Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಮ್ಮ ಬದ್ಧತೆಗಳು

ಸಂಚಾರವನ್ನು ಎಲ್ಲರಿಗೂ ಸಮಾನವಾಗಿರಿಸುವುದು.

ಸುರಕ್ಷಿತ ಸ್ಥಳಗಳು, ಉತ್ತಮ ಆಯ್ಕೆಗಳು, ಆರೋಗ್ಯ ಸೇವೆ, ಕೆಲಸದ ಅವಕಾಶಗಳು, ಸಮಾನ ಹಕ್ಕುಗಳ ಕಡೆಗೆ ಪಯಣಿಸುವ ಅವಕಾಶವು ಶತಮಾನಗಳಿಂದಲೂ ಅಸಮಾನವಾಗಿದೆ ಎಂದು ನಮಗೆ ತಿಳಿದಿದೆ. ಇಂದು ಸಂಚಾರವು ಇನ್ನೂ ಒಂದು ಸವಲತ್ತಾಗಿಯೇ ಇದೆ, ಹಕ್ಕು ಆಗಿಲ್ಲ.

ಆದರೆ ಇದು ಈ ರೀತಿ ಇರಬೇಕಾಗಿಲ್ಲ. ಸಂಚಾರವು ಅಡ್ಡಿಪಡಿಸುವ ಶಕ್ತಿಯಾಗಬಹುದು ಎಂದು ನಾವು ನಂಬುತ್ತೇವೆ. Uber ಪ್ರಾರಂಭವಾದಾಗಿನಿಂದ, ನಾವು ಇದನ್ನು ಪದೇ ಪದೇ ಸಾಬೀತುಪಡಿಸಿದ್ದೇವೆ. ಈಗ, COVID ಹಿನ್ನೆಲೆಯಲ್ಲಿ ಮತ್ತು ಪ್ರಪಂಚದಾದ್ಯಂತ ಅಸಮಾನತೆಯ ಮೇಲೆ ಅದು ಉಂಟು ಮಾಡುತ್ತಿರುವ ಹೆಚ್ಚಿನ ಪರಿಣಾಮದ ಹಿನ್ನೆಲೆಯಲ್ಲಿ, ಎಲ್ಲರಿಗೂ ಸಮಾನವಾಗಿ ಸಂಚರಿಸಲು ಅವಕಾಶ ಮಾಡಿಕೊಡುವ ನಮ್ಮ ಧ್ಯೇಯದ ಬಗ್ಗೆ ಸ್ಪಷ್ಟಗೊಳಿಸುವ ಸಮಯ ಇದಾಗಿದೆ.

ವಿಕಾಸಕ್ಕಾಗಿ ವಿಶ್ವ ಪಯಣಿಸುವ ವಿಧಾನವನ್ನು ನಾವು ನಿರಂತರವಾಗಿ, ಪ್ರಯತ್ನಪೂರ್ವಕವಾಗಿ ಮರುರೂಪಿಸುತ್ತೇವೆ ಎಂಬ ಮೂಲ ಧ್ಯೇಯಕ್ಕೂ ಇದು ಅನ್ವಯಿಸುತ್ತದೆ. ನಮ್ಮ ಈ ಧ್ಯೇಯಕ್ಕೆ ಪೂರಕವಾಗಿ, ನಾವು ಸಂಚಾರವನ್ನು ಸಾಧ್ಯವಾಗಿಸುತ್ತೇವೆ. ಹೊಂದಿಕೊಳ್ಳುವ ಕೆಲಸವನ್ನು ಹುಡುಕಲು ನಾವು ಜನರಿಗೆ ಅನುವು ಮಾಡುತ್ತೇವೆ. ಹೊಸ ಗ್ರಾಹಕರನ್ನು ಗಳಿಸಲು ನಾವು ವ್ಯವಹಾರಗಳನ್ನು ಬಲಪಡಿಸುತ್ತೇವೆ. ನಾವು ಅಗತ್ಯ ವಸ್ತುಗಳನ್ನು ಟ್ರಕ್‌ಲೋಡ್ ಮೂಲಕ ಸಾಗಿಸುತ್ತೇವೆ.

ನಾವು ಎಲ್ಲ ಬಾರಿಯೂ ಸರಿಯಾಗಿರುತ್ತೇವೆ ಎಂದು ಹೇಳಲಾಗದು. ಆದರೆ ನಾವು ಜನರಿಗೆ ಮತ್ತು ಗ್ರಹಕ್ಕೆ ಉತ್ತಮ ದಿಕ್ಕಿನಲ್ಲಿ ಸಾಗಲು ಬದ್ಧರಾಗಿದ್ದೇವೆ. ನಾವು ಜಗತ್ತಿನಾದ್ಯಂತ 50 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು ಕಾರ್ಯಗತಗೊಳಿಸುತ್ತೇವೆ, ನಮ್ಮ ಜಾಗತಿಕ ಪ್ರಭಾವದ ನೆಟ್‌ವರ್ಕ್ ಮೂಲಕ ಸಮುದಾಯಗಳೊಂದಿಗೆ ಬಲವಾದ ಸಂಬಂಧವನ್ನು ಬೆಳೆಸುತ್ತೇವೆ.

ನಮ್ಮ ಬೃಹತ್ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಮತ್ತು ಎಲ್ಲರಿಗೂ ಸಮಾನತೆಯ ಚಳವಳಿಯನ್ನು ನಡೆಸಲು, 4 ವೈಯಕ್ತಿ, ಸಾಮಾಜಿಕ ಮತ್ತು ಪಾರಿಸರಿಕ ಸವಾಲುಗಳಿದ್ದು, ಇದನ್ನು ನಾವು ಪರಿಹರಿಸಲು ಬಯಸಿದ್ದೇವೆ:

ಆರ್ಥಿಕ ಸಬಲೀಕರಣ

ನಾವು ಉತ್ತಮ ಕೆಲಸದಲ್ಲಿ ವಿಶ್ವಾಸ ಹೊಂದಿದ್ದೇವೆ. US ನಲ್ಲಿ, ಪ್ಲಾಟ್‌ಫಾರ್ಮ್ ಕೆಲಸಕ್ಕೆ ನಾವು ಹೊಸ ವಿಧಾನವನ್ನು ಮುನ್ನಡೆಸಿದ್ದೇವೆ, ಅದರಲ್ಲಿ ಚಾಲಕರು ಮತ್ತು ವಿತರಣಾ ಜನರು ಬಯಸುವ ರಕ್ಷಣೆಗಳಿಗೆ ಪರ್ಯಾಯವಾಗಿ ನಮ್ಯತೆ ಒದಗಬೇಕಿಲ್ಲ. ಇದು ಯುರೋಪಿನಲ್ಲಿ ನಮ್ಮ ಬೆಟರ್ ಡೀಲ್ ಸೇರಿದಂತೆ ವಿಶ್ವಾದ್ಯಂತ ಪ್ರತಿಫಲಿಸುತ್ತದೆ. ಚಾಲಕರು ಮತ್ತು ಡೆಲಿವರಿಯವರು ತಮ್ಮ ಮಹತ್ವಾಕಾಂಕ್ಷೆಗಳನ್ನು ಅರಿತುಕೊಳ್ಳಲು Uber ಸಹಾಯ ಮಾಡುತ್ತದೆ. ಮತ್ತು ನಾವು ಅವರನ್ನು ದೈನಂದಿನ ಅಗ್ರರು ಎಂದು ಗೌರವಿಸುತ್ತೇವೆ.

ಸುರಕ್ಷತೆ

COVID-19 ಕಾಣಿಸಿಕೊಂಡಾಗ, ನಾವು ಸಹಾಯಕ್ಕೆ ನಿಂತಿದ್ದೇವೆ. ಪ್ರಮುಖ ವಿಷಯಗಳನ್ನು ಮುಂದಕ್ಕೆ ಹಾಕುವ ಮೂಲಕ ನಾವು ನಮ್ಮ ಗಮನವನ್ನು ಸುರಕ್ಷತೆಯ ಮೇಲೆ ಕೇಂದ್ರೀಕರಿಸಿದ್ದೇವೆ. ನಾವು 10 ಮಿಲಿಯನ್ ಉಚಿತ ಸವಾರಿಗಳು, ಊಟ ಮತ್ತು ಡೆಲಿವರಿಗಳನ್ನು ಅಗತ್ಯ ಕಾರ್ಮಿಕರಿಗೆ ಮತ್ತು ದುರ್ಬಲ ಸಮುದಾಯಗಳಿಗೆ ಒದಗಿಸಿದ್ದೇವೆ. ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಅಪಾಯದಲ್ಲಿರುವವರಿಗೆ 50,000 ಉಚಿತ ಸವಾರಿಗಳು ಇದರಲ್ಲಿ ಸೇರಿವೆ. ಮತ್ತು ನಂತರ ನಾವು ಲಸಿಕೆ ಪಡೆಯಲು ಇನ್ನೂ 10 ಮಿಲಿಯನ್ ಉಚಿತ ಅಥವಾ ರಿಯಾಯಿತಿ ಸವಾರಿಗಳನ್ನು ನೀಡಿದ್ದೇವೆ.

ಸುಸ್ಥಿರತೆ

ನಾವು ಶೂನ್ಯ ಹೊರಸೂಸುವಿಕೆಯ ಹಾದಿಯಲ್ಲಿದ್ದೇವೆ. 2040 ರ ವೇಳೆಗೆ, ಜಾಗತಿಕವಾಗಿ ಶೂನ್ಯ-ಹೊರಸೂಸುವ ವಾಹನಗಳಲ್ಲಿ ಅಥವಾ ಮೈಕ್ರೊಮೊಬಿಲಿಟಿ ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ 100% ಪ್ರವಾಸಗಳ ನಡೆಸುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. Uber Eats ನಲ್ಲಿ ಪಾತ್ರೆಗಳನ್ನು ಐಚ್ಛಿಕಗೊಳಿಸುವ ಮೂಲಕ ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ. ನಾವು ಕೀನ್ಯಾದಲ್ಲಿ ಎಲೆಕ್ಟ್ರಿಕ್ ಮೋಟಾರುಬೈಕಿನ ಉತ್ಪನ್ನಗಳನ್ನು ಪ್ರಾರಂಭಿಸಿದ್ದೇವೆ, ಫ್ರಾನ್ಸ್‌ನಲ್ಲಿ ಸುಸ್ಥಿರ ರೆಸ್ಟೋರೆಂಟ್ ಅಭಿಯಾನಗಳು ಮತ್ತು ಟೆಕ್ಸಾಸ್‌ನ ವಿಂಡ್ ಫಾರ್ಮ್‌ನೊಂದಿಗೆ ನವೀಕರಿಸಬಹುದಾದ-ಇಂಧನ ಖರೀದಿ ಒಪ್ಪಂದವನ್ನು ಸಹ ಮಾಡಿದ್ದೇವೆ.

ಸಮಾನತೆ

Uber ಒಂದು ಜನಾಂಗೀಯತೆಯನ್ನು ವಿರೋಧಿಸುವ ಕಂಪನಿಯಾಗಿದೆ. ನಾವು 14 ಬದ್ಧತೆಗಳನ್ನು (ಮತ್ತು ಈ ಮಧ್ಯೆ ಇನ್ನಷ್ಟು) ಮಾಡಿದ್ದೇವೆ. ಅದು ವರ್ಣಭೇದ ನೀತಿಯನ್ನು ತೊಡೆದುಹಾಕುವ ಮೂಲಕ ಸಮುದಾಯದಲ್ಲಿ ಸಮಾನತೆಯನ್ನು ತರುವ ಹಲವು ಕ್ರಮಗಳನ್ನೂ ಒಳಗೊಂಡಿದೆ. ಎರಡನೆಯದರ ಭಾಗವಾಗಿ, ನಾವು ವಿಶ್ವದಾದ್ಯಂತ ಕಪ್ಪು ವರ್ಣೀಯರ ಮಾಲೀಕತ್ವದ ವ್ಯವಹಾರಗಳನ್ನು ಬೆಂಬಲಿಸಲು $10 ಮಿಲಿಯನ್ ಮೀಸಲಿಟ್ಟಿದ್ದೇವೆ. ನಾವು ಏಷ್ಯನ್ ಸಮುದಾಯದೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಮತ್ತು ತಾರತಮ್ಯ ವಿರೋಧಿ ತರಬೇತಿಯನ್ನು ನೀಡಲು ನಾವು ಉಪಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮತ್ತು ಇನ್ನಷ್ಟು.

ನಾವು ಇಲ್ಲಿ ಹಂಚಿಕೊಳ್ಳುವ ಕಥೆಗಳ ಮೂಲಕ ನಾವು ಏನು ಮಾಡುತ್ತಿದ್ದೇವೆ, ನಾವು ಏನು ಸಾಧಿಸಿದ್ದೇವೆ ಮತ್ತು ನಾವು ಏನು ಮಾಡಲು ಬದ್ಧರಾಗಿದ್ದೇವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಪ್ರಭಾವ ಉಂಟುಮಾಡುವ ನಮ್ಮ ಕೆಲಸದ ಬಗ್ಗೆ ಇನ್ನಷ್ಟು ಓದಿ

ನಮ್ಮ ಕ್ರಮಗಳು

We focus on taking actions to have a positive 
impact in the world.

10 ಮಿಲಿಯನ್ ಉಚಿತ ಸವಾರಿಗಳು, ಊಟ ಮತ್ತು ಡೆಲಿವರಿಗಳು

ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಜಗತ್ತು ನಿಂತಾಗ, ನಾವು 10 ಮಿಲಿಯನ್ ಉಚಿತ ಸವಾರಿಗಳು, ಊಟ ಮತ್ತು ಡೆಲಿವೆರಿಗಳನ್ನು ತೋರಿಸಿದ್ದೇವೆ.

ಮಹಿಳೆಯರ ಸುರಕ್ಷತೆ

ಸಾಂಕ್ರಾಮಿಕ ರೋಗದ ಸಮಯದಲ್ಲಿ ಹಿಂಸೆ ಮತ್ತು ದಾಳಿಯ ಅಪಾಯದಲ್ಲಿರುವವರಿಗೆ 50,000 ಉಚಿತ ಸವಾರಿಗಳನ್ನು ಮತ್ತು ಊಟಗಳನ್ನು ಒದಗಿಸುವುದು.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو