Please enable Javascript
Skip to main content

ಗುಸ್ ಫುಲ್ಡ್ನರ್

ಹಿರಿಯ ಉಪಾಧ್ಯಕ್ಷ, ಸುರಕ್ಷತೆ ಮತ್ತು ಕೋರ್ ಸೇವೆಗಳು

ಗಸ್ ಫುಲ್ಡ್ನರ್ ಅವರು ಸುರಕ್ಷತೆ ಮತ್ತು ಕೋರ್ ಸೇವೆಗಳ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಸುರಕ್ಷತೆ, ಗ್ರಾಹಕ ಬೆಂಬಲ, ಪಾವತಿಗಳು, ವಿಮೆ ಮತ್ತು ವಿಸ್ತೃತ ಟೆಕ್ ಪರಿಹಾರಗಳು ಸೇರಿದಂತೆ ನಿರ್ಣಾಯಕ ಕ್ರಾಸ್-ಕಂಪನಿ ಕಾರ್ಯಗಳನ್ನು ಒಗ್ಗೂಡಿಸುವ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ. ಈ ಹುದ್ದೆಗೆ ಮುಂಚಿತವಾಗಿ, ಅವರು ಸುರಕ್ಷತೆ ಮತ್ತು ವಿಮಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2013 ರಲ್ಲಿ ಗಸ್‌ ಅವರು Uber ಗೆ ಸೇರಿದಾಗಿನಿಂದ, ಅವರು ರೈಡ್‌ಶೇರ್ ಉದ್ಯಮಕ್ಕಾಗಿ ವಿಮೆಯ ಆರಂಭಿಕ ಅಭಿವೃದ್ಧಿ ಮತ್ತು Uber ನ ಅದ್ಭುತ US ಸುರಕ್ಷತಾ ವರದಿಯ‌ ಜವಾಬ್ದಾರಿ ವಹಿಸಿದ್ದರು.

Uber ಸೇವೆಗೆ ಮುಂಚಿತವಾಗಿ, ಗಸ್ ಅವರು Uber‌ ನ ಮೊದಲ ಹೂಡಿಕೆದಾರ ಸಂಸ್ಥೆಗಳಲ್ಲೊಂದಾದ Benchmark ನಲ್ಲಿಉಪಾಧ್ಯಕ್ಷರಾಗಿದ್ದರು, ಅಲ್ಲಿ ಅವರು Uber ನಲ್ಲಿ ಸಂಸ್ಥೆಯ ಹೂಡಿಕೆಗಳಲ್ಲಿ ಮತ್ತು Snapchat ಮತ್ತು Duo Security ಸೇರಿದಂತೆ ಇತರ ಮೊಬೈಲ್ ಆ್ಯಪ್‌ಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗಸ್ ಅವರು ನ್ಯೂಯಾರ್ಕ್ ಮತ್ತು ಹಾಂಗ್‌ಕಾಂಗ್‌ನಲ್ಲಿರುವ McKinsey & Company ಯಲ್ಲಿ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಗಸ್ ಅವರು ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಪಡೆದರು, ಅಲ್ಲಿ ಅವರು ಅರ್ಜಯ್ ಮಿಲ್ಲರ್ ಸ್ಕಾಲರ್ ಆಗಿದ್ದರು ಮತ್ತು ಯೇಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನ ಮತ್ತು ಅರ್ಥಶಾಸ್ತ್ರದಲ್ಲಿ ಬಿಎಸ್ ಪದವಿ ಪಡೆದರು. ಮೂಲತಃ ವಿಸ್ಕೊನ್ಸಿನ್‌ ಇಲ್ಲಿನ ಮಿಲ್ವಾಕೀ ನಗರದವರಾದ ಗಸ್ ಅವರು ಈಗ ತಮ್ಮ ಪತ್ನಿ ಮತ್ತು ಮಗನೊಂದಿಗೆ ಬೇ ಏರಿಯಾದಲ್ಲಿ ವಾಸಿಸುತ್ತಿದ್ದಾರೆ.