Uber ಅಫಿಲಿಯೇಟ್ ಪ್ರೋಗ್ರಾಂಗೆ ಸೇರಿಕೊಳ್ಳಿ
ನೀವು ಪ್ರೋಗ್ರಾಂಗೆ ಸೇರಿದಾಗ, ಮೊದಲ ಟ್ರಿಪ್ ತೆಗೆದುಕೊಳ್ಳುವ ಅಥವಾ ಮೊದಲ ಆರ್ಡರ್ ಮಾಡುವ ಹೊಸ ಬಳಕೆದಾರರಿಗೆ ನೀವು ಕಮಿಷನ್‌ಗಳನ್ನು ಗಳಿಸಬಹುದು.
ನಾವು ಅಫಿಲಿಯೇಟ್ ಪಾರ್ಟ್‌ನರ್ ಜೊತೆಗೆ ಹೇಗೆ ಕಾರ್ಯನಿರ್ವಹಿಸುತ್ತೇವೆ
ನಮ್ಮ ಅಫಿಲಿಯೇಟ್ ಪ್ರೋಗ್ರಾಂ ಸ್ವಾಧೀನ ಕೇಂದ್ರಿತವಾಗಿದೆ ಮತ್ತು ತಮ್ಮ ಮೊದಲ ಟ್ರಿಪ್ ಅನ್ನು ತೆಗೆದುಕೊಳ್ಳುವ ಅಥವಾ ತಮ್ಮ ಮೊದಲ ಆರ್ಡರ್ ಅನ್ನು ಮಾಡುವ ಬಳಕೆದಾರರಿಗೆ ನಾವು ಕಮಿಷನ್‌ಗಳನ್ನು ಪಾವತಿಸುತ್ತೇವೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ವಿವರ ಇಲ್ಲಿದೆ:
1. ಅರ್ಜಿ ಸಲ್ಲಿಸಿ
ಅಫಿಲಿಯೇಟ್ ಪಾರ್ಟ್‌ನರ್ ಆಗಲು ಅರ್ಜಿ ಸಲ್ಲಿಸಲು ಮೇಲೆ ಲಿಂಕ್ ಮಾಡಲಾದ ನಮೂನೆಯನ್ನುಭರ್ತಿ ಮಾಡಿ.
2. Uber ಮತ್ತು Uber Eats ಅನ್ನು ಪ್ರಚಾರ ಮಾಡಿ
ಈ ಉತ್ಪನ್ನಗಳನ್ನು ನಿಮ್ಮ ವೆಬ್ ಅಥವಾ ಆ್ಯಪ್ ಪ್ರೇಕ್ಷಕರಿಗೆ ಶಿಫಾರಸು ಮಾಡಿ.
3. ಕಮಿಷನ್‌ಗಳನ್ನು ಗಳಿಸಿ
ಅವರ ಅರ್ಹ ಮೊದಲ ಟ್ರಿಪ್‌ಗಳು ಮತ್ತು ಮೊದಲ ಆರ್ಡರ್‌ಗಳಿಗೆ ನೀವು ಆದಾಯವನ್ನು ಪಡೆಯುತ್ತೀರಿ.
Uber ಮತ್ತು Uber Eats ಬಗ್ಗೆ
ಜಗತ್ತು ಉನ್ನತಿಯತ್ತ ಸಾಗುವ ಹಾದಿಯನ್ನು ಮರುಕಲ್ಪಿಸುವುದು Uber ನ ಉದ್ದೇಶವಾಗಿದೆ. ನಮ್ಮ ಪ್ರಯಾಣವು 2010 ರಲ್ಲಿ "ಒಂದು ಬಟನ್ ಟ್ಯಾಪ್ ಮಾಡುವಷ್ಟು ಸುಲಭವಾಗಿ ಸವಾರಿಯನ್ನು ಆ್ಯಕ್ಸೆಸ್ ಮಾಡುವುದು" ಎಂಬ ಸರಳ ಗುರಿಯೊಂದಿಗೆ ಆರಂಭವಾಯಿತು. 52 ಶತಕೋಟಿಗೂ ಹೆಚ್ಚು ಸಂಚಿತ ಚಲನಶೀಲತೆ ಮತ್ತು ಡೆಲಿವರಿ ಟ್ರಿಪ್‌ಗಳನ್ನು ಮಾಡಿರುವ Uber, ನಗರಗಳಾದ್ಯಂತ ಜನರು, ಆಹಾರ ಮತ್ತು ವಸ್ತುಗಳನ್ನು ಸಾಗಿಸಲು ಸಹಾಯ ಮಾಡುವ ಸೇವೆಗಳನ್ನು ನೀಡುವ ಮೂಲಕ ಜಾಗತಿಕವಾಗಿ ಪ್ರವೇಶ ಮತ್ತು ಸಂಪರ್ಕಗಳನ್ನು ವಿಸ್ತರಿಸುತ್ತಾ ವಿಕಸನಗೊಳ್ಳುತ್ತಲೇ ಇದೆ.
6 ಖಂಡಗಳಲ್ಲಿ 10,000 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯಾಚರಣೆಗಳೊಂದಿಗೆ, Uber ನ ವಿಶಾಲ ಮಾರುಕಟ್ಟೆ ವ್ಯಾಪ್ತಿ ಮತ್ತು ಬಲವಾದ ಬ್ರ್ಯಾಂಡ್ ಮನ್ನಣೆಯು ಜಾಗತಿಕವಾಗಿ ತಮ್ಮ ಗೋಚರತೆ ಮತ್ತು ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುವ ಕಂಪನಿಗಳಿಗೆ ಅನುಕೂಲಕರ ಪಾಲುದಾರರನ್ನಾಗಿ ಮಾಡುತ್ತದೆ.
ಸವಾರಿ ಹಂಚಿಕೆಯ ಹೊರತಾಗಿ, ಆಹಾರ ಡೆಲಿವರಿಯಂತಹ ಇತರ ಕ್ಷೇತ್ರಗಳಲ್ಲಿಯೂ Uber ಮುಂಚೂಣಿಯಲ್ಲಿದೆ. ಇದು ವಿವಿಧ ಗ್ರಾಹಕರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಪಾರ್ಟ್‌ನರ್‌ಗಳಿಗೆ Uber ನ ಸೇವೆಗಳನ್ನು ಬಳಸಲು ಹೆಚ್ಚುವರಿ ಅವಕಾಶಗಳನ್ನು ಒದಗಿಸುತ್ತದೆ.
ಆಗಾಗ ಕೇಳಲಾಗುವ ಪ್ರಶ್ನೆಗಳು
- Uber ಅಫಿಲಿಯೇಟ್ ಪ್ರೋಗ್ರಾಂಗೆ ಸೇರಲು ನಾನು ಹೇಗೆ ಅರ್ಜಿ ಸಲ್ಲಿಸುವುದು?
Uber ಪಾರ್ಟ್‌ನರ್ ಆಗುವುದಕ್ಕೆ ನಿಮ್ಮನ್ನು ಪರಿಗಣಿಸಲು ದಯವಿಟ್ಟು ಈ ನಮೂನೆಯನ್ನು ಭರ್ತಿ ಮಾಡಿ.
- ನಾನು ಏಕೆ ಸೇರಬೇಕು?
Down Small Uber ನ ವ್ಯಾಪಕ ಜಾಗತಿಕ ಉಪಸ್ಥಿತಿ ಮತ್ತು ವ್ಯಾಪಕ ಬಳಕೆದಾರರ ಸಂಖ್ಯೆಯಿಂದಾಗಿ ಅಫಿಲಿಯೇಟ್‌ಗಳಿಗೆ ಗಮನಾರ್ಹ ಸಂಭಾವ್ಯ ಪ್ರೇಕ್ಷಕರು ಸಿಗುತ್ತಾರೆ. ಈ ವಿಶಾಲ ವ್ಯಾಪ್ತಿಯು ನಿಮ್ಮ ಗೋಚರತೆ ಮತ್ತು ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ನಾನು ಕಮಿಷನ್‌ಗಳನ್ನು ಹೇಗೆ ಗಳಿಸಬಹುದು?
Down Small Uber ಜೊತೆಗೆ ತಮ್ಮ ಮೊದಲ ಟ್ರಿಪ್ ಅಥವಾ Uber Eats ಜೊತೆಗೆ ತಮ್ಮ ಮೊದಲ ಆರ್ಡರ್ ಅನ್ನು ಪೂರ್ಣಗೊಳಿಸುವ ಹೊಸ ಬಳಕೆದಾರರಿಂದಾಗಿ ನೀವು ಕಮಿಷನ್‌ಗಳನ್ನು ಗಳಿಸುತ್ತೀರಿ.
- ನಾನು ಯಾವ ಕಮಿಷನ್‌ಗಳನ್ನು ಗಳಿಸುತ್ತೇನೆ?
Down Small ನಾವು ನೀಡಬಹುದಾದ ಕಮಿ ಷನ್ ದರವು ನಿಮ್ಮ ಟಾರ್ಗೆಟ್ ಪ್ರೇಕ್ಷಕರು, ನೀವು ಕಾರ್ಯನಿರ್ವಹಿಸುವ ದೇಶ ಮತ್ತು ಇನ್ನಷ್ಟನ್ನು ಆಧರಿಸಿದೆ. ನೀವು ನಮ್ಮ ಪ್ರೋಗ್ರಾಂಗೆ ಸೇರಿದ ನಂತರ ಕಮಿಷನ್ ದರಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ.
- ನಾನು ಯಾವ ಉತ್ಪನ್ನಗಳಿಗೆ ಜಾಹೀರಾತು ನೀಡಬಹುದು?
Down Small ನಮ್ಮ ಗ್ರಾಹಕ ಉತ್ಪನ್ನಗಳಲ್ಲಿ Uber ಮತ್ತು Uber Eats ಒಳಗೊಂಡಿವೆ. ಹೊಸ ಬಳಕೆದಾರರನ್ನು ಪಡೆಯುವುದು ನಮ್ಮ ಗುರಿ. ಹೊಸ ಚಾಲಕರು ಮತ್ತು ಡೆಲಿವರಿ ಪಾರ್ಟ್‌ನರ್‌ಗಳು ತಮ್ಮ ಮೊದಲ ಟ್ರಿಪ್ ಅನ್ನು ತೆಗೆದುಕೊಂಡಾಗ ಕಮಿಷನ್ ಅನ್ನು ಅಫಿಲಿಯೇಟ್ ಪಾಲುದಾರರಿಗೆ ಪಾವತಿ ಮಾಡುವ ಪ್ರೋಗ್ರಾಂ ಅನ್ನೂ ನಾವು ಹೊಂದಿದ್ದೇವೆ.
- ಪಾರ್ಟ್‌ನರ್ ಆಗಲು ನನ್ನ ವೆಬ್ಸೈಟ್ ಅಥವಾ ಆ್ಯಪ್ ಅರ್ಹವಾಗಿದೆಯೇ?
Down Small ಎಲ್ಲ ಅರ್ಜಿದಾರರನ್ನು ನಮ್ಮ ಪ್ರೋಗ್ರಾಂಗೆ ಸೇರಿಸಲಾಗುವುದು ಎಂದು ನಾವು ಖಾತರಿ ನೀಡುವುದಿಲ್ಲ. ಸಂಭಾವ್ಯ ಪಾರ್ಟ್‌ನರ್‌ಗಳ ಬ್ರಾಂಡ್ ಸುರಕ್ಷತೆ, ಸಕ್ರಿಯ ಬಳಕೆದಾರರ ಸಂಖ್ಯೆ, ಟ್ರ್ಯಾಕಿಂಗ್ ಸಾಮರ್ಥ ್ಯಗಳು, ಮಾಧ್ಯಮ ವೆಚ್ಚ ಮತ್ತು ಇನ್ನಷ್ಟನ್ನು ಆಧರಿಸಿ ನಾವು ಅವರನ್ನು ಪರಿಶೀಲಿಸುತ್ತೇವೆ. ನಿಮ್ಮೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಆಶಿಸುತ್ತೇವೆ.
- ಅಫಿಲಿಯೇಟ್ ಪಾರ್ಟ್‌ನರ್ ಆಗಲು ಶುಲ್ಕವಿದೆಯೇ?
Down Small ಇಲ್ಲ, ಯಾವುದೇ ಶುಲ್ಕಗಳಿಲ್ಲ ಮತ್ತು ಇದಕ್ಕೆ ಉಚಿತವಾಗಿ ಸೇರಬಹುದಾಗಿದೆ.