ಗುಂಪು ಆರ್ಡರ್‌ಗಳೊಂದಿಗೆ ತಂಡದ ಊಟವನ್ನು ಸುಲಭಗೊಳಿಸಿ
ಹಂಚಿಕೆಯ ತಂಡದ ಆರ್ಡರ್‌ಗಳಲ್ಲಿ ವೈಯಕ್ತಿಕವಾಗಿ ಉದ್ಯೋಗಿಗಳಿಗೆ ತಮ್ಮದೇ ಆದ ವಸ್ತುಗಳನ್ನು ಸೇರಿಸಲು ಅವಕಾಶ ನೀಡುವ ಮೂಲಕ ನೀವು ತಂಡದ ಊಟವನ್ನು ಹೇಗೆ ಆಯೋಜಿಸುತ್ತೀರಿ ಎಂಬುದನ್ನು ಸರಳಗೊಳಿಸಿ.
ಪೂರ್ತಿ ತಂಡಕ್ಕೆ ಊಟವನ್ನು ಹೊಂದಿಸುವುದು ಸುಲಭ
Uber for Business ಖಾತೆ ರಚಿಸಿ
ಇದು ಉಚಿತ ಮತ್ತು ಸೈನ್ ಅಪ್ ಮಾಡಲು ಸುಲಭವಾಗಿದೆ. ಇಲ್ಲಿ ಪ್ರಾರಂಭಿಸಿ.
ನಿಮ್ಮ ತಂಡದಲ್ಲಿ ಊಟದ ನೀತಿಗಳನ್ನು ಹೊಂದಿಸಿ
ಡೆಲಿವರಿ ಸ್ಥಳಗಳು, ಊಟದ ಆವರ್ತನ ಸಮಯ ಮತ್ತು ಹೆಚ್ಚಿನ ವಿವರಗಳನ್ನು ನಿರ್ಧರಿಸುವ ಮ ೂಲಕ ನಿಮ್ಮ ಸ್ವಂತ ಪ್ರೋಗ್ರಾಂ ರಚಿಸಿ.
ಗುಂಪು ಆರ್ಡರ್ ಅನ್ನು ಪ್ರಾರಂಭಿಸಿ
ನಿಮ್ಮ ಊಟದ ನೀತಿಗೆ ಲಿಂಕ್ ಆದ ಯಾವುದೇ ತಂಡದ ಸದಸ್ಯರು ಆರ್ಡರ್ ಅನ್ನು UberEats.com ಅಥವಾ Uber Eats ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಾರಂಭಿಸಬಹುದು.
ಗುಂಪು ಆರ್ಡರ್‌ಗೆ ತಂಡದ ಸದಸ್ಯರನ್ನು ಸೇರಿಸಿ
ಕಸ್ಟಮ್ ಲಿಂಕ್ ಅನ್ನು ಹಂಚಿಕೊಳ್ಳಿ, ಅಲ್ಲಿ ಪ್ರತಿ ಉದ್ಯೋಗಿ ಮೆನು ಬ್ರೌಸ್ ಮಾಡಬಹುದು ಮತ್ತು ಅವರ ಊಟವನ್ನು ಆಯ್ಕೆ ಮಾಡಬಹುದು.
ಆರ್ಡರ್ ಮಾಡಿ
ಪ್ರತಿಯೊಬ್ಬರೂ ತಮ್ಮ ಊಟದ ಆರ್ಡರ್ ಅನ್ನು ಹೊಂದಿದ ನಂತರ, ತಂಡದ ನಿರ್ವಾಹಕರು ಅದನ್ನು ರೆಸ ್ಟೋರೆಂಟ್ಗೆ ಸಲ್ಲಿಸುತ್ತಾರೆ.
ಡೆಲಿವರಿ ಮತ್ತು ಮುಗಿದಿದೆ
ತಂಡದ ಆರ್ಡರ್‌ಗಳ ಭಾಗವಾಗಿರುವ ಯಾರಾದರೂ ತಂಡದ ಆರ್ಡರ್‌ಗಳನ್ನು ಆನ್‌ಲೈನ್‌ನಲ್ಲಿ ಅಥವಾ ಅಪ್ಲಿಕೇಶನ್‌ನಲ್ಲಿ ಟ್ರ್ಯಾಕ್ ಮಾಡಬಹುದು.
"Uber for Business ನಮ್ಮ ಮಾರಾಟದ ಆರಂಭಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಿತು, ಜತೆಗೆ ಸ್ಥಳೀಯ ರೆಸ್ಟೋರೆಂಟ್‌ಗಳನ್ನು ಸಹ ಬೆಂಬಲಿಸಿತು."
ಏಂಜಲೀನಾ ಎಲ್ಹಾಸ್ಸನ್, ಈವೆಂಟ್‌ಗಳು ಮತ್ತು ಕ್ಷೇತ್ರ ಮಾರುಕಟ್ಟೆ ನಿರ್ದೇಶಕರು, ಸಂಸಾರ
ಪ್ರತಿಯೊಬ್ಬರೂ ಆನಂದಿಸುವ ರೀತಿಯ ಅನುಭವಕ್ಕೆ ಗುಂಪು ಆರ್ಡರ್ ಮಾಡಿ
ಉದ್ಯೋಗಿಗಳು ತಮ್ಮ ಮೆಚ್ಚಿನವುಗಳನ್ನು ಆರಿಸಿಕೊಳ್ಳುತ್ತಾರೆ
ಗುಂಪು ಆರ್ಡರ್ ಮಾಡುವಿಕೆಯೊಂದಿಗೆ ಉದ್ಯೋಗಿಗಳು ತಮ್ಮದೇ ಆದ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡುತ್ತಾರೆ, ಅದನ್ನು ಅವರ ನಿರ್ದಿಷ್ಟ ಅಭಿರುಚಿಗೆ ತಕ್ಕಂತೆ ತಯಾರಿಸಲಾಗುತ್ತದೆ. ಅದು ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ಅವರ ತೃಪ್ತಿಯನ್ನು ಖಚಿತಪಡಿಸುತ್ತದೆ.
ಸುರಕ್ಷತೆ ಯಾವಾಗಲೂ ಮೊದಲ ಆದ್ಯತೆಯಾಗಿದೆ
ನೈರ್ಮಲ್ಯ ಮತ್ತು ಸಂಪೂರ್ಣ ತಾಜಾತನಕ್ಕಾಗಿ ಪ್ರತಿ ಊಟವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗುತ್ತದೆ. ಇದರರ್ಥ ಶುಚಿತ್ವಕ್ಕೆ ಆದ್ಯತೆ ನೀಡದೆ ಯಾವುದೇ ಆರ್ಡರ್‌ಗಳನ್ನು ಪೂರ್ಣಗೊಳಿಸಲಾಗುವುದಿಲ್ಲ.
ನಿಮ್ಮ ಬಿಸಿನೆಸ್‌ಗಾಗಿ ಬಜೆಟ್ ಸ್ನೇಹಿ
ಉದ್ಯೋಗಿಗಳ ಊಟವನ್ನು ಒಂದೇ ಡೆಲಿವರಿಯಲ್ಲಿ ಸಂಯೋಜಿಸುವ ಮೂಲಕ ಶುಲ್ಕವನ್ನು ಉಳಿಸಿ ಮತ್ತು ನಿಮ್ಮ ನೀತಿಗಳಿಗೆ ಹೊಂದಿಕೆಯಾಗುವ ಗುಂಪು ಆರ್ಡರ್ ಮಾಡುವಿಕೆ ಮಿತಿಗಳನ್ನು ಹೊಂದಿಸಿ.
ಸುಧಾರಿತ ವೈಶಿಷ್ಟ್ಯಗಳು ಗುಂಪು ಆರ್ಡರ್ ಮಾಡುವಿಕೆಯನ್ನು ಸುಲಭವಾಗಿಸಿದೆ
ಮುಂಚಿತವಾಗಿ ಆರ್ಡರ್ ಮಾಡಿ
ಮುಂದಿನ ಯೋಜನೆ ಮಾಡುತ್ತಿದ್ದೀರಾ? ಪ್ರತಿಯೊಬ್ಬರೂ ತಮ್ಮ ತಮಗಿಷ್ಟದ ಐಟಂಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಖಚಿತಪಡಿಸಲು ನೀವು ಸಮಯಕ್ಕಿಂತ ಮುಂಚಿತವಾಗಿ ಗುಂಪು ಆರ್ಡರ್‌ಗಳ ವೇಳಾಪಟ್ಟಿ ಮಾಡಬಹುದು.
ಪ್ರತಿ ವ್ಯಕ್ತಿಯ ಖರ್ಚಿನ ಮಿತಿಗಳು
ವೆಚ್ಚಗಳನ್ನು ನಿಯಂತ್ರಿಸಿ ಮತ್ತು ವೈಯಕ್ತಿಕ ಖರ್ಚು ಮಿತಿಗಳನ್ನು ಹೊಂದಿಸುವ ಮೂಲಕ ಉದ್ಯೋಗಿಗಳು ಆರ್ಡರ್ ಮಾಡಲು ಯಾವುದು ಸ್ವೀಕಾರಾರ್ಹ ಎಂದು ತಿಳಿದುಕೊಳ್ಳಲು ಸರಳವಾಗಿಸಿ. ಅನಿರೀಕ್ಷಿತ ಬಿಲ್‌ಗಳು ಮತ್ತು ಖರ್ಚುಗಳನ್ನು ನಡೆದುಹೋದ, ಮುಂದೆ ನಡೆಯದ ವಿಷಯವನ್ನಾಗಿಸಿ.
ನೀವು ಆಹಾರ ನೀಡಿ ಹೊಟ್ಟೆ ತುಂಬಿಸುವ ಸೇವೆಗೆ ತಂಡವನ್ನೇ ಪಡೆದುಕೊಂಡಿದ್ದೀರಿ. ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ.
- ಗುಂಪು ಆರ್ಡರ್ ಮಾಡುವಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ?
ನೀವು ಈ ಹಂತಗಳನ್ನು ಅನುಸರಿಸಬಹುದು:
ubereats.com ಗೆ ಹೋಗಿ, ರೆಸ್ಟೋರೆಂಟ್ ಆಯ್ಕೆಮಾಡಿ ಮತ್ತು ಗುಂಪು ಆರ್ಡರ್ ಬಟನ್ ಕ್ಲಿಕ್ ಮಾಡಿ.
ಗುಂಪು ಆರ್ಡರ್ ಲಿಂಕ್ ಅನ್ನು ನಿಮ್ಮ ತಂಡದೊಂದಿಗೆ ಹಂಚಿಕೊಳ್ಳುವ ಮೂಲಕ ಆರ್ಡರ್ ಮಾಡಲು ಅವರನ್ನು ಆಹ್ವಾನಿಸಿ. ಅವರು ತಮ್ಮಿಷ್ಟದಂತೆ ಕಸ್ಟಮೈಸ್ ಮಾಡಬಹುದು ಮತ್ತು ನೀವು ನಿಮಗೆ ಬೇಕಿದ್ದ ರೀತಿಯಲ್ಲಿ ಖರ್ಚು ಮಾಡಬಹುದು.
ಪಾವತಿಸಿ ಮತ್ತು ಡೆಲಿವರಿಯನ್ನು ಟ್ರ್ಯಾಕ್ ಮಾಡಿ.
ನಿಮ್ಮ ಊಟವನ್ನು ಆನಂದಿಸಿ!
- Uber ನ ಗುಂಪು ಆರ್ಡರ ್ ಮಾಡುವಿಕೆಯು ವರ್ಚುವಲ್ ತಂಡಗಳಲ್ಲಿ ಸಮುದಾಯವನ್ನು ಹೇಗೆ ನಿರ್ಮಿಸಬಹುದು?
ರಿಮೋಟ್ ಉದ್ಯೋಗಿಗಳಿಗಾಗಿ Uber ನ ಗುಂಪು ಆರ್ಡರ್ ಮಾಡುವಿಕೆಯನ್ನು ಬಳಸುವ ಮೂಲಕ, ಉದ್ಯಮಗಳು ತಮ್ಮ ತಂಡಗಳ ಸದಸ್ಯರಿಗೆ ಸಂಪರ್ಕ ಸಾಧಿಸಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಬಾಂಧವ್ಯವನ್ನು ಬಲಪಡಿಸಲು ಅವಕಾಶಗಳನ್ನು ಒದಗಿಸಬಹುದು. ಇದು ವರ್ಚುವಲ್ ತಂಡವನ್ನು ಸುದೃಢವಾಗಿಸುತ್ತದೆ ಮತ್ತು ಅದನ್ನು ಒಗ್ಗಟ್ಟಿನಲ್ಲಿ ಇರಿಸುತ್ತದೆ.
- ಗುಂಪು ಆಹಾರ ಆರ್ಡರ್‌ಗಳ ವೆಚ್ಚವನ್ನು ಹೇಗೆ ನಿಭಾಯಿಸಲಾಗುತ್ತದೆ?
ಗುಂಪು ಆರ್ಡರ್‌ಗಳಿಗೆ ಒಬ್ಬ ವ್ಯಕ್ತಿ ಪಾವತಿಸಬಹುದು, ಅಥವಾ ಗುಂಪು ಆರ್ಡರ್‌ನಲ್ಲಿರುವ ಪ್ರತಿಯೊಬ್ಬರೂ ತಮ್ಮ ಪಾಲಿನ ಶುಲ್ಕವನ್ನು ಪಾವತಿಸಬಹುದು. ಗುಂಪು ಆರ್ಡರ್‌ನಲ್ಲಿ ಪ್ರತಿ ವ್ಯಕ್ತಿಗೆ ನೀವು ಖರ್ಚು ಮಿತಿಯನ್ನು ಹೊಂದಿಸಬಹುದು.
- ಗುಂಪು ಆರ್ಡರ್‌ಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಶುಲ್ಕಗಳಿವೆಯೇ?
Uber ನ ಗುಂಪು ಆರ್ಡರ್ ಪರಿಹಾರವನ್ನು ಬಳಸುವಾಗ, ಸೇವೆಗೆ ಸಂಬಂಧಿಸಿದ ಪ್ರಮಾಣಿತ ಶುಲ್ಕಗಳು ಅನ್ವಯವಾಗುತ್ತವೆ. ಆರ್ಡರ್ ಮಾಡುವಿಕೆ ಪ್ರಕ್ರಿಯೆಯ ಸಮಯದಲ್ಲಿ ಈ ಶುಲ್ಕಗಳ ಬಗ್ಗೆ ಅತ್ಯಂತ ನಿಖರವಾದ ಮತ್ತು ಅಪ್ ಟು ಡೇಟ್ ಮಾಹಿತಿಗಾಗಿ Uber Eats ಆ್ಯಪ್ ಅನ್ನು ಪರಿಶೀಲಿಸಲು ನಾವು ಶಿಫಾರಸು ಮಾಡುತ್ತೇವೆ.
- ಗುಂಪು ಆರ್ಡರ್‌ನಲ್ಲಿ ಗರಿಷ್ಠ ಎಷ್ಟು ಜನರನ್ನು ಸೇರಿಸಬಹುದು?
Uber Eats ಗುಂಪು ಆರ್ಡರ್‌ಗಳ ಸಾಮರ್ಥ್ಯವು ರೆಸ್ಟೋರೆಂಟ್‌ನ ಗಾತ್ರ, ಸಾಮರ್ಥ್ಯಗಳು ಮತ್ತು ಲಭ್ಯವಿರುವ ಸ್ಟಾಕ್‌ಗಳ ಆಧಾರದಲ್ಲಿ ಬದಲಾಗುತ್ತದೆ. ಕೆಲವು ದೊಡ್ಡ ಅಥವಾ ಈವೆಂಟ್-ಕೇಂದ್ರಿತ ರೆಸ್ಟೋರೆಂಟ್‌ಗಳು ಗರಿಷ್ಠ 100 ಜನರ ಆರ್ಡರ್‌ಗಳನ್ನು ನಿಭಾಯಿಸಬಹುದು, ಆದರೆ ಆಹಾರ ತಯಾರಿಕೆ ಸಾಮರ್ಥ್ಯ ಮತ್ತು ಖಾದ್ಯ ತಯಾರಿಯಲ್ಲಿರುವ ಕ್ಲಿಷ್ಟತೆ ಸಹಿತ ವಿವಿಧ ಅಂಶಗಳ ಆಧಾರದ ಮೇಲೆ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು.
- ಸಾಂಪ್ರದಾಯಿಕ ಕ್ಯಾಟರಿಂಗ್ಗೆ ಹೋಲಿಸಿದಾಗ ಗು ಂಪು ಆರ್ಡರ್ ಮಾಡುವಿಕೆಯಿಂದ ಎಷ್ಟು ಉಳಿತಾಯ ನಿರೀಕ್ಷಿಸಬಹುದು?
ಉದ್ಯೋಗಿಗಳು ತಾವು ಬಯಸುವ ಆಹಾರವನ್ನು ಆರಿಸಿಕೊಳ್ಳಬಹುದು, ಇದರಿಂದಾಗಿ ಆಹಾರ ಪೋಲಾಗುವುದನ್ನು ಕಡಿಮೆಗೊಳಿಸಬಹುದು. ತಂಡವು ಬಜೆಟ್ ಮಿತಿಯೊಳಗೆ ಉಳಿಯುವುದನ್ನು ಖಾತ್ರಿಪಡಿಸಲು ಕಂಪನಿಗಳು ಪ್ರತಿ ವ್ಯಕ್ತಿಗೆ ಖರ್ಚು ಮಿತಿಯನ್ನು ಸಹ ಹೊಂದಿಸಬಹುದು.
Uber for Business ಬಗ್ಗೆ ಇನ್ನಷ್ಟು ತಿಳಿಯಿರಿ
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ