ಮುಖ್ಯ ವಿಷಯಕ್ಕೆ ತೆರಳಿ

ಚಾಲಕರು Uber ನೊಂದಿಗೆ ಎಷ್ಟು ಹಣ ಗಳಿಸಬಹುದು?

ನೀವು Uber ಆ್ಯಪ್‌ನೊಂದಿಗೆ ಚಾಲನೆ ಮಾಡುವಾಗ ಗಳಿಸುವ ಹಣವು ಯಾವಾಗ, ಎಲ್ಲಿ, ಮತ್ತು ಎಷ್ಟು ಬಾರಿ ಚಾಲನೆ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ದರಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂಬುದನ್ನು ಕಂಡುಕೊಳ್ಳಿ ಮತ್ತು ನಿಮ್ಮ ಗಳಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರಮೋಷನ್‌ಗಳ ಬಗ್ಗೆ ತಿಳಿಯಿರಿ.¹

ನೀವು ಯಾವಾಗ ಮತ್ತು ಹೇಗೆ ಹಣಪಾವತಿ ಪಡೆಯುತ್ತೀರಿ

ವೇಗವಾಗಿ ಕ್ಯಾಶ್‌‌ಔಟ್ ಮಾಡಿ

ಹಣಪಾವತಿ ಪಡೆಯುವುದು ಸುಲಭವಾಗಿದೆ. ನಿಮಗೆ ಅಗತ್ಯವಿರುವುದು ಬ್ಯಾಂಕ್ ಖಾತೆ ಮಾತ್ರ. ನಿಮ್ಮ ಗಳಿಕೆಗಳನ್ನು ಪ್ರತಿ ವಾರ ವರ್ಗಾವಣೆ ಮಾಡಲಾಗುತ್ತದೆ.

ನಿಮ್ಮ ಗ್ರಾಹಕರು ನಗದು ಪಾವತಿಸಿದರೆ

ನಗದಿನ ಮೂಲಕ ನೀವು ಟ್ರಿಪ್ ಪೂರ್ಣಗೊಳಿಸಿದ ತಕ್ಷಣ ಹಣಪಾವತಿ ಪಡೆಯುತ್ತೀರಿ. ನಿಮ್ಮ ಗ್ರಾಹಕರಿಂದ ಪಡೆಯಬೇಕಿರುವ ಮೊತ್ತವನ್ನು ಆಪ್ ತೋರಿಸುತ್ತದೆ ಮತ್ತು ನೀವು Uber ಗೆ ಪಾವತಿಸಬೇಕಾದ ಶುಲ್ಕವನ್ನು ಲೆಕ್ಕಹಾಕುತ್ತದೆ.

ಡ್ರೈವಿಂಗ್ ಖರ್ಚಿನಲ್ಲಿ ಉಳಿತಾಯ

ಸ್ವಂತ ವ್ಯವಹಾರವನ್ನು ನಡೆಸುವುದು ನಿಮಗೆ ನಮ್ಯತೆಯನ್ನು ನೀಡುತ್ತದೆ ಮತ್ತು ಅಂತೆಯೇ ಖರ್ಚನ್ನೂ ತರುತ್ತದೆ. ಇಂಧನ, ವಿಮೆ ಮತ್ತು ವಾಹನ ನಿರ್ವಹಣೆಗೆ ತೆರಿಗೆ ವಿನಾಯಿತಿ ಪಡೆಯಬಹುದು ಮತ್ತು ನಿಮಗೆ ನೆರವಾಗುವ ರಿಯಾಯಿತಿಗಳನ್ನು ನೀಡಲು Uber ಪಾಲುದಾರಿಕೆಯನ್ನು ಹೊಂದಿದೆ.