Please enable Javascript
ಮುಖ್ಯ ವಿಷಯಕ್ಕೆ ತೆರಳಿ

ವಾಷಿಂಗ್ಟನ್, DC ಯಲ್ಲಿರುವ ಪಾಪ್-ಅಪ್ ರೆಸ್ಟೋರೆಂಟ್‌ಗಳು

ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳು ತಮ್ಮ ವ್ಯಾಪಾರವನ್ನು ಹೊಸ ನೆರೆಹೊರೆಯಲ್ಲಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ.

Uber Eats ನ ವಾಷಿಂಗ್‍ಟನ್ DC, ಯುಎಸ್ ಪಾಪ್‌ ಅಪ್‌ EatOkra ಮತ್ತು Suite Nation; Sandlot Southeast, ಎಂಬ 5,000 ಚದರಡಿಯ ಶಿಪ್ಪಿಂಗ್ ಕಂಟೇನರ್ ಬಾರ್‌ ಮತ್ತು ನೇವಿ ಯಾರ್ಡ್‌ ನೆರೆಹೊರೆಯಲ್ಲಿನ ಈವೆಂಟ್ಸ್ ಸ್ಥಳದ ಸಹಭಾಗಿತ್ವ ಹೊಂದಿದೆ; ಮತ್ತು &Access ಎಂಬ ನಮ್ಮ ಸಮುದಾಯ ಪಾಲುದಾರ ಸಲಹೆಗಾರ ಮತ್ತು ಪ್ರಮುಖ ಪ್ರೋಗ್ರಾಮಿಂಗ್‌ ಪಾಪ್‌ ಅಪ್‌ಗೆ ಪಾಲುದಾರಿಕೆ ಹೊಂದಿದೆ.

ಒಟ್ಟಾಗಿ ನಾವು 2 ಕಿಚನ್‌ಗಳು ಮತ್ತು ಕುಳಿತುಕೊಳ್ಳುವುದಕ್ಕೆ ಸಾಕಷ್ಟು ಸ್ಥಳಾವಕಾಶ ಇರುವಂತೆ ಕಪ್ಪು ವರ್ಣೀಯರ ಉದ್ಯಮಗಳ ಶೆಫ್‌ಗಳಿಗೆ ತಾತ್ಕಾಲಿಕ ಬಾಡಿಗೆ ಇಲ್ಲದ ಸ್ಥಳವನ್ನಾಗಿ ನಾವು ಪರಿವರ್ತಿಸಿದ್ದೇವೆ. ಗುರುವಾರದಿಂದ ಭಾನುವಾರದವರೆಗೆ ಇಲ್ಲಿ ಶೆಫ್‌ಗಳು ಉಳಿದುಕೊಳ್ಳುತ್ತಾರೆ; ಸೋಮವಾರದಂದು ಸಮುದಾಯ ಸೇವಾ ದಿನಗಳಾಗಿರುತ್ತವೆ. ಉದ್ಯಮಗಳು ತಮ್ಮ ಆದಾಯವನ್ನು ಉಳಿಸಿಕೊಳ್ಳುತ್ತಾರೆ ಮತ್ತು Uber Eats ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರಿಂದ ಪ್ರೇಕ್ಷಕರು ಮತ್ತು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.

ಸಾಂಪ್ರದಾಯಿಕವಾಗಿ ವೈವಿಧ್ಯತೆಯ ಕೊರತೆ ಹೊಂದಿರುವ ನೆರೆಹೊರೆಗೆ ಹಲವು ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳು ಮತ್ತು ಉದ್ಯಮಗಳನ್ನು ಪರಿಚಯಿಸಲು ಸಹಾಯ ಮಾಡುವುದಕ್ಕೆ ಈ ಯೋಜನೆ ನಮಗೆ ಅವಕಾಶ ನೀಡುತ್ತದೆ; ಅಂದಾಜು 115 ರ ಪೈಕಿ ಕೇವಲ ಅರ್ಧ ಡಜನ್‌ ಉದ್ಯಮಗಳು ರಿವರ್‌ಫ್ರಂಟ್‌ನಲ್ಲಿ ಕಪ್ಪು ವರ್ಣೀಯರ ಮಾಲೀಕತ್ವವನ್ನು ಹೊಂದಿವೆ. ಆರಂಭದಲ್ಲಿ Puddin’ (ಕೇಜನ್/ಕ್ರಿಯೋಲ್‌ ಫುಡ್‌ ಟ್ರಕ್‌), Silver Spring Wings ಮತ್ತು FishScale (ಸೀಫುಡ್ ಬರ್ಗರ್ ಬಾರ್‌) ಸೇರಿದಂತೆ ಹಲವು ಉದ್ಯಮಗಳು ಭಾಗವಹಿಸಿದ್ದು ನಮಗೆ ಹೆಮ್ಮೆ ಉಂಟು ಮಾಡಿದೆ.

ತೊಡಗಿಸಿಕೊಂಡಿರುವ ಉದ್ಯಮಗಳಿಂದ ತಿನಿಸುಗಳನ್ನು ಪ್ರಯತ್ನಿಸಿದ ಎಲ್ಲರಿಗೂ ಆಹಾರಕ್ಕೆ ರಿಯಾಯಿತಿ ಕೋಡ್‌ಗಳನ್ನು ನೀಡಲಾಗಿದೆ. ನೆರೆಹೊರೆಯಲ್ಲಿ ಹೆಚ್ಚು ಶಾಶ್ವತ ಸ್ಥಳಗಳಿಗೆ ಒಂದು ವೇದಿಕೆಯಾಗಿರುವ ಕ್ಯಾಪಿಟಲ್‌ ರಿವರ್‌ಫ್ರಂಟ್‌ನಲ್ಲಿ ಹೆಚ್ಚು ಗ್ರಾಹಕರನ್ನು ಗಳಿಸಿಕೊಳ್ಳಲು ಕಪ್ಪು ವರ್ಣೀಯರಿಗೆ ಈ ಪಾಪ್ ಅಪ್‌ ವೇದಿಕೆಯನ್ನು ಒದಗಿಸುತ್ತದೆ ಎಂದು ನಾವು ಭಾವಿಸಿದ್ದೇವೆ.

ಸಾಂಪ್ರದಾಯಿಕವಾಗಿ ವೈವಿಧ್ಯತೆ ಕೊರತೆ ಹೊಂದಿರುವ ಹಲವು ಕಪ್ಪು ವರ್ಣೀಯರ ಮಾಲೀಕತ್ವದ ರೆಸ್ಟೋರೆಂಟ್‌ಗಳು ಮತ್ತು ಉದ್ಯಮಗಳನ್ನು ನೆರೆಹೊರೆಯಲ್ಲಿ ಪರಿಚಯಿಸುವುದಕ್ಕಾಗಿ ಸಹಾಯ ಮಾಡಲು ಈ ಯೋಜನೆ ನಮಗೆ ಅವಕಾಶ ನೀಡುತ್ತದೆ.

ಸಾಂಕ್ರಾಮಿಕ ರೋಗದಿಂದ ಬಾಧಿತ ಕಪ್ಪು ವರ್ಣೀಯರ ಮಾಲೀಕತ್ವದ ಕೆಲವೇ ಉದ್ಯಮಗಳನ್ನು ಈ ಪಾಪ್ ಅಪ್‌ಗಳು ಪ್ರತಿನಿಧಿಸುತ್ತವೆ. ಈ ಅವಧಿಯಲ್ಲಿ ಮಾತ್ರವಲ್ಲದೆ, ಮುಂದಿನ ದಿನಗಳಲ್ಲೂ ಇದೇ ರೀತಿಯ ಉದ್ಯಮಗಳಿಗೆ ಬೆಂಬಲ ನೀಡಲು ನಾವು ಬಯಸಿದ್ದೇವೆ.

ನೇವಿ ಯಾರ್ಡ್‌ನಲ್ಲಿ ನಾವು ಬೆಂಬಲಿಸುತ್ತಿರುವ ಉತ್ತಮ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ.

ಪ್ರಭಾವ ಉಂಟುಮಾಡುವ ನಮ್ಮ ಕೆಲಸದ ಬಗ್ಗೆ ಇನ್ನಷ್ಟು ಓದಿ

ನಮ್ಮ ಬದ್ಧತೆಗಳು

ಸಂಚಾರವನ್ನು ಎಲ್ಲರಿಗೂ ಸಮಾನವಾಗಿರಿಸುವುದು.

ಮುಖ್ಯವಾದ ಕಪ್ಪು ವರ್ಣೀಯರ ವ್ಯವಹಾರಗಳು

ಪ್ರಪಂಚದಾದ್ಯಂತದ ಕಪ್ಪು ವರ್ಣೀಯರ ವ್ಯವಹಾರಗಳನ್ನು ಬೆಂಬಲಿಸುವುದು.

ಕೆಲಸ ಮಾಡುವ ಉತ್ತಮ ಮಾರ್ಗ

ತಮ್ಮ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸುವ ಸಲುವಾಗಿ ವಿಶ್ವದಾದ್ಯಂತ ಚಾಲಕರು ಮತ್ತು ಡೆಲಿವರಿ ಜನರಿಗೆ ಸಹಾಯ ಮಾಡುವುದು.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو