Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಬಳಕೆಯ ಪ್ರವೇಶಿಸುವಿಕೆ

ನಮ್ಮ ತಂತ್ರಜ್ಞಾನ ಮತ್ತು ಚಾಲಕರು ಒದಗಿಸುವ ಸಾರಿಗೆಯು ಬಹಳಷ್ಟು ಅಂಗವಿಕಲ ಜನರಿಗೆ ನಡೆದಾಡುವ ಶಕ್ತಿ ನೀಡಿದೆ, ಮತ್ತು ಪ್ರತಿಯೊಬ್ಬರೂ ತಮ್ಮ ಸಮುದಾಯಗಳನ್ನು ಸುಲಭವಾಗಿ ಚಲಿಸುವ ಸಾಮರ್ಥ್ಯವನ್ನು ಬೆಂಬಲಿಸುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.

ಅಂಗವಿಕಲ ಸವಾರರು

ಈ ರೀತಿಯ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಅಂಗವಿಕಲ ಸವಾರರಿಗೆ ಚಲನಶೀಲತೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸಲು Uber ತಂತ್ರಜ್ಞಾನ ಸಹಾಯ ಮಾಡುತ್ತದೆ:

ನಗದುರಹಿತ ಪಾವತಿಗಳು

Uber ನ ನಗದುರಹಿತ ಪಾವತಿ ಆಯ್ಕೆಯು ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಿರುವ ಕಾರಣ, ಸವಾರರು ಹಣವನ್ನು ಎಣಿಸುವ ಬಗ್ಗೆ ಅಥವಾ ಚಾಲಕರೊಂದಿಗೆ ಬಿಲ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಹೆಚ್ಚೇನು ಚಿಂತಿಸಬೇಕಾಗಿಲ್ಲ.

ಬೇಡಿಕೆಯ ಮೇರೆಗೆ ಸಾರಿಗೆ

ಅಂಗವಿಕಲ ಸವಾರರು ಬಟನ್ ಸ್ಪರ್ಶಿಸುವ ಮೂಲಕ A ಇಂದ B ಗೆ ಪ್ರಯಾಣಿಸಲು Uber ಆ್ಯಪ್ ಇನ್ನಷ್ಟು ಸುಲಭಗೊಳಿಸುತ್ತದೆ. ಅವರು ಇನ್ನು ಮುಂದೆ ರವಾನೆದಾರರ ಮೂಲಕ ಸವಾರಿಗಳನ್ನು ವ್ಯವಸ್ಥೆ ಮಾಡಬೇಕಾಗಿಲ್ಲ ಅಥವಾ ಇತರೆ, ಕಡಿಮೆ ಅನುಕೂಲಕರ ಸವಾರಿಯನ್ನು ಹುಡುಕುವ ವಿಧಾನಗಳನ್ನು ಆಶ್ರಯಿಸಬೇಕಾಗಿಲ್ಲ.

ಮುಂಗಡ ಬೆಲೆ ನಿಗದಿ

ಸವಾರಿಯನ್ನು ವಿನಂತಿಸುವ ಮೊದಲು ಸವಾರರು ತಮ್ಮ ಟ್ರಿಪ್‌ನ ವೆಚ್ಚವನ್ನು ತಿಳಿಸಲು Uber ಮುಂಗಡ ಬೆಲೆಗಳನ್ನು ಬಳಸುತ್ತದೆ. ಇದು ಅವರಿಗೆ ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ವಂಚನೆಯ ಅಪಾಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತಾರತಮ್ಯ ವಿರೋಧಿ ನೀತಿಗಳು

ಸವಾರ ಮಾಡುವ ಪ್ರತಿಯೊಂದು ಟ್ರಿಪ್ ವಿನಂತಿಯು Uber ಆ್ಯಪ್‌ನಲ್ಲಿ ಹತ್ತಿರದ ಡ್ರೈವರ್‌ಗೆ ಸ್ವಯಂಚಾಲಿತವಾಗಿ ಮ್ಯಾಚ್ ಆಗುತ್ತದೆ, ಇದು ವಿಶ್ವಾಸಾರ್ಹ, ಕೈಗೆಟುಕುವ ಸಾರಿಗೆಯನ್ನು ಭದ್ರಪಡಿಸುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಕಾನೂನುಬಾಹಿರ ತಾರತಮ್ಯದ ಅವಕಾಶಗಳನ್ನು ಕಡಿಮೆ ಮಾಡುತ್ತದೆ.

ಸೇವಾ ಪ್ರಾಣಿ ನೀತಿಗಳು

ಕುರುಡು ಅಥವಾ ಕಡಿಮೆ ದೃಷ್ಟಿ ಸಾಮರ್ಥ್ಯವನ್ನು ಹೊಂದಿರುವ ಮತ್ತು ಸೇವಾ ಪ್ರಾಣಿಗಳ ಜೊತೆಗೆ ಪ್ರಯಾಣಿಸುತ್ತಿರುವ ಸವಾರರಿಗಾಗಿ, Uber ಸಮುದಾಯ ಮಾರ್ಗಸೂಚಿಗಳು ಮತ್ತು ಸೇವಾ ಪ್ರಾಣಿ ನೀತಿಯ ಪ್ರಕಾರ ಸೇವಾ ಪ್ರಾಣಿಗಳ ಸಾಗಣೆಗೆ ಸಂಬಂಧಿಸಿದಂತೆ ಅನ್ವಯವಾಗುವ ಎಲ್ಲಾ ಕಾನೂನುಗಳನ್ನು ಚಾಲಕರು ಸ್ಪಷ್ಟವಾಗಿ ಅನುಸರಿಸಬೇಕು.

ನಿಮ್ಮ ETA ಮತ್ತು ಸ್ಥಳವನ್ನು ಹಂಚಿಕೊಳ್ಳಿ

ಸವಾರರು ತಮ್ಮ ಮನಸ್ಸಿನ ಶಾಂತಿಗಾಗಿ, ತಮ್ಮ ಸವಾರಿ ವಿವರಗಳನ್ನು ನಿರ್ದಿಷ್ಟ ಮಾರ್ಗ ಮತ್ತು ಆಗಮನದ ಅಂದಾಜು ಸಮಯ ಸೇರಿದಂತೆ ಇನ್ನೂ ಕೆಲವು ಮಾಹಿತಿಗಳನ್ನು ಪ್ರೀತಿಪಾತ್ರರ ಜೊತೆಗೆ ಸುಲಭವಾಗಿ ಹಂಚಿಕೊಳ್ಳಬಹುದು. ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಸ್ವೀಕರಿಸುವ ಲಿಂಕ್‌ನಲ್ಲಿ, ಅವರು ಚಾಲಕನ ಹೆಸರು, ಫೋಟೋ ಮತ್ತು ವಾಹನ ಮಾಹಿತಿಯನ್ನು ನೋಡಬಹುದು, ಮತ್ತು ಸವಾರರು ತಮ್ಮ ತಲುಪಬೇಕಾದ ಸ್ಥಳಕ್ಕೆ ತಲುಪುವವರೆಗೆ ನೈಜ ಸಮಯದಲ್ಲಿ ನಕ್ಷೆಯಲ್ಲಿ ಎಲ್ಲಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡಬಹುದು-ಇದೆಲ್ಲರೂ Uber ಡೌನ್‌ಲೋಡ್ ಮಾಡದೆಯೇ ಸಾಧ್ಯವಿದೆ.

ನಡೆದಾಡಲು ಸಾಧ್ಯವಾಗದ ಸವಾರರು

WAV (ಗಾಲಿಕುರ್ಚಿ-ಪ್ರವೇಶಿಸಬಹುದಾದ ವಾಹನಗಳು) ಸೇರಿದಂತೆ ನಡೆದಾಡಲು ಸಾಧ್ಯವಿಲ್ಲದ ಅಂಗವಿಕಲ ಸವಾರರಿಗೆ ನೀಡುವ ಸಾರಿಗೆ ಸೇವೆಯನ್ನು ಹೆಚ್ಚು ಸುಲಭವಾಗಿಸಲು ಮತ್ತು ವಿಶ್ವಾಸಾರ್ಹವಾಗಿಸಲು ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ.

ಸುಸಜ್ಜಿತ ವಾಹನಗಳು

ಮಡಚಲಾಗದ ಯಾಂತ್ರಿಕೃತ ಗಾಲಿಕುರ್ಚಿಗಳನ್ನು ಬಳಸುವ ಸವಾರರಿಗೆ ರಾಂಪ್‌ಗಳು ಅಥವಾ ಲಿಫ್ಟ್‌ಗಳನ್ನು ಹೊಂದಿದ ಗಾಲಿಕುರ್ಚಿ-ಪ್ರವೇಶಿಸಬಹುದಾದ ವಾಹನಗಳಲ್ಲಿ ಚಾಲಕರೊಂದಿಗೆ ಸಂಪರ್ಕ ಸಾಧಿಸಲು ಉಬರ್‌ನ WAV ಅವಕಾಶ ಮಾಡಿಕೊಡುತ್ತದೆ.

ಜಗತ್ತಿನೆಲ್ಲೆಡೆ ಲಭ್ಯವಿದೆ

ಸವಾರರು ಮತ್ತು ಚಾಲಕರ ಅಗತ್ಯತೆಗಳನ್ನು ಯಾವ ಗಾಲಿಕುರ್ಚಿ-ಪ್ರವೇಶಿಸಬಹುದಾದ ವಾಹನ ಆಯ್ಕೆಗಳು ಉತ್ತಮವಾಗಿ ಪೂರೈಸುತ್ತವೆ ಎಂಬುದನ್ನು ನಿರ್ಧರಿಸಲು ನಾವು ವಿಶ್ವದ ಹಲವಾರು ನಗರಗಳಲ್ಲಿ (ಬೆಂಗಳೂರು, ಬೋಸ್ಟನ್, ಚಿಕಾಗೊ, ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಫಿಲಡೆಲ್ಫಿಯಾ, ಸ್ಯಾನ್ ಫ್ರಾನ್ಸಿಸ್ಕೊ, ಟೊರೊಂಟೊ ಮತ್ತು ವಾಷಿಂಗ್ಟನ್, ಡಿಸಿ ಸೇರಿದಂತೆ) ಹಲವಾರು WAV ಮಾದರಿಗಳನ್ನು ಬಳಸುತ್ತಿದ್ದೇವೆ.

“[WAV] ಪ್ರಾರಂಭಿಸುವ ಮೂಲಕ, Uber ಗಾಲಿಕುರ್ಚಿ-ಪ್ರವೇಶಿಸಬಹುದಾದ ವಾಹನಗಳ ಅಗತ್ಯವಿರುವ ಜನರು ಕೇವಲ ಬಟನ್ ಸ್ಪರ್ಶಿಸಿದರೆ ಸಾಕು, ಅವರ ಬೇಡಿಕೆಯ ಸವಾರಿಯನ್ನು ಕೋರುವ ಅವಕಾಶವನ್ನು ಒದಗಿಸುತ್ತಿದೆ. ಅಂಗವಿಕಲ ವ್ಯಕ್ತಿಗಳ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿರುವ ಸಂಸ್ಥೆಯಾಗಿ, ಗಾಲಿಕುರ್ಚಿ-ಪ್ರವೇಶಿಸಬಹುದಾದ ವಾಹನಗಳನ್ನು ಬಯಸುವ ನಮ್ಮಲ್ಲಿ ಆಯ್ಕೆಗಳನ್ನು ವಿಸ್ತಾರಗೊಳಿಸಲು ನಾನು Uber ಸಂಸ್ಥೆಯನ್ನು ಶ್ಲಾಘಿಸುತ್ತೇನೆ.”

—ಎರಿಕ್ ಲಿಪ್ಪ್, ಎಕ್ಸಿಕ್ಯೂಟೀವ್ ಡೈರೆಕ್ಟರ್, ಓಪನ್ ಡೋರ್ಸ್ ಆರ್ಗನೈಸೇಶನ್

"ಪ್ರಪಂಚದಾದ್ಯಂತ ಸಾರಿಗೆ ಸೌಲಭ್ಯವನ್ನು ಅವಲಂಬಿಸಿರುವ ಲಕ್ಷಾಂತರ ಜನರಿಗೆ UberX ಗೇಮ್ ಚೇಂಜರ್ ಆಗಿದೆ, ಮತ್ತು ಹೆಚ್ಚು ಗ್ರಾಹಕ ಆಯ್ಕೆಗಳು ಮತ್ತು ಅವಕಾಶಗಳನ್ನು ಒದಗಿಸಲು Uber ಅದೇ ಸೃಜನಶೀಲ ಜಾಣ್ಮೆಯನ್ನು ಅಳವಡಿಸಿಕೊಂಡಿರುವುದನ್ನು ನೋಡಿ ನಾನು ಪುಳಕಿತನಾಗಿದ್ದೇನೆ.... ಗಾಲಿಕುರ್ಚಿ-ಪ್ರವೇಶಿಸಬಹುದಾದ ವಾಹನಗಳನ್ನು ಅವಲಂಬಿಸಿರುವ ಜನರಿಗೆ ಕೇವಲ ಬಟನ್ ಟ್ಯಾಪ್ ಮಾಡುವ ಮೂಲಕ ಸವಾರಿಯನ್ನು ಪಡೆಯಲು WAV ಅಧಿಕಾರ ನೀಡುತ್ತದೆ.”

—ಟೋನಿ ಕೊಯೆಲ್ಹೋ, ಸಹ-ಲೇಖಕ, ಅಂಗವಿಕಲ ಅಮೆರಿಕನ್ನರ ಕಾಯ್ದೆ

“ಈ ಶತಮಾನದಲ್ಲಿ ಇಲ್ಲಿಯವರೆಗೆ ನನಗೆ ಮತ್ತು ನನ್ನಂತಹ ಎಷ್ಟೋ ದೃಷ್ಟಿಹೀನರಿಗೆ ಸ್ವಾತಂತ್ರ್ಯ ಸವಾರಿಯ ವಿಚಾರದಲ್ಲಿ Uber ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ನಾನು ನಂಬುತ್ತೇನೆ.”

—ಮೈಕ್ ಮೇ, ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ, BVI Workforce Innovation Center, Envision Inc.

ಕಿವುಡ ಅಥವಾ ಆಲಿಸಲು ಕಷ್ಟಪಡುವ ಸವಾರರು

Uber ಆ್ಯಪ್‌ನ ಪೂರ್ಣ ಕಾರ್ಯಕ್ಕೆ ಆಡಿಯೊ ಅಗತ್ಯವಿಲ್ಲ. ಗೋಚರಿಸುವ ಮತ್ತು ಕಂಪಿಸುವ ಎಚ್ಚರಿಕೆಗಳಂತಹ ಸಹಾಯಕ ತಂತ್ರಜ್ಞಾನವು ಕಿವುಡ ಅಥವಾ ಶ್ರವಣಹೀನ ಸವಾರರು Uber ಆ್ಯಪ್ ಅನ್ನು ಸುಲಭವಾಗಿ ಬಳಸಲು ಸಹಾಯ ಮಾಡುತ್ತದೆ ಮತ್ತು ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸುವ ಸಾಮರ್ಥ್ಯದಂತಹ ಆ್ಯಪ್‌ನಲ್ಲಿನ ವೈಶಿಷ್ಟ್ಯಗಳು ಸವಾರರು ಮತ್ತು ಚಾಲಕರ ನಡುವೆ ಮೌಖಿಕ ಸಂವಹನಕ್ಕೆ ಅನುಕೂಲ ಮಾಡಿಕೊಡಬಹುದು.

ನೆರವಿನ ಅಗತ್ಯವಿರುವ ಸವಾರರು

Uber ನಲ್ಲಿ, ನಾವು ಎಲ್ಲರಿಗೂ, ಎಲ್ಲೆಡೆಯೂ ಸಾರಿಗೆ ಪರಿಹಾರಗಳಿಗೆ ಪ್ರವೇಶವನ್ನು ಹೆಚ್ಚಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ಸಹಾಯಕ್ಕಾಗಿ ಎದುರು ನೋಡುತ್ತಿರುವ ಜನರಿಗೆ ಹೆಚ್ಚುವರಿ ನೆರವು ನೀಡಲೆಂದು Assist ವಿನ್ಯಾಸಗೊಳಿಸಲಾಗಿದೆ. Assist ನೊಂದಿಗೆ, ಟಾಪ್-ರೇಟೆಡ್ ಚಾಲಕರು ತಮ್ಮ ವಾಹನಗಳಿಗೆ ಸವಾರರನ್ನು ಬರಮಾಡಿಕೊಳ್ಳುವಲ್ಲಿ ಸಹಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಥರ್ಡ್-ಪಾರ್ಟಿ ಸಂಸ್ಥೆಗಳಿಂದ ಸ್ವತಂತ್ರ ತರಬೇತಿಯನ್ನು ಪಡೆದುಕೊಳ್ಳಬಹುದು. Assist ಸೇವೆಯು ಸದ್ಯಕ್ಕೆ ಜಗತ್ತಿನಾದ್ಯಂತ 40 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.

ಅಂಗವಿಕಲ Uber Eats ಗ್ರಾಹಕರು

ಕುರುಡು ಅಥವಾ ದೃಷ್ಟಿಹೀನ ಗ್ರಾಹಕರು

iOS VoiceOver ಮತ್ತು Android TalkBack ಜೊತೆಗೆ, ಕುರುಡ ಮತ್ತು ಮಂದದೃಷ್ಟಿಯ ಗ್ರಾಹಕರು ಕೇವಲ ಬಟನ್ ಸ್ಪರ್ಶಿಸುವ ಮೂಲಕ ರೆಸ್ಟೋರೆಂಟ್‌ಗಳಿಂದ ಆಹಾರಗಳನ್ನು ಆರ್ಡರ್ ಮಾಡಲು Uber Eats ಆ್ಯಪ್ ಇನ್ನಷ್ಟು ಸುಲಭಗೊಳಿಸುತ್ತದೆ. ಈ ಪ್ರವೇಶಿಸುವಿಕೆ ವೈಶಿಷ್ಟ್ಯಗಳ ಮೂಲಕ Uber Eats ಆ್ಯಪ್ ಬಳಸುವುದು ಹೇಗೆಂದು ತಿಳಿದುಕೊಳ್ಳಿ.

ಕಿವುಡ ಅಥವಾ ಆಲಿಸಲು ಕಷ್ಟಪಡುವ ಗ್ರಾಹಕರು

Uber Eats ಆ್ಯಪ್‌ನ ಪೂರ್ಣ ಕಾರ್ಯಕ್ಕೆ ಆಡಿಯೊ ಅಗತ್ಯವಿಲ್ಲ. ಗೋಚರ ಮತ್ತು ಕಂಪಿಸುವ ಎಚ್ಚರಿಕೆಗಳಂತಹ ಸಹಾಯಕ ತಂತ್ರಜ್ಞಾನವು ಕಿವುಡ ಅಥವಾ ಶ್ರವಣ ದೋಷವನ್ನು ಹೊಂದಿರುವ ಗ್ರಾಹಕರು Uber Eats ಆ್ಯಪ್ ಅನ್ನು ಸುಲಭವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಡೆಲಿವರಿ ಸ್ಥಳವನ್ನು ನಮೂದಿಸುವ ಸಾಮರ್ಥ್ಯದಂತಹ ಆ್ಯಪ್‌ನಲ್ಲಿನ ವೈಶಿಷ್ಟ್ಯಗಳು ಗ್ರಾಹಕರು ಮತ್ತು ಡೆಲಿವರಿ ವ್ಯಕ್ತಿಯ ನಡುವೆ ಮೌಖಿಕ ಸಂವಹನ ನಡೆಸುವುದಕ್ಕೆ ಅನುಕೂಲವಾಗಬಹುದು.

ಅಂಗವಿಕಲ ಚಾಲಕರು

ನಡೆದಾಡಲು ಕಷ್ಟಪಡುವ ಚಾಲಕರು

ಚಲನಶೀಲ ಅಂಗವೈಕಲ್ಯ ಹೊಂದಿರುವ ಜನರಿಗೆ Uber ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ದುರಸ್ತಿ ಮಾಡಿಸಿದ ವಾಹನಗಳನ್ನು ಬಳಸುವ ಮತ್ತು Uber ಪ್ಲಾಟ್‌ಫಾರ್ಮ್‌ನಲ್ಲಿ ಹಸ್ತಚಾಲಿತವಾಗಿ ನಿಯಂತ್ರಿಸುವ ಚಾಲಕರನ್ನು Uber ಸ್ವಾಗತಿಸುತ್ತದೆ. ಕಾನೂನುಬದ್ಧವಾಗಿ ವಾಹನ ಚಲಾಯಿಸಲು ಸಮರ್ಥರಾದ ಯಾರಾದರೂ Uber ಜೊತೆಗೆ ಚಾಲನೆ ಮಾಡಲು ಅರ್ಜಿ ಸಲ್ಲಿಸಬಹುದು.

ಕಿವುಡ ಅಥವಾ ಆಲಿಸಲು ಕಷ್ಟಪಡುವ ಚಾಲಕರು

ಕಿವುಡ ಅಥವಾ ಶ್ರವಣ ದೋಷವನ್ನು ಹೊಂದಿರುವ ಚಾಲಕರಿಗೆ ಸೂಕ್ತ ಆರ್ಥಿಕ ಅವಕಾಶಗಳನ್ನು ಒದಗಿಸಲು Uber ಮುಕ್ತವಾಗಿದೆ. Uber ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಕಿವುಡ ಮತ್ತು ಶ್ರವಣ ದೋಷವಿರುವ ಸಾವಿರಾರು ಚಾಲಕರು ಸರಾಸರಿಯಲ್ಲಿ ಪ್ರತಿ ತಿಂಗಳು ಸಾಮಾನ್ಯ ಚಾಲಕರಿಗಿಂತ ಹೆಚ್ಚು ಸವಾರಿ ಸೇವೆಗಳನ್ನು ನೀಡುತ್ತಾರೆ. ಕಿವುಡ ಚಾಲಕರು ಒಟ್ಟಾರೆಯಾಗಿ ಹತ್ತಾರು ಮಿಲಿಯನ್ ಡಾಲರ್‌ಗಳಷ್ಟು ಸಂಪಾದನೆ ಮಾಡಿದ್ದಾರೆ—ತಮ್ಮ ಸಮುದಾಯಗಳ ಜನರನ್ನು ಅವರು ಬೇಕೆಂದೆಲ್ಲಿಗೆ ತಲುಪಿಸುವ ಮೂಲಕ ಇದೆಲ್ಲವೂ ಸಾಧ್ಯವಾಗಿದೆ.

ಸೆಪ್ಟೆಂಬರ್ 2016 ರಲ್ಲಿ, ಅಂಗವಿಕಲರಿಗೆ ನೆರವು ನೀಡುವ 18 ಕಂಪನಿಗಳಲ್ಲಿ Uber ಕೂಡ ಒಂದು ಎಂಬುದಾಗಿ ರುಡೆರ್‌ಮನ್ ಫ್ಯಾಮಿಲಿ ಫೌಂಡೇಶನ್ ಗುರುತಿಸಿದೆ.

“Uber ಕಿವುಡ ಮತ್ತು ಸರಿಯಾಗಿ ಕಿವಿ ಕೇಳದ ಜನರು ತಮ್ಮ ಆ್ಯಪ್‌ಗೆ ನೇರವಾಗಿ ಪ್ರವೇಶಿಸಲು ಅಕ್ಸೆಸಿಬಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಈ ಮೂಲಕ ಕಿವುಡ ಸಮುದಾಯಕ್ಕೆ Uber ಜೊತೆಗೆ ಚಾಲನೆ ಮಾಡುವ ಮೂಲಕ ಹಣ ಗಳಿಸಲು ಅಭೂತಪೂರ್ವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. CSD ಜೊತೆಗಿನ ಈ ಸಹಭಾಗಿತ್ವವು ಕಿವುಡ ಚಾಲಕರು ಸವಾರರಿಗೆ ಪ್ರಯಾಣ ಸೌಲಭ್ಯಗಳನ್ನು ಒದಗಿಸುವ ಸರಳ ಅವಕಾಶಕ್ಕಿಂತ ಹೆಚ್ಚಿನದನ್ನು ಒದಗಿಸುತ್ತದೆ—ಇದು ಜನರ ನಡುವೆ ಸಂಬಂಧ ಸೇತುವೆಗಳನ್ನು ನಿರ್ಮಿಸಲು ಮತ್ತು ಕಿವುಡ ಜನರ ಸಾಮರ್ಥ್ಯಗಳು ಮತ್ತು ಮಾನವೀಯತೆಯ ಹೊಸ ಗ್ರಹಿಕೆಯ ಮೇಲೆ ಪ್ರಭಾವ ಬೀರುವ ಒಂದು ಅವಕಾಶವಾಗಿದೆ.”

—ಕ್ರಿಸ್ ಸೋಕಪ್, ಸಿಇಓ, ಕಿವುಡ ಸಮುದಾಯದ ಸಂವಹನ ಸೇವೆ

ಕಿವುಡ ಅಥವಾ ಶ್ರವಣ ಹೀನ ಚಾಲಕರಿಗಾಗಿ ಉತ್ಪನ್ನದ ವೈಶಿಷ್ಟ್ಯಗಳು

ಹೆಚ್ಚುವರಿಯಾಗಿ, ಶ್ರವಣ ದೋಷವನ್ನು ಹೊಂದಿರುವ ಪುರುಷರು ಮತ್ತು ಮಹಿಳೆಯರಿಗೆ ಅವಕಾಶಗಳನ್ನು ವಿಸ್ತರಿಸಲು ಯುನೈಟೆಡ್ ಸ್ಟೇಟ್ಸ್‌ನ ಅತಿದೊಡ್ಡ ಕಿವುಡ-ನೇತೃತ್ವದ ಲಾಭೋದ್ದೇಶವಿಲ್ಲದ ಕಿವುಡರ ಸಂವಹನ ಸೇವೆಯ ಜೊತೆಗೆ ನಾವು ಪಾಲುದಾರಿಕೆ ಹೊಂದಿದ್ದೇವೆ. ಚಾಲಕರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಪೂರ್ಣ ಐಚ್ಛಿಕ ಉತ್ಪನ್ನ ಸಾಮರ್ಥ್ಯಗಳ ಸರಣಿಯನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ನಾವು ಕಿವುಡ ಸಮುದಾಯದ ಸದಸ್ಯರ ಜೊತೆಗೆ, ನಾವು ನ್ಯಾಷನಲ್ ಅಸೋಸಿಯೇಶನ್ ಆಫ್ ದಿ ಡೆಫ್ ಆ್ಯಂಡ್ ಟೆಲಿಕಮ್ಯುನಿಕೇಶನ್ಸ್ ಫಾರ್ ದಿ ಡೆಫ್ ಆ್ಯಂಡ್ ಹಾರ್ಡ್ ಆಪ್ ಹಿಯರಿಂಗ್ (TDI) ಸೇರಿದಂತೆ ನಾವು ಕೆಲವು ಕಿವುಡ ಸಮುದಾಯದ ಸದಸ್ಯರ ಜೊತೆಗೂ ಕೆಲಸ ಮಾಡಿದ್ದೇವೆ, ಅಂತಹ ಕೆಲವು ಸಮುದಾಯಗಳೆಂದರೆ:

ಆ್ಯಪ್‌ನಲ್ಲಿ ಈ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುವ ಕುರಿತು

ಚಾಲಕರು ಡ್ರೈವರ್ ಆ್ಯಪ್‌ನಲ್ಲಿ ತಾವು ಕಿವುಡ ಅಥವಾ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಎಂಬುದಾಗಿ ಸ್ವಯಂ-ಗುರುತಿಸಿಕೊಳ್ಳಬಹುದು, ಇದರಿಂದಾಗಿ ಚಾಲಕರು ಮತ್ತು ಅವರ ಸವಾರಿಗೆ ಸಂಬಂಧಿಸಿದ ಈ ಕೆಳಗಿನ ವೈಶಿಷ್ಟ್ಯಗಳಿಗೆ ಪ್ರವೇಶ ಪಡೆದುಕೊಳ್ಳಬಹುದು.

ಟ್ರಿಪ್ ವಿನಂತಿ ಸ್ವೀಕರಿಸಿದಾಗ ಫ್ಲಾಶಿಂಗ್

ಹೊಸ ಟ್ರಿಪ್ ವಿನಂತಿಗಳೇನಾದರೂ ಬಂದಲ್ಲಿ, Uber ಡ್ರೈವರ್ ಆ್ಯಪ್‌ನಲ್ಲಿ ಫ್ಲ್ಯಾಶಿಂಗ್ ಲೈಟ್ ಮತ್ತು ಆಡಿಯೊ ಅಧಿಸೂಚನೆಯನ್ನು ಕಾಣಬಹುದು. ಸವಾರಿಯನ್ನು ಒದಗಿಸುವ ಹೊಸ ಅವಕಾಶಗಳು ಬಂದಾಗ ಮತ್ತು ಸ್ವಲ್ಪ ಹಣವನ್ನು ಸಂಪಾದಿಸುವ ಅವಕಾಶವಿದ್ದಾಗ ಸೂಚನೆ ಪಡೆಯಲು ಇದು ಚಾಲಕರಿಗೆ ಇನ್ನಷ್ಟು ಸುಲಭಗೊಳಿಸುತ್ತದೆ.

ಕರೆ ಮಾಡುವ ಬದಲಿಗೆ ಪಠ್ಯ ಸಂದೇಶವನ್ನು ಕಳುಹಿಸುವ ಸೇವೆ

ಕಿವುಡ ಅಥವಾ ಶ್ರವಣ ದೋಷವನ್ನು ಹೊಂದಿರುವ ಚಾಲಕರಿಗೆ ಕರೆ ಮಾಡುವ ಸಾಮರ್ಥ್ಯವನ್ನು ಸವಾರರಿಗೆ ಒದಗಿಸಲಾಗಿಲ್ಲ. ಬದಲಾಗಿ, ಸವಾರರು ತಮ್ಮ ಚಾಲಕರ ಜೊತೆಗೆ ಸಂವಹನ ನಡೆಸಬೇಕಾದರೆ ಸಂದೇಶ ಕಳುಹಿಸುವಂತೆ ಸೂಚಿಸಲಾಗುತ್ತದೆ. ಈ ಸೆಟ್ಟಿಂಗ್ ಬಳಸುವ ಚಾಲಕರು ಕರೆ ವಿಫಲವಾದ ಬಳಿಕ ಸವಾರಿಗಳನ್ನು ರದ್ದುಗೊಳಿಸುವ ಸಾಧ್ಯತೆ ಕಡಿಮೆ ಇರುತ್ತದೆ.

ಸವಾರರ ತಲುಪಬೇಕಾದ ಸ್ಥಳದ ಕುರಿತಂತೆ ಒಂದು ಪ್ರಾಂಪ್ಟ್

ಆ್ಯಪ್ ಸವಾರರಿಗೆ ತಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಲು ಹೆಚ್ಚುವರಿ ಪ್ರಾಂಪ್ಟ್ ಅನ್ನು ಒದಗಿಸುತ್ತದೆ ಮತ್ತು ಅವರ ಚಾಲಕ ಕಿವುಡರಾಗಿದ್ದಾರೆ ಅಥವಾ ಅವರ ಆಲಿಸುವ ಸಾಮರ್ಥ್ಯ ಕಡಿಮೆ ಇದೆ ಎಂಬುದನ್ನು ತಿಳಿಸುತ್ತದೆ. ಈ ಸೆಟ್ಟಿಂಗ್ ಆನ್ ಮಾಡಿರುವ ಚಾಲಕರು ಸವಾರಿಯನ್ನು ಸ್ವೀಕರಿಸಿದಾಗ, ಸವಾರರಿಗೆ ಅವರು ತಲುಪಬೇಕಾದ ಸ್ಥಳವನ್ನು ನಮೂದಿಸುವಂತೆ ಕೇಳುವ ಒಂದು ಪ್ರಧಾನ ಸ್ಕ್ರೀನ್ ಕಾಣಿಸುತ್ತದೆ. ತದನಂತರ, ಸವಾರಿ ಪ್ರಾರಂಭವಾದ ಬಳಿಕ Uber ಟರ್ನ್-ಬೈ-ಟರ್ನ್ ನಿರ್ದೇಶನಗಳನ್ನು ಒದಗಿಸುತ್ತದೆ.

ಈ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ತಿಳಿಯಲು, ಈ ವೀಡಿಯೊ ನೋಡಿ.

ಸಹಾಯ ಮಾಡಲು ನಾವು ಇಲ್ಲಿದ್ದೇವೆ

ಸಹಾಯ ಮತ್ತು ಬೆಂಬಲ

ನಿಮ್ಮ Uber ಖಾತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಕೊಳ್ಳಲು, ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳನ್ನು ಬ್ರೌಸ್ ಮಾಡಲು ಅಥವಾ ಇತ್ತೀಚಿನ ಟ್ರಿಪ್ ಕುರಿತು ಪ್ರತಿಕ್ರಿಯೆಯನ್ನು ನೀಡಲು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

ಚಾಲಕ ಸಂಪನ್ಮೂಲಗಳು

ಅಂಗವಿಕಲ ಸವಾರರನ್ನು ಸಾಗಿಸುವ ಬಗ್ಗೆ ಇನ್ನಷ್ಟು ತಿಳಿಯಲು ನಿಮಗೇನಾದರೂ ಆಸಕ್ತಿಯಿದ್ದರೆ, ನಮ್ಮ ಚಾಲಕರಿಗೆ ಸಂಬಂಧಿಸಿದ ಸಂಪನ್ಮೂಲಗಳ ಮೇಲೊಮ್ಮೆ ಕಣ್ಣಾಡಿಸಿ.

For all offers from our partners, drivers must have been cleared to drive with Uber and be active on the platform. Prices and discounts are subject to change or withdrawal at any time and without notice, and may be subject to other restrictions set by the partner. Please visit the partner’s website for a full description of the terms and conditions applicable to your rental, vehicle purchase, product, or service, including whether taxes, gas, and other applicable fees are included or excluded. Uber is not responsible for the products or services offered by other companies, or for the terms and conditions (including financial terms) under which those products and services are offered.