ಮುಖ್ಯ ವಿಷಯಕ್ಕೆ ತೆರಳಿ

Uber ಕಂಫರ್ಟ್

ನಿಮ್ಮ ಕಂಫರ್ಟ್‌ಗಾಗಿ, ತುಸು ಹೆಚ್ಚು ಶುಲ್ಕ.

ಕಾರು ಚಾಲಕರು
ಹಣದ ಶೀಲ್ಡ್

ಉತ್ತಮಗೊಳಿಸಿದ ಅನುಭವ

ಉತ್ತಮಗೊಳಿಸಿದ ಅನುಭವ Uber ಕಂಫರ್ಟ್ ನಿಮಗೆ ಹೆಚ್ಚಿನ ಲೆಗ್‌ರೂಮ್‌ ಹೊಂದಿರುವ ಹೊಸ ವಾಹನಗಳು ಮತ್ತು ಹೆಚ್ಚು ರೇಟಿಂಗ್ ಪಡೆದ, ಅನುಭವಿ ಚಾಲಕರನ್ನು ನೀಡುತ್ತದೆ.

ಗೇರ್

ಸೇವಾ ಆದ್ಯತೆಗಳು

ನೀವು ಚಾಟ್ ಮಾಡಲು ಬಯಸುವಿರೋ ಇಲ್ಲವೋ ಎಂಬುದನ್ನು ನಿಮ್ಮ ಚಾಲಕರಿಗೆ ಮುಂಚಿತವಾಗಿ ತಿಳಿಸಿ ಮತ್ತು ಆ್ಯಪ್‌ನಲ್ಲಿಯೇ ನೇರವಾಗಿ 4 ತಾಪಮಾನ ಪ್ರೀಸೆಟ್‌ಗಳಲ್ಲಿ ಯಾವುದನ್ನಾದರೂ ಆಯ್ಕೆಮಾಡಿ.

ಕಾರಿನ ಬಾಗಿಲು

ನಿಮ್ಮ ಸ್ವಂತ ಸಮಯದಲ್ಲಿ ಪಿಕಪ್ ಮಾಡಿ

ರದ್ದತಿ ಶುಲ್ಕ ವಿಧಿಸುವ 10 ನಿಮಿಷಗಳ ಮೊದಲು, ನಿಮ್ಮ ಚಾಲಕರನ್ನು ಯಾವುದೇ ಒತ್ತಡವಿಲ್ಲದೆ ಭೇಟಿ ಮಾಡಿ.

Uber ಕಂಫರ್ಟ್ ಜೊತೆಗೆ ಸವಾರಿ ಮಾಡುವುದು ಹೇಗೆ

ವಿನಂತಿ

ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ ಕಂಫರ್ಟ್ ಆಯ್ಕೆಮಾಡಿ. ತದನಂತರ ಕಂಫರ್ಟ್ ಖಚಿತಪಡಿಸಿ ಟ್ಯಾಪ್ ಮಾಡಿ.

ಒಮ್ಮೆ ನೀವು ಚಾಲಕರ ಜೊತೆಗೆ ಸಂಪರ್ಕ ಹೊಂದಿದ ಬಳಿಕ, ನಿಮ್ಮ ಚಾಲಕರ ಚಿತ್ರ ಮತ್ತು ವಾಹನದ ವಿವರಗಳನ್ನು ನೋಡುತ್ತೀರಿ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.

ಸವಾರಿ

ನಿಮ್ಮ ಕಾರಿಗೆ ಪ್ರವೇಶಿಸುವ ಮೊದಲು ಆ್ಯಪ್‌ನಲ್ಲಿ ನೀವೇನು ನೋಡುತ್ತೀರೋ ಅದಕ್ಕೆ ವಾಹನದ ವಿವರಗಳು ಹೊಂದಿಕೆಯಾಗುತ್ತವೆಯೇ ಎಂದು ಪರಿಶೀಲಿಸಿ.

ನಿಮ್ಮ ಚಾಲಕರು ಅಲ್ಲಿಗೆ ಹೋಗಲು ನಿಮ್ಮ ತಲುಪಬೇಕಾದ ಸ್ಥಳ ಮತ್ತು ದಾರಿಗಳನ್ನು ಹೊಂದಿದ್ದಾರೆ, ಆದರೆ ನೀವು ಯಾವಾಗಲೂ ನಿರ್ದಿಷ್ಟ ದಾರಿಯಲ್ಲಿ ಪ್ರಯಾಣಿಸುವಂತೆ ವಿನಂತಿಸಬಹುದು.

ವಾಹನದಿಂದ ನಿರ್ಗಮಿಸಿ

ಫೈಲ್‌ನಲ್ಲಿ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ ನೀವು ಆಗಮಿಸಿದ ಕೂಡಲೇ ನಿಮ್ಮ ಕಾರಿನಿಂದ ನಿರ್ಗಮಿಸಬಹುದು.

Uber ಅನ್ನು ಸುರಕ್ಷಿತವಾಗಿರಿಸಲು ಮತ್ತು ಎಲ್ಲರನ್ನೂ ಸಂತೋಷಕರವಾಗಿಡಲು ನಿಮ್ಮ ಚಾಲಕರನ್ನು ರೇಟ್ ಮಾಡಲು ಮರೆಯದಿರಿ.

ಪ್ರಪಂಚದಾದ್ಯಂತದ ಸವಾರಿಗಳು

ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*

ಆಗಾಗ ಕೇಳಲ್ಪಡುವ ಪ್ರಶ್ನೆಗಳು

Uber ಕಂಫರ್ಟ್‌ನಲ್ಲಿ ಯಾವ ವೈಶಿಷ್ಟ್ಯಗಳು ಲಭ್ಯವಿದೆ?

ಪ್ರತಿ ಟ್ರಿಪ್‌ನಲ್ಲಿ ಹೆಚ್ಚುವರಿ ಲೆಗ್ ರೂಂ ಜೊತೆಗೆ, ತಾಪಮಾನ ಮತ್ತು ಸಂಭಾಷಣೆ ಸೇರಿದಂತೆ ನಿಮ್ಮ ಸವಾರಿ ಆದ್ಯತೆಗಳ ಬಗ್ಗೆ ನಿಮ್ಮ ಚಾಲಕರಿಗೆ ತಿಳಿಸಲು ನಿಮಗೆ ಸಾಧ್ಯವಾಗುತ್ತದೆ.

Uber ಕಂಫರ್ಟ್ ಎಲ್ಲಿ ಲಭ್ಯವಿದೆ?

Uber Comfort ಈಗ 40ಕ್ಕಿಂತ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು, ವಿಸ್ತರಿಸುತ್ತಿದೆ. ನಿಮ್ಮ ನಗರದಲ್ಲಿ ಯಾವ ಪ್ರಯಾಣ ಆಯ್ಕೆಗಳು ಲಭ್ಯವಿವೆ ಎಂಬುದನ್ನು ಆ್ಯಪ್‌ನಲ್ಲಿ ನೋಡಿ ನಿಮ್ಮ ನಗರ.

Uber ಕಂಫರ್ಟ್ ಜೊತೆಗೆ ಸವಾರಿ ಮಾಡಬೇಕೇ?

¹ Uber ರಿಸರ್ವ್ ಮೂಲಕ ನೀವು ಟ್ರಿಪ್ ಅನ್ನು ವಿನಂತಿಸಿದಾಗ, ನಿಮಗೆ ಕಾಣಿಸುವ ದರವು ಅಂದಾಜು ದರವಾಗಿದ್ದು ಮತ್ತು ಇದರಲ್ಲಿ ರಿಸರ್ವೇಶನ್ ಶುಲ್ಕವೂ ಸೇರಿರುತ್ತದೆ. ಪಿಕಪ್ ಸ್ಥಳ ಮತ್ತು/ಅಥವಾ ನಿಮ್ಮ ಟ್ರಿಪ್‌ನ ದಿನ ಹಾಗೂ ಸಮಯವನ್ನು ಆಧರಿಸಿ ಈ ಶುಲ್ಕವು ಬದಲಾಗಬಹುದು. ಡ್ರೈವರ್ ಹೆಚ್ಚುವರಿ ಕಾಯುವ ಸಮಯ, ಹಾಗೆಯೇ ಡ್ರೈವರ್ ಪಿಕಪ್ ಸ್ಥಳವನ್ನು ತಲುಪಲು ತೆಗೆದುಕೊಳ್ಳುವ ಸಮಯ ಮತ್ತು ದೂರವನ್ನು ಸರಿದೂಗಿಸಲು ಸವಾರರು ಈ ಶುಲ್ಕವನ್ನು ಪಾವತಿಸುತ್ತಾರೆ.

² ಈ ವೆಬ್‌ಪೇಜ್‌ನಲ್ಲಿ ನೀಡಲಾದ ಮಾಹಿತಿಯು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ಅದು ನಿಮ್ಮ ದೇಶ, ಪ್ರದೇಶ ಅಥವಾ ನಗರಕ್ಕೆ ಅನ್ವಯಿಸದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಸೂಚನೆ ಇಲ್ಲದೆ ಅಪ್‌ಡೇಟ್ ಮಾಡಬಹುದು.