Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಮ್ಮ ಬಗ್ಗೆ

ಜಗತ್ತು ಉತ್ತಮದೆಡೆಗೆ ಸಾಗುವ ವಿಧಾನವನ್ನು ನಾವು ಮರುಕಲ್ಪಿಸುತ್ತೇವೆ.

ಚಲನೆಗೆ ಶಕ್ತಿ ನೀಡುವುದೇ ನಮ್ಮ ಕೆಲಸ. ಅದು ನಮ್ಮ ಜೀವಾಳ. ಅದು ನಮ್ಮ ನರನಾಡಿಗಳಲ್ಲಿ ಹರಿಯುತ್ತಿದೆ. ಪ್ರತಿದಿನವೂ ಕೆಲಸ ಮಾಡಲು ಅದು ನಮಗೆ ಪ್ರೇರಣೆಯಾಗಿದೆ. ನಾವು ಹೇಗೆ ಚಾಲನೆಯನ್ನು ಉತ್ತಮವಾಗಿಸಬಹುದು ಎಂಬುದನ್ನು ಸದಾ ಮರುಕಲ್ಪಿಸುತ್ತಿರಲು ಅದು ನಮ್ಮನ್ನು ಪ್ರೇರೇಪಿಸುತ್ತದೆ. ನಿಮಗಾಗಿ. ನೀವು ಪ್ರಯಾಣಿಸಲು ಬಯಸುವ ಎಲ್ಲಾ ಸ್ಥಳಗಳಿಗೆ. ನೀವು ಪಡೆಯಲು ಬಯಸುವ ಎಲ್ಲಾ ವಸ್ತುಗಳಿಗಾಗಿ. ನೀವು ಗಳಿಸಲು ಬಯಸುವ ಎಲ್ಲಾ ವಿಧಾನಗಳಿಗಾಗಿ. ಪ್ರಪಂಚದಾದ್ಯಂತ. ನೈಜ ಸಮಯದಲ್ಲಿ. ಈಗಿನ ನಂಬಲಾಗದ ವೇಗದಲ್ಲಿ.

  • ನಾವು Uber. ಸಾಧಿಸಿಯೇ ತೀರುವವರು. ಜನರಿಗೆ ಎಲ್ಲಿಗೆ ಬೇಕಾದರೂ ಹೋಗಲು ಮತ್ತು ಏನನ್ನು ಬೇಕಾದರೂ ಪಡೆಯಲು ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಹಣ ಸಂಪಾದಿಸಲು ಸಹಾಯ ಮಾಡುವ ನಮ್ಮ ಧ್ಯೇಯಕ್ಕಾಗಿ ಅವಿರತ ಶ್ರಮ ಪಡುವಂತಹ ಜನರು. ಚಲನೆಗೆ ಶಕ್ತಿ ನೀಡುವುದೇ ನಮ್ಮ ಕೆಲಸ. ಅದು ನಮ್ಮ ಜೀವಾಳ. ಅದು ನಮ್ಮ ನರನಾಡಿಗಳಲ್ಲಿ ಹರಿಯುತ್ತಿದೆ. ಪ್ರತಿದಿನವೂ ಬೆಳಗ್ಗೆ ಹಾಸಿಗೆಯಿಂದ ಏಳುವುದಕ್ಕೆ ನಮಗೆ ಇದೇ ಪ್ರೇರಣೆಯಾಗಿದೆ. ನಾವು ಹೇಗೆ ಇನ್ನೂ ಉತ್ತಮವಾಗಿ ಚಲಿಸಬಹುದು ಎಂಬುದನ್ನು ಸದಾ ಮರುಕಲ್ಪಿಸುತ್ತಿರಲು ಅದು ನಮ್ಮನ್ನು ಪ್ರೇರೇಪಿಸುತ್ತದೆ. ನಿಮಗಾಗಿ. ನೀವು ಪ್ರಯಾಣಿಸಲು ಬಯಸುವ ಎಲ್ಲಾ ಸ್ಥಳಗಳಿಗಾಗಿ. ನೀವು ಪಡೆಯಲು ಬಯಸುವ ಎಲ್ಲಾ ವಸ್ತುಗಳಿಗಾಗಿ. ನೀವು ಗಳಿಸಲು ಬಯಸುವ ಎಲ್ಲಾ ವಿಧಾನಗಳಿಗಾಗಿ. ಪ್ರಪಂಚದಾದ್ಯಂತ. ನೈಜ ಸಮಯದಲ್ಲಿ. ಈಗಿನ ನಂಬಲಾಗದ ವೇಗದಲ್ಲಿ.

    ಕೇವಲ ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ಸಂಚಾರಕ್ಕೆ ಅನುವು ಮಾಡಲು ಭೌತಿಕ ಮತ್ತು ಡಿಜಿಟಲ್ ಜಗತ್ತುಗಳನ್ನು ಸಂಪರ್ಕಿಸುವ ಒಂದು ಟೆಕ್ ಕಂಪೆನಿ ನಾವಾಗಿದ್ದೇವೆ. ಏಕೆಂದರೆ, ಸಂಚಾರ ಸೌಲಭ್ಯವು ಜಗತ್ತಿನಲ್ಲಿ ಎಲ್ಲರ ಕೈಗೆಟುವಂತಿರಬೇಕು ಎಂದು ನಾವು ನಂಬಿಕೆ ಇರಿಸಿದ್ದೇವೆ. ಇದರಿಂದಾಗಿ ನೀವು ಸುರಕ್ಷಿತವಾಗಿ ಸಂಚರಿಸಬಹುದು ಮತ್ತು ಗಳಿಸಬಹುದು. ನಮ್ಮ ಪ್ರಪಂಚಕ್ಕೆ ಸುಸ್ಥಿರವಾಗುವ ರೀತಿಯಲ್ಲಿ. ಮತ್ತು ನಿಮ್ಮ ಲಿಂಗ, ಜನಾಂಗ, ಧರ್ಮ, ಸಾಮರ್ಥ್ಯಗಳು ಅಥವಾ ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ, ಮುಕ್ತವಾಗಿ ಮತ್ತು ನಿರ್ಭೀತಿಯಿಂದ ಸಂಚರಿಸುವ ನಿಮ್ಮ ಹಕ್ಕನ್ನು ನಾವು ಸಮರ್ಥಿಸುತ್ತೇವೆ. ಖಂಡಿತವಾಗಿಯೂ, ನಾವು ಪ್ರತಿ ಬಾರಿಯೂ ಸರಿಯಾದ ರೀತಿಯಲ್ಲಿ ಸಾಧಿಸಲು ಸಾಧ್ಯವಾಗಿಲ್ಲ. ಆದರೆ, ನಾವು ವೈಫಲ್ಯಕ್ಕೆ ಹೆದರುವುದಿಲ್ಲ. ಏಕೆಂದರೆ, ಅದು ನಮ್ಮನ್ನು ಇನ್ನೂ ಉತ್ತಮಗೊಳಿಸುತ್ತದೆ, ನಮ್ಮ ವಿವೇಕಯುತರನ್ನಾಗಿಸುತ್ತದೆ ಮತ್ತು ನಮ್ಮನ್ನು ಬಲಶಾಲಿಯನ್ನಾಗಿಸುತ್ತದೆ. ಮತ್ತು ನಮ್ಮ ಗ್ರಾಹಕರು, ಸ್ಥಳೀಯ ಸಮುದಾಯಗಳು ಮತ್ತು ನಗರಗಳು ಹಾಗೂ ನಮ್ಮ ನಂಬಲಾಗದಷ್ಟು ವೈವಿಧ್ಯಮಯ ಅಂತಾರಾಷ್ಟ್ರೀಯ ಪಾಲುದಾರರಿಗಾಗಿ ಸೂಕ್ತವಾದ ರೀತಿಯಲ್ಲಿ ಕೆಲಸ ಮಾಡಲು ಅದು ನಮ್ಮನ್ನು ಇನ್ನಷ್ಟು ಬದ್ಧಗೊಳಿಸುತ್ತದೆ.

    Uber ಎಂಬ ಪರಿಕಲ್ಪನೆಯು 2008 ರಲ್ಲಿ ಪ್ಯಾರಿಸ್‌ನಲ್ಲಿ ಒಂದು ಹಿಮಭರಿತ ರಾತ್ರಿಯಲ್ಲಿ ಜನ್ಮ ತಾಳಿತು ಮತ್ತು ಅಂದಿನಿಂದ ನಮ್ಮ ಮರುಕಲ್ಪನೆ ಮತ್ತು ಮರುಶೋಧನೆಯ DNA ಮುಂದುವರಿದಿದೆ. ಅನುಕೂಲಕ್ಕೆ ತಕ್ಕಂತೆ ಗಳಿಸುವ ಮತ್ತು ಜನರು ಮತ್ತು ವಸ್ತುಗಳ ಚಲನೆಯನ್ನು ನಿರಂತರವಾಗಿ ವಿಸ್ತರಿಸುವ ವಿಧಾನಗಳಿಗೆ ಬಲ ತುಂಬುವು ಜಾಗತಿಕ ವೇದಿಕೆಯಾಗಿ ನಾವು ಬೆಳೆದಿದ್ದೇವೆ. ನಾವು ಚತುಷ್ಚಕ್ರದಿಂದ ಹಿಡಿದು ದ್ವಿಚಕ್ರ ವಾಹನಗಳ ಸವಾರಿಗೆ ಸಂಪರ್ಕಪಡಿಸುವುದರಿಂದ ಆರಂಭಿಸಿ 18-ಚಕ್ರಗಳ ವಾಹನಗಳಲ್ಲಿ ಸರಕು ಡೆಲಿವರಿಗಳ ತನಕ ಸಾಗಿದ್ದೇವೆ. ಟೇಕ್‌ಔಟ್ ಊಟಗಳಿಂದ ಆರಂಭಿಸಿ ದೈನಂದಿನ ಮುಖ್ಯ ಅಗತ್ಯತೆಗಳು ಹಾಗೂ ಪ್ರಿಸ್ಕ್ರಿಪ್ಷನ್ ಔಷಧಿಗಳವರೆಗೆ ನಿಮಗೆ ಬೇಕಾದ ಯಾವುದೇ ವಸ್ತುವನ್ನು ಯಾವುದೇ ಸಮಯದಲ್ಲಿ ಡೆಲಿವರಿ ಮಾಡಲು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಗಳಿಸಲು ನಾವು ಸಹಾಯ ಮಾಡುತ್ತಿದ್ದೇವೆ. ಹಿನ್ನೆಲೆ ಪರಿಶೀಲನೆಗಳನ್ನು ನಡೆಸಲಾಗಿರುವ ಚಾಲಕರಿಂದ ಹಿಡಿದು ನೈಜ-ಸಮಯದ ದೃಢೀಕರಣದವರೆಗೆ, ಸುರಕ್ಷತೆಯು ಪ್ರತಿ ದಿನವೂ ಪ್ರಮುಖ ಆದ್ಯತೆಯಾಗಿದೆ. Uber ನಲ್ಲಿ, ಮರುಕಲ್ಪನೆಯ ಅನ್ವೇಷಣೆಯು ಎಂದಿಗೂ ಮುಗಿಯುವುದಿಲ್ಲ, ಎಂದಿಗೂ ನಿಲ್ಲುವುದಿಲ್ಲ ಮತ್ತು ಯಾವಾಗಲೂ ಪ್ರಾರಂಭವಾಗುತ್ತಲೇ ಇರುತ್ತದೆ.

ನಮ್ಮ ಸಿಇಒ ಅವರ ಪತ್ರ

ನಮ್ಮ ಜಾಗತಿಕ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿಯೊಬ್ಬರಿಗೂ ಮುಂದಕ್ಕೆ ಸಾಗಲು ಸಹಾಯ ಮಾಡುವ ತಂತ್ರಜ್ಞಾನವನ್ನು ಒದಗಿಸುವ ನಮ್ಮ ತಂಡದ ಬದ್ಧತೆಯ ಬಗ್ಗೆ ಓದಿ.

ಸುಸ್ಥಿರತೆ

ಸಾರ್ವಜನಿಕ ಸಾರಿಗೆಯಲ್ಲಿ, ಅಥವಾ ಮೈಕ್ರೋಮೊಬಿಲಿಟಿಯ ಮೂಲಕ ಹೊಗೆರಹಿತ ವಾಹನಗಳಲ್ಲಿ 100% ರಷ್ಟು ಸವಾರಿ ಕೈಗೊಳ್ಳುವುದರೊಂದಿಗೆ, 2040 ರ ವೇಳೆಗೆ ಸಂಪೂರ್ಣ ವಿದ್ಯುತ್ ಚಾಲಿತ, ಹೊಗೆರಹಿತ ವಾಹನಗಳ ಪ್ಲಾಟ್‌ಫಾರ್ಮ್‌ ಆಗಲು Uber ಬದ್ಧವಾಗಿದೆ. ವಿಶ್ವದ ಅತಿದೊಡ್ಡ ಮೊಬಿಲಿಟಿ ಪ್ಲಾಟ್‌ಫಾರ್ಮ್‌ ಆಗಿ ಹವಾಮಾನ ಬದಲಾವಣೆಯ ಸವಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸವಾರರಿಗೆ ಪರಿಸರ-ಸ್ನೇಹಿ ಸವಾರಿ ಮಾಡಲು ಇನ್ನಷ್ಟು ವಿಧಾನಗಳನ್ನು ಒದಗಿಸುವ ಮೂಲಕ, ಚಾಲಕರಿಗೆ ವಿದ್ಯುತ್‌ ಚಾಲಿತ ವಾಹನಗಳನ್ನು ಹೊಂದಲು ನೆರವು ನೀಡುವ ಮೂಲಕ, ಪಾರದರ್ಶಕತೆಯನ್ನು ಆದ್ಯತೆಯನ್ನಾಗಿ ಮಾಡುವ ಮೂಲಕ ಮತ್ತು ಸ್ವಚ್ಛ ಮತ್ತು ನ್ಯಾಯಯುತ ಇಂಧನ ಪರಿವರ್ತನೆಯನ್ನು ತ್ವರಿತಗೊಳಿಸಲು ಎನ್‌ಜಿಒಗಳು ಮತ್ತು ಖಾಸಗಿ ವಲಯದೊಂದಿಗೆ ಸಹಭಾಗಿತ್ವ ನಡೆಸುವ ಮೂಲಕ ನಾವು ಇದನ್ನು ಸಾಧಿಸುತ್ತೇವೆ.

ಸವಾರಿಗಳು ಮತ್ತು ಅದರಾಚೆಗೆ

ಸ್ಥಳ A ಯಿಂದ ಸ್ಥಳ B ಗೆ ಹೋಗಲು ಸವಾರರಿಗೆ ಒಂದು ವಿಧಾನವನ್ನು ಹುಡುಕುವುದರ ಜೊತೆಗೆ, ನಾವು ಜನರಿಗೆ ತ್ವರಿತವಾಗಿ ಮತ್ತು ಕೈಗೆಟುಕುವ ದರದಲ್ಲಿ ಆಹಾರವನ್ನು ಆರ್ಡರ್ ಮಾಡಲು, ಆರೋಗ್ಯರಕ್ಷಣೆಗೆ ಇರುವ ಅಡೆತಡೆಗಳನ್ನು ನಿವಾರಿಸಲು, ಹೊಸ ಸರಕು-ಬುಕಿಂಗ್ ಪರಿಹಾರಗಳನ್ನು ರಚಿಸಲು ಮತ್ತು ಕಂಪನಿಗಳಿಗೆ ತಮ್ಮ ಉದ್ಯೋಗಿಗಳಿಗೆ ತಡೆರಹಿತ ಪ್ರಯಾಣದ ಅನುಭವವನ್ನು ಒದಗಿಸಲು ಸಹಾಯ ಮಾಡುತ್ತಿದ್ದೇವೆ. ಮತ್ತು ಯಾವಾಗಲೂ ಚಾಲಕರು ಮತ್ತು ಕೊರಿಯರ್‌ಗಳಿಗೆ ಆದಾಯ ಗಳಿಸಲು ಸಹಾಯ ಮಾಡುತ್ತೇವೆ.

ನಿಮ್ಮ ಸುರಕ್ಷತೆ ನಮ್ಮನ್ನು ಪ್ರೇರೇಪಿಸುತ್ತದೆ

ನೀವು ಹಿಂಬದಿಯ ಆಸನದಲ್ಲಿ ಅಥವಾ ಮುಂಬದಿ ಸವಾರನ ಆಸನದಲ್ಲಿರಿ, ನಿಮ್ಮ ಸುರಕ್ಷತೆ ಅತಿಮುಖ್ಯ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಾವು ಬದ್ಧರಾಗಿದ್ದೇವೆ ಮತ್ತು ತಂತ್ರಜ್ಞಾನವು ನಮ್ಮ ದೃಷ್ಟಿಕೋನದ ಅವಿಭಾಜ್ಯ ಅಂಗವಾಗಿದೆ. ನಾವು ಸುರಕ್ಷತೆಯ ಹರಿಕಾರರೊಂದಿಗೆ ಜತೆಗೂಡಿ ಸುರಕ್ಷತೆಯನ್ನು ಸುಧಾರಿಸಲು ಮತ್ತು ಪ್ರತಿಯೊಬ್ಬರಿಗೂ ಸುಲಭ ಸಂಚಾರ ಸೇವೆಯನ್ನು ಒದಗಿಸಲು ಹೊಸ ತಂತ್ರಜ್ಞಾನಗಳು ಹಾಗೂ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತೇವೆ.

ಕಂಪನಿಯ ಮಾಹಿತಿ

Uber ಅನ್ನು ಯಾರು ಮುನ್ನಡೆಸುತ್ತಿದ್ದಾರೆ

ಸವಾರರು, ಚಾಲಕರು ಮತ್ತು ಉದ್ಯೋಗಿಗಳಿಗೆ ಸೂಕ್ತವಾದುದನ್ನು ಮಾಡುವುದಕ್ಕೆ ಒತ್ತು ನೀಡುವ ಸಂಸ್ಕೃತಿಯನ್ನು ನಾವು Uber ನಲ್ಲಿ ನಿರ್ಮಿಸುತ್ತಿದ್ದೇವೆ. ಮುನ್ನಡೆಸುತ್ತಿರುವ ತಂಡದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ವೈವಿಧ್ಯತೆಯನ್ನು ಸರಿಯಾಗಿ ತಿಳಿದುಕೊಳ್ಳುವುದು

ಎಲ್ಲರನ್ನೊಳಗೊಂಡಿರುವ ಮತ್ತು ನಾವು ಸೇವೆ ಸಲ್ಲಿಸುವ ನಗರಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸುವ—ಪ್ರತಿಯೊಬ್ಬರೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಬಹುದಾದ ಮತ್ತು ಈ ಸ್ವಂತಿಕೆಯನ್ನು ಒಂದು ಶಕ್ತಿ ಎಂದು ಸಂಭ್ರಮಿಸುವ ಕಾರ್ಯಸ್ಥಳವನ್ನು ರಚಿಸುವುದು ನಮ್ಮ ಗುರಿಯಾಗಿದೆ. ಪ್ರತಿಯೊಂದು ಹಿನ್ನೆಲೆಯುಳ್ಳ ಜನರಿಗೆ ಪ್ರಗತಿ ಸಾಧಿಸಲು ಪೂರಕ ವಾತಾವರಣ ಕಲ್ಪಿಸುವ ಮೂಲಕ ನಾವು ನಮ್ಮ ಉದ್ಯೋಗಿಗಳು ಮತ್ತು ನಮ್ಮ ಗ್ರಾಹಕರಿಗೆ Uber ಅನ್ನು ಒಂದು ಉತ್ತಮ ಕಂಪನಿಯನ್ನಾಗಿಸುತ್ತೇವೆ.

ನಿಷ್ಠೆಯಿಂದ ವರ್ತಿಸುವುದು

ಕಂಪನಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ನಿಷ್ಠೆಗೆ ನಮ್ಮ ಬದ್ಧತೆಯನ್ನು Uber ನ ನೈತಿಕತೆ ಮತ್ತು ಅನುಸರಣೆ ಪ್ರೋಗ್ರಾಂ ಚಾರ್ಟರ್ ವಿವರಿಸುತ್ತದೆ. ನೈತಿಕ ಸಂಸ್ಕೃತಿಗೆ ಪಾರದರ್ಶಕತೆಯು ನಿರ್ಣಾಯಕವಾಗಿದೆ; ನಮ್ಮ ಇಂಟೆಗ್ರಿಟಿ ಸಹಾಯವಾಣಿ ಮತ್ತು ಪರಿಣಾಮಕಾರಿ ಹಾಗೂ ಇನ್ನಷ್ಟು ಹೆಚ್ಚಿಸಬಹುದಾದ ಅನುಸರಣೆ ಉಪಕ್ರಮಗಳ ಮೂಲಕ ನಾವು ಇದನ್ನು ಸಾಧಿಸುತ್ತೇವೆ.

ಇತ್ತೀಚಿನ ಸುದ್ದಿಗಳ ಮಾಹಿತಿ ಪಡೆಯುತ್ತಿರಿ

ಹೊಸ ಸುದ್ದಿಗಳು

ನಿಮ್ಮ ಸುತ್ತಲಿನ ಮತ್ತು ಜಗತ್ತಿನಾದ್ಯಂತದ ಪಾಲುದಾರಿಕೆಗಳು, ಆ್ಯಪ್ ಪರಿಷ್ಕರಣೆಗಳು, ಉಪಕ್ರಮಗಳು ಮತ್ತು ಇನ್ನಷ್ಟು ಸಂಗತಿಗಳ ಬಗ್ಗೆ ಪ್ರಕಟಣೆಗಳನ್ನು ಪಡೆಯಿರಿ.

ಬ್ಲಾಗ್

ಅನ್ವೇಷಿಸಲು ಹೊಸ ಸ್ಥಳಗಳನ್ನು ಹುಡುಕಿ ಮತ್ತು Uber ಉತ್ಪನ್ನಗಳು, ಪಾಲುದಾರಿಕೆಗಳು ಮತ್ತು ಇನ್ನಷ್ಟರ ಕುರಿತು ತಿಳಿಯಿರಿ.

ಹೂಡಿಕೆದಾರರೊಂದಿಗಿನ ಸಂಬಂಧಗಳು

ವಿತ್ತೀಯ ವರದಿಗಳನ್ನು ಡೌನ್‌ಲೋಡ್ ಮಾಡಿ, ಮುಂದಿನ ತ್ರೈಮಾಸಿಕದ ಯೋಜನೆಗಳನ್ನು ನೋಡಿ ಮತ್ತು ನಮ್ಮ ಸಾಂಸ್ಥಿಕ ಜವಾಬ್ದಾರಿ ಉಪಕ್ರಮಗಳ ಬಗ್ಗೆ ಓದಿ.

ಬನ್ನಿ, ನಮ್ಮೊಂದಿಗೆ ಮರುಕಲ್ಪಿಸಿ

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو