ಮುಖ್ಯ ವಿಷಯಕ್ಕೆ ತೆರಳಿ

COVID-19 ಗೆ ಸಂಬಂಧಿಸಿದಂತೆ ನಮ್ಮ ನಿಲುವು

Uber ಬಳಸುವ ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ' ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳು, ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಣಗಳಿಸುವವರಿಗೆ ಬೆಂಬಲ ಮತ್ತು ನಮ್ಮ ನಗರಗಳಿಗೆ ಸೇವೆ ಸಲ್ಲಿಸುವ ಸಹಭಾಗಿತ್ವ ಮತ್ತು ಉಪಕ್ರಮಗಳ ಮೂಲಕ COVID-19 ಬಗೆಗಿನ ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸುತ್ತಾ ಸಾಗುತ್ತಲಿದ್ದೇವೆ.

ಸಹಾಯ ಮಾಡಲು ಬದ್ಧವಾಗಿದೆ

ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಹಿರಿಯರು ಮತ್ತು ವಿಶ್ವದಾದ್ಯಂತ ಅಗತ್ಯವಿರುವ ಜನರಿಗೆ ನಾವು 10 ಮಿಲಿಯನ್ ಉಚಿತ ಸವಾರಿಗಳು ಮತ್ತು ಆಹಾರವನ್ನು ತಲುಪಿಸುತ್ತೇವೆ.

ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸುವುದು

ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ Uber ಹೆಲ್ತ್ ಉಚಿತ ಸಾರಿಗೆಯನ್ನು ಒದಗಿಸುತ್ತಿದೆ, ಆರೋಗ್ಯ ಸೌಲಭ್ಯಗಳ ನಡುವೆ ರೋಗಿಗಳ ಮನೆಗಳಿಗೆ ಮತ್ತು ಅಲ್ಲಿಂದ ಹೋಗಲು ಸಹಾಯ ಮಾಡುತ್ತದೆ."

ಮೊದಲ ಪ್ರತಿಕ್ರಿಯೆ ನೀಡುವವರಿಗೆ ಆಹಾರ ನೀಡುವುದು

Uber Eats ಲಭ್ಯವಿರುವ ಮಾರುಕಟ್ಟೆಗಳಲ್ಲಿ, ಸ್ಥಳೀಯ ಸರ್ಕಾರಗಳ ಸಮನ್ವಯದೊಂದಿಗೆ ನಾವು ಮೊದಲ ಪ್ರತಿಕ್ರಿಯೆ ನೀಡುವವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಊಟವನ್ನು ಒದಗಿಸುತ್ತಿದ್ದೇವೆ.

ಸ್ಥಳೀಯ ರೆಸ್ಟೋರೆಂಟ್‌ಗಳನ್ನು ಬೆಂಬಲಿಸುವುದು

ಕೆಲವು ಪ್ರದೇಶಗಳಲ್ಲಿ, ನಾವು Uber Eats* ‌ನಲ್ಲಿನ ಸ್ವತಂತ್ರ ರೆಸ್ಟೋರೆಂಟ್‌ಗಳಿಗೆ ಡೆಲಿವರಿ ಶುಲ್ಕವನ್ನು ಮನ್ನಾ ಮಾಡಿದ್ದೇವೆ

ಚಲಿಸುವ ಸರಬರಾಜು

Uber Freight ಕಾರ್ಯನಿರ್ವಹಿಸುವ ಮಾರುಕಟ್ಟೆಗಳಲ್ಲಿ, ನಿರ್ಣಾಯಕ ಸರಕುಗಳ ಸಾಗಣೆಯನ್ನು ಶೂನ್ಯ ಲಾಭದ ಬೆಲೆಯೊಂದಿಗೆ ಸಾಗಿಸಲಾಗುತ್ತದೆ.

ಸಾರ್ವಜನಿಕ ಅಧಿಕಾರಿಗಳನ್ನು ಬೆಂಬಲಿಸುವುದು

Uber ಬಳಸುವ ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮವು ಯಾವಾಗಲೂ ನಮ್ಮ ಆದ್ಯತೆಯಾಗಿರುತ್ತದೆ. COVID-19 ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಸಾರ್ವಜನಿಕ ಇಲಾಖೆಗಳು ಮತ್ತು ನಗರಗಳು ಕೆಲಸ ಮಾಡುತ್ತಿರುವುದರಿಂದ ನಾವು ಅವರನ್ನು ಬೆಂಬಲಿಸಲು ಬದ್ಧರಾಗಿದ್ದೇವೆ.

ಚಾಲಕರು ಮತ್ತು ಡೆಲಿವರಿ ವ್ಯಕ್ತಿಗಳಿಗೆ* ಪ್ರಮುಖವಾದ ಮಾಹಿತಿ

ಆರೋಗ್ಯ ಮತ್ತು ಸುರಕ್ಷತಾ ಸಲಹೆಗಳು

ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಸಲಹೆಯನ್ನು ಅನುಸರಿಸುವಂತೆ Uber ಬಳಸುವ ಪ್ರತಿಯೊಬ್ಬರನ್ನೂ ನಾವು ನೆನಪಿಸುತ್ತಿದ್ದೇವೆ. ನಿಮಗೆ ಅನಾರೋಗ್ಯವಿದ್ದರೆ, ಮನೆಯಲ್ಲೇ ಇರಿ ಮತ್ತು ಇತರರಿಂದ ದೂರವಿರಿ. ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿರಿ ಮತ್ತು ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ, ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿ

ಚಾಲಕರು ಮತ್ತು ಡೆಲಿವರಿ ವ್ಯಕ್ತಿಗಳು*

 • ಅತ್ಯಂತ ಪ್ರಮುಖವಾಗಿ, ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಚಾಲನೆ‌ ಮಾಡಬೇಡಿ ಅಥವಾ ಆಹಾರವನ್ನು ಡೆಲಿವರಿ* ಮಾಡಬೇಡಿ

  ನೀವು ಇದೀಗ ಮಾಡಬಹುದಾದ ಪ್ರಮುಖ ವಿಷಯವೆಂದರೆ ಸಾಧ್ಯವಾದರೆ ಮನೆಯಲ್ಲೇ ಇರುವುದು.

  ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ವೈರಸ್‌ ಹರಡುವುದನ್ನು ತಡೆಯಲು ಸಹಾಯವಾಗುತ್ತದೆ. ಚಾಲಕರನ್ನು ಸುರಕ್ಷಿತವಾಗಿಡಲು ಸಹಾಯ ಮಾಡೋಣ ಮತ್ತು ಅಗತ್ಯವಿದ್ದವರಿಗೆ ಸವಾರಿಯು ಲಭ್ಯವಿರುತ್ತದೆ ಎಂಬುದನ್ನು ಖಚಿತಪಡಿಸೋಣ.

 • ನೀವು ಡ್ರೈವ್ ಮಾಡುತ್ತಿದ್ದರೆ:

  • ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ನಿಮಗೆ ಸೀನು ಅಥವಾ ಕೆಮ್ಮು ಬರುತ್ತಿದ್ದರೆ ಬಾಯಿಗೆ ಮೊಣಕೈ ಅಥವಾ ಟಿಶ್ಯೂ ಪೇಪರ್ ಅಡ್ಡ ಇಟ್ಟುಕೊಳ್ಳಿ.
  • ಅಂತರವನ್ನು ಕಾಪಾಡಿಕೊಳ್ಳಲು ಸವಾರರಿಗೆ ಸೂಚಿಸಿ. ನಿಮಗೆ ಹೆಚ್ಚು ಸ್ಥಳವನ್ನು ನೀಡುವುದಕ್ಕಾಗಿ ಸವಾರರನ್ನು ಹಿಂದಕ್ಕೆ ಕುಳಿತುಕೊಳ್ಳಿ ಎಂದು ಕೇಳುವುದರಲ್ಲಿ ತಪ್ಪಿಲ್ಲ.
  • ಕಿಟಕಿಗಳನ್ನು ತೆರೆದುಕೊಳ್ಳಿ. ಸಾಧ್ಯವಾದರೆ, ಉತ್ತಮ ಗಾಳಿ ಬರಲು ಕಿಟಕಿಗಳನ್ನು ಕೆಳಕ್ಕೆ ಇಳಿಸಿ.
 • ನೀವು ಡೆಲಿವರಿ ಮಾಡುತ್ತಿದ್ದರೆ*

  ಮನೆಯ ಬಾಗಿಲಿನಲ್ಲೇ ಇಟ್ಟುಹೋಗಿ: Eats‌ ಗ್ರಾಹಕರು ವಿನಂತಿಸಿದರೆ, ಸಂಪರ್ಕವನ್ನು ಕಡಿಮೆ ಮಾಡುವುದಕ್ಕಾಗಿ ಡೆಲಿವರಿಗಳನ್ನು ಬಾಗಿಲಿನಲ್ಲೇ ಇಡಿ. ನಿಮ್ಮ ಕೈಗಳನ್ನು ತೊಳೆದುಕೊಳ್ಳಿ: ದಯವಿಟ್ಟು ನಿಮ್ಮ ಕೈಗಳನ್ನು ತೊಳೆಯಿರಿ ಅಥವಾ ನಿಮಗೆ ಸಾಧ್ಯವಾದಷ್ಟು ಬಾರಿ ಹ್ಯಾಂಡ್ ಸ್ಯಾನಿಟೈಜರ್ ಬಳಸಿ.
1/3

ಉಬರ್ ಗ್ರಾಹಕರು

 • ಸಾಧ್ಯವಾದರೆ ಮನೆಯಲ್ಲಿಯೇ ಇರಿ

  ನೀವು ಇದೀಗ ಮಾಡಬಹುದಾದ ಪ್ರಮುಖ ವಿಷಯವೆಂದರೆ ಸಾಧ್ಯವಾದರೆ ಮನೆಯಲ್ಲೇ ಇರುವುದು.

  ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ವೈರಸ್‌ ಹರಡುವುದನ್ನು ತಡೆಯಲು ಸಹಾಯವಾಗುತ್ತದೆ. ಚಾಲಕರನ್ನು ಸುರಕ್ಷಿತವಾಗಿಡಲು ಸಹಾಯ ಮಾಡೋಣ ಮತ್ತು ಅಗತ್ಯವಿದ್ದವರಿಗೆ ಸವಾರಿಯು ಲಭ್ಯವಿರುತ್ತದೆ ಎಂಬುದನ್ನು ಖಚಿತಪಡಿಸೋಣ.

 • ಸವಾರಿ ಮಾಡುವಾಗ:

  ನಿಮ್ಮ ಕೈಗಳನ್ನು ತೊಳೆದುಕೊಳ್ಳಿ: ನೀವು ಸವಾರಿ ಮಾಡುವುದಕ್ಕೂ ಮೊದಲು ಮತ್ತು ನಂತರ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ: ನಿಮಗೆ ಸೀನು ಅಥವಾ ಕೆಮ್ಮು ಬರುತ್ತಿದ್ದರೆ ಬಾಯಿಗೆ ಮೊಣಕೈ ಅಥವಾ ಟಿಶ್ಯೂ ಅಡ್ಡ ಇಟ್ಟುಕೊಳ್ಳಿ.
 • ಹಿಂಬದಿಯಲ್ಲಿ ಕುಳಿತುಕೊಳ್ಳಿ, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಮೂಲಕ ನಿಮ್ಮ ಚಾಲಕರಿಗೆ ಸ್ಥಳಾವಕಾಶ ನೀಡಿ. ಕಿಟಕಿಯನ್ನು ತೆರೆದುಕೊಳ್ಳಿ. ಸಾಧ್ಯವಾದರೆ, ವಾತಾಯನ ವ್ಯವಸ್ಥೆ ಸುಧಾರಿಸಲು ಕಿಟಕಿ ಇಳಿಸಿ.
 • Uber Eats* ಮೂಲಕ ಆರ್ಡರ್ ಮಾಡುವಾಗ

  • ಬಾಗಿಲಲ್ಲಿ ಡ್ರಾಪ್ಆಫ್ ಅನ್ನು ವಿನಂತಿಸಿ. ಆಪ್‌ನಲ್ಲಿ, “ಬಾಗಿಲಿನ ಬಳಿ ಇಡಿ” ಆಯ್ಕೆ ಮಾಡಿ ಅಥವಾ ನಿಮ್ಮ ಆದ್ಯತೆಗಳನ್ನು ಹಂಚಿಕೊಳ್ಳಲು ಡೆಲಿವರಿ ನೋಟ್‌ಗಳನ್ನು ಬಳಸಿ. ನೀವು 30 ನಿಮಿಷಗಳಲ್ಲಿ ಲಭ್ಯವಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಕೈಗಳನ್ನು ತೊಳೆದುಕೊಳ್ಳಿ: ಅದರಲ್ಲೂ ವಿಶೇಷವಾಗಿ ನಿಮ್ಮ ಆಹಾರದ ಆರ್ಡರ್‌ ಮಾಡಿದ ನಂತರ ಮತ್ತು ಅದನ್ನು ಸೇವಿಸುವುದಕ್ಕೂ ಮೊದಲು.
 • ನಿಮ್ಮ ಚಾಲಕರು ಮತ್ತು ಡೆಲಿವರಿ ವ್ಯಕ್ತಿಗೆ* ಟಿಪ್‌ ನೀಡಿ

  ಚಾಲಕರು ಮತ್ತು ಡೆಲಿವರಿ ವ್ಯಕ್ತಿಗಳು ಹೆಚ್ಚುವರಿ ಸಮಯದಲ್ಲಿ ಕಠಿಣ ಪರಿಶ್ರಮ ವಹಿಸುತ್ತಿದ್ದು, ಈಗ ನಿಮ್ಮ ಸಮುದಾಯಕ್ಕೆ ಬೆಂಬಲಿಸಲು ನಿರ್ಣಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ. ಟಿಪ್ಸ್‌ ಮೂಲಕ ನಿಮ್ಮ ಮೆಚ್ಚುಗೆಯನ್ನು ಅವರಿಗೆ ತಿಳಿಸಿ. ಈ ಒಂದು ಸಣ್ಣ ಮೆಚ್ಚುಗೆ ಮಹತ್ವದ ಬದಲಾವಣೆ ಮಾಡಬಲ್ಲದು.

  ಕಳೆದ 30 ದಿನಗಳಲ್ಲಿ ನೀವು ಯಾವುದೇ ಉಬರ್ ಸವಾರಿ ಅಥವಾ ಉಬರ್ ಈಟ್ಸ್ ವಿತರಣೆಗೆ ಸಲಹೆಯನ್ನು ಸೇರಿಸಬಹುದು. ಆಪ್‌ನಲ್ಲಿ ನಿಮ್ಮ ಖಾತೆ ಇತಿಹಾಸವನ್ನು ನೋಡಿ ಮತ್ತು ಯಾವ ರೈಡ್ಸ್ ಮತ್ತು ಡೆಲಿವರಿಗೆ ನೀವು ಟಿಪ್ಸ್ ನೀಡಲು ಬಯಸಿದ್ದೀರಿ ಎಂಬುದನ್ನು ಆಯ್ಕೆ ಮಾಡಿ.

 • 1/4

  ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳು

  ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಬೆಂಬಲಿಸುವುದು

  ಸಾಂಕ್ರಾಮಿಕ ರೋಗಕ್ಕೆ ಪ್ರತಿಸ್ಪಂದಿಸುತ್ತಿರುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಬೆಂಬಲಿಸಲು ನಾವೊಂದು 24/7 ತಂಡವನ್ನು ಹೊಂದಿದ್ದೇವೆ. ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾವು, COVID-19 ಗೆ ಸಂಪರ್ಕಕ್ಕೊಳಗಾಗಿರುವುದು ಅಥವಾ ಒಡ್ಡಿಕೊಂಡಿರುವುದು ದೃಢವಾದಾರೆ, ಅಂತಹ ಸವಾರರು ಅಥವಾ ಚಾಲಕರ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು. ಒಂದು ಕಂಪನಿಯಾಗಿ ನಮ್ಮ ಪ್ರಯತ್ನಗಳು ವೈದ್ಯಕೀಯ ಸಲಹೆಯ ನೆಲೆಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಂಕ್ರಾಮಿಕ ರೋಗಶಾಸ್ತ್ರಜ್ಞರೊಂದಿಗೆ ಸಮಾಲೋಚಿಸುತ್ತಿದ್ದೇವೆ.

  ಬಾಧಿತ ಚಾಲಕರಿಗೆ ಸಹಾಯ ಮಾಡುವುದು

  COVID-19 ನಿಂದ ರೋಗನಿರ್ಣಯಗೊಂಡ ಅಥವಾ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ವೈಯಕ್ತಿಕವಾಗಿ ಸ್ವಯಂ-ಪ್ರತ್ಯೇಕವಾಗಿರುವಂತೆ ಹೇಳಲ್ಪಟ್ಟ ಯಾವುದೇ ಚಾಲಕ, ತಮ್ಮ ಖಾತೆ ಹೋಲ್ಡ್ ಆಗಿರುವ ಆಗಿರುವಾಗ, 14 ದಿನಗಳ ಕಾಲ ಹಣಕಾಸು ನೆರವನ್ನು ಪಡೆಯಲಿದ್ದಾರೆ. ನಾವು ಈಗಾಗಲೇ ಕೆಲವು ಬಾಧಿತ ಪ್ರದೇಶಗಳಲ್ಲಿನ ಚಾಲಕರಿಗೆ ಸಹಾಯ ಮಾಡಿದ್ದೇವೆ, ಮತ್ತು ಇದನ್ನು ವಿಶ್ವಾದ್ಯಂತ ತ್ವರಿತವಾಗಿ ಕಾರ್ಯಗತಗೊಳಿಸಲು ನಾವು ಕಾರ್ಯೋನ್ಮುಖರಾಗಿದ್ದೇವೆ.

  ಕಾರುಗಳನ್ನು ಸ್ವಚ್ಛವಾಗಿಡಲು ನೆರವಾಗುವುದು

  ಚಾಲಕರು ತಮ್ಮ ಕಾರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಾಯ ಮಾಡಲು ಸೋಂಕುನಿವಾರಕಗಳನ್ನು ಒದಗಿಸುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ. ಸರಬರಾಜು ತುಂಬಾ ಸೀಮಿತವಾಗಿದೆ, ಆದರೆ ಸಾಧ್ಯವಾದಷ್ಟರ ಮಟ್ಟಿಗೆ ಪೂರೈಸಲು ನಾವು ತಯಾರಕರು ಮತ್ತು ವಿತರಕರ ಜೊತೆಗೆ ಪಾಲುದಾರಿಕೆ ಹೊಂದಿದ್ದೇವೆ. ಅತ್ಯಂತ ಹೆಚ್ಚಿನ ಅಗತ್ಯವಿರುವ ನಗರಗಳಲ್ಲಿನ ಚಾಲಕರಿಗೆ ವಿತರಿಸಲು ನಾವು ಆದ್ಯತೆ ನೀಡುತ್ತೇವೆ.

  ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಎತ್ತಿಹಿಡಿಯುವುದು

  ಪ್ರಸ್ತುತ ಪರಿಸ್ಥಿತಿಗೆ ಜೋಡಿಸಿಕೊಂಡು ಭೇದಭಾವ ತೋರಿದ ವರದಿಗಳಾಗಿವೆ. ಇದು ಎಂದಿಗೂ ಸರಿಯಲ್ಲ—ಪ್ರತಿಯೊಬ್ಬ ಸವಾರ ಮತ್ತು ಚಾಲಕ Uber ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ನೀರೀಕ್ಷಿಸಲಾಗಿದೆ, ಇದು ಭೇದಭಾವವನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ.

  ಚಾಲಕರಿಗೆ ಪ್ರಮುಖವಾದ ಮಾಹಿತಿ

  ನಿಮ್ಮ ಕಾರಿಗೆ ಸ್ವಚ್ಛತಾ ಸಾಮಾಗ್ರಿಗಳ ಸರಬರಾಜು

  ನಿಮ್ಮ ಕಾರನ್ನು ಸ್ವಚ್ಛವಾಗಿಡಲು ನಿಮಗೆ ಸಹಾಯ ಮಾಡಲು ಚಾಲಕರಿಗೆ ಸೋಂಕುನಿವಾರಕಗಳನ್ನು ಒದಗಿಸುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ. ಸರಬರಾಜು ತುಂಬಾ ಸೀಮಿತವಾಗಿದೆ, ಆದರೆ ಸಾಧ್ಯವಾದಷ್ಟರ ಮಟ್ಟಿಗೆ ಪೂರೈಸಲು ನಾವು ತಯಾರಕರು ಮತ್ತು ವಿತರಕರ ಜೊತೆಗೆ ಪಾಲುದಾರಿಕೆ ಹೊಂದಿದ್ದೇವೆ. ಅತ್ಯಂತ ಹೆಚ್ಚಿನ ಅಗತ್ಯವಿರುವ ನಗರಗಳಲ್ಲಿನ ಚಾಲಕರಿಗೆ ವಿತರಿಸಲು ನಾವು ಆದ್ಯತೆ ನೀಡುತ್ತೇವೆ.

  ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಬೆಂಬಲಿಸುವುದು

  ಸಾಂಕ್ರಾಮಿಕ ರೋಗಕ್ಕೆ ಪ್ರತಿಸ್ಪಂದಿಸುತ್ತಿರುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಬೆಂಬಲಿಸಲು ನಾವೊಂದು 24/7 ತಂಡವನ್ನು ಹೊಂದಿದ್ದೇವೆ. ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾವು, COVID-19 ಗೆ ಸಂಪರ್ಕಕ್ಕೊಳಗಾಗಿರುವುದು ಅಥವಾ ಒಡ್ಡಿಕೊಂಡಿರುವುದು ದೃಢವಾದಾರೆ, ಅಂತಹ ಸವಾರರು ಅಥವಾ ಚಾಲಕರ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು. ಒಂದು ಕಂಪನಿಯಾಗಿ ನಮ್ಮ ಪ್ರಯತ್ನಗಳು ವೈದ್ಯಕೀಯ ಸಲಹೆಯ ನೆಲೆಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಂಕ್ರಾಮಿಕ ರೋಗಶಾಸ್ತ್ರಜ್ಞರೊಂದಿಗೆ ಸಮಾಲೋಚಿಸುತ್ತಿದ್ದೇವೆ.

  ನೀವು ಚಾಲನೆ ಮಾಡದೇ ಇರುವುದಾದರೆ ಬೆಂಬಲ

  COVID-19 ನಿಂದ ರೋಗನಿರ್ಣಯಗೊಂಡ ಅಥವಾ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ವೈಯಕ್ತಿಕವಾಗಿ ಸ್ವಯಂ-ಪ್ರತ್ಯೇಕವಾಗಿರುವಂತೆ ಹೇಳಲ್ಪಟ್ಟ ಯಾವುದೇ ಚಾಲಕ, ತಮ್ಮ ಖಾತೆ ಹೋಲ್ಡ್ ಆಗಿರುವ ಆಗಿರುವಾಗ, 14 ದಿನಗಳ ಕಾಲ ಹಣಕಾಸು ನೆರವನ್ನು ಪಡೆಯಲಿದ್ದಾರೆ. ನಾವು ಈಗಾಗಲೇ ಕೆಲವು ಬಾಧಿತ ಪ್ರದೇಶಗಳಲ್ಲಿನ ಚಾಲಕರಿಗೆ ಸಹಾಯ ಮಾಡಿದ್ದೇವೆ, ಮತ್ತು ಇದನ್ನು ವಿಶ್ವಾದ್ಯಂತ ತ್ವರಿತವಾಗಿ ಕಾರ್ಯಗತಗೊಳಿಸಲು ನಾವು ಕಾರ್ಯೋನ್ಮುಖರಾಗಿದ್ದೇವೆ.

  ನಿಮ್ಮ Uber Pro ಸ್ಟೇಟಸ್ ಅನ್ನು ಕಾಪಾಡಿಕೊಳ್ಳುವುದು

  ನಿಮ್ಮ Uber Pro ಸ್ಟೇಟಸ್ ಅನ್ನು ಕಳೆದುಕೊಳ್ಳುವ ಕುರಿತು ನೀವು ಚಿಂತಿಸಬೇಕಾಗಿಲ್ಲ. ಈ ಅರ್ಹತಾ ಅವಧಿಯ ಉಳಿದ ಭಾಗಕ್ಕಾಗಿ ನಾವು ಎಲ್ಲಾ ಚಾಲಕರ ಪ್ರಸ್ತುತ Uber Pro ಸ್ಟೇಟಸ್ ಅನ್ನು ರಕ್ಷಿಸುತ್ತಿದ್ದೇವೆ.