Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಜಿಲ್ ಹೇಝೆಲ್‌ಬೇಕರ್

ಹಿರಿಯ ಉಪಾಧ್ಯಕ್ಷ, ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ವ್ಯವಹಾರಗಳು

ಜಿಲ್ ಹೇಝೆಲ್‌ಬೇಕರ್ ಅವರು Uber ನಲ್ಲಿ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ವ್ಯವಹಾರಗಳ ಹಿರಿಯ ಉಪಾಧ್ಯಕ್ಷೆಯಾಗಿದ್ದಾರೆ. ಅವರು ಕಂಪನಿಯ ಮಾರ್ಕೆಟಿಂಗ್, ಸಂವಹನ ಮತ್ತು ಸಾರ್ವಜನಿಕ ನೀತಿ ಪ್ರಯತ್ನಗಳ ಜವಾಬ್ದಾರಿ ಹೊಂದಿರುವ ಜಾಗತಿಕ ತಂಡಗಳನ್ನು ಮುನ್ನಡೆಸುತ್ತಿದ್ದಾರೆ.

Uber ಗೆ ಸೇರುವ ಮೊದಲು, ಜಿಲ್ ಅವರು Snap Inc ನಲ್ಲಿ ಸಂವಹನ ಮತ್ತು ಸಾರ್ವಜನಿಕ ನೀತಿಯನ್ನು ಮುನ್ನಡೆಸಿದ್ದರು. Snap‌ ಗೆ ಮುಂಚಿತವಾಗಿ, ಜಿಲ್ Google ಗಾಗಿ ಕೆಲಸ ಮಾಡಿದ್ದರು, ಅಲ್ಲಿ ಅವರು ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಸಂವಹನಗಳ ವಿಭಾಗವನ್ನು ಮುನ್ನಡೆಸಿದ್ದರು ಹಾಗೂ ಯುರೋಪ್‌ನಲ್ಲಿ ಸರ್ಕಾರಿ ಸಂಬಂಧಗಳನ್ನು ಮುನ್ನಡೆಸಿದ್ದರು. Google‌ ಸೇವೆಯ ಆರಂಭದಲ್ಲಿ, ಜಿಲ್ ಅವರು ಕಂಪನಿಯ ಕಾರ್ಪೊರೇಟ್ ಸಂವಹನ ತಂಡವನ್ನು ನಡೆಸುತ್ತಿದ್ದರು.

ಜಿಲ್ ಅವರು ಯುಎಸ್ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಅನೇಕ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಚುನಾವಣಾ ಪ್ರಚಾರಗಳಲ್ಲಿ ನಾಯಕತ್ವ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2009 ರಲ್ಲಿ, ಜಿಲ್ ಅವರು ತಮ್ಮ ಯಶಸ್ವಿ ಮರುಚುನಾವಣೆ ಪ್ರಚಾರದ ಸಮಯದಲ್ಲಿ ನ್ಯೂಯಾರ್ಕ್ ನಗರದ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2008 ರಲ್ಲಿ, ಜಿಲ್ ಅವರು ದಿವಂಗತ ಸೆನೆಟರ್ ಜಾನ್ ಮೆಕ್‌ಕೇನ್ ಅವರ ಅಧ್ಯಕ್ಷೀಯ ಪ್ರಚಾರಕ್ಕಾಗಿ ರಾಷ್ಟ್ರೀಯ ಸಂವಹನ ನಿರ್ದೇಶಕರು ಮತ್ತು ಮುಖ್ಯ ವಕ್ತಾರರಾಗಿದ್ದರು ಮತ್ತು ಈಗ McCain Institute ಟ್ರಸ್ಟಿಗಳ ಮಂಡಳಿಯಲ್ಲಿದ್ದಾರೆ.

2020ರಲ್ಲಿ, Fortune ಮತ್ತು Ad Age ನ 40 ವರ್ಷದೊಳಗಿನ 40 ಪಟ್ಟಿಗಳೆರಡರಲ್ಲೂ ಜಿಲ್ ಅವರು ಸ್ಥಾನ ಪಡೆದಿದ್ದರು ಹಾಗೂ ಈ ಮೂಲಕ ತಂತ್ರಜ್ಞಾನ ಉದ್ಯಮದಲ್ಲಿ ಪ್ರಮುಖ ಮಹಿಳಾ ನಾಯಕಿಯೆಂದು ಅವರನ್ನು ಗುರುತಿಸಲಾಗಿದೆ. ಒರೆಗಾನ್ ಮೂಲದ ಜಿಲ್ ಈಗ ತಮ್ಮ ಪತಿ ಮತ್ತು 3 ಚಿಕ್ಕ ಮಕ್ಕಳು ಹಾಗೂ ತಮ್ಮ ಗೋಲ್ಡನ್‌ ರಿಟ್ರೀವರ್‌ನೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸಿಸುತ್ತಿದ್ದಾರೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو