ಪರಸ್ಪರ ಸುರಕ್ಷಿತವಾಗಿರಲು ಸಹಾಯ ಮಾಡಿ
ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವಲ್ಲಿ ಪ್ರತಿಯೊಬ್ಬರದೂ ಪಾತ್ರವಿದೆ. ಅದಕ್ಕಾಗಿಯೇ ನಾವು ಖಾತೆ ಹಂಚಿಕೆ, ಖಾತೆದಾರರ ವಯಸ್ಸು ಮತ್ತು ಮುಂತಾದವುಗಳಿಗೆ ಸಂಬಂಧಿಸಿದಂತೆ ನಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದೇವೆ.
ಖಾತೆ ಹಂಚಿಕೆ
ಖಾತೆಯನ್ನು ಹಂಚಿಕೊಳ್ಳಲು ಅನುಮತಿಸಲಾಗುವುದಿಲ್ಲ. ಯಾವುದೇ Uber ಆ್ಯಪ್ ಅನ್ನು ಬಳಸಲು, ನೀವು ಸಕ್ರಿಯ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು ನಿರ್ವಹಿಸಬೇಕು. ನಿಮ್ಮ ಖಾತೆಯನ್ನು ಇನ್ನೊಬ್ಬ ವ್ಯಕ್ತಿ ಬಳಸಲು ಅವಕಾಶ ನೀಡಬೇಡಿ ಮತ್ತು ನಿಮ್ಮ ಲಾಗಿನ್ ಮಾಹಿತಿಯನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ.
- ಸವಾರರಿಗಾಗಿ ಸಲಹೆಗಳು
ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ. ನಿಮ್ಮ ಖಾತೆಗೆ ಬೇರೊಬ್ಬರು ಪ್ರವೇಶಿಸಲು ಬಿಡಬೇಡಿ. ನಮ್ಮ ವಯಸ್ಸಿನ ಅಗತ್ಯತೆಯನ್ನು ಪೂರೈಸುವ ಇನ್ನೊಬ್ಬ ವ್ಯಕ್ತಿಗೆ ಸವಾರಿ ಮಾಡಲು ವಿನಂತಿಸುವುದು ಸರಿ ಮತ್ತು ಅದು Uber ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಲ್ಲ.
- ಚಾಲಕರಿಗಾಗಿ ಸಲಹೆಗಳು
Down Small ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ. ನಿಮ್ಮ ಖಾತೆಯನ್ನು ಬಳಸಿಕೊಂಡು ಬೇರೆ ಯಾವುದೋ ವ್ಯಕ್ತಿಯು Uber ಆ್ಯಪ್ ಮೂಲಕ ವಿನಂತಿಗಳನ್ನು ಸ್ವೀಕರಿಸಲು ಎಂದಿಗೂ ಅನುಮತಿಸಬೇಡಿ.
- ಬೈಕು ಮತ್ತು ಸ್ಕೂಟರ್ ಸವಾರರಿಗಾಗಿ ಸಲಹೆಗಳು
Down Small ನಿಮ್ಮ ಖಾತೆಯನ್ನು ಸಂರಕ್ಷಿಸಿ. ನಿಮ್ಮ ಖಾತೆಯನ್ನು ಬಳಸಿಕೊಂಡು ಬೇರೊಬ್ಬರು ಸ ್ಕೂಟರ್ ಅಥವಾ ಬೈಕು ಬಾಡಿಗೆಗೆ ಪಡೆಯಲು ಎಂದಿಗೂ ಅವಕಾಶ ನೀಡಬೇಡಿ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು
ನೀವು ಸವಾರರ ಖಾತೆಯನ್ನು ಹೊಂದಬೇಕಾದರೆ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಖಾತೆದಾರರ ಜೊತೆಗೆ ಒಟ್ಟಿಗೆ ಪ್ರಯಾಣಿಸದ ಹೊರತು, ಅಂತಹ ಅಪ್ರಾಪ್ತರು ಸವಾರಿ ಮಾಡಲೆಂದು ಸವಾರಿಗಾಗಿ ವಿನಂತಿಸಲು ಖಾತೆದಾರರಿಗೆ ಸಾಧ್ಯವಾಗುವುದಿಲ್ಲ. ಖಾತೆದಾರರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಳಸಬೇಕಾದ ಬೈಕು ಅಥವಾ ಸ್ಕೂಟರ್ ಅನ್ನು ಸಹ ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ.
- ಚಾಲಕರಿಗಾಗಿ ಸಲಹೆಗಳು
Down Small ಪಿಕಪ್ ಸಮಯದಲ್ಲಿ ನಿಮ್ಮ ಸವಾರರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ನಿಮ್ಮ ಗಮನಕ್ಕೆ ಬಂದರೆ, ನೀವು ಟ್ರಿಪ್‌ಗಳನ್ನು ನಿರಾಕರಿಸಬಹುದು ಮತ್ತು ಆ ಕುರಿತು Uber ಗೆ ವರದಿ ಮಾಡಬಹುದು. ಇದರ ಆಧಾರದ ಮೇಲೆ ಟ್ರಿಪ್‌ಗಳನ್ನು ನಿರಾಕ ರಿಸುವುದು ಅಥವಾ ರದ್ದುಪಡಿಸುವುದರಿಂದ ನಿಮ್ಮ ಚಾಲಕ ರೇಟಿಂಗ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ನೀವು ಯಾಕೆ ಟ್ರಿಪ್ ಸ್ವೀಕರಿಸಲು ಸಾಧ್ಯವಿಲ್ಲ ಎಂಬುದರ ಕುರಿತು ನಿಮ್ಮ ಸವಾರರಿಗೆ ತಿಳಿಸುವುದು ಒಳ್ಳೆಯದು. ಆಗ ಅವರಿಗೆ ಯಾಕೆ ರದ್ದಾಯಿತು ಎಂಬ ಗೊಂದಲ ಮೂಡುವುದಿಲ್ಲ.
- ಸವಾರರಿಗಾಗಿ ಸಲಹೆಗಳು
Down Small 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸವಾರಿ ಮಾಡುವುದಕ್ಕೆ ವಯಸ್ಕರು ವಿನಂತಿಸಿಕೊಳ್ಳ ುವಂತಿಲ್ಲ ಅಥವಾ ಏಕಾಂಗಿಯಾಗಿ ಸವಾರಿ ಮಾಡಲು ಕೂಡ ಅನುಮತಿಸುವಂತಿಲ್ಲ.
- ಬೈಕು ಮತ್ತು ಸ್ಕೂಟರ್ ಸವಾರರಿಗಾಗಿ ಸಲಹೆಗಳು
Down Small 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ Uber ಆ್ಯಪ್ ಬಳಸಿ ಬೈಕು ಅಥವಾ ಸ್ಕೂಟರ್ ಬಾಡಿಗೆಗೆ ಪಡೆಯಲು ಅನುಮತಿಸಲಾಗುವುದಿಲ್ಲ.
ಹೆಚ್ಚುವರಿ ಪ್ರಯಾಣಿಕರು ಮತ್ತು ಪ್ಯಾಕೇಜ್‌ಗಳು
Uber ಜೊತೆಗೆ ಚಾಲನೆ ಮಾಡುವಾಗ, ವಿನಂತಿಸುವ ಸವಾರ ಮತ್ತು ಸವಾರ'ರ ಅತಿಥಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ವಾಹನಕ್ಕೆ ಏರಲು ಅನುಮತಿ ಇರುವುದಿಲ್ಲ. Uber ಜೊತೆಗೆ ಸವಾರಿ ಮಾಡುವಾಗ, ಅವರ ಇಡೀ ಸಮೂಹದ ವರ್ತನೆಗೆ ಖಾತೆದಾರರೇ ಜವಾಬ್ದಾರರಾಗಿರುತ್ತಾರೆ. ನೀವು ಬೇರೊಬ್ಬ ವಯಸ್ಕರಿಗಾಗಿ ಸವಾರಿಯನ್ನು ವಿನಂತಿಸಿಕೊಂಡರೆ ಅಥವಾ ಬೈಕು ಇಲ್ಲವೇ ಸ್ಕೂಟರ್ ಅನ್ನು ಬಾಡಿಗೆಗೆ ಪಡೆದರೆ, ಅವರು ಟ್ರಿಪ್‌ನಲ್ಲಿರುವಾಗ ತೋರುವ ವರ್ತನೆಗೆ ನೀವೇ ಜವಾಬ್ದಾರರಾಗಿರುತ್ತೀರಿ.
ಜೊತೆಗೆ, Uber ಆ್ಯಪ್ ಅನ್ನು ವಿತರಣಾ ಸೇವೆಯಾಗಿ ಬಳಸಲು ಉದ್ದೇಶಿಸಿಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ. ಐಟಂ ಮತ್ತು/ಅಥವಾ ಪ್ಯಾಕೇಜ್ ಅನ್ನು ತಲುಪಿಸುವ ಉದ್ದೇಶದಿಂದ ಸವಾರರು ವಿನಂತಿಸಿದ್ದರೆ, ಸವಾರಿಯನ್ನು ಸ್ವೀಕರಿಸದಿರಲು ಅಥವಾ ಸವಾರಿ ವಿನಂತಿಯನ್ನು ರದ್ದುಗೊಳಿಸಲು ಚಾಲಕರಿಗೆ ಹಕ್ಕಿರುತ್ತದೆ. ಪ್ಯಾಕೇಜ್ ಮತ್ತು/ಅಥವಾ ಐಟಂ ವಿತರಣೆಯ ಉದ್ದೇಶಕ್ಕಾಗಿ ನೀವು Uber ಆ್ಯಪ್‌ಗಳನ್ನು ಬಳಸಲು ಪರಿಗಣಿಸಿದರೆ, ವಿತರಣೆಯ ಸಂದರ್ಭದಲ್ಲಿ ಪ್ಯಾಕೇಜ್(ಗಳಿಗೆ)ಗೆ ಮತ್ತು/ಅಥವಾ ಐಟಂಗಳಿಗೆ ಏನಾದರೂ ಆದರೆ ಅದಕ್ಕೆ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ. ಅಂತಹ ಪ್ಯಾಕೇಜ್‌ಗಳು ಮತ್ತು/ಅಥವಾ ಐಟಂಗಳು Uber ನ ವಿಮೆಗೆ ಒಳಪಟ್ಟಿರುವುದಿಲ್ಲ.
ವಾಹನದ ಮಾಹಿತಿ
ಸುಲಭ ಪಿಕಪ್‌ಗಾಗಿ, Uber ಆ್ಯಪ್‌ಗಳು ಚಾಲಕರು ಮತ್ತು ಅವರ ವಾಹನಗಳ ಬಗ್ಗೆ ಗುರುತಿಸುವ ಮಾಹಿತಿಯನ್ನು ಸವಾರರಿಗೆ ನೀಡುತ್ತವೆ. ಅವುಗಳಲ್ಲಿ ಪರವಾನಗಿ ಪ್ಲೇಟ್ ಸಂಖ್ಯೆ, ವಾಹನ ತಯಾರಿಕೆ ಮತ್ತು ಮಾದರಿ, ಪ್ರೊಫೈಲ್ ಚಿತ್ರ ಮತ್ತು ಹೆಸರು ಮುಂತಾದ ವಿವರಗಳು ಸೇರಿರುತ್ತವೆ.
- ಚಾಲಕರಿಗಾಗಿ ಸಲಹೆಗಳು
Down Small ನಿಮ್ಮ ವಾಹನದ ಮಾಹಿತಿ ಮತ್ತು ಇನ್ನೇನು ಅವಧಿ ಮೀರಲಿರುವ ಚಾಲಕ ಪರವಾನಗಿ ರೀತಿಯ ಅಮಾನ್ಯವಾಗಬಹುದಾದ ನಿಮ್ಮ ದಾಖಲೆಗಳಿಗೆ ಯಾವುದೇ ಪರಿಷ್ಕರಣೆಗಳಾಗಿದ್ದಲ್ಲಿ, ನಮಗೆ ತಿಳಿಸಿ ಇದರಿಂದಾಗಿ Uber ನಿಖರವಾದ ಮಾಹಿತಿಯನ್ನು' ಒದಗಿಸಬಹುದು.
- ಸವಾರರಿಗಾಗಿ ಸಲಹೆಗಳು
Down Small ಆ್ಯಪ್‌ನಲ್ಲಿ ಒದಗಿಸಲಾದ ಮಾಹಿತಿಗೆ ಪ್ರತಿಯಾಗಿ ನಿಮ್ಮ ಸವಾರಿಯನ್ನು ಯಾವಾಗಲೂ ಪರಿಶೀಲಿಸಿ. ಕಾರು' ಚಾಲಕರು ಸರಿಯಾದ ಗುರುತಿಸುವಿಕೆ ಮಾಹಿತಿಯನ್ನು ಹೊಂದಿಲ್ಲದಿದ್ದರೆ, ಕಾರನಲ್ಲಿ ಹೋಗಬೇಡಿ.
ಸೀಟ್ ಬೆಲ್ಟ್‌ಗಳು
ಕಾರು ಅಪಘಾತಗಳಲ್ಲಿ ಜೀವಗಳನ್ನು ಉಳಿಸಲು ಮತ್ತು ದೇಹಕ್ಕಾಗುವ ಹಾನಿಗಳನ್ನು ಕಡಿಮೆ ಮಾಡಲು ಸೀಟ್ ಬೆಲ್ಟ್ ಬಳಕೆಯು ಹೆಚ್ಚು ಪರಿಣಾಮಕಾರಿ ವಿಧಾನವಾಗಿದೆ. ಪ್ರತಿಯೊಬ್ಬ ಚಾಲಕರು ಮತ್ತು ಹಿಂಬದಿ ಸೀಟಿನಲ್ಲಿ ಕುಳಿತಿರುವ ಸವಾರರು ಯಾವಾಗಲೂ ಸೀಟ್ ಬೆಲ್ಟ್ ಅನ್ನು ಧರಿಸಿರಬೇಕು. ಸವಾರರು ತಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಸೀಟ್ ಬೆಲ್ಟ್‌ಗಳಿರುವ ಕಾರನ್ನು ವಿನಂತಿಸಿಕೊಳ್ಳಬೇಕು ಮತ್ತು ಚಾಲಕರು ತಮ್ಮ ಕಾರಿನಲ್ಲಿರುವ ಎಲ್ಲಾ ಪ್ರಯಾಣಿಕರಿಗೂ ಬೇಕಾಗುವಷ್ಟು ಸೀಟ್ ಬೆಲ್ಟುಗಳು ಇಲ್ಲದಿದ್ದರೆ ಸವಾರಿ ವಿನಂತಿಯನ್ನು ತಿರಸ್ಕರಿಸಬಹುದು.
ಬೈಕ್‌ಗಳು, ಮೋಟರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗಾಗಿ ಹೆಲ್ಮೆಟ್‌ಗಳು
ನಿಮ್ಮ ಸುರಕ್ಷತೆಗಾಗಿ, ಬೈಕು, ಮೋಟಾರ್‌ಸೈಕಲ್ ಅಥವಾ ಸ್ಕೂಟರ್ ಸವಾರಿ ಮಾಡುವಾಗ, ನಿಮಗೆ ಅನುಕೂಲಕರವೆನಿಸುವ ಹೆಲ್ಮೆಟ್ ಅನ್ನು ಧರಿಸಿ. ತಯಾರಕರ ಸೂಚನೆಗಳ ಪ್ರಕಾರ ನೀವು ಹೆಲ್ಮೆಟ್‌ಗಳನ್ನು ಧರಿಸಿದಾಗ, ನಿಮ್ಮನ್ನು ಅಪಾಯಗಳಿಂದ ಸಂರಕ್ಷಿಸುತ್ತವೆ: ನಿಮ್ಮ ಹಣೆಯ ಕೆಳಗೆ ಮತ್ತು ನಿಮ್ಮ ಗಲ್ಲದ ಕೆಳಗೆ ಕಟ್ಟಿಕೊಳ್ಳಿ.
ಕ್ಯಾಮರಾಗಳು ಅಥವ ಾ ಇತರ ವೀಡಿಯೊ ಅಥವಾ ಆಡಿಯೊ ರೆಕಾರ್ಡಿಂಗ್ ಸಾಧನಗಳ ಬಳಕೆ
Uber ಆ್ಯಪ್‌ಗಳನ್ನು ಬಳಸುವ ಯಾರಾದರೂ ಅವರು Uber ಅಥವಾ ಸಂಬಂಧಿತ ಪ್ರಾಧಿಕಾರಕ್ಕೆ ವರದಿ ಮಾಡಲು ಬಯಸುವ ಸಮಸ್ಯೆಯನ್ನು ದಾಖಲಿಸುವುದು ಸೇರಿದಂತೆ ಅನ್ವಯವಾಗುವ ಕಾನೂನುಗಳಿಂದ ಅನುಮತಿಸಲಾದ ಮಟ್ಟಿಗೆ ಟ್ರಿಪ್ ಅಥವಾ ವಿತರಣೆಯ ಎಲ್ಲಾ ಅಥವಾ ಭಾಗಶಃ ಮಾಹಿತಿಯನ್ನು ರೆಕಾರ್ಡ್ ಮಾಡಲು ಆಯ್ಕೆ ಮಾಡಬಹುದು. ಯಾವ ವ್ಯಕ್ತಿಯ ಮಾಹಿತಿಯನ್ನು ದಾಖಲಿಸಲಾಗುತ್ತಿದೆಯೋ ಆ ವ್ಯಕ್ತಿಗೆ ತಿಳಿಸಲು ಮತ್ತು/ಅಥವಾ ಅವರ ಸಮ್ಮತಿಯನ್ನು ಪಡೆದುಕೊಳ್ಳಲು, ಅನ್ವಯವಾಗುವ ಕಾನೂನುಗಳು ಅಥವಾ ನಿಬಂಧನೆಗಳು ರೆಕಾರ್ಡಿಂಗ್ ಸಾಧನಗಳನ್ನು ಬಳಸುವ ಅಗತ್ಯವಿರುತ್ತದೆ. ಈ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ನಿರ್ಧರಿಸಲು ಸ್ಥಳೀಯ ನಿಯಮಾವಳಿಗಳನ್ನೊಮ್ಮೆ ಪರಿಶೀಲಿಸಿ.
ವ್ಯಕ್ತಿಯ ಚಿತ್ರ, ಆಡಿಯೊ ಅಥವಾ ವೀಡಿಯೊ ರೆಕಾರ್ಡಿಂಗ್ ಪ್ರಸಾರ ಮಾಡಲು ಅನುಮತಿಸಲಾಗುವುದಿಲ್ಲ.
ಎಚ್ಚರದಿಂದಿರಿ
ರಸ್ತೆಯಿಂದ ಹೊರಗುಳಿಯುವುದು ಎಂದರೆ ನಿಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿಡಲು ನಿಮ್ಮ ಕೈಲಾದಷ್ಟು ಸಹಾಯ ಮಾಡುವುದು ಎಂದರ್ಥ. ಅಂದರೆ, ನಿಮ್ಮ ಕಣ್ಣುಗಳನ್ನು ರಸ್ತೆಯ ಮೇಲೆ ಹಾಯಿಸುವುದು, ಚೆನ್ನಾಗಿ ವಿಶ್ರಾಂತಿ ಪಡೆಯುವುದು ಮತ್ತು ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವಿರುವ ಸಂದರ್ಭಗಳನ್ನು ನಿಭಾಯಿಸುವುದು. ಅಸುರಕ್ಷಿತ ಚಾಲನೆ ನಡವಳಿಕೆಯ ಕುರಿತು ವರದಿಗಳನ್ನು ನಾವು ಪರಿಶೀಲನೆ ನಡೆಸುತ್ತೇವೆ.
ಸೂಕ್ತ ಕಾರ್ಯನಿರ್ವಹಣೆ ಮತ್ತು ನಿಯಂತ್ರಣ
ಉದ್ಯಮದ ಸುರಕ್ಷತೆ ಮತ್ತು ನಿರ್ವಹಣಾ ಮಾನದಂಡಗಳ ಪ್ರಕಾರ ಚಾಲಕರು ತಮ್ಮ ವಾಹನಗಳಲ್ಲಿ ಉತ್ತಮ ಬ್ರೇಕ್, ಸೀಟ್ ಬೆಲ್ಟ್ ಮತ್ತು ಟೈರ್‌ಗಳಿಂದ ಕೂಡಿದ ಉತ್ತಮ ಕಾರ್ಯಾಚರಣೆ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಮತ್ತು ವಾಹನ ತಯಾರಕರು ಹಿಂಪಡೆದ ಯಾವುದೇ ಬಿಡಿಭಾಗಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ದುರಸ್ತಿ ಮಾಡಿಸಬೇಕು.
ರಸ್ತೆ ಮಾರ್ಗವನ್ನು ಹಂಚಿಕೊಳ್ಳಿ
ಸುರಕ್ಷಿತ ರಸ್ತೆ ಮಾರ್ಗಗಳು ಎಂದರೆ ಸುರಕ್ಷಿತ ನಡವಳಿಕೆಯನ್ನು ಅಭ್ಯಾಸ ಮಾಡುವುದು ಎಂಬರ್ಥ. ಇದರಲ್ಲಿ ಹೇಗೆ ಪ್ರಯಾಣಿಸುತ್ತಾರೆ ಎಂಬುದನ್ನು ಲೆಕ್ಕಿಸದೆಯೇ ಎಲ್ಲಾ ರೀತಿಯ ಪ್ರಯಾಣಿಕರನ್ನು ಹುಡುಕುವುದೂ ಸೇರಿರುತ್ತದೆ.
- ಸವಾರರಿಗಾಗಿ ಸಲಹೆಗಳು
Down Small ವಾಹನದಿಂದ ಕೆಳಗಿಳಿಯುವ ಮೊದಲು ಯಾವಾಗಲೂ ನಿಮ್ಮ ಭುಜದ ಮೇಲೆ ಕಣ್ಣಾಡಿಸಿ, ಮತ್ತು ದ್ವಿಚಕ್ರ ವಾಹನ ಸವಾರರು, ಕಾರುಗಳು, ಪಾದಚಾರಿಗಳು ಮತ್ತು ಸ್ಕೂಟರ್‌ಗಳ ಬಗ್ಗೆ ಗಮನವಿರಿಸಿ.
- ಬೈಕು ಮತ್ತು ಸ್ಕೂಟರ್ ಸವಾರರಿಗಾಗಿ ಸಲಹೆಗಳು
Down Small ಬೈಕು, ಸ್ಕೂಟರ್ ಅಥವಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಇತರ ಜನರ ಬಗ್ಗೆ ಗಮನವಿರಲಿ ಮತ್ತು ನಿಮ್ಮ ಮುಂದಿರುವ ರಸ್ತೆ ಪರಿಸ್ಥಿತಿಗಳ ಬಗ್ಗೆಯೂ ಕೂಡ ಎಚ್ಚರವಿರಲಿ.
ಸಾರ್ವಜನಿಕ ತುರ್ತುಸ್ಥಿತಿಗಳು
ನೈಸರ್ಗಿಕ ವಿಪತ್ತುಗಳು, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳು ಮತ್ತು ಸಾರ್ವಜನಿಕ ಬಿಕ್ಕಟ್ಟಿನ ಸಂದರ್ಭಗಳನ್ನು ಒಳಗೊಂಡಂತೆ ಆದರೆ ಸೀಮಿತವಾಗಿರದ ಸಾರ್ವಜನಿಕ ತುರ್ತುಸ್ಥಿತಿಯ ಸಂದರ್ಭಗಳಲ್ಲಿ ನಮ್ಮ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಕಾಪಾಡಲು Uber ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಉದಾಹರಣೆಗೆ, Uber ಪ್ಲಾಟ್‌ಫಾರ್ಮ್ ಬಳಸುವ ಯಾರಾದರೂ ಸಾರ್ವಜನಿಕ ಹಾನಿಯಾಗುವ ಸಾಮರ್ಥ್ಯವನ್ನು ಪ್ರಸ್ತುತಪಡಿಸಬಹುದು ಎಂದು Uber ಸಾರ್ವಜನಿಕ ಆರೋಗ್ಯ ಪ್ರಾಧಿಕಾರದಿಂದ ಸೂಚನೆ ಪಡೆದರೆ, Uber ಪ್ಲಾಟ್‌ಫಾರ್ಮ್ ಬಳಸಿ ಪುನರಾರಂಭಿಸಲು ವ್ಯಕ್ತಿಯನ್ನು ಅನುಮತಿಸಲು ಸಮಂಜಸವಾಗಿ ಸುರಕ್ಷಿತವಾಗುವವರೆಗೆ ನಾವು ವ್ಯಕ್ತಿಯ ಖಾತೆಯನ್ನು ನಿರೀಕ್ಷೆಯಲ್ಲಿರಿಸುವಂತೆ ಮಾಡಬಹುದು. ಅಂತೆಯೇ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ, ನೈಸರ್ಗಿಕ ವಿಪತ್ತು ಅಥವಾ ಇತರ ಸಾರ್ವಜನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅಥವಾ ಮುಂದುವರಿದ Uber ಪ್ಲಾಟ್‌ಫಾರ್ಮ್‌ನ ಲಭ್ಯತೆಯು ಸ್ಪಷ್ಟ ಮತ್ತು ಪ್ರಸ್ತುತ ಅಪಾಯವನ್ನು ಅನುಸರಿಸಲು ನಾವು ಇಡೀ ನಗರ ಅಥವಾ ಪ್ರದೇಶದ ವ್ಯಕ್ತಿಗಳು Uber ಪ್ಲಾಟ್‌ಫಾರ್ಮ್‌ನ ಭಾಗ ಅಥವಾ ಎಲ್ಲದರ ಬಳಕೆಯನ್ನು ನಾವು ತಡೆಯಬಹುದು.