ದಾರಾ ಖೊಸ್ರೋಶಾಹಿ ಅವರು Uber ನ ಸಿಇಒ ಆಗಿದ್ದಾರೆ, ಇಲ್ಲಿ ಅವರು 2017 ರಿಂದ ವಿಶ್ವದ 70 ಕ್ಕೂ ಹೆಚ್ಚು ದೇಶಗಳಲ್ಲಿ ಕಂಪನಿಯ ವ್ಯವಹಾರವನ್ನು ನಿರ್ವಹಿಸಿದ್ದಾರೆ.
ದಾರಾ ಈ ಹಿಂದೆ ಎಕ್ಸ್‌ಪೀಡಿಯಾ ಸಂಸ್ಥೆಯ ಸಿಇಒ ಆಗಿದ್ದರು ಹಾಗೂ ವಿಶ್ವದ ಅತಿದೊಡ್ಡ ಆನ್‌ಲೈನ್ ಪ್ರಯಾಣ ಕಂಪನಿಗಳಲ್ಲಿ ಅದನ್ನು ಒಂದಾಗಿ ಮಾಡಿದರು. ಎಂಜಿನಿಯರಿಂಗ್ ಮತ್ತು ಹಣಕಾಸು ಎರಡರ ಹಿನ್ನೆಲೆಯನ್ನು ಹೊಂದಿರುವ ಅನುಭವಿ ಕಾರ್ಯನಿರ್ವಾಹಕರಾದ ದಾರಾ ಅವರು ಎಕ್ಸ್‌ಪೀಡಿಯಾದ ಕೊಡುಗೆಗಳನ್ನು ಹೆಚ್ಚಿಸಿದ ಹಲವಾರು ಸ್ವಾಧೀನಗಳ ಮೇಲ್ವಿಚಾರಣೆ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಹಾಗೂ ಮೊಬೈಲ್‌ನಲ್ಲಿ ಕೂಡ ಬಹಳಷ್ಟು ಹೂಡಿಕೆ ಮಾಡಿದ್ದರು, ಇದು ಈಗ ಎಕ್ಸ್‌ಪೀಡಿಯಾದ ಟ್ರಾಫಿಕ್‌ನ ಅರ್ಧಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ. ಅವರು ಎಕ್ಸ್‌ಪೀಡಿಯಾ ಉದ್ಯೋಗಿಗಳ ಅಪಾರ ಪ್ರೀತಿಗೆ ಪಾತ್ರರಾಗಿದ್ದರು ಮತ್ತು Glassdoor ನಲ್ಲಿ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ಸಿಇಒಗಳಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟಿದ್ದಾರೆ. ಐಎಸಿ ಯ ವಿಭಾಗವಾದ ಐಎಸಿ ಟ್ರಾವೆಲ್ ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ದಾರಾ ಅವರಿಗೆ ಎಕ್ಸ್‌ಪೀಡಿಯಾ ಸಿಇಒ ಆಗಿ ಭಡ್ತಿ ನೀಡಲಾಯಿತು. ಎಕ್ಸ್‌ಪೀಡಿಯಾ ಕಂಪನಿಯನ್ನು ಐಎಸಿ 2002ರಲ್ಲಿ ಖರೀದಿಸಿತ್ತು ಮತ್ತು 2005ರಲ್ಲಿ ಅದನ್ನು ವಿಸ್ತರಿಸಿತ್ತು. ಐಎಸಿ ಯ ಟ್ರಾವೆಲ್ ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೋ ವಿಸ್ತರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಐಎಸಿ ಗೆ ಸೇರುವ ಮೊದಲು, ದಾರಾ ಅವರು ಅಲೆನ್ & ಕಂಪನಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಮತ್ತು ಹಲವಾರು ವರ್ಷಗಳ ಕಾಲ ವಿಶ್ಲೇಷಕರಾಗಿದ್ದರು. ಅವರು ಪ್ರಸ್ತುತ ಎಕ್ಸ್‌ಪೀಡಿಯಾ ಮತ್ತು Catalyst.org ನ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಈ ಹಿಂದೆ ನ್ಯೂಯಾರ್ಕ್ ಟೈಮ್ಸ್ ಕಂಪನಿಯ ಮಂಡಳಿಯಲ್ಲಿದ್ದರು. ಅವರು 9 ನೇ ವಯಸ್ಸಿನಲ್ಲಿ ಇರಾನಿಯನ್ ಕ್ರಾಂತಿಯ ಸಮಯದಲ್ಲಿ ಇರಾನ್ ತೊರೆದ ನಂತರ ವಿಶ್ವದಾದ್ಯಂತ ಬಿಕ್ಕಟ್ಟಿನಲ್ಲಿರುವ ನಿರಾಶ್ರಿತರಿಗಾಗಿ ಮುಕ್ತಮನಸ್ಸಿನಿಂದ ದುಡಿಯುವ ವಕೀಲರಾಗಿದ್ದಾರೆ.
ದಾರಾ ನ್ಯೂಯಾರ್ಕ್ ನ ಟ್ಯಾರಿಟೌನ್‌ನಲ್ಲಿ ಬೆಳೆದರು ಮತ್ತು ಬ್ರೌನ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಬ್ಯಾಚಲರ್ ಪದವಿಯನ್ನು ಪಡೆದರು.
ಕುರಿತು