ಆತ್ಮವಿಶ್ವಾಸದಿಂದ ಚಾಲನೆ ಮಾಡಿ
ಅವಕಾಶ ಎಲ್ಲಿದ್ದರೂ ಹೋಗಲು ಸಾಧ್ಯವಾಗಲು ನೀವು ಅರ್ಹರಾಗಿರುತ್ತೀರಿ. ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನವರನ್ನು ರಕ್ಷಿಸಲು ಸಹಾಯ ಮಾಡುವ ರಸ್ತೆ ಮೇಲಿನ ಬೆಂಬಲ ಮತ್ ತು ತಂತ್ರಜ್ಞಾನದೊಂದಿಗೆ ಅಲ್ಲಿಗೆ ಹೋಗಿ.
ಸುರಕ್ಷಿತ ಅನುಭವವನ್ನು ವಿನ್ಯಾಸಗೊಳಿಸಲಾಗುತ್ತಿದೆ
ನಿಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವ ವೈಶಿಷ್ಟ್ಯಗಳು
ನಿಮ್ಮ ಪ್ರೀತಿಪಾತ್ರರು ಮತ್ತು ನಮ್ಮ ಸಪೋರ್ಟ್ ತಂಡದೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಸಹಾಯ ಮಾಡಲು ಆಪ್ ಅನ್ನು ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ, ಆದ್ದರಿಂದ ನೀವು ಇನ್ನೂ ಮುಂದಕ್ಕೆ ಹೋಗಬಹುದು.
ನಿಮಗೆ ಅಗತ್ಯವಿದ್ದಲ್ಲಿ, ಸಹಾಯ
ಆಪ್‌ನಿಂದಲೇ ಯಾವುದೇ ಸಮಯದಲ್ಲಿ ವಿಶೇಷವಾಗಿ ತರಬೇತಿ ಪಡೆದ ಅವಘಡ ಪ್ರತಿಸ್ಪಂದಿ ತಂಡಗಳು ಲಭ್ಯವಿರುತ್ತವೆ.
ಒಂದು ಅಂತರ್ಗತ ಸಮುದಾಯ
ನಗರಗಳು ಮತ್ತು ಸುರಕ್ಷತಾ ತಜ್ಞರೊಂದಿಗಿನ ನಮ್ಮ ಜಂಟಿ ಪ್ರಯತ್ನಗಳ ಮೂಲಕ ಮತ್ತು ಒಟ್ಟಾಗಿ ಕೆಲಸ ಮಾಡುವ ಮೂಲಕ, ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ನಿರ್ಮಿಸಲು ನಾವು ಸಹಾಯ ಮಾಡುತ್ತಿದ್ದೇವೆ.
ನಿಮ್ಮ ಸುರಕ್ಷತೆ ನಮ್ಮನ್ನು ಪ್ರೇರೇಪಿಸುತ್ತದೆ
ಸುರಕ್ಷತೆಯನ್ನು ಅನುಭವವಾಗಿ ವಿನ್ಯಾಸಗೊಳಿಸಲ ಾಗಿದೆ. ಆದ್ದರಿಂದ ನೀವು ರಾತ್ರಿಯಲ್ಲಿ ಡ್ರೈವ್ ಮಾಡಲು ಆರಾಮದಾಯಕತೆ ಕಂಡುಕೊಳ್ಳುತ್ತೀರಿ. ಆದ್ದರಿಂದ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ನಿಮ್ಮ ಪ್ರೀತಿಪಾತ್ರರಿಗೆ ಹೇಳಬಹುದು. ಏನಾದರೂ ಸಂಭವಿಸಿದಲ್ಲಿ ನೀವು ಯಾರನ್ನಾದರೂ ಸಹಾಯಕ್ಕೆ ಹೊಂದಿರುವಿರಿ ಎಂದು ನಿಮಗೆ ತಿಳಿದಿದೆ. *
24/7 ಅಪಘಾತ ಬೆಂಬಲ
ಅಪಘಾತ ಪ್ರತಿಸ್ಪಂದನೆಗೆ ತರಬೇತಿ ಪಡೆದ Uber ಕಸ್ಟಮರ್ ಅಸೋಸಿಯೇಟ್‌ಗಳು ದಿನವಿಡೀ ಲಭ್ಯವಿರುತ್ತಾರೆ.
ನನ್ನ ರೈಡ್ ಅನ್ನು ಅನುಸರಿಸಿ
ಸ್ನೇಹಿತರು ಮತ್ತು ಕುಟುಂಬವು ನಿಮ್ಮ ರೂಟ್ ಅನ್ನು ಅನುಸರಿಸಬಹುದು ಮತ್ತು ನೀವು ಬಂದ ಕೂಡಲೇ ತಿಳಿಯುತ್ತದೆ.
2-ವೇ ರೇಟಿಂಗ್‌ಗಳು
ನಿಮ್ಮ ಪ್ರತಿಕ್ರಿಯೆ ಅತ್ಯಂತ ಮುಖ್ಯ. ಕಡಿಮೆ-ರೇಟ್‌ನ ಟ್ರಿಪ್‌ಗಳನ್ನು ಲಾಗ್ ಮಾಡಲಾಗಿದೆ ಮತ್ತು Uber ಸಮುದಾಯವನ್ನು ರಕ್ಷಿಸಲು ಬಳಕೆದಾರರನ್ನು ತೆಗೆದುಹಾಕಬಹುದು.
ಫೋನ್ ಅನಾಮಧೇಯೀಕರಣ
ಆಪ್ ಮೂಲಕ ನಿಮ್ಮ ರೈಡರ್ ಅನ್ನು ನೀವು ಸಂಪರ್ಕಿಸಬೇಕಾದರೆ, ನಿಮ್ಮ ಫೋನ್ ನಂಬರ್ ಖಾಸಗಿಯಾಗಿಯೇ ಉಳಿಯಬಹುದು.
GPS ಟ್ರ್ಯಾಕಿಂಗ್
ಆರಂಭದಿಂದ ಮುಕ್ತಾಯಗೊಳಿಸುವ ತನಕ ಎಲ್ಲಾ Uber ಟ್ರಿಪ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ, ಆದ್ದರಿಂದ ಏನಾದರೂ ಸಂಭವಿಸಿದಲ್ಲಿ ನಿಮ್ಮ ಟ್ರಿಪ್‌ನ ದಾಖಲೆ ಇರುತ್ತದೆ.
ಎಲ್ಲರಿಗೂ ಸುರಕ್ಷಿತ ರಸ್ತೆಗಳು, ನಿಮಗೆ ಧನ್ಯವಾದಗಳು
ನಗರಗಳನ್ನು ಸುರಕ್ಷಿತವಾಗಿಸಲು ಮತ್ತು ರಸ್ತೆಗಳನ್ನು ಸ್ನೇಹಪರವಾಗಿ ಮಾಡಲು ಸಹಾಯ ಮಾಡುವುದಕ್ಕೆ ನೀವು ಪ್ರಮುಖ ಪಾತ್ರ ವಹಿಸುತ್ತೀರಿ.
ಡ್ರೈವ್ ಮಾಡುವಾಗ ಗಮನಹರಿಸುವುದು
ಪೋಸ್ಟ್ ಮಾಡಿದ ವೇಗದ ಮಿತಿಯೊಳಗೆ ನೀವು ಚಾಲನೆ ಮಾಡುತ್ತಿದ್ದೀರಿ ಎಂದು ಆ್ಯಪ್ ನಿಮಗೆ ನೆನಪಿಸುತ್ತದೆ, ಆದ್ದರಿಂದ ನೀವು ಚಾಲನೆ ಮಾಡುವಾಗ ಎಚ್ಚರವಾಗಿರಬಹುದು.
ಸುರಕ್ಷತಾ ಸಲಹೆಗಳು
ಸವಾರರನ್ನು ಪಿಕಪ್ ಮಾಡಲು ಸುರಕ್ಷಿತ ಸ್ಥಳವನ್ನು ಹುಡುಕುವುದರಿಂದ ಹಿಡಿದು ಅವರಿಗೆ ಬಕಲ್ ಅಪ್ ಮಾಡಲು ನೆನಪಿಸುವವರೆಗೆ, ನಿಮ್ಮ ಸುರಕ್ಷತೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರ ಸುರಕ್ಷತೆಯಲ್ಲಿ ನೀವು ದೊಡ್ಡ ವ್ಯತ್ಯಾಸವನ್ನು ಮಾಡಬಹುದು.
ನಮ್ಮ ಸಮುದಾಯವನ್ನು ಬಲಪಡಿಸುವುದು
Uber ನ ಸಮುದಾಯ ಮಾರ್ಗಸೂಚಿಗಳು ರೈಡರ್‌ಗಳು ಮತ್ತು ಡ್ರೈವರ್‌ಗಳ ಒತ್ತಡ ರಹಿತ ರೈಡ್ ಅನ್ನು ಆನಂದಿಸಲು ಸಹಾಯ ಮಾಡುತ್ತದೆ. ಮಾರ್ಗಸೂಚಿಗಳನ್ನು ಅನುಸರಿಸದ ಯಾವುದೇ ವ್ಯಕ್ತಿಯನ್ನು ಇಡೀ Uber ಸಮುದಾಯದ ಸುರಕ್ಷತೆಗಾಗಿ ವೇದಿಕೆಯಿಂದ ತೆಗೆದುಹಾಕುವ ಅಪಾಯವಿದೆ.
*ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಪ್ರದೇಶವಾರು ಬದಲಾಗುತ್ತವೆ ಮತ್ತು ಲಭ್ಯವಿಲ್ಲದೇ ಇರಬಹುದು.
¹ ಈ ವೈಶಿಷ್ಟ್ಯವು ಜಾರಿಗೊಳ್ಳುವ ಪ್ರಕ್ರಿಯೆಯಲ್ಲಿದೆ ಮತ್ತು ಪ್ರಸ್ತುತ ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿದೆ.