ಪರಿಚಯಿಸುತ್ತಿದ್ದೇವೆ Uber Plus
Uber Plus ಎನ್ನುವುದು ಅತ್ಯುತ್ತಮ ಡ್ರೈವರ್ಗಳನ್ನು ಗುರುತಿಸುವ ರಿವಾರ್ಡ್ ಪ್ರೋಗ್ರಾಮ್ ಆಗಿದ್ದು, ರಸ್ತೆಯಲ್ಲಿ ಮತ್ತು ಹೊರಗೆ ನಿಮ್ಮ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಪಾಯಿಂಟ್ಗಳನ್ನು ಗಳಿಸಿ
ಪಾಯಿಂಟ್ಗಳನ್ನು ಗಳಿಸಲು Uber ನೊಂದಿಗೆ ಡ್ರೈವ್ ಮಾಡಿ. ಕೆಲವು ಟ್ರಿಪ್ಗಳು ಇತರೆಯವುಗಳಿಗಿಂತ ಹೆಚ್ಚಿನ ಪಾಯಿಂಟ್ಗಳನ್ನು ನಿಮಗೆ ಗಳಿಸಿಕೊಡಬಹುದು. ಡ್ರೈವರ್ ಆಪ್ನಲ್ಲಿ ಹೆಚ್ಚಿನ ವಿವರಗಳನ್ನು ನೋಡಿ.
ರೈಡರ್ಗಳಿಗೆ ಗುಣಮಟ್ಟದ ಸೇವೆಯನ್ನು ನೀಡಿ
ಪಾಯಿಂಟ್ಗಳನ್ನು ಗಳಿಸುವುದರ ಜೊತೆಗೆ, ಗೋಲ್ಡ್, ಪ್ಲಾಟಿನಮ್ ಮತ್ತು ಡೈಮಂಡ್ ರಿವಾರ್ಡ್ಗಳನ್ನು ಗಳಿಸಲು ನೀವು ನಿರ್ದಿಷ್ಟ ರೇಟಿಂಗ್ಗಳನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅವಶ್ಯಕತೆಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಡ್ರೈವರ್ ಆಪ್ ಪರಿಶೀಲಿಸಿ.
ರಿವಾರ್ಡ್ಗಳನ್ನು ಪಡೆಯಿರಿ
ನೀವು ಉನ್ನತ ಸ್ಥಾನಮಾನ ಗಳಿಸಿದಷ್ಟೂ, ನೀವು ಹೊಂದುವ ರಿವಾರ್ಡ್ಗಳು ಹೆಚ್ಚಾಗುತ್ತವೆ. ಒಂದು ಸ್ಥಿರವಾದ 3 ತಿಂಗಳ ಅವಧಿಯಲ್ಲಿ ನಿಮ್ಮ ಪಾಯಿಂಟ್ಗಳು ಮತ್ತು ಗುಣಮಟ್ಟದ ರೇಟಿಂಗ್ಗಳ ಆಧಾರದ ಮೇಲೆ ನಿಮ್ಮ ಸ್ಟೇಟಸ್ ನಿರ್ಧರಿಸಲಾಗುತ್ತದೆ.
ವೇಗವಾಗಿ ರಿವಾರ್ಡ್ಗಳನ್ನು ಗಳಿಸಿ
ಪ್ರತಿದಿನ ಆಯ್ದ ಸಮಯದಲ್ಲಿ ಪೂರ್ಣಗೊಂಡ ಟ್ರಿಪ್ಗಳು ಹೆಚ್ಚುವರಿ ಪಾಯಿಂಟ್ಗಳನ್ನು ಗಳಿಸುತ್ತವೆ. ನೀವು ಯಾವಾಗ ವೇಗವಾಗಿ ಅಂಕಗಳನ್ನು ಗಳಿಸಬಹುದು ಎಂಬುದನ್ನು ನೋಡಲು ಡ್ರೈವರ್ ಆಪ್ ಅನ್ನು ಪರಿಶೀಲಿಸಿ.
ರೈಡರ್ಗಳಿಗೆ ನೀಡುವ ಗುಣಮಟ್ಟದ ಸೇವೆಯು ಹೆಚ್ಚಿನ ಬಹುಮಾನಗಳನ್ನು ತೆರೆದಿಡುತ್ತದೆ
ನೀವು Uber ಆಪ್ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಬಹುಮಾನಗಳನ್ನು ನೀಡಲಾಗುತ್ತದೆ. ಗೋಲ್ಡ್, ಪ್ಲಾಟಿನಮ್ ಮತ್ತು ಡೈಮಂಡ್ ಸ್ಟೇಟಸ್ ಅನ್ನು ತೆರೆಯಲು ಮತ್ತು ರಿವಾರ್ಡ್ಗಳನ್ನು ಪಡೆಯುವುದನ್ನು ಮುಂದುವರಿಸಲು, ನೀವು ಪಾಯಿಂಟ್ಗಳನ್ನು ಗಳಿಸಬೇಕು ಮತ್ತು ನಿರ್ದಿಷ್ಟ ರೇಟಿಂಗ್ಗಳನ್ನು ಕಾಯ್ದುಕೊಳ್ಳಬೇಕು. ಹೆಚ್ಚಿನ ಮಾಹಿತಿ ಪಡೆಯಲು, ಡ್ರೈವರ್ ಆ್ಯಪ್ನಲ್ಲಿ ಮೆನು ಐಕಾನ್ ಟ್ಯಾಪ್ ಮಾಡಿ, ನಂತರ Uber Plus ಮತ್ತು ಸ್ಕ್ರೀನ್ ಮೇಲ್ಭಾಗದ ಬಲ ಬಾಣವನ್ನು ಟ್ಯಾಪ್ ಮಾಡಿ.
ನಿಶ್ಚಿತ 3 ತಿಂಗಳ ಅವಧಿಯಲ್ಲಿ ಪಾಯಿಂಟ್ಗಳನ್ನು ಗಳಿಸಿ ಮತ್ತು ರಿವಾರ್ಡ್ಗಳನ್ನು ಆನಂದಿಸಿ
ನಿಶ್ಚಿತ 3 ತಿಂಗಳ ಅವಧಯಲ್ಲಿ ನೀವು ಪಾಯಿಂಟ್ಗಳನ್ನು ಗಳಿಸುತ್ತಿರಿ. ಪ್ರತಿ ಅವಧಿಯ ನಂತರ ಪಾಯಿಂಟ್ಗಳು ರಿಸೆಟ್ ಆಗುತ್ತವೆ.
ಮುಂದಿನ ಹಂತದ ರಿವಾರ್ಡ್ಗಳನ್ನು ತೆರೆಯಲು ನೀವು ಸಾಕಷ್ಟು ಪಾಯಿಂಟ್ಗಳನ್ನು ಗಳಿಸಿದಾಗ, ತಕ್ಷಣವೇ ನಿಮ್ಮ ಹೊಸ ರಿವಾರ್ಡ್ಗಳನ್ನು ಆನಂದಿಸುವುದನ್ನು ನೀವು ಪ್ರಾರಂಭಿಸುತ್ತೀರಿ. ಮುಂದಿನ 3 ತಿಂಗಳ ಅವಧಿಯ ಕೊನೆಯವರೆಗೂ ಬಹುಮಾನಗಳನ್ನು ಆನಂದಿಸುವುದನ್ನು ಮುಂದುವರಿಸಲು ನಿಮ್ಮ ರೇಟಿಂಗ್ ಅಧಿಕವಾಗಿ ಕಾಪಾಡಿಕೊಳ್ಳಿ ಮತ್ತು ಶೇಕಡಾವಾರು ಕ್ಯಾನ್ಸಲೇಶನ್ ಕಡಿಮೆ ಮಾಡಿಕೊಳ್ಳಿ.
ಪ್ರೋಗ್ರಾಂ ರಿವಾರ್ಡ್ಗಳು ಲೊಕೇಶನ್ ಮತ್ತು Uber Plus ಸ್ಟೇಟಸ್ಗೆ ಅನುಗುಣವಾಗಿ ಬದಲಾಗುತ್ತವೆ ಮತ್ತು ಬದಲಾವಣೆಗೆ ಒಳಪಟ್ಟಿರುತ್ತವೆ. ಈ ಪುಟದಲ್ಲಿ ವಿವರಿಸಿದ ರಿವಾರ್ಡ್ಗಳು Uber Plus ಲಭ್ಯವಿರುವ ಎಲ್ಲಾ ನಗರಗಳಲ್ಲಿ ಲಭ್ಯವಿಲ್ಲದಿರಬಹುದು. ಹೆಚ್ಚುವರಿ ಮಿತಿಗಳು ಮತ್ತು ಹೊರತುಪಡಿಸುವಿಕೆಗಳು ಅನ್ವಯಿಸುತ್ತವೆ. ಸಂಪೂರ್ಣ ವಿವರಗಳಿಗಾಗಿ ನಿಯಮಗಳು ಮತ್ತು ಷರತ್ತುಗಳು ಅನ್ನು ನೋಡಿ.
ಕಂಪನಿ