Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ನಲ್ಲಿನ ಬ್ಯುಸಿನೆಸ್ ಪ್ರೊಫೈಲ್‌ಗಳು

ನೀವು Uber for Business ವಿಶೇಷ ಅನುಕೂಲಗಳಿಗೆ ಅರ್ಹರಾಗಿದ್ದೀರಾ ಎಂದು ಕಂಡುಕೊಳ್ಳಿ ಮತ್ತು ಆದ್ಯತೆಯ ಪಿಕಪ್*, ತಡೆರಹಿತ ಖರ್ಚು ಮಾಡುವಿಕೆ ಮತ್ತು ಹೆಚ್ಚಿನದನ್ನು ಆನಂದಿಸಲು ಪ್ರಾರಂಭಿಸಿ.

Uber for Business ಅನ್ನು ಈಗಾಗಲೇ 1,70,000ಕ್ಕೂ ಹೆಚ್ಚು ಸಂಸ್ಥೆಗಳು ಬಳಸುತ್ತಿರುವುದರಿಂದ, ನಿಮ್ಮ ಉದ್ಯೋಗದಾತರು ಕೂಡ ಈಗಾಗಲೇ ಸೇರಿರಬಹುದು.

ಬ್ಯುಸಿನೆಸ್ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ

  • ವಿಶೇಷ ಸವಾರಿ ಆಯ್ಕೆ

    ಬ್ಯುಸಿನೆಸ್‌ ಕಂಫರ್ಟ್ ಒಂದು ವಿಶೇಷವಾದ ಸವಾರಿ ಆಯ್ಕೆಯಾಗಿದ್ದು ಇದನ್ನು ವ್ಯಾಪಾರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದ್ಯತೆಯ ಪಿಕಪ್*, ವರ್ಧಿತ ಬೆಂಬಲ, ಅಗ್ರ -ರೇಟಿಂಗ್‌ ಪಡೆದ ಚಾಲಕರು ಮತ್ತು ಹೆಚ್ಚಿನವುಗಳೊಂದಿಗೆ ಸಮಯವನ್ನು ಉಳಿಸಿ ಮತ್ತು ಉತ್ಪಾದಕೀಯತೆ ಉಳಿಸಿಕೊಳ್ಳಿ.

  • ವೆಚ್ಚಗಳ ಮೇಲಿನ ಸಮಯವನ್ನು ಉಳಿಸಿ

    ಶ್ರಮವಿಲ್ಲದೆ ವೆಚ್ಚದ ವರದಿ ಮಾಡುವಿಕೆಯನ್ನು ಆನಂದಿಸಿ ಮತ್ತು ವೆಚ್ಚ ಪೂರೈಕೆದಾರರಿಗೆ ಸ್ವಯಂಚಾಲಿತ ರಸೀತಿ ಅಪ್‌ಲೋಡ್‌ಗಳೊಂದಿಗೆ ಅಮೂಲ್ಯ ಸಮಯವನ್ನು ಉಳಿಸಿ. ವೆಚ್ಚದ ವರದಿಯನ್ನು ಸಲ್ಲಿಸುವುದು ಎಂದಿಗೂ ಇಷ್ಟು ಸುಲಭವಾಗಿರಲಿಲ್ಲ.

  • ವ್ಯಾಪಾರ ಮತ್ತು ವೈಯಕ್ತಿಕ ಎರಡನ್ನೂ ಪ್ರತ್ಯೇಕವಾಗಿರಿಸಿ

    ನಿಮ್ಮ ಕೆಲಸದ ಪ್ರಯಾಣವನ್ನು ಸಂಯೋಜಿಸಬಹುದು ಆದರೆ ನಿಮ್ಮ ವೆಚ್ಚಗಳು ಹಾಗಾಗಬೇಕಾಗಿಲ್ಲ. ಬ್ಯುಸಿನೆಸ್ ಮತ್ತು ವೈಯಕ್ತಿಕ ಪ್ರೊಫೈಲ್‌ಗಳನ್ನು ಪ್ರತ್ಯೇಕಿಸುವುದರಿಂದ ನಿಮ್ಮ ವೆಚ್ಚಗಳನ್ನು ಸರಿಯಾಗಿ ವಿಭಜಿಸಲಾಗಿದೆ ಮತ್ತು ಸರಿಯಾದ ಪಾವತಿ ವಿಧಾನವನ್ನು ಬಳಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತದೆ.

1/3

ಸೆಟಪ್ ಮಾಡುವುದು ಸುಲಭ

  1. ನಿಮ್ಮ ವೈಯಕ್ತಿಕ Uber ಖಾತೆ ರುಜುವಾತುಗಳನ್ನು ನಮೂದಿಸಲು ಮತ್ತು ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್‌ಗೆ ಕಳುಹಿಸಲಾದ 4-ಅಂಕಿಯ ಕೋಡ್ ಮೂಲಕ ನಿಮ್ಮ ಖಾತೆಯನ್ನು ದೃಢೀಕರಿಸಲು ನಿಮ್ಮನ್ನು ಪ್ರಾಂಪ್ಟ್ ಮಾಡಬಹುದು.

  2. ಒಮ್ಮೆ ಲಾಗ್ ಇನ್ ಮಾಡಿದ ನಂತರ, ನೀವು ಸಂಸ್ಥೆಯ ಖಾತೆಗೆ ಕನೆಕ್ಟ್‌ ಆಗಲು ಅರ್ಹರಾಗಿದ್ದೀರಾ ಎಂದು ನೋಡಲು ನಿಮ್ಮ ಕೆಲಸದ ಇಮೇಲ್ ಅನ್ನು ನಮೂದಿಸಿ.

  3. ನೀವು ಅರ್ಹರಾಗಿದ್ದರೆ, ನಿಮ್ಮ ಖಾತೆಯನ್ನು ಪರಿಶೀಲಿಸಲು ಮತ್ತು ಸಕ್ರಿಯಗೊಳಿಸಲು ನೀವು ಇಮೇಲ್ ಸ್ವೀಕರಿಸುತ್ತೀರಿ. ನಿಮ್ಮ ಮೊಬೈಲ್ ಸಾಧನದಲ್ಲಿ ಇಮೇಲ್ ತೆರೆಯಿರಿ ಮತ್ತು ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ ಮೇಲೆ ಟ್ಯಾಪ್ ಮಾಡಿ.

  4. ಈಗಲೇ ಸೇರಿ ಟ್ಯಾಪ್‌ ಮಾಡಿ.

  5. ನೀವು ಸಂಪೂರ್ಣ ಸಿದ್ಧರಾಗಿದ್ದೀರಿ! ಮುಂದಿನ ಬಾರಿ, ಕೆಲಸಕ್ಕಾಗಿ Uber ಅನ್ನು ಬಳಸುವಾಗ ನಿಮ್ಮ ಬ್ಯುಸಿನೆಸ್ ಪ್ರೊಫೈಲ್‌ಗೆ ಟಾಗಲ್ ಮಾಡಿ.

ನಿಮ್ಮ ಬ್ಯುಸಿನೆಸ್ ಪ್ರಯಾಣದಿಂದ ಗರಿಷ್ಠ ಪ್ರಯೋಜನ ಪಡೆಯಿರಿ

  • ಮುಂಚಿತವಾಗಿ ಯೋಜಿಸಿ

    ನಿಮ್ಮ ಮುಂಬರುವ ಟ್ರಿಪ್‌ಗೆ ನೀವು ಸವಾರಿಯನ್ನು Uber ರಿಸರ್ವ್‌ನೊಂದಿಗೆ ನಿಗದಿಪಡಿಸಬಹುದು, ಅದು ಕ್ಲಪ್ತ ಸಮಯಕ್ಕೆ ಪಿಕಪ್‌ ಮತ್ತು ಒತ್ತಡ-ಮುಕ್ತ ಸವಾರಿಯನ್ನು ಖಾತರಿಪಡಿಸಲು ತಂತ್ರಜ್ಞಾನವನ್ನು ಬಳಸುತ್ತದೆ.

  • ವಿಶೇಷ ಅನುಕೂಲಗಳು ಮತ್ತು ನೀತಿಯನ್ನು ವೀಕ್ಷಿಸಿ

    Uber ಆ್ಯಪ್‌ನೊಳಗಿನ ವ್ಯಾಪಾರ ಕೇಂದ್ರವು ನಿಮ್ಮ ಕಂಪನಿಯು ಒದಗಿಸಿದ ಪ್ರಯಾಣ ಪ್ರಯೋಜನಗಳು ಮತ್ತು ಕೆಲಸದ ಸೌಲಭ್ಯಗಳನ್ನು ಸುಲಭವಾಗಿ ಆ್ಯಕ್ಸೆಸ್‌ ಮಾಡಲು ನಿಮಗೆ ಅನುಮತಿಸುತ್ತದೆ.

  • ಪ್ರತಿ ಸಂದರ್ಭಕ್ಕೂ ಸವಾರಿ

    ಕೆಲಸವು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಸವಾರಿ ಆಯ್ಕೆಗಳ ವ್ಯಾಪಕ ಶ್ರೇಣಿ. ನಿಮಗೆ ವಿಮಾನ ನಿಲ್ದಾಣದಿಂದ ಸವಾರಿ ಬೇಕಾಗಿರಲಿ, ಪಟ್ಟಣದ ವಿವಿಧೆಡೆ ತಂಡದ ಭೋಜನವಿರಲಿ ಅಥವಾ ಕ್ಲೈಂಟ್ ಸಭೆಗೆ ಸ್ಟೈಲ್‌ ಆಗಿ ಪ್ರಯಾಣಿಸಲು ನೀವು ಬಯಸುತ್ತಿರಲಿ, ಪ್ರತಿ ಸಂದರ್ಭಕ್ಕೂ ಸವಾರಿ ಇರುತ್ತದೆ.

1/3

ಆಗಾಗ ಕೇಳಲಾಗುವ ಪ್ರಶ್ನೆಗಳು

  • ನಿಮ್ಮ Uber for Business ಖಾತೆಯನ್ನು ಸಕ್ರಿಯಗೊಳಿಸಲು ನೀವು ಇಮೇಲ್ ಸ್ವೀಕರಿಸದಿದ್ದಲ್ಲಿ, ನಿಮ್ಮ ಕೆಲಸದ ಇಮೇಲ್ ವಿಳಾಸಕ್ಕೆ ಮ್ಯಾಚ್‌ ಆಗುವ Uber for Business ಖಾತೆಯನ್ನು ಹುಡುಕಲು ನಮಗೆ ಸಾಧ್ಯವಾಗಲಿಲ್ಲ ಎಂದು ತಿಳಿಯಬಹುದು. ಕೆಲಸ ಸಂಬಂಧಿತ ಸವಾರಿಗಳು ಮತ್ತು ಊಟವನ್ನು ವೈಯಕ್ತಿಕ ಸವಾರಿಗಳಿಂದ ಪ್ರತ್ಯೇಕಿಸಲು ಮತ್ತು ಸುಲಭ ಖರ್ಚು ಮಾಡುವಿಕೆಯನ್ನು ಆನಂದಿಸಲು ನೀವು ಬ್ಯುಸಿನೆಸ್ ಪ್ರೊಫೈಲ್ ಅನ್ನು ಸೆಟಪ್ ಮಾಡಬಹುದು.

    1. ನಿಮ್ಮ ಬ್ಯುಸಿನೆಸ್ ಖಾತೆಗೆ ಪಾವತಿ ವಿಧಾನವನ್ನುಆಯ್ಕೆಮಾಡಿ
    2. ನೀವು ಎಷ್ಟು ಬಾರಿ ಪ್ರಯಾಣ ವರದಿಗಳನ್ನು ಸ್ವೀಕರಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ
    3. ಸರಳೀಕೃತ ವರದಿ ಮಾಡುವಿಕೆಗಾಗಿ ಖರ್ಚು ಪೂರೈಕೆದಾರರೊಬ್ಬರನ್ನು ಲಿಂಕ್ ಮಾಡಿ
    4. ಎಲ್ಲವೂ ಸಿದ್ಧ!
  • ನಿಮ್ಮ ಉದ್ಯೋಗಿಗಳಿಗಾಗಿ ಪ್ರಯಾಣವನ್ನು ನಿರ್ವಹಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು Uber for Business ನಿಮಗೆ ಸಹಾಯ ಮಾಡಬಹುದು.

    1. ನಿಮ್ಮ ಆ್ಯಪ್ ಮೆನುವಿನಿಂದಪಾವತಿ ಆಯ್ಕೆಮಾಡಿ ಮತ್ತು ಸವಾರಿ ಪ್ರೊಫೈಲ್‌ಗಳು ಇಲ್ಲಿಗೆ ಕೆಳಗೆ ಸ್ಕ್ರಾಲ್ ಮಾಡಿ.
    2. ನಿಮ್ಮ ಆದ್ಯತೆಗಳಿಗೆ ಕರೆದೊಯ್ಯಲು ಬ್ಯುಸಿನೆಸ್ ಪ್ರೊಫೈಲ್‌ಗಳು ಇದರ ಮೇಲೆ ಟ್ಯಾಪ್ ಮಾಡಿ.
    3. ಸಾಪ್ತಾಹಿಕ ಅಥವಾ ಮಾಸಿಕ ಪ್ರಯಾಣ ವರದಿಗಳನ್ನು ಆನ್ ಮಾಡಲು ಪ್ರಯಾಣ ವರದಿ ಮೇಲೆ ಟ್ಯಾಪ್ ಮಾಡಿ.
    1. ನಿಮ್ಮ ಆ್ಯಪ್‌ನಲ್ಲಿ ಕೆಳಗಿನ ನ್ಯಾವಿಗೇಷನ್‌ನಿಂದ ‌ಖಾತೆ ಆಯ್ಕೆಮಾಡಿ ಮತ್ತುವಾಲೆಟ್ಆಯ್ಕೆಮಾಡಿ.
    2. ಸವಾರಿಗಳ ಪ್ರೊಫೈಲ್‌ಗಳಅಡಿಯಲ್ಲಿ ನಿಮ್ಮ ಸೆಟ್ಟಿಂಗ್‌ಗಳಿಗೆ ಹೋಗುವ ಸಲುವಾಗಿ ನಿಮ್ಮ ಬ್ಯುಸಿನೆಸ್ ಪ್ರೊಫೈಲ್‌ಗಳನ್ನು ಆಯ್ಕೆಮಾಡಿ.
    3. ನಿಮ್ಮ ಪಾವತಿ ವಿಧಾನವನ್ನು ಅಪ್‌ಡೇಟ್ ಮಾಡಲುಡೀಫಾಲ್ಟ್ ಪಾವತಿ ಮೇಲೆ ಟ್ಯಾಪ್ ಮಾಡಿ, ಸಾಪ್ತಾಹಿಕ ಅಥವಾ ಮಾಸಿಕ ಪ್ರಯಾಣ ವರದಿಗಳನ್ನು ಆನ್‌ ಮಾಡಲು ಪ್ರಯಾಣ ವರದಿಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಖರ್ಚು ಪೂರೈಕೆದಾರರನ್ನು ಅಪ್‌ಡೇಟ್‌ ಮಾಡಲು ಖರ್ಚು ಪೂರೈಕೆದಾರರ ಮೇಲೆ ಟ್ಯಾಪ್ ಮಾಡಿ.
  • ನಾವು Coupa, Certify, Chrome River, Concur, Expensify ಮತ್ತು ಹೆಚ್ಚಿನವುಗಳೊಂದಿಗೆ ಕೆಲಸ ಮಾಡುತ್ತೇವೆ. ಎಲ್ಲಾ ಖರ್ಚು ಪೂರೈಕೆದಾರರನ್ನು ಇಲ್ಲಿ ನೋಡಿ.

  • ವಿಶ್ವಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು 700ಕ್ಕೂ ಅಧಿಕ ವಿಮಾನ ನಿಲ್ದಾಣಗಳಲ್ಲಿ Uber ಲಭ್ಯವಿದೆ.

ನಿಮ್ಮ ಸಂಪೂರ್ಣ ತಂಡ ಅಥವಾ ಕಂಪನಿಯನ್ನು ಸೈನ್ ಅಪ್ ಮಾಡಲು ಬಯಸುವಿರಾ?

*ವೇಗದ ಪಿಕಪ್ ಅನ್ನು ಖಾತರಿಪಡಿಸಲಾಗುವುದಿಲ್ಲ. ಸ್ಥಳ ಮತ್ತು ಸಾಧನಕ್ಕೆ ಅನುಗುಣವಾಗಿ ಲಭ್ಯತೆ ಬದಲಾಗಬಹುದು. ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಆದ್ಯತೆಯ ಪಿಕಪ್ ಲಭ್ಯವಿಲ್ಲ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو