುದಾಯ ಗುಂಪುಗಳೊಂದಿಗೆ ಶೈಕ್ಷಣಿಕ ವಿಷಯ ಮತ್ತು ಪಾಲುದಾರಿಕೆಗಳನ್ನು Uber ಹೊಂದುತ್ತದೆ.

ಶಿಕ್ಷಣ

ತುರ್ತು ಮಧ್ಯಪ್ರವೇಶಗಳಿಂದ ಸಾಧ್ಯವಾಗದ ರೀತಿಯಲ್ಲಿ ಕಠಿಣ ಸುರಕ್ಷತಾ ಸಮಸ್ಯೆಗಳ ಮೂಲವನ್ನು ಕಂಡುಕೊಳ್ಳಲು ಶಿಕ್ಷಣವು ಸಹಾಯ ಮಾಡಬಲ್ಲುದು ಎಂಬುದನ್ನು ನಾವು ನಮ್ಮ ಪಾಲುದಾರರಿಂದ ಕಲಿತಿದ್ದೇವೆ. ಅದಕ್ಕಾಗಿಯೇ ನಾವು ಆ್ಯಪ್‌ನಲ್ಲಿನ ಸುರಕ್ಷತೆ ಟೂಲ್‌ಕಿಟ್ ಮತ್ತು ಚಾಲಕ ಕಲಿಕಾ ಕೇಂದ್ರದ ಮೂಲಕ ಶೈಕ್ಷಣಿಕ ಸಾಮಗ್ರಿಗಳು ಮತ್ತು ಸುರಕ್ಷತೆ ಸಲಹೆಗಳನ್ನು ಆ್ಯಕ್ಸೆಸ್‌ ಮಾಡುವುದನ್ನು ಸುಲಭಗೊಳಿಸಿದ್ದೇವೆ. ಮತ್ತು ಅದಕ್ಕಾಗಿಯೇ ನಾವು ಸ್ಟ್ಯಾಂಡ್ ಅಪ್, ಡೋಂಟ್ ಸ್ಟ್ಯಾಂಡ್ ಬೈ ಮುಂತಾದ ಸಕ್ರಿಯ ಅಭಿಯಾನಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸುತ್ತೇವೆ. ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ದುರ್ವರ್ತನೆ ತಡೆಗಟ್ಟುವಿಕೆ ಮತ್ತು ಜಾಗೃತಿ ಶಿಕ್ಷಣ ಸೇರಿದಂತೆ ಜಾಗತಿಕವಾಗಿ ನಮ್ಮ ಬಳಕೆದಾರರಿಗೆ ಸುರಕ್ಷತಾ ಶಿಕ್ಷಣ ಅವಕಾಶಗಳನ್ನು ಒದಗಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.

ಮಹಿಳೆಯರ ಸುರಕ್ಷತಾ ಪ್ರತಿಜ್ಞೆ

ನಮ್ಮ ಪ್ಲಾ‌ಟ್‌ಫಾರ್ಮ್‌ನಲ್ಲಿ ಮತ್ತು ನಾವು ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ಲಿಂಗ-ಆಧಾರಿತ ಹಿಂಸೆಯನ್ನು ಕೊನೆಗೊಳಿಸಲು ಸಹಾಯ ಮಾಡಲು Uber ಬದ್ಧವಾಗಿದೆ. ಜಾಗೃತಿ ಮೂಡಿಸಲು, ಶಿಕ್ಷಣ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಮತ್ತು ಆಘಾತಕ್ಕೆ ಒಳಗಾದ ಮತ್ತು ಸಂತ್ರಸ್ತರನ್ನು ಕೇಂದ್ರೀಕರಿಸಿದ ಉತ್ಪನ್ನಗಳು ಮತ್ತು ನೀತಿಗಳನ್ನು ವಿನ್ಯಾಸಗೊಳಿಸಲು ತಜ್ಞರು ಮತ್ತು ಹೋರಾಟಗಾರರೊಂದಿಗೆ ಪಾಲುದಾರರಾಗಲು ಜಾಗತಿಕವಾಗಿ ನಾವು ಶ್ರಮಿಸುತ್ತೇವೆ.

ನಮ್ಮ ಕೆಲವು ಸ್ಥಳೀಯ ಪಾಲುದಾರರನ್ನು ಭೇಟಿ ಮಾಡಿ

ಜಾಗೃತಿ ಮೂಡಿಸಲು, ಸಂಪನ್ಮೂಲಗಳನ್ನು ಒದಗಿಸಲು ಮತ್ತು ಮಹಿಳೆಯರ ಮೇಲಿನ ವ್ಯಾಪಕ ದೌರ್ಜನ್ಯದ ವಿರುದ್ಧ ಹೋರಾಡಲು ಮೀಸಲಾಗಿರುವ ಅನೇಕ ಸಂಸ್ಥೆಗಳೊಂದಿಗೆ ನಾವು ಕೈಜೋಡಿಸಿದ್ದೇವೆ.

ಡ್ರೈವಿಂಗ್‌ ಚೇಂಜ್: ಲಿಂಗ-ಆಧಾರಿತ ಹಿಂಸೆಯನ್ನು ಕೊನೆಗೊಳಿಸಲು ಸಹಾಯ ಮಾಡಲು Uber ನ ಜಾಗತಿಕ ಪ್ರಯತ್ನ

ಲಿಂಗ ಆಧಾರಿತ ಹಿಂಸೆಯ ವಿರುದ್ಧದ ನಿಲುವನ್ನು ಹೊಂದಲು Uber ಬದ್ಧವಾಗಿದೆ. ಡ್ರೈವಿಂಗ್ ಚೇಂಜ್ ಉಪಕ್ರಮದ ಮೂಲಕ, ನಮ್ಮ ಉದ್ಯಮ ಮತ್ತು ಸಮುದಾಯಗಳಲ್ಲಿ ಸುರಕ್ಷತೆಯನ್ನು ಸುಧಾರಿಸಲು ನಾವು ಹೋರಾಟಗಾರರು ಮತ್ತು ತಜ್ಞರೊಂದಿಗೆ ಪಾಲುದಾರರಾಗಿದ್ದೇವೆ. ಡ್ರೈವಿಂಗ್ ಚೇಂಜ್ ವಿಶ್ವಾದ್ಯಂತ ಲಿಂಗ-ಆಧಾರಿತ ಹಿಂಸೆಯನ್ನು ತಡೆಗಟ್ಟಲು ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನ ಒದಗಿಸುತ್ತದೆ. ಈ ಉಪಕ್ರಮ ಮತ್ತು ನಮ್ಮ ಪಾಲುದಾರರ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.

ಹೆಚ್ಚಿನ ಸುರಕ್ಷತಾ ಸಂಪನ್ಮೂಲಗಳನ್ನು ಅನ್ವೇಷಿಸಿ

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو