Uber Shuttle for Business ನೊಂದಿಗೆ ಉದ್ಯೋಗಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿ
ದೈನಂದಿನ ನಿಯಮಿತ ಪ್ರಯಾಣದಿಂದ ಹಿಡಿದು ಒಂದು ಕ್ಯಾಂಪಸ್‌ನಿಂದ ಇನ್ನೊಂದು ಕ್ಯಾಂಪಸ್‌ಗೆ ಓಡಾಟದವರೆಗೆ, Uber Shuttle for Business ಸಾಕಷ್ಟು ಸ್ಥಳಾವಕಾಶ ಹೊಂದಿರುವ ಮತ್ತು ಒತ್ತಡ-ರಹಿತ ಟ್ರಿಪ್‌ಗಳೊಂದಿಗೆ ನಿಮ್ಮ ಎಲ್ಲಾ ಸಮೂಹ ಸಾರಿಗೆ ಅಗತ್ಯತೆಗಳಿಗೆ ಸಹಾಯ ಮಾಡುತ್ತದೆ.
ನಿಮ್ಮ ಸಮೂಹ ಸಾರಿಗೆ ಅಗತ್ಯತೆಗಳಿಗೆ ಸರಿಹೊಂದುವಂತೆ ಉದ್ಯೋಗಿ ಶಟಲ್ ಸೇವೆಗಳನ್ನು ಕಸ್ಟಮೈಸ್ ಮಾಡಿ
ಉದ್ಯೋಗಿಗಳ ನಿಯಮಿತ ಪ್ರಯಾಣಗಳು
ಉದ್ಯೋಗಿಗಳಿಗೆ ಶಟಲ್ ಆಯ್ಕೆಯನ್ನು ನೀಡುವ ಮೂಲಕ ದೈನಂದಿನ ಪ್ರಯಾಣವನ್ನು ಇನ್ನಷ್ಟು ಅನುಕೂಲಕರವಾಗಿಸಿ. ಉನ್ನತ ಪ್ರತಿಭೆಯನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ನೀವು ಸೇವೆಯನ್ನು ವಿಶಿಷ್ಟಗೊಳಿಸಬಹುದು.
ಕ್ರಾಸ್-ಕ್ಯಾಂಪಸ್ ಸಾರಿಗೆ
ಪಾರ್ಕಿಂಗ್ ಸ್ಥಳದಿಂದ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಅಥವಾ ಒಂದು ಕ್ಯಾಂಪಸ್‌ನಿಂದ ಇನ್ನೊಂದು ಕ್ಯಾಂಪಸ್‌ಗೆ ಪ್ರಯಾಣವನ್ನು ಸರಳ ಮಾಡಿಕೊಳ್ಳಿ. ಇವೆಲ್ಲವೂ Uber ಒದಗಿಸುವ ಅಮೂಲ್ಯವಾದ ಅನಾಲಿಟಿಕ್ಸ್ ಸೌಲಭ್ಯಗಳ ಜೊತೆಗೆ ಲಭ್ಯವಿರುತ್ತವೆ.
ಮೂಲೆ ಮೂಲೆಗೂ ಸಂಪರ್ಕ
Uber ಆ್ಯಪ್ ಬಳಸಿ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಬಸ್ ಡಿಪೋಗಳಂತಹ ಸ್ಥಳೀಯ ಸಾರ್ವಜನಿಕ ಸಾರಿಗೆ ಕೇಂದ್ರಗಳು ಮತ್ತು ನಿಮ್ಮ ಕಚೇರಿಗೆ ಸುಲಭವಾಗಿ ಪ್ರಯಾಣಿಸಲು ಉದ್ಯೋಗಿಗಳಿಗೆ ಸಹಾಯ ಮಾಡಿ.
- Uber ತಂತ್ರಜ್ಞಾನ ಜೊತೆಗೆ ಕೆಲಸ ಮಾಡಲು ನನಗೆ ನನ್ನ ಸ್ವಂತ ಶಟಲ್ ಪಾರ್ಟ್‌ನರ್ ಅಗತ್ಯವಿದೆಯೇ?
ನೀವು ನಿಮ್ಮ ಸ್ವಂತ ಶಟಲ್‌ಗಳನ್ನು ಹೊಂದಿರಬಹುದು ಅಥವಾ ನಿಮಗೆ ಶಟಲ್ ಫ್ಲೀಟ್ ಪಾಲುದಾರರ ಅಗತ್ಯವಿರಬಹುದು. ನಿಮ್ಮ ಪರಿಸ್ಥಿತಿಗೆ ಸರಿಹೊಂದುವಂತೆ ನಮ್ಮ ವಿಧಾನವನ್ನು ಕಸ್ಟಮೈಸ್ ಮಾಡಲು ನಮ್ಮ ಪ್ಲಾಟ್‌ಫಾರ್ಮ್ ಸಹಾಯ ಮಾಡುತ್ತದೆ.
- ನನ್ನ ಉದ್ಯೋಗಿಗಳು Uber ಆ್ಯಪ್ ಬಳಸಬೇಕೇ?
ಸವಾರರಿಗೆ Uber ಆ್ಯಪ್ ಅತ್ಯುತ್ತಮ ಅನುಭವ ಒದಗಿಸುತ್ತದೆ. ಆದರೆ, ಅವರು ಅದನ್ನೇ ಬಳಸಬೇಕಾಗಿಲ್ಲ. ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗಾಗಿ ಶಟಲ್‌ಗಳನ್ನು ಸ್ವಯಂಚಾಲಿತವಾಗಿ ಕಾದಿರಿಸುವ (ಆಟೋ ಬುಕ್) ಸಾಮರ್ಥ್ಯವನ್ನು ಹೊಂದಿದ್ದಾರೆ. ಇದರಿಂದ, ಉದ್ಯೋಗಿಗಳನ್ನು ಚಾಲಕರು ಚೆಕ್ ಇನ್ ಮಾಡಿಕೊಳ್ಳಬಹುದು ಹಾಗೂ ಅಡ್ಮಿನ್‌ಗಳಿಗೆ ಡೇಟಾ ಲಭ್ಯವಾಗುತ್ತದೆ.
ಉದ್ಯೋಗಿ ಶಟಲ್ ಸೇವೆಗಳನ್ನು ಬಳಸುವುದರಿಂದ ಇರುವ ಪ್ರಯೋಜನಗಳು
ಸಮಯ ಮತ್ತು ವೆಚ್ಚದ ಉಳಿತಾಯ
ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ಸಾಗಿಸಿ. ವಾಹನದ ಸಾಮರ್ಥ್ಯ, ವೇಳಾಪಟ್ಟಿಗಳು, ಮಾರ್ಗ ಮತ್ತು ಇನ್ನಷ್ಟು ಸಂಗತಿಗಳಿಗೆ ಸರಿಹೊಂದುವಂತೆ ದಕ್ಷ ಉದ್ಯೋಗಿ ಶಟಲ್ ನೆಟ್‌ವರ್ಕ್ ರಚಿಸಲು ನಾವು ನಿಮಗೆ ಸಹಾಯ ಮಾಡಬಲ್ಲೆವು.
ಫ್ಲೆಕ್ಸಿಬಲ್, ಹೇಳಿ ಮಾಡಿಸಿದ ಸೌಲಭ್ಯಗಳು
ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ವಿಸ್ತರಿಸುವ ಪಾರ್ಟ್‌ನರ್ ಆಯ್ಕೆ ಮಾಡಿ. ನೀವು ಒಂದು ಮಿನಿಬಸ್ ಅಥವಾ ಐಷಾರಾಮಿ ಕೋಚ್‌ಗಳ ಫ್ಲೀಟ್ ಅನ್ನು ಬಳಸಲು ಯೋಜಿಸುತ್ತಿದ್ದರೂ, ಸೂಕ್ತವಾದ ಕಾರ್ಪೊರೇಟ್ ಶಟಲ್ ಸೇವೆಯನ್ನು ಒದಗಿಸುವ ಬಗ್ಗೆ ನಿಮ್ಮ ಜೊತೆ ಚರ್ಚೆ ಮಾಡುತ್ತೇವೆ.
ಆಳವಾದ ಒಳನೋಟ ಮತ್ತು ನಿಯಂತ್ರಣ
ನಿಮ್ಮ ಕಾರ್ಪೊರೇಟ್ ಶಟಲ್ ಸೇವೆಯನ್ನು ಉದ್ಯೋಗಿಗಳು ಹೇಗೆ ಬಳಸುತ್ತಾರೆ ಮತ್ತು ಅದನ್ನು ನೀವು ಹೇಗೆ ಸುಧಾರಿಸಬಹುದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲುಬಳಕೆ, ಸಮಯಕ್ಕೆ ಸರಿಯಾಗಿ ಕಾರ್ಯಕ್ಷಮತೆ ಮತ್ತು ಬಿಲ್ಲಿಂಗ್ ಟ್ರೆಂಡ್‌ಗಳನ್ನು ತೋರಿಸುವ ಡ್ಯಾಶ್‌ಬೋರ್ಡ್‌ಗಳು ಸಹಾಯ ಮಾಡುತ್ತದೆ.
ಆರಾಮದಾಯಕ ಸಾರಿಗೆ
ಈ ಪ್ಲಾಟ್‌ಫಾರಂನಲ್ಲಿ ನಂಬಿಕೆ ಇರಲಿ. ನಿಮ್ಮ ಹೆಚ್ಚಿನ ಉದ್ಯೋಗಿಗಳು ಈಗಾಗಲೇ ವೈಯಕ್ತಿಕ ಪ್ರಯಾಣಕ್ಕಾಗಿ ಬಳಸುತ್ತಿರಬಹುದು. ಅವರಿಗೆ ನಂಬಿಕೆಗೆ ಯೋಗ್ಯವಾದ ಹಾಗೂ ಒತ್ತಡ ರಹಿತವಾದ ಪ್ರಯಾಣ ಸೌಲಭ್ಯವನ್ನು ಒದಗಿಸಿ.
ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ
Uber ನ ತಂತ್ರಜ್ಞಾನ ಆಧರಿತ ಸುರಕ್ಷತೆ ವೈಶಿಷ್ಟ್ಯಗಳು ಮತ್ತು 24/7 ಗ್ರಾಹಕ ಬೆಂಬಲದಿಂದಾಗಿ ನಿಮ್ಮ ಉದ್ಯೋಗಿಗಳು ಯಾವಾಗಲೂ ಸುರಕ್ಷಿತರಾಗಿರುತ್ತಾರೆ.
ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವುದು
ನಿಮ್ಮ ಕಾರ್ಪೊರೇಟ್ ಸುಸ್ಥಿರತೆ ಗುರಿಗಳನ್ನು ಈಡೇರಿಸಿ. ನಿಮ್ಮ ಉದ್ಯೋಗಿ ಶಟಲ್ ಸೇವೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಮತ್ತೊಂದು ವಾಹನ ರಸ್ತೆಗಿಳಿಯುವುದನ್ನು ಕಡಿಮೆಗೊಳಿಸುವ ಮೂಲಕ ನಿಮ್ಮ ಕಂಪನಿಯ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ.
ನಿಮ್ಮ ಉದ್ಯೋಗಿ ಶಟಲ್ ಸೇವೆಗೆ ಹಾದಿ
ಹಂತ 1: ನಿಮ್ಮ ಗ್ರಾಹಕೀಯಗೊಳಿಸಿದ ಪ್ರೋಗ್ರಾಂ ರಚನೆ ಮಾಡಲು ಮತ್ತು ಅದಕ್ಕೆ ಕೊಡುಗೆ ನೀಡಲು ಸಹಾಯ ಮಾಡಿ.
ನಮ್ಮ ಪ್ರಶ್ನಾವಳಿಯನ್ನು ಪೂರ್ಣಗೊಳಿಸುವ ಮೂಲಕ ಪ್ರಾರಂಭಿಸಿ. ನಂತರ, ಆರಂಭಿಕ ಅನ್ವೇಷಣೆ ಅವಧಿಯ ನಂತರ, ನಾವು ಮಾರ್ಗಗಳು, ಸಮಯ ಮತ್ತು ಫ್ಲೆಕ್ಸಿಬಲ್ ವಾಹನ ಆಯ್ಕೆಗಳೊಂದಿಗೆ ಪರ್ಸನಲೈಸ್ ಮಾಡಿದ ಸೇವೆಯನ್ನು ವಿನ್ಯಾಸಗೊಳಿಸುತ್ತೇವೆ.
ಹಂತ 2: ಶಟಲ್ ಸವಾರಿಗಳನ್ನು ಹೇಗೆ ಒದಗಿಸಬೇಕೆಂದು ನಿರ್ಧರಿಸಿ
ಮಾರ್ಗ ವೇಳಾಪಟ್ಟಿಗಳನ್ನು ವೀಕ್ಷಿಸಲು ಮತ್ತು Uber ಆ್ಯಪ್‌ನಿಂದ ನೇರವಾಗಿ ಸೀಟುಗಳನ್ನು ವಿನಂತಿಸಲು ಉದ್ಯೋಗಿಗಳಿಗೆ ಸಾಧ್ಯವಾಗುತ್ತದೆ. ಉದ್ಯೋಗದಾತರು ಅನುಕೂಲಕರವಾಗಿ ಸವಾರರನ್ನು ಸ್ವಯಂಚಾಲಿತವಾಗಿ ಕಾದಿರಿಸಬಹುದು. ಇದರಿಂದ ಅವರ ಆಸನ ಎಂದಿಗೂ ರಿಸರ್ವ್ ಆಗಿರುತ್ತದೆ.
ಹಂತ 3: ನಿಮ್ಮ ಸೇವೆಯನ್ನು ಆಪ್ಟಿಮೈಸ್ ಮಾಡಿ
ಅನುಭವವನ್ನು ಉತ್ತಮಗೊಳಿಸಿ. ಮಾರ್ಗದ ಕಾರ್ಯಕ್ಷಮತೆ, ಸವಾರರ ಸಂಖ್ಯೆ, ಇತರ ವೆಚ್ಚಗಳು ಮತ್ತು ಇನ್ನಷ್ಟರ ಬಗ್ಗೆ ಡ್ಯಾಶ್‌ಬೋರ್ಡ್‌ಗಳು ಮೌಲ್ಯಯುತ ಒಳನೋಟಗಳನ್ನು ನೀಡುತ್ತವೆ. ಅಗತ್ಯಕ್ಕೆ ಅನುಗುಣವಾಗಿ ನೀವು ಮಾರ್ಗಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.
ಸಮೂಹ ಸಾರಿಗೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ
- ಇದಕ್ಕೆ ಎಷ್ಟು ವೆಚ್ಚವಾಗುತ್ತದೆ?
ಮಾರ್ಗಗಳ ಸಂಖ್ಯೆ, ಉದ್ಯೋಗಿ ಸವಾರರ ಸಂಖ್ಯೆ, ಆವರ್ತನ ಮುಂತಾದ ಅಂಶಗಳನ್ನು ಅವಲಂಬಿಸಿ ದರಗಳು ಬದಲಾಗಬಹುದು. ನಮ್ಮ ಸಂಪರ್ಕ ಫಾರ್ಮ್ ಬಳಸಿ ನಮ್ಮ ತಂಡದೊಂದಿಗೆ ಉಚಿತ ಸಮಾಲೋಚನೆಯನ್ನು ನಿಗದಿಪಡಿಸಿದರೆ, ನಿಮ್ಮ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಬಹುದು. ನಿಮಗೆ ಅಗತ್ಯವಿರುವುದಕ್ಕೆ ಮಾತ್ರ ನೀವು ಪಾವತಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಅಪ್ರೋಚ್ ಅನ್ನು ಕಸ್ಟಮೈಸ್ ಮಾಡಬಹುದು.
- ನಾನು ಶಟಲ್ ಫ್ಲೀಟ್ ಆಪರೇಟರ್ ಆಗಿದ್ದೇನೆ ಮತ್ತು Uber ಜೊತೆಗೆ ಕೆಲಸ ಮಾಡಲು ಬಯಸುತ್ತೇನೆ. ನಾನು ಏನು ಮಾಡಬೇಕು?
ನಮ್ಮ ತಂಡದೊಂದಿಗೆ ಉಚಿತ ಸಮಾಲೋಚನೆಯನ್ನು ನಿಗದಿಪಡಿಸಲು ನಮ್ಮ ಸಂಪರ್ಕ ಫಾರ್ಮ್ ಭರ್ತಿ ಮಾಡಿ. ಅಲ್ಲಿಂದ, ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದಲ್ಲಿ ನಾವು ಹೇಗೆ ಸಂಭಾವ್ಯವಾಗಿ ಒಟ್ಟಾಗಿ ಕೆಲಸ ಮಾಡಬಹುದು ಎಂಬ ಕುರಿತು ನಾವು ನಿಮ್ಮೊಂದಿಗೆ ಚರ್ಚಿಸಬಹುದು.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು
ಗ್ರಾಹಕ ಬೆಂಬಲ