ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ಕಂಪನಿಯ ನಿಯಮಿತ ಪ್ರಯಾಣವನ್ನು ಸುಲಭಗೊಳಿಸಲಾಗಿದೆ

ನಿಮ್ಮ ಉದ್ಯೋಗಿಗಳು ಪ್ರತಿದಿನ ಚಾಲನೆ ಮಾಡುವ ಕುರಿತು ಚಿಂತಿಸಬೇಕಾಗಿಲ್ಲ. ನಿಮ್ಮ ಉದ್ಯೋಗಿಗಳಿಗೆ ನಿಯಮಿತ ಪ್ರಯಾಣ ಪ್ರೋಗ್ರಾಂ ಪ್ರಯೋಜನವನ್ನು ನೀಡಿ. ಇದರಿಂದ ಅವರು ಆಫೀಸ್‌ನಿಂದ ಮನೆಗೆ ಅಥವಾ ಮನೆಯಿಂದ ಆಫೀಸ್‌ಗೆ ವಿಶ್ವಾಸಾರ್ಹವಾಗಿ ಪ್ರಯಾಣಿಸಬಹುದು.

ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಬಯಸುತ್ತೀರಾ? ಉದ್ಯೋಗಿ ಶಟಲ್ ಪರಿಹಾರಗಳ ಬಗ್ಗೆಇಲ್ಲಿಇನ್ನಷ್ಟು ತಿಳಿಯಿರಿ.

Riders commute

ನಿಮ್ಮ ತಂಡಕ್ಕಾಗಿ ಕಸ್ಟಮೈಸ್ ಮಾಡಬಹುದಾದ ಪ್ರೋಗ್ರಾಂಗಳು

 badge-wheel.svg

ಮನೆ ಬಾಗಿಲಿಗೆ ನಿಯಮಿತ ಪ್ರಯಾಣ

Uber ನೊಂದಿಗೆ ನಿಮ್ಮ ಉದ್ಯೋಗಿಗಳ ಸವಾರಿಗಳ ಸಂಪೂರ್ಣ ಇಲ್ಲವೇ ಭಾಗಶಃ ಶುಲ್ಕವನ್ನು ಭರಿಸಿ. ನಿಮ್ಮ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ನಾವು ಹೊಸ COVID-19 ಸುರಕ್ಷತೆ ಕ್ರಮಗಳನ್ನು ಪರಿಚಯಿಸಿದ್ದೇವೆ.

 badge-map_trip.svg

ಮೊದಲ ಮತ್ತು ಕೊನೆಯ ಮೈಲಿ

ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ಹೋಗಲು ಮತ್ತು ಬರಲು ನಿಮ್ಮ ತಂಡಕ್ಕೆ ಸಹಾಯ ಮಾಡಿ. ಪ್ರಯಾಣದ ಕೊನೆಯ ಅಲ್ಪ ಅವಧಿಗೆ ಪಾವತಿಸಲು ಅವರಿಗೆ ಸಹಾಯ ಮಾಡಲು ಅವರ ಸವಾರಿಯ ವೆಚ್ಚವನ್ನು ಭರಿಸಿ.

 badge-car-medium.svg

ತಡರಾತ್ರಿ ಸವಾರಿಗಳು

ಎಷ್ಟೇ ತಡವಾದರೂ, Uber ಜೊತೆಗೆ ಸವಾರಿ ವೆಚ್ಚವನ್ನು ಭರಿಸುವ ಮೂಲಕ, ಕತ್ತಲಾದ ನಂತರ ನಿಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿ ಮನೆಗೆ ಸೇರಿಸಿ.

ನಿಮ್ಮ ತಂಡವು ಇಂದೇ ಸವಾರಿ ಕೈಗೊಳ್ಳಲಿ

 illustration-batch3-rides-customize.svg

ನಿಮ್ಮ ಪ್ರೋಗ್ರಾಂ ಕಸ್ಟಮೈಸ್ ಮಾಡಿ

ನಿಮ್ಮ ಉದ್ಯೋಗಿಗಳಿಗೆ ಸರಿಹೊಂದುವ ನಿಯಮಿತ ಪ್ರಯಾಣ ಪ್ರೋಗ್ರಾಂ ಅನ್ನು ಹೊಂದಿಸಿ. ಎಷ್ಟು ಮೊತ್ತದ ಶುಲ್ಕವನ್ನು ಕವರ್ ಮಾಡಲಾಗುತ್ತದೆ, ಅವರು ಯಾವ ಸಮಯದಲ್ಲಿ ಸವಾರಿ ಮಾಡುತ್ತಾರೆ ಮತ್ತು ಅವರು ಯಾವ ಬಗೆಯ ವಾಹನಕ್ಕೆ ವಿನಂತಿಸುತ್ತಾರೆ ಎಂಬುದನ್ನು ನಿಯಂತ್ರಿಸಿ.

 illustration-batch3-rides-add.svg

ನಿಮ್ಮ ಉದ್ಯೋಗಿಗಳನ್ನು ಸೇರಿಸಿ

ನಿಮ್ಮ ಕಂಪನಿಯ ಖಾತೆಗೆ ಸೇರಲು ನಿಮ್ಮ ತಂಡವನ್ನು ಆಹ್ವಾನಿಸಿ. ನೀವು ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಬಹುದು, CSV ಫೈಲ್ ಅನ್ನು ಅಪ್‌ಲೋಡ್ ಮಾಡಬಹುದು ಅಥವಾ ನಿಮ್ಮ ಉದ್ಯೋಗಿ ನಿರ್ವಹಣಾ ಸಿಸ್ಟಂನಲ್ಲಿ ಸಿಂಕ್ ಮಾಡಬಹುದು.

 illustration-batch3-rides-request.svg

ಉದ್ಯೋಗಿಗಳು ಸವಾರಿಗಳಿಗೆ ವಿನಂತಿಸಲು ಅವಕಾಶ ಕಲ್ಪಿಸಿ

ನಿಮ್ಮ ಉದ್ಯೋಗಿಗಳಿಗೆ ಸವಾರಿ ಬೇಕೆಂದಾಗ, ಅವರು ತಮ್ಮ ಬ್ಯುಸಿನೆಸ್ ಪ್ರೊಫೈಲ್‌ಗೆ ಬದಲಿಸಿಕೊಳ್ಳಬಹುದು ಮತ್ತು Uber ಆ್ಯಪ್‌ನಲ್ಲಿ ಸವಾರಿಯನ್ನು ವಿನಂತಿಸಬಹುದು.

ನಿಯಮಿತ ಪ್ರಯಾಣ ಪ್ರೋಗ್ರಾಂ ನಿಮ್ಮ ವ್ಯವಹಾರಕ್ಕೆ ಹೇಗೆ ಸಹಾಯ ಮಾಡುತ್ತದೆ

 badge-steering-wheel.svg

ಒತ್ತಡ-ಮುಕ್ತ, ವಿಶ್ವಾಸಾರ್ಹ ಸವಾರಿಗಳು

COVID-19 ಸುರಕ್ಷತಾ ಚೆಕ್‌ಲಿಸ್ಟ್‌ಗಳಿಂದ ಹಿಡಿದು ಕಡ್ಡಾಯ ಚಾಲಕರ ಹಿನ್ನೆಲೆ ಪರಿಶೀಲನೆಗಳವರೆಗೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

 badge-diamond.svg

ನಿಮ್ಮ ಸಾಧನೆಗೆ ಸಹಾಯ ಮಾಡುವ ವಿಶೇಷ ಅನುಕೂಲಗಳು

ನಿಮ್ಮ ದೈನಂದಿನ ಪ್ರಯಾಣಿಕ ಪ್ರಯೋಜನಗಳ ಭಾಗವಾಗಿ Uber ನೊಂದಿಗೆ ಸವಾರಿಗಳನ್ನು ಒದಗಿಸುವ ಮೂಲಕ ಉತ್ತಮ ಪ್ರತಿಭೆಯನ್ನು ಆಕರ್ಷಿಸಿ ಮತ್ತು ನಿಮ್ಮಲ್ಲಿ ಉಳಿಸಿಕೊಳ್ಳಿ.

 badge-dollar-bill.svg

ವೆಚ್ಚವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುವ ಪರಿಕರಗಳು

ಪಾರ್ಕಿಂಗ್ ಮತ್ತು ವಾರ್ಷಿಕ ಸಾರಿಗೆ ವೆಚ್ಚಗಳಲ್ಲಿ ಉಳಿತಾಯ ಮಾಡಿ. ಸ್ಥಳ ಮತ್ತು ದಿನದ ಸಮಯದ ಆಧಾರದ ಮೇಲೆ ಮಿತಿಗಳನ್ನು ಹೊಂದಿಸುವುದು ಸುಲಭ.

"ಸಾಮಾನ್ಯ ನಿಯಮಿತ ಪ್ರಯಾಣದ ಆಯ್ಕೆಗಳು ಲಭ್ಯವಿಲ್ಲದಿದ್ದಾಗ, ಪ್ರತಿದಿನ ಲೋವರ್ ಮ್ಯಾನ್‌ಹ್ಯಾಟನ್‌ಗೆ ಅಗತ್ಯವಾಗಿ ಪ್ರಯಾಣಿಸಬೇಕಿದ್ದ ಉದ್ಯೋಗಿಗಳಿಗೆ Uber for Business ಉತ್ತಮ ಮಾರ್ಗವನ್ನು ಒದಗಿಸಿತು."

ಸ್ಟೇಸಿ ಕನ್ನಿಂಗ್‌ಹ್ಯಾಮ್, ಅಧ್ಯಕ್ಷರು, NYSE

 logo-NYSE-558x313,9px.svg

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

ಒಂದು ಬ್ಯುಸಿನೆಸ್ ತನ್ನ ಉದ್ಯೋಗಿಗಳಿಗೆ ಕೆಲಸಕ್ಕೆ ಬರಲು ಉಚಿತ ಸವಾರಿ ಸೌಲಭ್ಯವನ್ನು ಹೇಗೆ ಒದಗಿಸಬಹುದು?

ಕಂಪನಿಗಳಿಗೆ ಕಾರ್ಪೊರೇಟ್ ಖಾತೆಯನ್ನು ಸೆಟಪ್‌ ಮಾಡಲು, ಪ್ರಯಾಣ ಪ್ರೋಗ್ರಾಂ ರಚಿಸಲು ಮತ್ತು ತಮ್ಮ ಉದ್ಯೋಗಿಗಳ ಸಾರಿಗೆ ವೆಚ್ಚಗಳನ್ನು ನಿರ್ವಹಿಸಲು Uber ಅನುಮತಿಸುತ್ತದೆ. ಈ ಪ್ರೋಗ್ರಾಂ ಮೂಲಕ, ಬ್ಯುಸಿನೆಸ್‌ಗಳು ತಮ್ಮ ಉದ್ಯೋಗಿಗಳಿಗೆ ತಮ್ಮ ಕೆಲಸಕ್ಕೆ ಬರಲು, ಮೀಟಿಂಗ್‌ಗಳಿಗೆ ಹೋಗಲು ಅಥವಾ ಇತರ ಬ್ಯುಸಿನೆಸ್-ಸಂಬಂಧಿತ ಇತರ ಕೆಲಸಗಳಿಗಾಗಿ ಉಚಿತ ಸವಾರಿ ಸೌಲಭ್ಯವನ್ನು ಒದಗಿಸಬಹುದು.

ತಡ ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ರಾತ್ರಿ ವೇಳೆ Uber ಲಭ್ಯವಿದೆಯೇ?

ಉದ್ಯೋಗಿಗಳು ದಿನದ ಯಾವುದೇ ಸಮಯದಲ್ಲಿ ಸವಾರಿಗಾಗಿ ವಿನಂತಿಸಬಹುದು. ಸಮಯ, ಸ್ಥಳ ಮತ್ತು ಖರ್ಚು ನಿರ್ಬಂಧಗಳನ್ನು ನಿಗದಿಪಡಿಸುವ ಮೂಲಕ ಉದ್ಯೋಗಿಗಳಿಗೆ ತಡರಾತ್ರಿಯ ಸವಾರಿಗಳನ್ನು ಒಳಗೊಳ್ಳಲು ನಿರ್ವಾಹಕರು Uber for Business ಡ್ಯಾಶ್‌ಬೋರ್ಡ್‌ನಲ್ಲಿ ಪ್ರಯಾಣ ಪ್ರೋಗ್ರಾಂಗಳನ್ನು ಸೆಟಪ್‌ ಮಾಡಬಹುದು.

ನಮ್ಮ ಉದ್ಯೋಗಿ ಪ್ರಯೋಜನಗಳ ಪ್ರೋಗ್ರಾಂನಲ್ಲಿ ಪ್ರಯಾಣದ ಆಯ್ಕೆಯನ್ನು ಸಂಯೋಜಿಸಲು ಮತ್ತು ಅರ್ಹ ಉದ್ಯೋಗಿಗಳಿಗೆ ಉಚಿತ ಸವಾರಿಗಳನ್ನು ಒದಗಿಸಲು ಸಾಧ್ಯವೇ?

ಭಾಗಶಃ ಅಥವಾ ಪೂರ್ಣ ಪ್ರಯಾಣ ಪ್ರಯೋಜನಗಳನ್ನು ಒದಗಿಸಲು ನಿರ್ವಾಹಕರು Uber for Business ಡ್ಯಾಶ್‌ಬೋರ್ಡ್‌ನಲ್ಲಿ ಪ್ರಯಾಣ ಪ್ರೋಗ್ರಾಂ ಅನ್ನು ಸೆಟಪ್‌ ಮಾಡಬಹುದು. ಪ್ರಯೋಜನವನ್ನು ಅದರ ಉದ್ದೇಶಿತ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ಉದ್ಯೋಗಿಗಳು, ದಿನದ ಸಮಯ, ಖರ್ಚು ಮೊತ್ತಗಳು ಮತ್ತು ಸ್ಥಳಗಳಿಗೆ ಪ್ರೋಗ್ರಾಂ ಅನ್ನು ನಿರ್ವಾಹಕರು ಕಸ್ಟಮೈಸ್ ಮಾಡಬಹುದು.

ನಮ್ಮ ಉದ್ಯೋಗಿಗಳು Uber ಅನ್ನು ಜವಾಬ್ದಾರಿಯುತವಾಗಿ ಬಳಸುತ್ತಿದ್ದಾರೆ ಎಂದು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?

Uber for Business ಡ್ಯಾಶ್‌ಬೋರ್ಡ್‌ನಲ್ಲಿ ಉದ್ಯೋಗಿಗಳ ಚಟುವಟಿಕೆಗಳನ್ನು ವೀಕ್ಷಿಸುವ ಮೂಲಕ ಹಾಗೂ ಕೆಲವೊಂದು ನಿರ್ಬಂಧಗಳನ್ನು ಹೊಂದಿಸುವ ಮೂಲಕ ನಿರ್ವಾಹಕರು ವಂಚನೆಯ ಸಂಭಾವ್ಯತೆಯನ್ನು ಎರಡು ವಿಧಾನಗಳಲ್ಲಿ ಕಡಿಮೆಗೊಳಿಸಹುದು.

ನಮ್ಮ ಉದ್ಯೋಗಿಗಳು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಕೈಗೊಳ್ಳುವ Uber ಸವಾರಿಗಳನ್ನು ನಾವು ಹೇಗೆ ಮೇಲ್ವಿಚಾರಣೆ ಮಾಡಬಹುದು?

Uber ಆ್ಯಪ್‌ನಿಂದ ಸವಾರರು ಸುಲಭವಾಗಿ ಪ್ರಮುಖ ಸುರಕ್ಷತಾ ಮಾಹಿತಿಯನ್ನು ಆ್ಯಕ್ಸೆಸ್‌ ಮಾಡಬಹುದು, ತುರ್ತು ಸಹಾಯವನ್ನು ಪಡೆಯಬಹುದು ಮತ್ತು ತಮ್ಮ ಲೊಕೇಶನ್‌ ಶೇರ್‌ ಮಾಡಬಹುದು. ನಿರ್ವಾಹಕರು ನಿರ್ವಾಹಕ ಡ್ಯಾಶ್‌ಬೋರ್ಡ್‌ ಮೂಲಕ ಉದ್ಯೋಗಿಗಳ ಟ್ರಿಪ್‌ಗಳ ಕುರಿತು ಗೋಚರತೆಯನ್ನು ಸಹ ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಕಂಪನಿಗಳಿಗೆ ಗೋಚರತೆಯನ್ನು ಹೆಚ್ಚಿಸಲು Uber for Business ಅನ್ನು ಇಂಟರ್‌ನ್ಯಾಷನಲ್ SOS ನೊಂದಿಗೆ ಸಂಯೋಜಿಸಲಾಗಿದೆ.