Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಮುಖ್ಯವಾದ ಕಪ್ಪು ವರ್ಣೀಯರ ವ್ಯವಹಾರಗಳು

ಪ್ರಪಂಚದಾದ್ಯಂತದ ಕಪ್ಪು ವರ್ಣೀಯರ ವ್ಯವಹಾರಗಳನ್ನು ಬೆಂಬಲಿಸುವುದು.

ಪ್ರಶಸ್ತಿ ವಿಜೇತ ಬಾಣಸಿಗ, ರೆಸ್ಟೋರೆಂಟ್‌ ಮಾಲೀಕ, ಲೇಖಕ ಮತ್ತು ಆಹಾರ ಕಾರ್ಯಕರ್ತ ಮಾರ್ಕಸ್ ಸ್ಯಾಮ್ಯುಯೆಲ್ಸನ್ ಅವರೊಂದಿಗೆ ಕಪ್ಪು ವರ್ಣೀಯರ ಬಿಸಿನೆಸ್ ಮ್ಯಾಟರ್ ಮ್ಯಾಚಿಂಗ್ ಫಂಡ್ ಮೂಲಕ Uber ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಸಾಂಕ್ರಾಮಿಕದಿಂದಾಗಿ ಹಾಗೂ ಐತಿಹಾಸಿಕವಾಗಿ ಕಡಿಮೆ ಬಂಡವಾಳಗಳಿಂದ ಪ್ರಭಾವಿತವಾಗಿರುವ ಕಪ್ಪು ವರ್ಣೀಯರ ಸ್ವಾಮ್ಯದ ರೆಸ್ಟೋರೆಂಟ್‌ಗಳಿಗೆ ಈ ನಿಧಿಯು ಅನುದಾನ ಮತ್ತು ಬೆಂಬಲವನ್ನು ನೀಡುತ್ತದೆ.

ಸ್ಯಾಮ್ಯುಯೆಲ್ಸ್‌ ಮತ್ತು 4 ಅದ್ಭುತ ಶೆಫ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಸಹಭಾಗಿತ್ವದಲ್ಲಿ ಕಪ್ಪು ವರ್ಣೀಯರ ಆಹಾರದ ಹಿಂದಿನ ಶಕ್ತಿಯುತ ಇತಿಹಾಸ ಮತ್ತು ಕ್ರಿಯಾಶೀಲತೆಯನ್ನು ಹೊಸ ಡಿಜಿಟಲ್‌ ಎಪಿಸೋಡ್ ಸಿರೀಸ್‌ನೊಂದಿಗೆ ಸಂಭ್ರಮಿಸಲು ನಾವು ಉತ್ಸುಕರಾಗಿದ್ದೇವೆ. ನೀನಾ ಕಾಂಪ್ಟನ್, ಕ್ವಾಮೆ ಒನ್ವಾಚಿ, ರೊಡ್ನಿ ಸ್ಕಾಟ್ ಮತ್ತು ಲೆಟಿಸಿಯಾ ಸ್ಕೈ ಯಂಗ್. ಈ ಚಲನಚಿತ್ರವು ಚಿಂತನಶೀಲ ಆಹಾರವನ್ನು ಪ್ರೇರೇಪಿಸುವುದಕ್ಕಾಗಿ ಅಲ್ಲದೇ, ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್ ಮಾಲೀಕರುಗಳು ಇನ್ನೂ ಹೇಳಿಲ್ಲದ ಹಲವಾರು ಕಥೆಗಳನ್ನು ಕೇಳಲು ಜನರಿಗೆ ಅವಕಾಶ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

Uber Eats ಆ್ಯಪ್‌ನ ಇತರ ಕಡೆಯಲ್ಲಿ, ಕಪ್ಪು ವರ್ಣೀಯರ ಒಡೆತನದ ವ್ಯವಹಾರಗಳು Uber Eats ಫೀಡ್‌ನಲ್ಲಿ ಅಗ್ರ ಸ್ಥಾನಕ್ಕೆ ತಲುಪಲು ಸಹಾಯ ಮಾಡಿದ್ದು, ಸ್ಥಳೀಯರಿಗೆ ಹೊಸ ನೆರೆಹೊರೆಯ ತಿನಿಸುಗಳನ್ನು ಕಂಡುಹಿಡಿಯಲು US ನಲ್ಲಿ ನಡೆಯುವ ಕಪ್ಪು ವರ್ಣೀಯರ ರೆಸ್ಟೋರೆಂಟ್ ವೀಕ್‌ನಂತಹ ಉಪಕ್ರಮಗಳು ಅನುವು ಮಾಡಿವೆ. UK ನಲ್ಲಿ, ಈ ಸಮುದಾಯಗಳನ್ನು ನಾವು ಹೇಗೆ ಉತ್ತಮವಾಗಿ ಬೆಂಬಲಿಸಬಹುದು ಎಂಬುದನ್ನು ಗುರುತಿಸುವ ಸಲುವಾಗಿ ಕಪ್ಪು ವರ್ಣೀಯರು ಮತ್ತು ಅಲ್ಪಸಂಖ್ಯಾತ ರೆಸ್ಟೋರೆಂಟ್ ಮಾಲೀಕರ ಜೀವಂತ ಅನುಭವದ ಬಗ್ಗೆ ನಾವು ಬಿ ಇನ್‌ಕ್ಲ್ಯೂಸಿವ್ ಹಾಸ್ಪಿಟಾಲಿಟಿ ಜೊತೆ ಕೆಲವು ಸಂಶೋಧನೆಗಳನ್ನು ಪೂರ್ಣಗೊಳಿಸಿದ್ದೇವೆ.

ಕೆನಡಾದಲ್ಲಿ, Uber, ಕೆನಡಾದ ಬ್ಲ್ಯಾಕ್ ಚೇಂಬರ್ ಆಫ್ ಕಾಮರ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಕರಾವಳಿಯಿಂದ ಕರಾವಳಿಯವರೆಗೆ ಕಪ್ಪು ವರ್ಣೀಯರ ಮಾಲೀಕತ್ವ ಹೊಂದಿರುವ ಸಣ್ಣ ಉದ್ಯಮಗಳಿಗಾಗಿ ಮೊದಲ ರಾಷ್ಟ್ರೀಯ ಡಿಜಿಟಲ್ ಡೈರೆಕ್ಟರಿ ಆದ ದಿ ಬ್ಲ್ಯಾಕ್ ಪೇಜಸ್ ಅನ್ನು ಪ್ರಾರಂಭಿಸಿದೆ. Black Pages ಗೆ ಸೇರುವುದು ಉಚಿತವಿದ್ದು, ಅದನ್ನು ಉಚಿತವಾಗಿ ವೀಕ್ಷಿಸಬಹುದು. ಹೊಸ ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳು, ಚಿಲ್ಲರೆ ಅಂಗಡಿಗಳು, ಮಾರಾಟಗಾರರು ಮತ್ತು ಉದ್ಯಮಿಗಳನ್ನು ಸುಲಭವಾಗಿ ಕಂಡುಹಿಡಿಯಲು ಮತ್ತು ಬೆಂಬಲಿಸಲು ಕೆನಡಿಯನ್ನರಿಗೆ ಒಂfಉ ಆನ್‌ಲೈನ್ ಮೂಲವನ್ನು ಖಚಿತಪಡಿಸುತ್ತದೆ.

ಈ ಎಲ್ಲಾ ಉಪಕ್ರಮಗಳು US ಮತ್ತು ಪ್ರಪಂಚದಾದ್ಯಂತದ ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳನ್ನು ಬೆಳಕಿಗೆ ತರುವ ದೀರ್ಘ ಬಾಧ್ಯತೆಯ ಪ್ರಾರಂಭದ ಹಂತವಾಗಿದೆ. ಈ ವ್ಯವಹಾರಗಳನ್ನು ಬೆಂಬಲಿಸಲು ನಾವು ಹೊಸ ನಗರಗಳಿಗೆ ಹೋಗುತ್ತೇವೆ, ಸಾಂಕ್ರಾಮಿಕ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತೇವೆ, ರೇಸ್ ಇಕ್ವಿಟಿಯನ್ನು ನಿರ್ಮಿಸಲು ಕೆಲಸ ಮಾಡುತ್ತೇವೆ ಮತ್ತು ಹೆಚ್ಚು ಅಂತರ್ಗತ ಸಮಾಜವನ್ನು ರಚಿಸುವ ಸಲುವಾಗಿ ಸಹಾಯ ಮಾಡುತ್ತೇವೆ.

ಕಪ್ಪು ವರ್ಣೀಯರನ್ನು ಬೆಂಬಲಿಸುವ ನಮ್ಮ ಕೆಲಸದ ಬಗ್ಗೆ ಇಲ್ಲಿನೀವು ಇನ್ನಷ್ಟು ಓದಬಹುದು .

ಪ್ರಭಾವ ಉಂಟುಮಾಡುವ ನಮ್ಮ ಕೆಲಸದ ಬಗ್ಗೆ ಇನ್ನಷ್ಟು ಓದಿ

ನಮ್ಮ ಬದ್ಧತೆಗಳು

ಸಂಚಾರವನ್ನು ಎಲ್ಲರಿಗೂ ಸಮಾನವಾಗಿರಿಸುವುದು.

ವಾಷಿಂಗ್ಟನ್, DC ಯಲ್ಲಿರುವ ಪಾಪ್-ಅಪ್ ರೆಸ್ಟೋರೆಂಟ್‌ಗಳು

ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳು ತಮ್ಮ ವ್ಯಾಪಾರವನ್ನು ಹೊಸ ನೆರೆಹೊರೆಯಲ್ಲಿ ವಿಸ್ತರಿಸಲು ಅನುವು ಮಾಡಿಕೊಡುತ್ತವೆ.

ಎಲ್ಲಾ ಚಾಲಕರು ಮತ್ತು ಡೆಲಿವರಿ ಜನರಿಗೆ ಧನ್ಯವಾದಗಳು

ಸಾಂಕ್ರಾಮಿಕ ಸಮಯದಲ್ಲಿ, ಸಾವಿರಾರು ಚಾಲಕರು ಮತ್ತು ಡೆಲಿವರಿ ಜನರು ಪ್ರಾಮುಖ್ಯತೆ ನೀಡಬೇಕಾಗಿದ್ದುದನ್ನು ಮುಂದುವರೆಸಿಕೊಂಡು ಹೋದರು.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو