ಚಾಲಕರು Uber ನೊಂದಿಗೆ ಎಷ ್ಟು ಹಣ ಗಳಿಸಬಹುದು?
ನೀವು Uber ಆ್ಯಪ್‌ನೊಂದಿಗೆ ಚಾಲನೆ ಮಾಡುವಾಗ ಗಳಿಸುವ ಹಣವು ಯಾವಾಗ, ಎಲ್ಲಿ, ಮತ್ತು ಎಷ್ಟು ಬಾರಿ ಚಾಲನೆ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ದರಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂಬುದನ್ನು ಕಂಡುಕೊಳ್ಳಿ ಮತ್ತು ನಿಮ್ಮ ಗಳಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರಮೋಷನ್‌ಗಳ ಬಗ್ಗೆ ತಿಳಿಯಿರಿ.¹
ಗಳಿಕೆಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ
Uber ನೊಂದಿಗೆ ಡ್ರೈವ್ ಮಾಡಿ ಎಷ್ಟನ್ನು ಗಳಿಸಬಹುದು ಎಂದು ನೋಡಿದಾಗ ನೀವು ಆಶ್ಚರ್ಯ ಪಡಬಹುದು. ಪ್ರತಿ ಟ್ರಿಪ್‌ಗೆ ನೀವು ಗಳಿಸುವ ಮೊತ್ತವನ್ನು ನಿರ್ಧರಿಸಲು ಈ ಕೆಳಗಿನ ಅಂಶಗಳು ಸಹಾಯ ಮಾಡುತ್ತವೆ.
ಸರ್ಜ್
ಸವಾರರ ಬೇಡಿಕೆ ಯಾವಾಗ ಮತ್ತು ಎಲ್ಲಿ ಹೆಚ್ಚಿದೆ ಎಂದು ಕಂಡುಹಿಡಿಯಲು ನಿಮ್ಮ ಆಪ್‌ನಲ್ಲಿ ಹೀಟ್ ಮ್ಯಾಪ್ ಪರಿಶೀಲಿಸಿ, ಇದರಿಂದ ನಿಮ್ಮ ಪ್ರಮಾಣಿತ ಶುಲ್ಕಕ್ಕಿಂತ ನೀವು ಹೆಚ್ಚು ಹಣ ಗಳಿಸಬಹುದು.
ಕನಿಷ್ಠ ಟ್ರಿಪ್ ಗಳಿಕೆಗಳು
ಪ್ರತಿ ನಗರದಲ್ಲಿಯೂ ಯಾವುದೇ ಟ್ರಿಪ್‌ಗಾಗಿ ನೀವು ಗಳಿಸುವ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ. ಸಣ್ಣ ಟ್ರಿಪ್ ಗಳಲ್ಲಿಯೂ ನಿಮ್ಮ ಶ್ರಮಕ್ಕೆ ನಿಮ್ಮ ಗಳಿಕೆಯು ತಕ್ಕುದಾಗಿರುತ್ತದೆ ಎನ್ನುವುದನ್ನು ಇದು ಖಚಿತಪಡಿಸುತ್ತದೆ.
ಸೇವಾ ಶುಲ್ಕ
ಈ ಶುಲ್ಕವು ಆ್ಯಪ್ ಅಭಿವೃದ್ಧಿ ಮತ್ತು ಗ್ರಾಹಕರ ಸಹಾಯ ಸೇವೆಗಳು ಮುಂತಾದವುಗಳಿಗೆ ಹಣ ನೀಡಲು ನೆರವಾಗುತ್ತದೆ.
ರದ್ದುಮಾಡುವಿಕೆ
ಹೆಚ್ಚಿನ ಸಂದರ್ಭಗಳಲ್ಲಿ, ಸವಾರರು ವಿನಂತಿಯನ್ನು ರದ್ದುಗೊಳಿಸಿದರೆ ನೀವು ರದ್ದತಿ ಶುಲ್ಕವನ್ನು ಪಡೆಯುತ್ತೀರಿ.
ಪ್ರಮೋಷನ್‌ಗಳು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ
ನಿಮ್ಮ ಪ್ರದೇಶದಲ್ಲಿನ ಡ್ರೈವರ್ ಆ್ಯಪ್ ಹೆಚ್ಚಿನ ಸವಾರಿಯ ವಿನಂತಿಗಳನ್ನು ನಿರೀಕ್ಷಿಸುವ ಸ್ಥಳವನ್ನು ಆಧರಿಸಿ ಇನ್-ಆ್ಯಪ್ ಪ್ರಮೋಷನ್‌ಗಳು ನಿಮಗೆ ಮುಂದಿನ ಯೋಜನೆ ಮಾಡಲು ಮತ್ತು ಗಳಿಕೆಗಳನ್ನು ಗರಿಷ್ಠಗೊಳಿಸುವುದಕ್ಕಾಗಿ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ. ಎಲ್ಲಾ ಚಾಲಕರಿಗೆ ಎಲ್ಲಾ ಪ್ರಮೋಷನ್‌ಗಳು ಲಭ್ಯವಿರುವುದಿಲ್ಲ. ಕೆಳಗಿನ ನಿಯಮಗಳನ್ನು ನೋಡಿ.²
ನಿಗದಿತ ಸಂಖ್ಯೆಯ ಟ್ರಿಪ್‌ಗಳನ್ನು ತಲುಪಿ
ಕೊಡುಗೆ ಲಭ್ಯವಿರುವಾಗ ನೀವು ನಿಗದಿತ ಸಮಯದಲ್ಲಿ ನಿರ್ದಿಷ್ಟ ಸಂಖ್ಯೆ ಯ ಟ್ರಿಪ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚುವರಿ ಹಣವನ್ನು ಸಂಪಾದಿಸಬಹುದು.
ಕಾರ್ಯನಿರತ ಆಗಿರುವಾಗ ಡ್ರೈವ್ ಮಾಡುವುದು
ಕಾರ್ಯನಿರತ ಆಗಿರುವಾಗ ಕೆಲವು ಪ್ರದೇಶಗಳಲ್ಲಿನ ಟ್ರಿಪ್‌ಗಳಿಗೆ ಹೆಚ್ಚುವರಿ ಹಣ ಪಡೆಯಬಹುದು.
ಹಣ ಗಳಿಸಲು ಕೆಲವು ಮಾರ್ಗಗಳು
ಆ್ಯಪ್ ಮೂಲಕ ಮುಂದೆ ಸಾಗುವುದು
ರಸ್ತೆಯಲ್ಲಿ ನೀವು ಕಳೆಯುವ ಬಹುತೇಕ ಸಮಯವನ್ನು ಬಳಸಿಕೊಳ್ಳುವುದಕ್ಕೆ ಸಹಾಯ ಮಾಡಲು ಆ್ಯಪ್ ಪ್ರಬಲವಾದ ವೈಶಿಷ್ಟ್ಯಗಳನ್ನು ಹೊಂದಿದೆ. ಟ್ರೆಂಡ್‌ಗಳನ್ನು ಟ್ರ್ಯಾಕಿಂಗ್ ಮಾಡುವುದರಿಂದ ಹಿಡಿದು ಸಮೀಪದಲ್ಲಿ ಗಳಿಸುವ ಅವಕಾಶಗಳ ಕುರಿತು ನಿಮಗೆ ತಿಳಿಸುವವರೆಗೆ, ಆ್ಯಪ್ ರಸ್ತೆಯಲ್ಲಿರುವಾಗ ನಿಮ್ಮ ಸಾಧನವಾಗಿದೆ.
ನಿಮ್ಮ ಸೇವೆಗೆ ಟಿಪ್ಸ್ ಪಡೆಯುವುದು
ಪ್ರತಿಯೊಂದು ಟ್ರಿಪ್‌ನ ಮುಗಿಸಿದ ನಂತರ, ಸವಾರರು ನಿಮಗೆ ನೇರವಾಗಿ ಆಪ್‌ನಲ್ಲಿ ಟಿಪ್ ನೀಡಬಹುದು. ನಿಮ್ಮ 100% ಟಿಪ್ಸ್ ಅನ್ನು ನೀವು ಯಾವಾಗಲೂ ಇರಿಸಿಕೊಳ್ಳುತ್ತೀರಿ.
ನೀವು ಯಾವಾಗ ಮತ್ತು ಹೇಗೆ ಹಣಪಾವತಿ ಪಡೆಯುತ್ತೀರಿ
ವೇಗವಾಗಿ ಕ್ಯಾಶ್‌ಔಟ್ ಮಾಡಿ
ಹಣಪಾವತಿ ಪಡೆಯುವುದು ಸುಲಭವಾಗಿದೆ. ನಿಮಗೆ ಅಗತ್ಯವಿರುವುದು ಬ್ಯಾಂಕ್ ಖಾತೆ ಮಾತ್ರ. ನಿಮ್ಮ ಗಳಿಕೆಗಳನ್ನು ಪ್ರತಿ ವಾರ ವರ್ಗಾವಣೆ ಮಾಡಲಾಗುತ್ತದೆ.
ನಿಮ್ಮ ಗ್ರಾಹಕರು ನಗದು ಪಾವತಿಸಿದರೆ
ನಗದಿನ ಮೂಲಕ ನೀವು ಟ್ರಿಪ್ ಪೂರ್ಣಗೊಳಿಸಿದ ತಕ್ಷಣ ಹಣಪಾವತಿ ಪಡೆಯುತ್ತೀರಿ. ನಿಮ್ಮ ಗ್ರಾಹಕರಿಂದ ಪಡೆಯಬೇಕಿರುವ ಮೊತ್ತವನ್ನು ಆಪ್ ತೋರಿಸುತ್ತದೆ ಮತ್ತು ನೀವು Uber ಗೆ ಪಾವತಿಸಬೇಕಾದ ಶುಲ್ಕವನ್ನು ಲೆಕ್ಕಹಾಕುತ್ತದೆ.
ಡ್ರೈವಿಂಗ್ ಖರ್ಚಿನಲ್ಲಿ ಉಳಿತಾಯ
ಸ್ವಂತ ವ್ಯವಹಾರವನ್ನು ನಡೆಸುವುದು ನಿಮಗೆ ನಮ್ಯತೆಯನ್ನು ನೀಡುತ್ತದೆ ಮತ್ತು ಅಂತೆಯೇ ಖರ್ಚನ್ನೂ ತರುತ್ತದೆ. ಇಂಧನ, ವಿಮೆ ಮತ್ತು ವಾಹನ ನಿರ್ವಹಣೆಗೆ ತೆರಿಗೆ ವಿನಾಯಿತಿ ಪಡೆಯಬಹುದು ಮತ್ತು ನಿಮಗೆ ನೆರವಾಗುವ ರಿಯಾಯಿತಿಗಳನ್ನು ನೀಡಲು Uber ಪಾಲುದಾರಿಕೆಯನ್ನು ಹೊಂದಿದೆ.
ಚಾಲಕ ಆ್ಯಪ್ ಕುರಿತು ತ್ವರಿತವಾಗಿ ತಿಳಿಯಿರಿ
ಇನ್ನಷ್ಟು ತಿಳಿಯಲು ಆಸಕ್ತಿ ಇದೆಯೇ? ನೀವು Uber ನೊಂದಿಗೆ ಚಾಲನೆ ಮಾಡುವಾಗ ನಿಮಗೆ ನೆರವಾಗಲು ಇತರೆ ಚಾಲಕರ ಸಲಹೆಗಳು ಮತ್ತು ಮಾಹಿತಿಯುಕ್ತ ವೀಡಿಯೊಗಳಿಂದ ತುಂಬಿದ ಸಾಕಷ್ಟು ಸಂಪನ್ಮೂಲವನ್ನು ಹೊಂದಿದ್ದೀರಿ.