Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಮ್ಮ ಕುರಿತು

ಜನರು ನಗರದಾದ್ಯಂತ ಅಥವಾ ತಮ್ಮ ಕನಸುಗಳ ಕಡೆಗೆ ಸಾಗಿದರೆ ಒಳ್ಳೆಯ ಸಂಗತಿಗಳು ಜರುಗುತ್ತವೆ. ಅವಕಾಶಗಳು ಕಾಣಿಸಿಕೊಳ್ಳುತ್ತವೆ, ತೆರೆದುಕೊಳ್ಳುತ್ತವೆ, ವಾಸ್ತವತೆಗೆ ಬರುತ್ತವೆ. ಸವಾರಿಗಳನ್ನು ಪಡೆಯಲು ಬಟನ್ ಒತ್ತುವ ವಿಧಾನವಾಗಿ ಪ್ರಾರಂಭವಾದದ್ದು, ಪ್ರಪಂಚದಾದ್ಯಂತ ಜನರು ನಮ್ಮ ತಂತ್ರಜ್ಞಾನದ ಸಹಾಯದಿಂದ ಎಲ್ಲಾ ರೀತಿಯ ಮಾರ್ಗಗಳಲ್ಲಿ ಎಲ್ಲಾ ರೀತಿಯ ಸ್ಥಳಗಳಿಗೆ ತಲುಪುವುದರೊಂದಿಗೆ ಮಾನವ ಸಂಪರ್ಕದ ಕೋಟ್ಯಾಂತರ ಸುಂದರ ಕ್ಷಣಗಳಿಗೆ ಇಂದು ಕಾರಣವಾಗಿದೆ.

ನಮ್ಮ ಸಿಇಒ ಅವರ ಪತ್ರ

ನಮ್ಮ ಜಾಗತಿಕ ವೇದಿಕೆಯಲ್ಲಿ ಪ್ರತಿಯೊಬ್ಬರಿಗೂ ಮುಂದುವರಿಯಲು ಸಹಾಯ ಮಾಡುವ ತಂತ್ರಜ್ಞಾನವನ್ನು ಒದಗಿಸುವ ನಮ್ಮ ತಂಡದ ಬದ್ಧತೆಯ ಕುರಿತು ಓದಿ.

ಸಾರ್ವಜನಿಕ ಸಾರಿಗೆಯಲ್ಲಿ, ಅಥವಾ ಮೈಕ್ರೋಮೊಬಿಲಿಟಿಯ ಮೂಲಕ ಹೊಗೆರಹಿತ ವಾಹನಗಳಲ್ಲಿ 100% ರಷ್ಟು ಸವಾರಿ ಕೈಗೊಳ್ಳುವುದರೊಂದಿಗೆ, 2040 ರ ವೇಳೆಗೆ ಸಂಪೂರ್ಣ ವಿದ್ಯುತ್ ಚಾಲಿತ, ಹೊಗೆರಹಿತ ವಾಹನಗಳಿಗೆ ವೇದಿಕೆಯಾಗಲು Uber ಬದ್ಧವಾಗಿದೆ. ವಿಶ್ವದ ಅತಿದೊಡ್ಡ ಚಲನಶೀಲ ವೇದಿಕೆಯಾಗಿ, ಹವಾಮಾನ ಬದಲಾವಣೆಯ ಸವಾಲನ್ನು ಹೆಚ್ಚು ಆಕ್ರಮಣಕಾರಿಯಾಗಿ ನಿಭಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಸವಾರರಿಗೆ ಹಸಿರು ಸವಾರಿ ಮಾಡಲು ಇನ್ನಷ್ಟು ಮಾರ್ಗಗಳನ್ನು ನೀಡುವ ಮೂಲಕ, ಚಾಲಕರು ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಚಲಾಯಿಸಲು ನೆರವು ನೀಡುವ ಮೂಲಕ, ಪಾರದರ್ಶಕತೆಯನ್ನು ಆದ್ಯತೆಯನ್ನಾಗಿ ಮಾಡುವ ಮೂಲಕ ಮತ್ತು ಸ್ವಚ್ಛ ಮತ್ತು ಶಕ್ತಿ ಪರಿವರ್ತನೆಯನ್ನು ತ್ವರಿತಗೊಳಿಸಲು ಎನ್‌ಜಿಒಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವಗೊಳಿಸುವ ಮೂಲಕ ನಾವು ಇದನ್ನು ಮಾಡುತ್ತೇವೆ.

ಸವಾರರಿಗೆ ಪಾಯಿಂಟ್ A ನಿಂದ ಪಾಯಿಂಟ್ B ಗೆ ಹೋಗಲು ದಾರಿ ತೋರಿಸುವುದರ ಜೊತೆಗೆ, ನಾವು' ಸ್ವಯಂ-ಚಾಲನೆ ತಂತ್ರಜ್ಞಾನ ಮತ್ತು ನಗರ ವಾಯು ಸಾರಿಗೆಯ ಮೂಲಕ ಭವಿಷ್ಯದ ಸವಾರಿಗಳನ್ನು ಇನ್ನಷ್ಟು ಸುಗಮಗೊಳಿಸುವ ಕುರಿತಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ಅಂದರೆ ಜನರು ತ್ವರಿತವಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಆಹಾರಗಳನ್ನು ಆರ್ಡರ್ ಮಾಡಲು ಸಹಾಯ ಮಾಡುವುದು, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅಡೆತಡೆಗಳನ್ನು ಹೋಗಲಾಡಿಸುವುದು, ಹೊಸ ಸರಕು-ಕಾಯ್ದಿರಿಸುವಿಕೆ ಪರಿಹಾರಗಳನ್ನು ರಚಿಸುವುದು ಮತ್ತು ಕಂಪನಿಗಳಿಗೆ ತಡೆರಹಿತ ಉದ್ಯೋಗಿ ಪ್ರಯಾಣದ ಅನುಭವವನ್ನು ಒದಗಿಸಲು ಸಹಾಯ ಮಾಡುವುದು ಸಹ ನಮ್ಮ ಕೆಲವು ಆದ್ಯತೆಗಳಾಗಿವೆ.

ನೀವು ಹಿಂದಿನ ಸೀಟಿನಲ್ಲಿ ಕುಳಿತಿರಲಿ ಅಥವಾ ಮುಂದೆ ಕುಳಿತು ವಾಹನ ಚಲಾಯಿಸುತ್ತಿರಲಿ, ನಿಮ್ಮ ಸುರಕ್ಷತೆಯನ್ನು ಕಾಪಾಡುವುದು ಅತ್ಯಗತ್ಯ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಾವು ಬದ್ಧರಾಗಿದ್ದೇವೆ ಮತ್ತು ತಂತ್ರಜ್ಞಾನವು ನಮ್ಮ ಪ್ರಸ್ತಾಪದ ಬಹುಮುಖ್ಯ ಭಾಗವಾಗಿದೆ. ನಾವು ಸುರಕ್ಷತೆ ಅಡ್ವೊಕೇಟ್‌ಗಳ ಜೊತೆಗೆ ಪಾಲುದಾರರಾಗಿದ್ದೇವೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಲ್ಲದೇ ಪ್ರತಿಯೊಬ್ಬರಿಗೂ ಸುಲಭ ಸಂಚಾರ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳು ಹಾಗೂ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತೇವೆ.

Uber ಅನ್ನು ಯಾರು ಮುನ್ನಡೆಸುತ್ತಿದ್ದಾರೆ

ಸವಾರರು, ಚಾಲಕರು ಮತ್ತು ಉದ್ಯೋಗಿಗಳಿಗೆ ಸರಿಯಾದ ಕೆಲಸ, ಅವಧಿಯನ್ನು ನಿಗದಿಪಡಿಸಲು ಒತ್ತು ನೀಡುವಂತಹ ಕಾರ್ಯ ಸಂಸ್ಕೃತಿಯನ್ನು ನಾವು Uber ನಲ್ಲಿ ನಿರ್ಮಿಸುತ್ತಿದ್ದೇವೆ. ನಮ್ಮನ್ನು ಮುನ್ನಡೆಸುತ್ತಿರುವ ತಂಡದ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ವಿವಿಧತೆಯಲ್ಲಿ ಏಕತೆಯನ್ನು ಸರಿಯಾಗಿ ನೋಡುವುದು

ಎಲ್ಲರ ಜೊತೆ ಜೊತೆಗೆ ಸಾಗುತ್ತಾ, ನಾವು ಸೇವೆ ಸಲ್ಲಿಸುವ ನಗರಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತಹ ಕಾರ್ಯಸ್ಥಳವನ್ನು ರಚಿಸುವುದು ನಮ್ಮ ಗುರಿಯಾಗಿದೆ—ಅಂದರೆ ಪ್ರತಿಯೊಬ್ಬರೂ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸಬೇಕು ಮತ್ತು ನಮ್ಮ ಅಧಿಕಾರ ನಮ್ಮ ಸಾಮರ್ಥ್ಯ ಎಂಬಂತೆ ತಮ್ಮ ಕೆಲಸವನ್ನು ಸಂಭ್ರಮಿಸಬೇಕು. ಯಾವುದೇ ಹಿನ್ನೆಲೆಯುಳ್ಳವರಾಗಿರಲಿ, ಪ್ರತಿಯೊಬ್ಬರಿಗೂ ಸಕಾರಾತ್ಮಕ ಕಾರ್ಯ ಮನೋಭಾವದ ವಾತಾವರಣವನ್ನು ಸೃಷ್ಟಿಸುವ ಮೂಲಕ, Uber ಅನ್ನು ನಮ್ಮ ಉದ್ಯೋಗಿಗಳು ಮತ್ತು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಕಂಪನಿಯಾಗಿಸಲು ಅವಿರತ ಶ್ರಮಿಸುತ್ತೇವೆ.

ನಿಷ್ಠೆಯಿಂದ ವರ್ತಿಸುವುದು

ಕಂಪನಿಯ ವ್ಯವಹಾರದಲ್ಲಿ ಉನ್ನತ ಮಟ್ಟದಲ್ಲಿ ಇರಬೇಕಾದ ನಿಷ್ಠೆಯ ಬಗ್ಗೆ ನಮ್ಮ ಬದ್ಧತೆಯನ್ನು Uber ನ ನೈತಿಕತೆ ಮತ್ತು ಅನುಸರಣೆ ಪ್ರೋಗ್ರಾಂ ಚಾರ್ಟರ್ ವಿವರಿಸುತ್ತದೆ. ನೈತಿಕ ಸಂಸ್ಕೃತಿಗೆ ಪಾರದರ್ಶಕತೆಯು ನಿರ್ಣಾಯಕವಾಗುತ್ತದೆ; ನಮ್ಮ ನಿಷ್ಠೆಯ ಸಹಾಯವಾಣಿ ಮತ್ತು ಸ್ಕೇಲೆಬಲ್ ಹಾಗೂ ಪರಿಣಾಮಕಾರಿ ಅನುಸರಣೆ ಉಪಕ್ರಮಗಳ ತಂಡಗಳ ಮೂಲಕ ನಾವು ಇದನ್ನು ಸಾಧಿಸುತ್ತೇವೆ.

Uber ಮುಖೇನ ನಿಮ್ಮ ಬ್ರ್ಯಾಂಡ್ ಅನ್ನು ಜಾಹೀರಾತು ಮಾಡುವ ಮೂಲಕ ಅದನ್ನು ಲಕ್ಷಾಂತರ ಜನರಿಗೆ ಪ್ರಚಾರ ಮಾಡಿ.

ಹೊಸ ಸುದ್ದಿಗಳು

ನಿಮ್ಮ ಸುತ್ತಲಿನ ಮತ್ತು ಜಗತ್ತಿನಾದ್ಯಂತ ಪಾಲುದಾರಿಕೆಗಳು, ಆ್ಯಪ್ ಅಪ್‌ಡೇಟ್‌ಗಳು, ಉಪಕ್ರಮಗಳು ಮತ್ತು ಇನ್ನಷ್ಟು ಸಂಗತಿಗಳ ಕುರಿತು ಪ್ರಕಟಣೆಗಳನ್ನು ಪಡೆಯಿರಿ.

ಬ್ಲಾಗ್

Uber ಉತ್ಪನ್ನಗಳು, ಪಾಲುದಾರಿಕೆಗಳು ಮತ್ತು ಇನ್ನಷ್ಟರ ಕುರಿತು ಅನ್ವೇಷಿಸಲು ಮತ್ತು ತಿಳಿಯಲು ಹೊಸ ಸ್ಥಳಗಳನ್ನು ಹುಡುಕಿ.

ಹೂಡಿಕೆದಾರರ ಸಂಬಂಧಗಳು

ಹಣಕಾಸು ವರದಿಗಳನ್ನು ಡೌನ್‌ಲೋಡ್ ಮಾಡಿ, ಮುಂದಿನ ತ್ರೈಮಾಸಿಕ ಯೋಜನೆಗಳನ್ನು ನೋಡಿ ಮತ್ತು ನಮ್ಮ ಸಾಂಸ್ಥಿಕ ಜವಾಬ್ದಾರಿ ಉಪಕ್ರಮಗಳ ಕುರಿತು ಓದಿ.

ನಿಮಗೊಂದು ಚಾಲನೆ ಅವಕಾಶ ಸಿಕ್ಕಿದೆ. ನಮಗೆ ಉದ್ಯೋಗಗಳು ದೊರೆತಿವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو