Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಮ್ಮ ಜನರು ಮತ್ತು ಸಂಸ್ಕೃತಿಯಲ್ಲಿ ಹೂಡಿಕೆ ಮಾಡುವುದು

2017 ರಲ್ಲಿ, ನಾವು ವಿರಾಮ ತೆಗೆದುಕೊಂಡೆವು ಮತ್ತು ನಾವು ಯಾರಾಗಬೇಕೆಂದು ಬಯಸುತ್ತೇವೆ ಎಂಬುದನ್ನು ಪರಾಮರ್ಶಿಸಲು ಆತ್ಮಾವಲೋಕನ ಮಾಡಿಕೊಂಡೆವು. Uber ನ ಇಂದಿನ ಸ್ಥಿತಿಯನ್ನು ರೂಪಿಸುವಲ್ಲಿ ಅದೊಂದು ನಿರ್ಣಾಯಕ ಕ್ಷಣವಾಗಿತ್ತು. ಕೋವಿಂಗ್ಟನ್ ವರದಿಯು ನಾವು ಎಲ್ಲಿ ಸುಧಾರಿಸಬೇಕಾಗಿದೆ ಎಂಬುದನ್ನು ಬಹಿರಂಗಪಡಿಸಲು ಯಾವುದನ್ನೂ ಮರೆಮಾಚದೆ ವ್ಯವಹಾರದ ಪ್ರತಿಯೊಂದು ಅಂಶದತ್ತವೂ ಬೆಳಕು ಚೆಲ್ಲಿದೆ. ಅದು ನಿರಾಕರಿಸಲಾಗದ ಕಠಿಣ ಸತ್ಯಗಳನ್ನು ಎತ್ತಿ ತೋರಿಸಿದೆ ಮತ್ತು ನಾಯಕತ್ವದ ಮೇಲ್ವಿಚಾರಣೆಯನ್ನು ಮರುವಿನ್ಯಾಸಗೊಳಿಸಲು, ಉದ್ಯೋಗಿ ನೀತಿಗಳು ಮತ್ತು ಪದ್ಧತಿಗಳನ್ನು ಬದಲಾಯಿಸಲು, ಸಂಸ್ಕೃತಿಯನ್ನು ಮರುರೂಪಿಸಲು ಮತ್ತು ಹೆಚ್ಚಿನದನ್ನು ಮಾಡಲು Uber ಗೆ ಒಂದು ಹಾದಿಯನ್ನು ತೋರಿಸಿದೆ. ಸಮಯಾವಧಿಯಲ್ಲಿ ಕ್ರಮೇಣ ಮತ್ತು ಸುಸ್ಥಿರ ಬದಲಾವಣೆಗಳನ್ನು ಮಾಡುವ ಮೂಲಕ, Uber ನಮ್ಮ ಸಂಸ್ಕೃತಿಯನ್ನು ಮರುನಿರ್ಮಾಣ ಮಾಡಿದೆ ಮತ್ತು ಮರುರೂಪಿಸಿದೆ. ಐದು ವರ್ಷಗಳ ನಂತರ, ವೈವಿಧ್ಯತೆಯು ನಮ್ಮನ್ನು ಹೇಗೆ ಸುದೃಢಗೊಳಿಸುತ್ತಿದೆ ಮತ್ತು ಜಗತ್ತನ್ನು ಉತ್ತಮದೆಡೆಗೆ ಸಾಗಿಸಲು ಹೆಚ್ಚು ಸಮಾನ ಮತ್ತು ಅಂತರ್ಗತ ವಾತಾವರಣವನ್ನು ನಿರ್ಮಿಸಲು ನಮಗೆ ಹೇಗೆ ಅನುವು ಮಾಡಿಕೊಡುತ್ತಿದೆ ಎಂಬುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.

ಉದ್ಯೋಗಿಗಳು ಆಯ್ಕೆಗಳನ್ನು ಹೊಂದಿರುವ ಹೊಸ ಯುಗದಲ್ಲಿ ನಾವಿದ್ದೇವೆ ಮತ್ತು ನಾವು ಸ್ವಯಂತೃಪ್ತಿ ಪಟ್ಟುಕೊಂಡು ಇತರರು ಮಾಡುವುದನ್ನು ನಕಲಿಸಲು ಸಾಧ್ಯವಿಲ್ಲ. ಕಳೆದ 5 ವರ್ಷಗಳಲ್ಲಿ ನಮ್ಮ ಅತ್ಯಮೂಲ್ಯ ಆಸ್ತಿಯಾಗಿರುವ ನಮ್ಮ ಜನರಲ್ಲಿ ನಾವು ಮಾಡಿದ ಹೂಡಿಕೆ ಅತ್ಯಂತ ಮಹತ್ವದ ಸಾಂಸ್ಕೃತಿಕ ಪರಿವರ್ತನೆಯಾಗಿದೆ. ನಮಗೆ ಸೇರಿರುವ ಎಂಬ ಭಾವನೆ ಹಾಗೂ ಉದ್ದೇಶ, ಬೆಳವಣಿಗೆ ಮತ್ತು ನಂಬಿಕೆಯ ಪ್ರಜ್ಞೆಯನ್ನು ಬೆಳೆಸುವ ಪರಿಸರವನ್ನು ನಿರ್ಮಿಸಲು Uber ನಿರಂತರವಾಗಿ ಕಾರ್ಯತತ್ಪರವಾಗಿದೆ. ನಾವು ಈ ವರ್ಷದ ವರದಿಯನ್ನು ರಚಿಸುವಾಗ, ನಮ್ಮ ಜನರು ಮತ್ತು ಸಂಸ್ಕೃತಿಯನ್ನು ರೂಪಿಸುವ ಆಳವಾದ ಒಳನೋಟಗಳನ್ನು ಒದಗಿಸುವುದರತ್ತ ನಾವು ಗಮನಹರಿಸಿದ್ದೇವೆ.

ವೈವಿಧ್ಯತೆಗೆ ನಾಯಕತ್ವದ ಬದ್ಧತೆ

ನಾವು Uber ನಲ್ಲಿ ಜನಸಂಖ್ಯಾ ವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಸಕ್ರಿಯವಾಗಿ ಜನಾಂಗೀಯ ವಿರೋಧಿ ಕಂಪನಿಯಾಗಲು ಹಾಗೂ ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ಮಿತ್ರರಾಗಲು ಬದ್ಧರಾಗಿದ್ದೇವೆ. ನಮ್ಮ ಕಾರ್ಯನಿರ್ವಾಹಕ ನಾಯಕತ್ವ ತಂಡವು ಗುರಿಗಳನ್ನು ನಿಗದಿಪಡಿಸುವ ಮೂಲಕ ಮತ್ತು ತಮ್ಮ ತಂಡಗಳಲ್ಲಿನ ಪ್ರಾತಿನಿಧ್ಯದ ಕುರಿತ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಮೂಲಕ ಇದನ್ನು ಸಾಕಾರಗೊಳಿಸಲು ಶ್ರಮಿಸುತ್ತಿದೆ.

"ಕಳೆದ 5 ವರ್ಷಗಳ ಅವಧಿಯಲ್ಲಿ ಪ್ರಗತಿಯು ನಿಧಾನವಾಗಿದೆ ಮತ್ತು ಅಸಾಧ್ಯವೆಂದು ಭಾವಿಸಿದ ಕ್ಷಣಗಳಿವೆ. ಹಿನ್ನೋಟದಲ್ಲಿ, ನಮ್ಮ ಬದಲಾವಣೆಯ ವೇಗವು ಅದ್ಭುತವಾಗಿದೆ. ವಿಶೇಷವಾಗಿ ಎಲ್ಲಾ ಆರ್ಥಿಕ, ಸಾಮಾಜಿಕ ಮತ್ತು ಮಾರ್ಕೆಟ್‌ಪ್ಲೇಸ್ ಬದಲಾವಣೆಗಳಿಂದಾಗಿ ಪಯಣವು ಒಂದೇ ರೀತಿ ಆಗಿರುವುದಿಲ್ಲ, ಆದರೆ ಅದು ಪ್ರಮುಖವಾಗಿದೆ. ಅಗತ್ಯವಿದ್ದಾಗ ಹಾದಿಯನ್ನು ಬೇಕಿದ್ದಂತೆ ಹೊಂದಿಸಲು ನಾವು ಸದಾ ಸಿದ್ಧರಿದ್ದೇವೆ. ಈಗ, ವಿಶೇಷವಾಗಿ, ಪ್ರಪಂಚವು ಹಿಂದೆಂದಿಗಿಂತಲೂ ಹೆಚ್ಚು ಧ್ರುವೀಕೃತ ಮತ್ತು ಅಸ್ಥಿರವಾಗಿರುವಂತೆ ತೋರುತ್ತಿರುವುದರಿಂದ ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆಯನ್ನು ಮುನ್ನಡೆಸಲು ಸಂಸ್ಥೆಗಳ ಪಾತ್ರವು ಬಹಳ ಮುಖ್ಯವಾಗಿದೆ.

ಬೊ ಯಂಗ್ ಲೀ, ಮುಖ್ಯ D&I ಅಧಿಕಾರಿ

"ನಮ್ಮ ಧ್ಯೇಯ ಮತ್ತು ಮೌಲ್ಯಗಳು ನಾವು ಯಾರನ್ನು ಆಕರ್ಷಿಸುತ್ತೇವೆ ಮತ್ತು ಉಳಿಸಿಕೊಳ್ಳುತ್ತೇವೆ ಎಂಬುದನ್ನು ಒಳಗೊಂಡಂತೆ ಒಂದು ಸಂಸ್ಥೆಯಾಗಿ ನಮ್ಮನ್ನು ಮುನ್ನಡೆಸುತ್ತವೆ. ನಮ್ಮ ಧ್ಯೇಯೋದ್ದೇಶದಿಂದ ಪ್ರೇರಿತರಾದ ಮತ್ತು ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳುವ ಜನರು ನಮ್ಮೊಂದಿಗೆ ಸೇರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಕೆಲಸವನ್ನು ಮಾಡಬಹುದು ಮತ್ತು ಪ್ರಪಂಚದ ಮೇಲೆ ನಿಜವಾಗಿಯೂ ಪ್ರಭಾವ ಬೀರಬಹುದು. ಆದರೆ ಧ್ಯೇಯೋದ್ದೇಶಗಳು ಮತ್ತು ಸುದೃಢ ಮೌಲ್ಯಗಳು ಕೇವಲ ಒಂದು ಪುಟದಲ್ಲಿದ್ದರೆ ಸಾಕಾಗದು—ಅವುಗಳು ನಮ್ಮ ಉದ್ಯೋಗಿಗಳ ದಿನನಿತ್ಯದ ಅನುಭವದಲ್ಲಿ ಸಾಕಾರಗೊಳ್ಳಬೇಕು. ಉದ್ಯೋಗಿಗಳು ತಮ್ಮ ಪಯಣದ ಪ್ರತಿ ಹಂತದಲ್ಲೂ ನಮ್ಮ ಮೌಲ್ಯಗಳನ್ನು ಅನುಭವಿಸುತ್ತಾರೆ ಹಾಗೂ ಈ ಮೂಲಕ ವೈಯಕಿಕವಾಗಿ ಹಾಗೂ ನಮ್ಮ ಸಮುದಾಯದ ಭಾಗವಾಗಿ ಅವರ ಅಗತ್ಯತೆಗಳನ್ನು ಅವುಗಳು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಸಂಸ್ಥೆಯಾದ್ಯಂತ ಕೆಲಸ ಮಾಡುತ್ತಿದ್ದೇವೆ. ನಮ್ಮ ಜನರು ಮತ್ತು ನಮ್ಮ ವ್ಯವಹಾರವು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ನಾವು ಹೆಚ್ಚು ಗಮನಹರಿಸಿದ್ದೇವೆ."

ನಿಕ್ಕಿ ಕೃಷ್ಣಮೂರ್ತಿ, ಮುಖ್ಯ ಜನಾಧಿಕಾರಿ

ನಮ್ಮ ಕಾರ್ಯಪಡೆಯ ವಿವರಗಳು

Uber ನಲ್ಲಿ, ನಮ್ಮ ಜನಸಂಖ್ಯಾ ದತ್ತಾಂಶವನ್ನು ಟ್ರ್ಯಾಕ್ ಮಾಡುವಲ್ಲಿ ನಾವು ಶ್ರದ್ಧೆಯನ್ನು ಹೊಂದಿದ್ದೇವೆ ಮತ್ತು ಜಾಗತಿಕವಾಗಿ ಮಹಿಳೆಯರ ಪ್ರಾತಿನಿಧ್ಯವನ್ನು ಮತ್ತು US ನಲ್ಲಿ ಕಡಿಮೆ ಪ್ರಾತಿನಿಧ್ಯದ ಜನರ (URP) ಪ್ರಾತಿನಿಧ್ಯವನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ. ಹಾಗಿದ್ದರೂ, ಹೆಚ್ಚುತ್ತಿರುವ ಲಾಭಗಳು ಯಾವಾಗಲೂ ಒಂದೇ ರೀತಿ ಆಗಿರುವುದಿಲ್ಲ, ಆದರೆ ನಮ್ಮ ನಿರ್ದೇಶಕರ ಮಂಡಳಿಯ ಸಹಕಾರದೊಂದಿಗೆ ನಾವು ಸೂಚಕಗಳು ಮತ್ತು ಸಂಬಂಧಿತ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ.

ಜಾಗತಿಕ ಪ್ರಾತಿನಿಧ್ಯ¹

ಕಾರ್ಯಪಡೆಯ ವೈವಿಧ್ಯತೆ (ಜಾಗತಿಕ)

%ಪುರುಷರು%ಮಹಿಳೆಯರು

ಕಾರ್ಯಪಡೆಯ ವೈವಿಧ್ಯತೆ (US)

%ಬಿಳಿಯ
%ಏಷ್ಯನ್
%ಕರಿಯ ಅಥವಾ ಆಫ್ರಿಕನ್ ಅಮೆರಿಕನ್
%ಹಿಸ್ಪಾನಿಕ್ ಅಥವಾ ಲ್ಯಾಟಿನ್ಕ್ಸ್
%ಬಹುಜನಾಂಗೀಯ
%ಹವಾಯಿಯನ್ ಸಂಜಾತ ಅಥವಾ ಇತರ ಪೆಸಿಫಿಕ್ ಐಲ್ಯಾಂಡರ್
%ಅಮೆರಿಕನ್ ಇಂಡಿಯನ್ ಅಥವಾ ಅಲಾಸ್ಕಾ ಸಂಜಾತ

ಕಾರ್ಯಪಡೆಯ ವೈವಿಧ್ಯತೆ (ಪ್ರಾದೇಶಿಕ)

%ಪುರುಷರು%ಮಹಿಳೆಯರು

ನಾಯಕತ್ವದ ಪ್ರಾತಿನಿಧ್ಯ

ಕಾರ್ಯಪಡೆಯ ವೈವಿಧ್ಯತೆ (ಜಾಗತಿಕ)¹

%ಪುರುಷರು%ಮಹಿಳೆಯರು

ಕಾರ್ಯಪಡೆಯ ವೈವಿಧ್ಯತೆ (US)²

%ಬಿಳಿಯ
%ಏಷ್ಯನ್
%ಕರಿಯ ಅಥವಾ ಆಫ್ರಿಕನ್ ಅಮೆರಿಕನ್
%ಹಿಸ್ಪಾನಿಕ್ ಅಥವಾ ಲ್ಯಾಟಿನ್ಕ್ಸ್
%ಬಹುಜನಾಂಗೀಯ
%ಹವಾಯಿಯನ್ ಸಂಜಾತ ಅಥವಾ ಇತರ ಪೆಸಿಫಿಕ್ ಐಲ್ಯಾಂಡರ್
%ಅಮೆರಿಕನ್ ಇಂಡಿಯನ್ ಅಥವಾ ಅಲಾಸ್ಕಾ ಸಂಜಾತ

ಹೊಸ ನೇಮಕಾತಿಗಳ ಪ್ರಾತಿನಿಧ್ಯ

ಹೊಸ ನೇಮಕಾತಿಗಳ ಪ್ರಾತಿನಿಧ್ಯ

%ಪುರುಷರು%ಮಹಿಳೆಯರು

% ಪ್ರಕಾರ ಹೊಸ ನೇಮಕಾತಿಗಳ ಜನಾಂಗೀಯ ಪ್ರತಿನಿಧಿತ್ವ

%ಬಿಳಿಯ
%ಏಷ್ಯನ್
%ಕರಿಯ ಅಥವಾ ಆಫ್ರಿಕನ್ ಅಮೆರಿಕನ್
%ಹಿಸ್ಪಾನಿಕ್ ಅಥವಾ ಲ್ಯಾಟಿನ್ಕ್ಸ್
%ಬಹುಜನಾಂಗೀಯ
%ಹವಾಯಿಯನ್ ಸಂಜಾತ ಅಥವಾ ಇತರ ಪೆಸಿಫಿಕ್ ಐಲ್ಯಾಂಡರ್
%ಅಮೆರಿಕನ್ ಇಂಡಿಯನ್ ಅಥವಾ ಅಲಾಸ್ಕಾ ಸಂಜಾತ

¹ಸಂಖ್ಯೆಗಳು ಈ ಕೆಳಗಿನ ದಿನಾಂಕಗಳಲ್ಲಿ ಜನಸಂಖ್ಯಾ ಡೇಟಾವನ್ನು ಪ್ರತಿಬಿಂಬಿಸುತ್ತವೆ: 2022 ಡಿಸೆಂಬರ್ 31, 2021 ರಂತೆ; 2021 ಮಾರ್ಚ್ 31, 2021 ರಂತೆ; 2020 ಆಗಸ್ಟ್ 31, 2020 ರಂತೆ; 2019 ಮಾರ್ಚ್ 31, 2019 ರಂತೆ. ಹಿಂದಿನ ವರ್ಷಗಳ ಕಾರ್ಯಪಡೆ ಪ್ರಾತಿನಿಧ್ಯ ಡೇಟಾಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಆಯಾ ವರದಿಗಳಲ್ಲಿ ಕಾಣಬಹುದು. ಸಮಯದ ಚೌಕಟ್ಟುಗಳು ಮತ್ತು ವರ್ಗ ವ್ಯಾಖ್ಯಾನಗಳಿಗೆ ಸಂಬಂಧಿಸಿದ ಮಾಹಿತಿ ಸೇರಿದಂತೆ ಹೆಚ್ಚಿನ ಜನಸಂಖ್ಯಾ ಡೇಟಾಕ್ಕಾಗಿ, ದಯವಿಟ್ಟು ನಮ್ಮ ಪೂರ್ಣ ಜನರು ಮತ್ತು ಸಂಸ್ಕೃತಿ ವರದಿಯನ್ನು ನೋಡಿ.

ಹಿಂದಿನ ಜನರು ಮತ್ತು ಸಂಸ್ಕೃತಿ ವರದಿಗಳು

ಪ್ರತಿ ವರ್ಷ, ಮಾನವ ಬಂಡವಾಳ ನಿರ್ವಹಣೆಗೆ ನಮ್ಮ ವಿಧಾನವನ್ನು ಹಂಚಿಕೊಳ್ಳಲು ನಾವು ನಮ್ಮ ಜನರು ಮತ್ತು ಸಂಸ್ಕೃತಿ ವರದಿಯನ್ನು ಪ್ರಕಟಿಸುತ್ತೇವೆ; ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ; ಮತ್ತು ಸಂಸ್ಕೃತಿ. ನಾವು ನವೀಕರಿಸಿದ ಪ್ರಾತಿನಿಧ್ಯ ಡೇಟಾವನ್ನು ಹಂಚಿಕೊಳ್ಳುತ್ತೇವೆ ಮತ್ತು ನಮ್ಮ ಗುರಿಗಳತ್ತ ಸಾಗುವಲ್ಲಿ ನಾವು ಹೇಗೆ ಪ್ರಗತಿ ಸಾಧಿಸುತ್ತಿದ್ದೇವೆ ಎಂಬುದನ್ನು ವಿವರಿಸುತ್ತೇವೆ. ವರದಿಯು ನಮ್ಮ ಕಾರ್ಯಪಡೆಯ ಡೇಟಾ ಮತ್ತು ಮಾನವ ಬಂಡವಾಳ ಪದ್ಧತಿಗಳ ಸುತ್ತ ಪಾರದರ್ಶಕತೆಯನ್ನು ಹೆಚ್ಚಿಸುವ ನಮ್ಮ ವಿಧಾನದ ನಿರ್ಣಾಯಕ ಅಂಶವಾಗಿದೆ. ನಮ್ಮ ಹಿಂದಿನ ವರ್ಷಗಳ ಸಂಪೂರ್ಣ ವರದಿಗಳನ್ನು ಆಕ್ಸೆಸ್‌ ಮಾಡಲು ಕೆಳಗಿನ ಲಿಂಕ್‌ಗಳನ್ನು ನೋಡಿ.

1/4