ಸವಾರಿ ಮತ್ತು ಊಟದ ವೋಚರ್‌ಗಳೊಂದಿಗೆ ಯಾವುದೇ ಅನುಭವವನ್ನು ಉನ್ನತೀಕರಿಸಿ
ವೋಚರ್‌ಗಳೊಂದಿಗೆ ನಿಮ್ಮ ವ್ಯವಹಾರ ಎದ್ದುಗಾಣುವಂತೆ ಮಾಡಿ
Uber ಮೂಲಕ ಸವಾರಿಗಳಿಗೆ ಮತ್ತು Uber Eats ಮೂಲಕ ಆರ್ಡರ್‌ಗಳಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ಪಾವತಿಸಲು ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಒಂದು ಪರಿಹಾರವೇ ವೋಚರ್‌ಗಳಾಗಿವೆ. Uber for Business ಡ್ಯಾಶ್‌ಬೋರ್ಡ್‌ನಿಂದಲೇ ವೋಚರ್‌ಗಳ ಪ್ರಚಾರಗಳನ್ನು ಸುಲಭವಾಗಿ ರಚಿಸಬಹುದು ಮತ್ತು ನಿರ್ವಹಿಸಬಹುದು.
ಈವೆಂಟ್‌ಗಳನ್ನು ಸ್ಮರಣೀಯವಾಗಿಸಿ
ರಜಾದಿನದ ಪಾರ್ಟಿಗಳು, ಗ್ರಾಹಕರ ಸಭೆಗಳು ಮತ್ತು ಹೆಚ್ಚಿ ನವುಗಳಿಗಾಗಿ ಊಟ ಅಥವಾ ಸವಾರಿಗಳನ್ನು ಒದಗಿಸುವ ಮೂಲಕ ಈವೆಂಟ್‌ಗಳಿಗೆ ವರ್ಚುವಲ್ ಅಥವಾ ಖುದ್ದು ಹಾಜರಾತಿಯನ್ನು ಪ್ರೋತ್ಸಾಹಿಸಿ.
ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿ
ಮಾಸಿಕ ಸವಾರಿ ಮತ್ತು ಊಟದ ಕ್ರೆಡಿಟ್‌ಗಳನ್ನು ನೀಡುವ ಮೂಲಕ ನಿಮ್ಮ ಕಾಳಜಿಯನ್ನು ತೋರಿಸಿ ಅಥವಾ ಸಂದರ್ಶನಗಳಿಗೆ ಹಾಜರಾಗುವವರಿಗೆ ಸಬ್ಸಿಡಿಯುಕ್ತ ಸವಾರಿ ಒದಗಿಸುವ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿರಿ.
ಗ್ರಾಹಕರ ಸಂತೃಪ್ತಿಯನ್ನು ಸುಧಾರಿಸಿ
ಸಬ್ಸಿಡಿಯುಕ್ತ ಸವಾರಿಗಳನ್ನು ಒದಗಿಸುವ ಮೂಲಕ ಗ್ರಾಹಕರು ಮರಳಿ ಬರುವಂತೆ ಮಾಡಿ, ಗ್ರಾಹಕರಿಗೆ ಪ್ರೋತ್ಸಾಹಕಗಳನ್ನು ಒದಗಿಸುವ ಮೂಲಕ ಬೇಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡಿ ಮತ್ತು ಇನ್ನಷ್ಟು ಮಾಡಿ.
ಪ್ರಾರಂಭಿಸುವುದು ಸುಲಭ
ಹಂತ 1: ಸಕ್ರಿಯಗೊಳಿಸಿ
ವೋಚರ್‌ಗಳ ಪ್ರಚಾರಗಳನ್ನು ನಿಮ್ಮ Uber for Business ಡ್ಯಾಶ್‌ಬೋರ್ಡ್ ನಲ್ಲಿ ಸಕ್ರಿಯಗೊಳಿಸಿ ಮತ್ತು ಅಡ್ಮಿನ್ ಆ್ಯಕ್ಸೆಸ್ ಹೊಂದಲು ಜನರನ್ನು ನಿಯೋಜಿಸಿ.
ಹಂತ 2: ರಚಿಸಿ
ಡಾಲರ್ ಮೊತ್ತಗಳು, ಸ್ಥಳಗಳು ಮತ್ತು ದಿನಾಂಕ ಹಾಗೂ ಸಮಯದ ಅವಧಿಯನ್ನು ಒಳಗೊಂಡಂತೆ ನಿಮ್ಮ ಆಯ್ಕೆಯ ಪ್ಯಾರಾಮೀಟರ್‌ಗಳೊಂದಿಗೆ ಏಕ ಅಥವಾ ಬಲ್ಕ್ ವೋಚರ್‌ಗಳನ್ನು ಕಸ್ಟಮೈಸ್ ಮಾಡಿ.
ಹಂತ 3: ವಿತರಿಸಿ
ಇಮೇಲ್, ಪಠ್ಯ ಸಂದೇಶ, URL ಅಥವಾ ನೇರವಾಗಿ Uber ಆ್ಯಪ್‌ನಲ್ಲಿ ವೋಚರ್‌ಗಳನ್ನು ಕಳುಹಿಸಿ. ಅಗತ್ಯವಿದ್ದರೆ, ತಮ್ಮ ವೋಚರ್‌ಗಳನ್ನು ರಿಡೀಮ್ ಮಾಡಲು ಅತಿಥಿಗಳಿಗೆ ರಿಮೈಂಡರ್‌ಗಳನ್ನು ಕಳುಹಿಸಿ.
ಹಂತ 4: ರಿಡೀಮ್ ಮಾಡಿ
ಗ್ರಾಹಕರು ಅಥವಾ ಉದ್ಯೋಗಿಗಳು ತಮ್ಮ ವೈಯಕ್ತಿಕ Uber ಪ್ರೊಫೈಲ್‌ಗೆ ವೋಚರ್‌ಗಳನ್ನು ಸೇರಿಸಬಹುದು. ಚೆಕ್‌ಔಟ್‌ನಲ್ಲಿ ವೋಚರ್‌ಗಳನ್ನು ಅನ್ವಯಿಸಲಾಗುತ್ತದೆ.
ಒಂದೇ ಸ್ಥಳದಿಂದ ವೋಚರ್‌ಗಳನ್ನು ನಿರ್ವಹಿಸಿ
ನಮ್ಮ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಬಳಸಲು ಸುಲಭವಾದ ವೈಶಿಷ್ಟ್ಯಗಳನ್ನು ಹೊಂದಿದೆ. ಅದು ವೋಚರ್‌ಗಳನ್ನು ಹೊಂದ ಿಸುವುದು ಮತ್ತು ವಿತರಿಸುವುದನ್ನು ಹಿಂದೆಂದಿಗಿಂತಲೂ ಸುಲಭಗೊಳಿಸುತ್ತದೆ. ಜನರು ನಂತರ ನಿಮಗೆ ಧನ್ಯವಾದ ಸಲ್ಲಿಸುತ್ತಾರೆ.
ವೋಚರ್‌ಗಳನ್ನು ತಡೆರಹಿತವಾಗಿ ಕಳುಹಿಸಿ
ಡ್ಯಾಶ್‌ಬೋರ್ಡ್‌ನಿಂದ ನೇರವಾಗಿ ನಿಮ್ಮ ಉದ್ಯೋಗಿಗಳಿಗೆ ಸವಾರಿ ಅಥವಾ ಊಟದ ವೋಚರ್‌ಗಳನ್ನು ನೀಡಿ ಮತ್ತು ನಿಮ್ಮ ಸಮಯ ಮತ್ತು ಹಣವನ್ನು ಉಳಿಸಿ.
ನಿಮ್ಮ ಸಂವಹನಗಳನ್ನು ನಿಗದಿಪಡಿಸಿ
ನಿಮ್ಮ ವೋಚರ್‌ಗಳನ್ನು ಕಳುಹಿಸಲು ದಿನಾಂಕವನ್ನು ಮೊದಲೇ ನಿಗದಿಪಡಿಸುವ ಮೂಲಕ ನಿಮ್ಮ ಪ್ರಚಾರಗಳನ್ನು ಮುಂಚಿತವಾಗಿ ಸಿದ್ಧಗೊಳಿಸಿ.
ಬಹು ಪಾವತಿ ವಿಧಾನಗಳನ್ನು ಬಳಸಿ
ಸುಲಭವಾಗಿ ವರದಿ ಮಾಡಲು ಮತ್ತು ಖರ್ಚು ಮಾಡಲು ನಿಮ್ಮ ಆಯ್ಕೆಯ ಕಾರ್ಪೊರೇಟ್ ಕಾರ್ಡ್‌ಗಳಿಗೆ ವೋಚರ್‌ಗಳ ವೆಚ್ಚವನ್ನು ವಿಧಿಸಿ.
ಈವೆಂಟ್ ಹಾಜರಾತಿಯನ್ನು ಹೆಚ್ಚಿಸಿ
ಆಹ ಾರ ಮತ್ತು ಸವಾರಿಗಳಿಗಾಗಿ ವೋಚರ್‌ಗಳನ್ನು ನೀಡುವ ಮೂಲಕ ವರ್ಚುವಲ್ ಮತ್ತು ಭೌತಿಕ ಈವೆಂಟ್‌ಗಳಿಗೆ ಪ್ರೋತ್ಸಾಹಕಗಳನ್ನು ಒದಗಿಸಿ.
ನಿಮಗೆ ಸರಿಹೊಂದುವಂತೆ ಕಸ್ಟಮೈಸ್ ಮಾಡಿ
ಇನ್ನೂ ಹೆಚ್ಚು ಸೂಕ್ತವಾದ, ಉನ್ನತೀಕರಿಸಿದ ಮತ್ತು ಪರಿಣಾಮಕಾರಿ ಕ್ರಮವಾಗಿ ನಿಮ್ಮ ಸಂಸ್ಥೆಯ ಲೋಗೋ ಬಳಸಿಕೊಂಡು ವೋಚರ್‌ಗಳನ್ನು ಕಳುಹಿಸಿ.
ಸ್ವೀಕೃತದಾರರನ್ನು ಸುಲಭವಾಗಿ ತೆಗೆದುಹಾಕಿ
ನಿಮ್ಮ ಪಾ ಲ್ಗೊಳ್ಳುವವರ ಪಟ್ಟಿಯು ಬದಲಾಗಿದ್ದರೆ, ಇತರರ ಸಂತೋಷವನ್ನು ಬಾಧಿಸದ ರೀತಿಯಲ್ಲಿ ವೈಯಕ್ತಿಕ ಸ್ವೀಕೃತದಾರರನ್ನು ಪ್ರಚಾರದಿಂದ ತೆಗೆದುಹಾಕಿ.
ವೋಚರ್‌ಗಳು ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ
ಕಸ್ಟಮೈಸ್ ಮಾಡುವುದು ಸುಲಭ
ವೋಚರ್‌ಗಳನ್ನು ಹೇಗೆ ರಿಡೀಮ್ ಮಾಡಲಾಗುತ್ತದೆ ಎಂಬುದನ್ನು ನಿಯಂತ್ರಿಸಲು ದಿನಾಂಕ ಮತ್ತು ಸಮಯದಂತಹ ಪ್ಯಾರಾಮೀಟರ್‌ಗಳನ್ನು ಹೊಂದಿಸಿ. ಜೊತೆಗೆ, ನಿಮ್ಮ ಅತಿಥಿಗಳು ನಿಜವಾಗಿ ಬಳಸುವ ಸವಾರಿಗಳು ಮತ್ತು ಊಟಗಳಿಗೆ ಮಾತ್ರ ನೀವು ಪಾವತಿಸುವುದರಿಂದ, ನೀವು ಎಂದಿಗೂ ಹೆಚ್ಚು ಪಾವತಿಸುವುದಿಲ್ಲ
ಹೊಂದಿಕೊಳ ್ಳುವುದು ಸುಲಭ
ಉದ್ಯೋಗಿಗಳು WFH ಮಾಡುತ್ತಿರಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಇರಲಿ, ಬಳಕೆದಾರರು ಎಲ್ಲಿದ್ದರೂ ವೋಚರ್‌ಗಳು ಅವರನ್ನು ತಲುಪುತ್ತವೆ. ಮೌಲ್ಯದ ಪ್ರಕಾರವನ್ನು ನೀವು ನಮೂದಿಸಿದರೆ ಸಾಕು, ಕರೆನ್ಸಿಯನ್ನು ಪರಿವರ್ತಿಸುವ ಕೆಲಸವನ್ನು Uber ಗೆ ಬಿಟ್ಟುಬಿಡಿ.
ಕಳುಹಿಸುವುದು ಸುಲಭ
ತಕ್ಷಣವೇ ವೋಚರ್‌ಗಳನ್ನು ರಚಿಸಿ ಮತ್ತು ಇಮೇಲ್, ಪಠ್ಯ ಸಂದೇಶ ಹಾಗೂ ಇತರ ವಿಧಾನಗಳ ಮೂಲಕ ಕಳುಹಿಸಿ. Uber for Business ಡ್ಯಾಶ್‌ಬೋರ್ಡ್‌ನಿಂದ ವೋಚರ್‌ಗಳ ರಿಡೆಂಪ್ಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ.
Samsung reported an increase in Galaxy mobile device sales by 20% after giving customers $100 worth of Uber Eats credit.
ನಿಮ್ಮ ವ್ಯಾಪಾರವನ್ನು ಉನ್ನತೀಕರಿಸಲು ಪ್ರಾರಂಭಿಸಿ
ವೋಚರ್‌ಗಳಿಗಾಗಿ ಅತ್ಯಂತ ಜನಪ್ರಿಯ ಸಂಪನ್ಮೂಲಗಳು
ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದು
ಉದ್ಯೋಗಿಗಳ ಮನೋಬಲವನ್ನು ಊಟದ ವೋಚರ್‌ಗಳು ಹೇಗೆ ಹೆಚ್ಚಿಸುತ್ತವೆ ಮತ್ತು ಮೆಚ್ಚುಗೆಯ ಭಾವನೆಯನ್ನು ತಂಡಗಳಲ್ಲಿ ಹೇಗೆ ಮೂಡಿಸುತ್ತವೆ ಎಂಬುದನ್ನು ನೋಡಿ.
ವರ್ಚುವಲ್ ಈವೆಂಟ್‌ನಲ್ಲಿ ಪಾಲ್ಗೊಳ್ಳುವವರನ್ನು ಆಕರ್ಷಿಸುವುದು
ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ, ವರ್ಚುವಲ್ ಈವೆಂಟ್‌ನಲ್ಲಿ ಪಾಲ್ಗೊಳ್ಳುವವರನ್ನು ಆಕರ್ಷಿಸಲು ವೋಚರ್‌ಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಅನ್ವೇಷಿಸಿ.
ಅಗ್ರ ಕಂಪನಿಗಳಲ್ಲಿ Uber Eats ಕ್ರೆಡಿಟ್ ನೀಡುವುದು
ಗ್ರಾಹಕರು ಮತ್ತು ಉದ್ಯೋಗಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಕೋಕಾ-ಕೋಲಾದಂತಹ ಕಂಪನಿಗಳು Uber Eats ಕ್ರೆಡಿಟ್ ಹೇಗೆ ನೀಡುತ್ತವ ೆ ಎಂಬುದನ್ನು ನೋಡಿ.
ಆಗಾಗ ಕೇಳಲಾಗುವ ಪ್ರಶ್ನೆಗಳು
- ವೋಚರ್‌ಗಳು ಮತ್ತು ಗಿಫ್ಟ್ ಕಾರ್ಡ್ಗಳ ನಡುವಿನ ವ್ಯತ್ಯಾಸವೇನು?
ವೋಚರ್‌ಗಳೊಂದಿಗೆ, ನಿಮ್ಮ ತಂಡ ಅಥವಾ ಕ್ಲೈಂಟ್‌ಗಳಿಗೆ ನೀವು Uber ಕ್ರೆಡಿಟ್ ಅನ್ನು ವಿತರಿಸಬಹುದು ಹಾಗೂ ಅವುಗಳನ್ನು ಹೇಗೆ ಬಳಸಬಹುದು ಎಂಬುದರ ಮೇಲೆ ನೀವು ನಿಯಂತ್ರಣವನ್ನೂ ಸಹ ಹೊಂದಬಹುದು. ಮುಕ್ತಾಯ ದಿನಾಂಕಗಳು, ಸ್ಥಳ ನಿರ್ಬಂಧಗಳು ಮತ್ತು ಇನ್ನಷ್ಟು ಪ್ಯಾರಾಮೀಟರ್‌ಗಳೊಂದಿಗೆ, ನಿರ್ದಿಷ್ಟ ಉದ್ದೇಶಗಳಿಗೆ, ಅಂದರೆ ಒಂದು ನಿರ್ದಿಷ್ಟ ಈವೆಂಟ್‌ನಲ್ಲಿ ಅಥವಾ ಕೆಲಸದ ಅವಧಿಯೊಳಗೆ ಮಾತ್ರ ಸವಾರಿಗಳನ್ನು ಪಡೆಯಲು ಅಥವಾ ಊಟಗಳನ್ನು ಖರೀದಿಸಲು ನೀವು ಆಯ್ಕೆ ಮಾಡಬಹುದು.
ಗಿಫ್ಟ್ ಕಾರ್ಡ್‌ಗಳು ಉದ್ಯೋಗಿಗಳು ಅಥವಾ ಗ್ರಾಹಕರಿಗೆ ಹೆಚ್ಚು ಸ್ವತಂತ್ರ ಅನುಭವವನ್ನು ನೀಡುತ್ತವೆ ಮತ್ತು ಒದಗಿಸಿದ Uber ಕ್ರೆಡಿಟ್‌ನ ಮೊತ್ತವನ್ನು ಅವರು ಬಯಸಿದಂತೆ ಬಳಸಲು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತವೆ. ನೀವು ಗಿಫ್ಟ್ ಕಾರ್ಡ್‌ಗಳನ್ನು ಇಲ್ಲಿ ಖರೀದಿಸಬಹುದು.
- ವೋಚರ್ ಖರೀದಿಗಳಿಗೆ ನಾನು ಹೇಗೆ ಪಾವತಿಸುವುದು?
Down Small ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರು ಸವಾರಿ ಅಥವಾ ಊಟಕ್ಕೆ ಅನ್ವಯಿಸುವ ಮೂಲಕ ವೋಚರ್ ಅನ್ನು ರಿಡೀಮ್ ಮಾಡಿದಾಗ ಮಾತ್ರ ನೀವು ವೋಚರ್ ಖರೀದಿಗಳಿಗೆ ಪಾವತಿಸುತ್ತೀರಿ. ಆ ಸಮಯದಲ್ಲಿ, ಬಳಕೆದಾರರು ಖರ್ಚು ಮಾಡಿದ ಮೊತ್ತಕ್ಕೆ ನಿಮಗೆ ಬಿಲ್ ವಿಧಿಸಲಾಗುತ್ತದೆ. ಉದಾಹರಣೆಗೆ, ನೀವು $100 ಒಟ್ಟು ಮೌಲ್ಯದ ವೋಚರ್‌ಗಳನ್ನು ವಿತರಿಸಿದ್ದರೆ ಹಾಗೂ ಅದರಲ್ಲಿ $50 ಮಾತ್ರ ಬಳಸಲಾಗಿದ್ದರೆ, ನೀವು $50 ಪಾವತಿಸುತ್ತೀರಿ.
ಮತ್ತೊಂದೆಡೆ ಗಿಫ್ಟ್ ಕಾರ್ಡ್‌ಗಳಾಗಿದ್ದರೆ ನೀವು ಸಂಪೂರ್ಣ ಕ್ರೆಡಿಟ್ ಮೊತ್ತವನ್ನು ಮುಂಗಡವಾಗಿ ಪಾವತಿಸುತ್ತೀರಿ.
- ವ್ಯವಹಾರ ಸಂಸ್ಥೆಗಳು ಸಾಮಾನ್ಯವಾಗಿ ವೋಚರ್‌ಗಳು ಮತ್ತು ಉಡುಗೊರೆ ಕಾರ್ಡ್‌ಗಳನ್ನು ಹೇಗೆ ಬಳಸುತ್ತವೆ?
Down Small ಕಂಪೆನಿಗಳು ತಮ್ಮ ಉದ್ಯೋಗಿಗಳ ಮನೋಬಲ ಹೆಚ್ಚಿಸಲು ವೋಚರ್‌ಗಳನ್ನು ಬಳಸುತ್ತವೆ. ಕಂಪೆನಿಗಳಿಗೆ ವರ್ಚುವಲ್ ಅಥವಾ ಭೌತಿಕ ಈವೆಂಟ್‌ನ ಪಾಲ್ಗೊಳ್ಳುವವರಿಗೆ ಊಟವನ್ನು ಖರೀದಿಸಲು ವೋಚರ್‌ಗಳು ಉತ್ತಮ ಮಾರ್ಗವಾಗಿವೆ, ಜೊತೆಗೆ ವ್ಯವಹಾರ ಸಂಬಂಧಿತ ಸಬ್ಸಿಡಿಯುಕ್ತ ಸವಾರಿಗಳಿಗೆ ಅವು ಅ ನುಕೂಲ ಕಲ್ಪಿಸುತ್ತವೆ ಅಥವಾ ರಿವಾರ್ಡ್ಸ್ ಪ್ರೋಗ್ರಾಂ ಭಾಗವಾಗಿ ಗ್ರಾಹಕರಿಗೆ ನೀಡುವ ಒಂದು ಪ್ರೋತ್ಸಾಹಕವೂ ಆಗುತ್ತವೆ.
ಗಿಫ್ಟ್ ಕಾರ್ಡ್‌ಗಳನ್ನು ಕಂಪನಿಗಳು ಉದ್ಯೋಗಿಗಳಿಗೆ ವರ್ಷಾಂತ್ಯದ ಅಥವಾ ರಜಾದಿನದ ಉಡುಗೊರೆಗಳಾಗಿ, ಕಾರ್ಪೊರೇಟ್ ಉಡುಗೊರೆಗಳಾಗಿ ಅಥವಾ ಗ್ರಾಹಕರಿಗೆ ಧನ್ಯವಾದ ತಿಳಿಸಲು, ಬಹುಮಾನ ಅಥವಾ ಕೊಡುಗೆಯಾಗಿ ನೀಡಲು ಖರೀದಿಸುತ್ತವೆ.
- ನಾನು ವಿವಿಧ ದೇಶಗಳಲ್ಲಿ ಬಳಕೆದಾರರನ್ನು ಹೊಂದಿದ್ದರೆ ವೋಚರ್‌ಗಳ ಪ್ರೋಗ್ರಾಂ ಅನ್ನು ಹೇಗೆ ಹೊಂದಿಸುವುದು?
Down Small ವೋ ಚರ್ ಮೊತ್ತವನ್ನು ಸಂಸ್ಥೆಯ ಕರೆನ್ಸಿಯಲ್ಲಿ ಕಂಪನಿಗೆ ವಿಧಿಸಲಾಗುತ್ತದೆ, ಟ್ರಿಪ್ ಅಥವಾ ಆರ್ಡರ್‌ಗಾಗಿ ವಿಧಿಸಲಾಗುವುದಿಲ್ಲ. ವೋಚರ್ ರಚನೆ ಪ್ರಕ್ರಿಯೆಯ ಭಾಗವಾಗಿ ನೀವು ಕರೆನ್ಸಿಯನ್ನು ಬದಲಾಯಿಸಬಹುದು. ಇದರರ್ಥ ವೋಚರ್ ಮೌಲ್ಯವನ್ನು ನಿರ್ದಿಷ್ಟ ಕರೆನ್ಸಿಗೆ ಹೊಂದಿಸಲಾಗುವುದು, ಆದರೆ ಬಳಕೆದಾರರು ಅದನ್ನು ಯಾವಾಗಲೂ ತಮ್ಮ ದೇಶದ ಕರೆನ್ಸಿಯಲ್ಲಿ ನೋಡುತ್ತಾರೆ (ಅಥವಾ ಅವರು ಟ್ರಿಪ್ ಅಥವಾ ಊಟವನ್ನು ಆರ್ಡರ್ ಮಾಡುವ ಸ್ಥಳದ ಕರೆನ್ಸಿ).
- ನಾನು ವೋಚರ್‌ಗಳನ್ನು ಹೇಗೆ ಕಳುಹಿಸುವುದು?
Down Small ನೀವು ಆಯ್ಕೆ ಮಾಡಿದ ಪ್ಯಾರಾಮೀಟರ್‌ಗಳೊಂದಿಗೆ ಸಿಂಗಲ್ ಅಥವಾ ಬಲ್ಕ್ ವೋಚರ್‌ಗಳನ್ನು ಕಸ್ಟಮೈಸ್ ಮಾಡಿ ಮತ್ತು ರಚಿಸಿದ ನಂತರ, ನಿಮ್ಮ ವೋಚರ್‌ಗಳನ್ನು ಇಮೇಲ್, ಪಠ್ಯ ಸಂದೇಶ ಅಥವಾ URL ಮೂಲಕ ಅಥವಾ Uber ಆ್ಯಪ್‌ಗೆ ಸೇರಿಸುವ ಮೂಲಕ ನೀವು ವಿತರಿಸಬಹುದು. ಅಗತ್ಯವಿದ್ದರೆ, ನೀವು ಸ್ವೀಕೃತದಾರರಿಗೆ ರಿಡೀಮ್ ರಿಮೈಂಡರ್‌ಗಳನ್ನು ಸಹ ಕಳುಹಿಸಬಹುದು.
- ಜನರು ವೋಚರ್‌ಗಳನ್ನು ಹೇಗೆ ಕ್ಲೈಮ್ ಮಾಡುತ್ತಾರೆ ಅಥವಾ ಬಳಸುತ್ತಾರೆ?
Down Small ಉದ್ಯೋಗಿಗಳು ಅಥವಾ ಗ್ರಾಹಕರು ತಮ್ಮ ವೋಚರ್ ಅನ್ನು ಇಮೇಲ್, ಪಠ್ಯ ಸಂದೇಶ ಅ ಥವಾ URL ಮೂಲಕ ಅಥವಾ Uber ಆ್ಯಪ್‌ಗೆ ಅದನ್ನು ಸೇರಿಸುವ ಮೂಲಕ ಸ್ವೀಕರಿಸುತ್ತಾರೆ. ಸಂಸ್ಥೆಯು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಅವರು ತಮ್ಮ ವೈಯಕ್ತಿಕ Uber ಪ್ರೊಫೈಲ್‌ಗೆ ವೋಚರ್ ಅನ್ನು ಸೇರಿಸಬಹುದು. ಚೆಕ್‌ಔಟ್‌ನಲ್ಲಿ ವೋಚರ್ ಅನ್ನು ಅನ್ವಯಿಸಲಾಗುತ್ತದೆ.
- ನಾನು ಅಸ್ತಿತ್ವದಲ್ಲಿರುವ ಗ್ರಾಹಕನಾಗಿದ್ದರೆ ಸಹಾಯವನ್ನು ಹೇಗೆ ಪಡೆಯಬಹುದು?
Down Small ನಮ್ಮ ಸಹಾಯ ಕೇಂದ್ರ ಅನ್ನು ಪರಿಶೀಲಿಸಿ ಅಥವಾ ಬೆಂಬಲವನ್ನು business-support@uber.com ನಲ್ಲಿ ಸಂಪರ್ಕಿಸಿ.
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರ ಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ