ಮುಖ್ಯ ವಿಷಯಕ್ಕೆ ತೆರಳಿ

ಟೋಕಿಯೊ ಹನೆಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (HND)

ಸಾಂಪ್ರದಾಯಿಕ ಹನೆಡಾ ವಿಮಾನ ನಿಲ್ದಾಣ ಶಟಲ್ ಅಥವಾ ಟ್ಯಾಕ್ಸಿಗೆ ಪರ್ಯಾಯವಾದುದನ್ನು ಹುಡುಕುತ್ತಿದ್ದೀರಾ? ನೀವು HND ವಿಮಾನ ನಿಲ್ದಾಣದಿಂದ ಟೋಕಿಯೊ ನಿಲ್ದಾಣಕ್ಕೆ ಹೋಗುತ್ತಿರಲಿ ಅಥವಾ ಶಿಂಜುಕುವಿನಿಂದ ಹನೇಡಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿರಲಿ, ನಿಮಗೆ ಈಗಾಗಲೇ ತಿಳಿದಿರುವ Uber ಟ್ಯಾಕ್ಸಿ ಆ್ಯಪ್‌‌ನೊಂದಿಗೆ ನಿಮಗೆ ಬೇಕಾದ ಕಡೆಗೆ ಹೋಗಿ. ಒಂದು ಬಟನ್ ಟ್ಯಾಪ್ ಮಾಡಿ ಮತ್ತು HND ಗೆ ಹೋಗಲು ಹಾಗೂ ಅಲ್ಲಿಂದ ಬರಲು ಸವಾರಿಗೆ ವಿನಂತಿಯನ್ನು ಮಾಡಿ.

4-3 Haneda-Kuko, 2-Chome, Ota-Ku, ಟೋಕಿಯೊ 144, Japan
+81 3-5757-8111

ಪ್ರಯಾಣಿಸಲು ಸ್ಮಾರ್ಟ್ ಆದ ವಿಧಾನ

ಜಗತ್ತಿನೆಲ್ಲೆಡೆ ಸವಾರಿ ಮಾಡಲು ವಿನಂತಿಸಿ

ಒಂದು ಬಟನ್ ಒತ್ತಿ, 500 ಕ್ಕೂ ಹೆಚ್ಚು ಪ್ರಮುಖ ಹಬ್‌ಗಳಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಸೌಲಭ್ಯ ಪಡೆಯಿರಿ.

ಸ್ಥಳೀಯರಂತೆ ತಿರುಗಾಡಿ

ಆ್ಯಪ್ ಮತ್ತು ನಿಮ್ಮ ಚಾಲಕರೇ ವಿವರಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಿ. ಇದರಿಂದಾಗಿ, ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯ ಇರುವುದಿಲ್ಲ.

Uber ನಲ್ಲಿ ಮನೆಯಂತಹ ಅನುಭವ ಪಡೆಯಿರಿ

ನೀವು ಹೊಸ ಸ್ಥಳದಲ್ಲಿದ್ದರೂ ನೈಜ-ಸಮಯದ ಬೆಲೆ ಮತ್ತು ನಗದು ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.

ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು

 • Taxi

  1-4

  Get matched with a taxi nearby. Booking fee will be charged separately (maximum JPY 420)

ಹನೆಡಾ ವಿಮಾನ ನಿಲ್ದಾಣ (HND) ನಲ್ಲಿ ಪಿಕಪ್

ಹೊರಗೆ ಹೋಗಲು ನೀವು ಸಿದ್ಧರಾದಾಗ ವಿನಂತಿ ಮಾಡಿ

ನೀವು ಸಿದ್ಧರಾದಾಗ, ನಿಮ್ಮ ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸಲು ವಿನಂತಿಸಲು Uber ಆ್ಯಪ್ ತೆರೆಯಿರಿ. ನಿಮ್ಮ ಸಮೂಹದ ಸಂಖ್ಯೆ ಮತ್ತು ಲಗೇಜ್ ಅಗತ್ಯಗಳಿಗೆ ಸರಿಹೊಂದುವ HND ವಿಮಾನ ಸಾರಿಗೆ ಆಯ್ಕೆಯನ್ನು ಆರಿಸಿ.

ಆಗಮನ ಹಂತದಿಂದ ನಿರ್ಮಿಸುವುದು

ಆ್ಯಪ್‌ನಲ್ಲೇ ನೇರವಾಗಿ ಹನೆಡಾ ವಿಮಾನ ನಿಲ್ದಾಣ ಪಿಕಪ್‌ ಪಾಯಿಂಟ್‌ಗಳ ಬಗ್ಗೆ ನೀವು ನಿರ್ದೇಶನಗಳನ್ನು ಪಡೆಯುತ್ತೀರಿ. ಪಿಕಪ್ ಸ್ಥಳಗಳು ಪ್ರತಿ ನಿಲ್ದಾಣಗಳಿಗೂ ಬದಲಾಗಬಹುದು. ಪಿಕಪ್ ಚಿಹ್ನೆಗಳು ಟೋಕಿಯೊ ಹನೆಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಲ್ಲೂ ಲಭ್ಯವಿರಬಹುದು.

ನಿಮ್ಮ ಚಾಲಕರನ್ನು ಭೇಟಿ ಮಾಡಿ

ಆ್ಯಪ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ನಿಮಗೆ ನಿಯೋಜಿಸಲಾದ HND ಪಿಕಪ್ ಸ್ಥಳಕ್ಕೆ ಹೋಗಿ. ದಯವಿಟ್ಟು ಗಮನಿಸಿ: ಈ ಸ್ಥಳವು ಯಾವಾಗಲೂ ನಿಮ್ಮ ಹತ್ತಿರದ ನಿರ್ಗಮನದಲ್ಲಿರಬೇಕೆಂದಿಲ್ಲ. ನಿಮ್ಮ ಚಾಲಕರ ಹೆಸರು, ಪರವಾನಗಿ ಫಲಕ ಮತ್ತು ಕಾರಿನ ಬಣ್ಣವನ್ನು ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ನೀವು ಒಳಗೆ ಹೋಗುವ ಮೊದಲು ನಿಮ್ಮ ಸವಾರಿಯನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಕಾಂಟ್ಯಾಕ್ಟ್‌ ಮಾಡಿ.

ಹನೆಡಾ ವಿಮಾನ ನಿಲ್ದಾಣ ನಕ್ಷೆ

ಹನೆಡಾ ಏರ್‌ಪೋರ್ಟ್‌ ಅನ್ನು 3 ಟರ್ಮಿನಲ್‌ಗಳಾಗಿ ವಿಂಗಡಿಸಲಾಗಿದೆ: ಅಂತರರಾಷ್ಟ್ರೀಯ ಟರ್ಮಿನಲ್ ಮತ್ತು ದೇಶೀಯ ಟರ್ಮಿನಲ್‌ಗಳು 1 ಮತ್ತು 2.

ಪ್ರಯಾಣಿಸುತ್ತಿರುವಾಗಲೂ ಸಂಪರ್ಕದಲ್ಲಿರಿ

HND ಯಲ್ಲಿ ವೈಫೈ ಸಂಪರ್ಕ ಪಡೆಯುವುದು ಹೇಗೆ

ಹನೆಡಾ ವಿಮಾನ ನಿಲ್ದಾಣದಲ್ಲಿ ನೀವು ಉಚಿತ ವೈಫೈಗೆ ಸಂಪರ್ಕ ಪಡೆಯಬಹುದು. ವೈಫೈ ನೆಟ್‌ವರ್ಕ್‌ಗಳಿಂದ HANEDA-FREE-WIFI ಆಯ್ಕೆ ಮಾಡಿ, ನಿಮ್ಮ ಬ್ರೌಸರ್‌ ತೆರೆಯಿರಿ ಮತ್ತು ಒದಗಿಸಿದ ಸೂಚನೆಗಳನ್ನು ಅನುಸರಿಸಿ.

ಸ್ಥಳೀಯ SIM ಕಾರ್ಡ್‌ ತೆಗೆದುಕೊಳ್ಳಿ

ಅಂತಾರಾಷ್ಟ್ರೀಯ ಪ್ರಯಾಣಿಕರ ಟರ್ಮಿನಲ್‌ನ 2ನೇ ಹಂತದಲ್ಲಿ ಆಗಮನ ಲಾಬಿಯಲ್ಲಿ ನೀವು ಪ್ರೀಪೇಯ್ಡ್‌ SIM ಕಾರ್ಡ್‌ ಖರೀದಿ ಮಾಡಬಹುದು.

ದೇಶೀಯ ಪ್ರಯಾಣಿಕರ ಟರ್ಮಿನಲ್‌ಗಳು 1 ಮತ್ತು 2 ರಲ್ಲಿ ಪ್ರೀಪೇಯ್ಡ್‌ SIM ಕಾರ್ಡ್‌ಗಳು ಮಾರಾಟಕ್ಕೆ ಲಭ್ಯವಿರುವುದಿಲ್ಲ.

ಜಪಾನ್ ಹೊರತಾದ ನಿವಾಸಿಗಳಿಗೆ ಡೇಟಾ ಸಂವಹನಕ್ಕೆ ಮಾತ್ರ ಜಪಾನ್‌ನಲ್ಲಿ ಪ್ರೀಪೇಯ್ಡ್‌ SIM ಕಾರ್ಡ್‌ಗಳು ಲಭ್ಯವಿರುತ್ತವೆ. ಜಪಾನೀ ಕಾನೂನು ಪ್ರಕಾರ, ಜಪಾನ್ ಹೊರತಾದ ನಿವಾಸಿಗರು ಧ್ವನಿ ಕರೆಗಳಿಗೆ ಅನುವು ಮಾಡುವ SIM ಕಾರ್ಡ್‌ಗಳನ್ನು ಖರೀದಿ ಮಾಡುವಂತಿಲ್ಲ.

ಹೆಚ್ಚಿನ ಮಾಹಿತಿ

ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?

ಪ್ರಪಂಚದಾದ್ಯಂತ 600 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಂದ ಪಿಕ್ ಅಪ್ ಮತ್ತು ಡ್ರಾಪ್ ಪಡೆಯಿರಿ.

ಹನೆಡಾ ವಿಮಾನ ನಿಲ್ದಾಣ ಸಂದರ್ಶಕರ ಮಾಹಿತಿ

ಟೋಕಿಯೊದಲ್ಲಿನ 2 ಪ್ರಾಥಮಿಕ ವಿಮಾನ ನಿಲ್ದಾಣಗಳಲ್ಲಿ ಒಂದಾದ ಹನೆಡಾ ವಿಮಾನ ನಿಲ್ದಾಣವು ಜಪಾನ್‌ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಇದು ಟೋಕಿಯೊದ ಬಹುತೇಕ ಪ್ರದೇಶಕ್ಕೆ ಸೇವೆ ಸಲ್ಲಿಸುತ್ತಿದೆ. ಮತ್ತೊಂದು ವಿಮಾನ ನಿಲ್ದಾಣ ನರಿಟಾ ಏರ್‌ಪೋರ್ಟ್‌ಗಿಂತ ಹೆಚ್ಚು ಅನುಕೂಲಕರವಾಗಿರುವ ಹನೆಡಾ ವಿಮಾನ ನಿಲ್ದಾಣವು, ಟೋಕಿಯೊದ ಮಧ್ಯಭಾಗದಿಂದ ಕೇವಲ 25 ನಿಮಿಷಗಳ ಕಾರು ಸವಾರಿ ದೂರದಲ್ಲಿದೆ.

ಹನೆಡಾ ವಿಮಾನ ನಿಲ್ದಾಣದ ಟರ್ಮಿನಲ್‌ಗಳು

ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮತ್ತು ದೇಶೀಯ ಟರ್ಮಿನಲ್‌ಗಳನ್ನಾಗಿ ವಿಂಗಡಿಸಲಾಗಿದೆ. ಅಂತರಾಷ್ಟ್ರೀಯ ವಿಮಾನಗಳೆಲ್ಲವೂ ಹನೆಡಾ ಇಂಟರ್‌ನ್ಯಾಷನಲ್ ಪ್ಯಾಸೆಂಜರ್ ಟರ್ಮಿನಲ್‌ನಿಂದ ಕಾರ್ಯಾಚರಿಸುತ್ತವೆ. ಆದರೆ, ದೇಶೀಯ ವಿಮಾನಗಳು ಟರ್ಮಿನಲ್ 1 ಮತ್ತು ಟರ್ಮಿನಲ್ 2 ನಿಂದ ಕಾರ್ಯನಿರ್ವಹಿಸುತ್ತವೆ.

ಹನೆಡಾ ವಿಮಾನ ನಿಲ್ದಾಣ ಟರ್ಮಿನಲ್ 1

 • JAL
 • ಜಪಾನ್ ಟ್ರಾನ್ಸ್‌ಓಶಿಯನ್ ಏರ್
 • ಸ್ಕೈಮಾರ್ಕ್
 • ಸ್ಟಾರ್ ಫ್ಲೈಯರ್ (ಕಿಟಾಕ್ಯುಶು ಮತ್ತು ಫುಕುವೋಕಾ ವಿಮಾನ ನಿಲ್ದಾಣಗಳಿಗೆ ವಿಮಾನಗಳು)

ಹನೆಡಾ ವಿಮಾನ ನಿಲ್ದಾಣ ಟರ್ಮಿನಲ್ 2

 • AIRDO
 • ANA
 • ಸೊಲಸೀಡ್
 • ಸ್ಟಾರ್ ಫ್ಲೈಯರ್ (ಯಮಗುಚಿ-ಉಬೆ ಮತ್ತು ಕನ್ಸೈ ವಿಮಾನ ನಿಲ್ದಾಣಗಳಿಗೆ ವಿಮಾನಗಳು)

ಹನೆಡಾ ವಿಮಾನ ನಿಲ್ದಾಣದ ಬಗ್ಗೆ ತಿಳಿದುಕೊಳ್ಳುವುದು

ವಿಮಾನ ನಿಲ್ದಾಣದಲ್ಲಿ ದೇಶೀಯ ಟರ್ಮಿನಲ್‌ಗಳು ಮತ್ತು ಚಿಕ್ಕ ಅಂತರರಾಷ್ಟ್ರೀಯ ಪ್ರಯಾಣಿಕರ ಟರ್ಮಿನಲ್ ನಡುವೆ ಪ್ರತಿ 4 ನಿಮಿಷಗಳಿಗೊಮ್ಮೆ ಉಚಿತ ಶಟಲ್ ಬಸ್‌ಗಳು ಸಂಚರಿಸುತ್ತವೆ.

ಹನೆಡಾ ವಿಮಾನ ನಿಲ್ದಾಣದಲ್ಲಿ ಕರೆನ್ಸಿ ವಿನಿಮಯ

ಅಂತಾರಾಷ್ಟ್ರೀಯ ಪ್ರಯಾಣಿಕ ಟರ್ಮಿನಲ್‌ನ ನಿರ್ಗಮನ ಲಾಬಿಯಲ್ಲಿನ 2 ನೇ ಮತ್ತು 3 ನೇ ಮಹಡಿಗಳಲ್ಲಿ 24-ಗಂಟೆಗಳ ಕರೆನ್ಸಿ ವಿನಿಮಯ ಲಭ್ಯವಿದೆ. ಅಂತರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿ ಇನ್ನೂ 2 ಕಡೆ ಈ ಸೌಲಭ್ಯವನ್ನು ಕಾಣಬಹುದು.

ಹನೆಡಾ ವಿಮಾನ ನಿಲ್ದಾಣದ ಬಳಿ ಹೋಟೆಲ್‌ಗಳು

ಲೇಓವರ್ ಅಥವಾ ರಾತ್ರಿ ವಿಮಾನ ವಿಳಂಬವಾದಾಗ ನಿಮಗೆ ಹೋಟೆಲ್ ಅಗತ್ಯವಿದ್ದರೆ, ವಿಮಾನ ನಿಲ್ದಾಣದಲ್ಲಿ ಹೋಟೆಲ್‌ ಇದೆ ಮತ್ತು ಹತ್ತಿರದ 30 ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ವಸತಿ ವ್ಯವಸ್ಥೆಗಳನ್ನೂ ಬಳಸಬಹುದು.

ಹನೆಡಾ ಏರ್‌ಪೋರ್ಟ್‌ (HND) ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಬಹುದು.

Facebook

ಈ ಪುಟವು Uber ನಿಯಂತ್ರಣದಲ್ಲಿರದ ಮೂರನೇ ಪಾರ್ಟಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಒಳಗೊಂಡಿದೆ ಮತ್ತು ಅದನ್ನು ನಿಯತಕಾಲಿಕವಾಗಿ ಬದಲಾಯಿಸಬಹುದು ಅಥವಾ ನವೀಕರಿಸಬಹುದು. ಈ ಪುಟದಲ್ಲಿ Uber ಅಥವಾ ಅದರ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸದ ಯಾವುದೇ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತ ಇಲ್ಲಿ ಒಳಗೊಂಡಿರುವ ಮಾಹಿತಿ ಕುರಿತಂತೆ, ಯಾವುದೇ ರೀತಿಯ ಅಭಿವ್ಯಕ್ತಿಗಳನ್ನು ಸೂಚಿಸುವ ಅಥವಾ ವ್ಯಕ್ತಪಡಿಸುವ ಯಾವುದೇ ರೀತಿಯ ವಾರಂಟಿಗಳನ್ನು ಯಾವುದೇ ರೀತಿಯಲ್ಲಿ ಅವಲಂಬಿಸಬಾರದು ಅಥವಾ ವ್ಯಾಖ್ಯಾನಿಸಬಾರದು ಅಥವಾ ಅನ್ವಯಿಸಬಾರದು. ದೇಶ, ಪ್ರದೇಶ ಮತ್ತು ನಗರಗಳನ್ನು ಅವಲಂಬಿಸಿ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ. ಪ್ರೋಮೋ ರಿಯಾಯಿತಿ ಹೊಸ ಬಳಕೆದಾರರಿಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಪ್ರಮೋಷನ್ ಅನ್ನು ಇತರ ಕೊಡುಗೆಗಳೊಂದಿಗೆ ಸಂಯೋಜಿಸಲಾಗುವುದಿಲ್ಲ ಮತ್ತು ಟಿಪ್‌ಗಳಿಗೆ ಅನ್ವಯಿಸುವುದಿಲ್ಲ. ಸೀಮಿತ ಲಭ್ಯತೆ. ಕೊಡುಗೆ ಮತ್ತು ನಿಯಮಗಳು ಬದಲಾವಣೆಗೆ ಒಳಪಟ್ಟಿರುತ್ತವೆ.