ಮಾರಾಟ ತಂಡದ ಸದಸ್ಯರ ಸೈನ್ ಅಪ್ ಅಥವಾ ಫಾಲೋ ಅಪ್ ಅನ್ನು ಸ್ವೀಕರಿಸಲು ನಿಮಗೆ ತೊಂದರೆಯಾಗಬಹುದು. ನಿಮ್ಮ ದೇಶದಲ್ಲಿ ಸವಾರಿಗಾಗಿ ವೋಚರ್ಗಳು ಲಭ್ಯವಿವೆ ಎನ್ನುವುದು ನಿಮ್ಮ ಗಮನದಲ್ಲಿರಲಿ.
ವೋಚರ್ಗಳೊಂದಿಗೆ Uber ಕ್ರೆಡಿಟ್ನ ಉಡುಗೊರೆಯನ್ನು ನೀಡಿ
ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರಿಗೆ ಅವರ ಸವಾರಿ ಮತ್ತು ಊಟದ ವೆಚ್ಚವನ್ನು ಭರಿಸಲು ವೋಚರ್ ಕಳುಹಿಸಿ. ಹೆಚ್ಚು ತಿಳಿಯಲು ನಮ್ಮ ವೀಡಿಯೊ ವೀಕ್ಷಿಸಿ.
ವೋಚರ್ಗಳೊಂದಿಗೆ ಯಾವುದೇ ಅನುಭವವನ್ನು Elevate ಮಾಡಿ
ಗ್ರಾಹಕರ ಸಂತೃಪ್ತಿಯನ್ನು ಸುಧಾರಿಸಿ
ನೀವು ಆಶ್ಚರ್ಯಪಡಿಸಲು ಮತ್ತು ಆನಂದ ನೀಡಲು ಅಥವಾ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಮಾಡಲು ಬಯಸುತ್ತೀರಾ, ಈ ನಿಟ್ಟಿನಲ್ಲಿ ಗ್ರಾಹಕರ ನಿಷ್ಠೆಯನ್ನು ಹೆಚ್ಚಿಸಲು ವೋಚರ್ಗಳು ನಿಮಗೆ ಸಹಾಯ ಮಾಡುತ್ತವೆ.
ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿ
ನೀವು ಅದನ್ನು ಪಾವತಿಸಿದಲ್ಲಿ, ಅವರು ನಿಮ್ಮಲ್ಲಿಗೆ ಬರುತ್ತಾರೆ. ನಿಮ್ಮ ಸ್ಟೋರ್ಗೆ ಬರುವ ಮತ್ತು ಹೋಗುವ ಸವಾರಿಗಳಿಗೆ ಸಬ್ಸಿಡಿ ಸೌಲಭ್ಯವನ್ನು ನೀಡಿ. ವೈಭವೋಪೇತ ಆರಂಭಗಳಿಗೆ ಇದು ಉತ್ತಮ. ಗ್ರಾಹಕರನ್ನು ಮತ್ತೆ ಮತ್ತೆ ಬರುವಂತೆ ಮಾಡುವುದಕ್ಕೂ ಕೂಡ ಅದು ಸಹಾಯಕ.
ಪ್ರಮೋಷನ್ಗಳ ಮೂಲಕ ಬೇಡಿಕೆಯನ್ನು ನಿರ್ಮಿಸಿ
ಪೂರಕ ಸವಾರಿಗಳು ಮತ್ತು ಊಟಗಳ ಕುರಿತು ನಿರ್ಮಿಸಲಾದ ಪ್ರಮೋಷನ್ಗಳೊಂದಿಗೆ ನಿಮ್ಮ ಮಾರ್ಕೆಟಿಂಗ್ ಪ್ರಯತ್ನಗಳಿಗೆ ಶಕ್ತಿ ನೀಡಿ. ಗ್ರಾಹಕರನ್ನು ಪಡೆದುಕೊಳ್ಳುವುದಕ್ಕೆ ಇದು ಅದ್ಭುತವಾಗಿರುತ್ತದೆ.
ಮಾರಾಟದ ನಿರೀಕ್ಷೆಗಾಗಿ ಊಟವನ್ನು ಖರೀದಿಸಿ
ನಿಮ್ಮಲ್ಲಿನ ಟಾಪ್ ಮಾರಾಟಗಾರರಿಗೆ ಊಟದ ವೆಚ್ಚವನ್ನು ಭರಿಸಲು ವೋಚರ್ಗಳನ್ನು ಕಳುಹಿಸುವ ಆಫರ್ ನೀಡಿ. ಸಂಭಾಷಣೆಯನ್ನು ಪ್ರಾರಂಭಿಸಲು ಆಹಾರ ಯಾವಾಗಲೂ ಸಹಾಯ ಮಾಡುತ್ತದೆ.
ವಿಶಿಷ್ಟವಾದ ಉದ್ಯೋಗಿ ವಿಶೇಷ ಅನುಕೂಲವನ್ನು ಒದಗಿಸಿ
ಕೆಲಸದ ಈವೆಂಟ್ಗೆ ಸವಾರಿ ಆಗಿರಲಿ ಅಥವಾ ಊಟಕ್ಕೆ ಮಾಸಿಕ ಸ್ಟೈಪೆಂಡ್ ಆಗಿರಲಿ, ವೋಚರ್ಗಳು ನಿಮ್ಮ ಜನರನ್ನು ಸಂತೋಷದಿಂದ ಮತ್ತು ಪ್ರೇರಣಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.
ನಿಮ್ಮ ನೇಮಕಾತಿ ಸಾಮರ್ಥ್ಯವನ್ನು ಹೆಚ್ಚಿಸಿ
ಅಭ್ಯರ್ಥಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ನೀಡಿ ಮತ್ತು ಸಂದರ್ಶನಕ್ಕೆ ಬರುವವರಿಗೆ ಸವಾರಿಗಳ ಮೇಲೆ ರಿಯಾಯಿತಿ ನೀಡುವ ಮೂಲಕ ಅವರು ಸಮಯಕ್ಕೆ ಸರಿಯಾಗಿ ಬರುವುದನ್ನು ಖಚಿತಪಡಿಸಿಕೊಳ್ಳಿ.
ವೋಚರ್ಗಳನ್ನು ಗಿಫ್ಟ್ ಕಾರ್ಡುಗಳ ಜೊತೆಗೆ ಹೋಲಿಕೆ ಮಾಡಿ
ನೀವು ಕೆಲವು ರೀತಿಯಲ್ಲಿ ಸವಾರಿಗಳು ಮತ್ತು ಊಟಗಳ ಶುಲ್ಕಗಳನ್ನು ಭರಿಸಬಹುದು. ಯಾವ ವಿಧಾನವು ನಿಮಗೆ ಸೂಕ್ತವಾಗಿದೆ ಎನ್ನುವುದನ್ನು ಕಂಡುಕೊಳ್ಳಿ.
- ಅವಲೋಕನ
ವೋಚರ್ಗಳು: ನೀವು Uber ಕ್ರೆಡಿಟ್ ಅನ್ನು ಉದ್ಯೋಗಿಗಳು ಅಥವಾ ಗ್ರಾಹಕರಿಗೆ ಮಾತ್ರ ವಿತರಿಸುತ್ತೀರಿ ಮತ್ತು ತೆಗೆದುಕೊಂಡ ಸವಾರಿಗಳು ಅಥವಾ ಊಟದ ಆರ್ಡರ್ ಬಿಲ್ಗಳನ್ನು ಮಾತ್ರ ಪಾವತಿಸುತ್ತೀರಿ. ನೀವು ಮಾನದಂಡಗಳನ್ನು ಸಹ ನಿಯಂತ್ರಿಸಬಹುದು ಹಾಗೂ ಕ್ರೆಡಿಟ್ ಮೊತ್ತವನ್ನು ಹೇಗೆ ಬಳಸಲಾಗಿದೆ ಎನ್ನುವುದನ್ನು ಸಹ ಟ್ರ್ಯಾಕ್ ಮಾಡಬಹುದು.
ಗಿಫ್ಟ್ ಕಾರ್ಡ್ಗಳು: ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರಿಗೆ ಸೂಕ್ತವೆನಿಸುವಂತೆ ಬಳಸಲು ಅವರಿಗೆ ಕ್ರೆಡಿಟ್ ನೀಡಲು Uber ಕ್ರೆಡಿಟ್ ಖರೀದಿಸುತ್ತಿರಿ.
- ಇದು ಹೇಗೆ ಕೆಲಸ ಮಾಡುತ್ತದೆ?
ವೋಚರ್ಗಳು: ನೀವು ಸ್ವೀಕೃತಿದಾರರಿಗೆ Uber ಕ್ರೆಡಿಟ್ ವಿತರಿಸುತ್ತೀರಿ ಮತ್ತು ಅವಧಿ ಮೀರುವ ದಿನಾಂಕಗಳು, ಸ್ಥಳ ನಿರ್ಬಂಧಗಳು ಮತ್ತು/ಅಥವಾ ಕ್ರೆಡಿಟ್ ಮೊತ್ತವನ್ನು ಬಳಸಿದ ದಿನ ಮತ್ತು ಸಮಯದಂತಹ ನಿಯಂತ್ರಣಗಳನ್ನು ಹೊಂದಿಸಬಹುದು. ಸ್ವೀಕೃತಿದಾರರು ತಮ್ಮ Uber ಅಥವಾ Uber Eats ಆ್ಯಪ್ನಿಂದ ಸವಾರಿಗಳು ಅಥವಾ ಊಟಗಳನ್ನು ವಿನಂತಿಸಬಹುದು ಮತ್ತು ತಮ್ಮ ಖರೀದಿಯ ಮೇಲೆ ವೋಚರ್ ಮೌಲ್ಯವನ್ನು ಅನ್ವಯಿಸಬಹುದು. ನೀವು ಸೈನ್ ಅಪ್ ಮಾಡಬಹುದು ಇಲ್ಲಿ.
ಗಿಫ್ಟ್ ಕಾರ್ಡುಗಳು: ನೀವು ಸ್ವೀಕೃತಿದಾರರಿಗೆ ಪಠ್ಯ, ಇಮೇಲ್ ಅಥವಾ ಮುದ್ರಣದ ಮೂಲಕ ಡಿಜಿಟಲ್ ಕಾರ್ಡ್ಗಳನ್ನು ಕಳುಹಿಸಬಹುದು—ಹೇಗೆ ವಿತರಿಸಬೇಕೆಂಬುದನ್ನು ನೀವು ನಿರ್ಧರಿಸಬಹುದು. ನಮ್ಮ ಮಾರಾಟ ತಂಡದ ಮೂಲಕ ಭೌತಿಕ ಗಿಫ್ಟ್ ಕಾರ್ಡುಗಳು ಲಭ್ಯವಿರುತ್ತವೆ. ಕಾರ್ಡ್ಗಳನ್ನು ಆನ್ಲೈನ್ನಲ್ಲಿ ಖರೀದಿಸಿ ಇಲ್ಲಿ ಅಥವಾ ನಮ್ಮ ಮಾರಾಟ ತಂಡದ ಮೂಲಕ ಇಲ್ಲಿ.
- ವ್ಯವಹಾರಗಳಲ್ಲಿ ಈ ಉತ್ಪನ್ನಗಳನ್ನು ಹೇಗೆ ಬಳಸಲಾಗುತ್ತದೆ?
ವೋಚರ್ಗಳು: ಬಳಕೆದಾರರು ವೋಚರ್ ರಿಡೀಮ್ ಮಾಡಿದಾಗ ಮತ್ತು ಸವಾರಿ ಅಥವಾ ಊಟದ ಆರ್ಡರ್ಗಳ ಬಿಲ್ ಪಾವತಿಸಲು ಅನ್ವಯಿಸಿದಾಗ ಮಾತ್ರವೇ ನೀವು ಪಾವತಿಸುತ್ತೀರಿ. ಉದಾಹರಣೆಗೆ, ನೀವು ವೋಚರ್ಗಳಲ್ಲಿ $100 ವಿತರಿಸಿದ್ದು ಅದರಲ್ಲಿ $50 ಮಾತ್ರ ಬಳಸಿದ್ದಲ್ಲಿ, ನೀವು $50 ಪಾವತಿಸುತ್ತೀರಿ.
ಗಿಫ್ಟ್ ಕಾರ್ಡ್ಗಳು: ಖರೀದಿಯ ಸಮಯದಲ್ಲಿ ನೀವು ಗಿಫ್ಟ್ ಕಾರ್ಡ್ ಮೊತ್ತವನ್ನು ಸಂಪೂರ್ಣ ಪ್ರಮಾಣದಲ್ಲಿ ಪಾವತಿಸುತ್ತೀರಿ.
ವೋಚರ್ಗಳನ್ನು ಏಕೆ ಬಳಸಬೇಕು
ನಿಮ್ಮ ಜನರು ಪ್ರೀತಿಸುವ ಒಂದು ಪ್ರಯೋಜನವಾಗಿದೆ
ವಿಶ್ವಾದ್ಯಂತ ಲಕ್ಷಾಂತರ ಜನರು Uber ಬಳಸುತ್ತಾರೆ. ನಿಮ್ಮ ಗ್ರಾಹಕರು ಮತ್ತು ನೌಕರರು ಈಗಾಗಲೇ ವಿಶ್ವಾಸ ಹೊಂದಿದ ಸೇವೆಯ ವೆಚ್ಚವನ್ನು ಭರಿಸುವ ಮೂಲಕ ಅವರನ್ನು ಖುಷಿಪಡಿಸಿ.
ಕಳುಹಿಸಲು ಮತ್ತು ರಿಡೀಮ್ ಮಾಡಲು ಸರಳವಾಗಿದೆ
ತಕ್ಷಣವೇ ವೋಚರ್ಗಳನ್ನು ರಚಿಸಿ ಮತ್ತು ಇಮೇಲ್, ಪಠ್ಯ ಹಾಗೂ ಇತರ ವಿಧಾನಗಳ ಮೂಲಕ ಕಳುಹಿಸಿ. ಗ್ರಾಹಕರು ಒಂದೇ ಟ್ಯಾಪ್ ಮೂಲಕ ರಿಡೀಮ್ ಮಾಡಬಹುದು ಮತ್ತು ಅವರು ತೆಗೆದುಕೊಳ್ಳುವ ಸವಾರಿಗಳಿಗೆ ಮಾತ್ರವೇ ನೀವು ಪಾವತಿಯನ್ನು ಮಾಡುತ್ತೀರಿ.
ಒಳನೋಟಗಳು ಮತ್ತು ವರದಿಗಳನ್ನು ರಚಿಸುವುದು ಸುಲಭ
Uber for Business ಡ್ಯಾಶ್ಬೋರ್ಡ್ನಿಂದ ವೋಚರ್ಗಳ ರಿಡೆಂಪ್ಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ. ನಿಮ್ಮ ಮುಂದಿನ ಪ್ರಯತ್ನವನ್ನು ಇನ್ನಷ್ಟು ಯಶಸ್ವಿಗೊಳಿಸಲು ಫಲಿತಾಂಶಗಳನ್ನು ಬಳಸಿ.
Samsung ಗ್ರಾಹಕರಿಗೆ $100 ಮೌಲ್ಯದ Uber Eats ಕ್ರೆಡಿಟ್ ನೀಡಿದ ನಂತರ ತನ್ನ ಗ್ಯಾಲಕ್ಸಿ ಮೊಬೈಲ್ ಸಾಧನಗಳ ಮಾರಾಟವನ್ನು 20%ದಷ್ಟು ಹೆಚ್ಚಿಸಿಕೊಂಡಿದೆ.
ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಗೊಳ್ಳುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು