Uber’s Climate Assessment and Performance Report
ನಮ್ಮ ಎರಡನೇ ವಾರ್ಷಿಕ ವರದಿಯು ಕೆನಡಾ, ಯುರೋಪ್ ಮತ್ತು US ನಲ್ಲಿ Uber ಆ್ಯಪ್ನೊಂದಿಗೆ ಪೂರ್ಣಗೊಂಡ ಶತಕೋಟಿ ಪ್ರಯಾಣಿಕರ ಪ್ರಯಾಣಕ್ಕಾಗಿ ಹವಾಮಾನ-ಸಂಬಂಧಿತ ಪರಿಣಾಮಗಳು, ವಿದ್ಯುದೀಕರಣದ ಕಾರ್ಯಕ್ಷಮತೆ ಮತ್ತು ದಕ್ಷತೆಯ ಮೆಟ್ರಿಕ್ಗಳನ್ನು ವಿವರಿಸುತ್ತದೆ.
Uber ನ ಪ್ಲಾಟ್ಫಾರ್ಮ್ನಿಂದ ಸೇವೆ ಸಲ್ಲಿಸಿದ ಟ್ರಿಪ್ಗಳ ಪರಿಸರದ ಮೇಲಿನ ಪ್ರಭಾವವು ಮುಖ್ಯವಾಗಿದೆ. ಕಾರ್ಯಕ್ಷಮತೆಯ ಬಗ್ಗೆ ಪಾರದರ್ಶಕವಾಗಿ ವರದಿ ಮಾಡುವುದು ಮತ್ತು ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸಲು ಮತ್ತು ನಮ್ಮ ಹವಾಮಾನ ಕಾರ್ಯಕ್ಷಮತೆಯನ್ನು ಸುಧಾರಿಸಲು ನಮ್ಮ ಉತ್ಪನ್ನಗಳ ನೈಜ-ಪ್ರಪಂಚದ ಬಳಕೆಯಿಂದ ಸಂಗ್ರಹಿಸಿದ ಡೇಟಾವನ್ನು ಮೌಲ್ಯಮಾಪನ ಮಾಡುವ ಮೂಲಕ ನಾವು ಪರಿಣಾಮವನ್ನು ಅಳೆಯುತ್ತೇವೆ.
"ಶೂನ್ಯ ಹೊರಸೂಸುವಿಕೆಗಳ ಹಾದಿಗೆ ಪಾರದರ್ಶಕತೆ ಮತ್ತು ವರ್ಷದಿಂದ ವರ್ಷಕ್ಕೆ ಪ್ರಗತಿಗೆ ಉತ್ತರದಾಯಿತ್ವ ಹೊಂದಿರುವ ಅಗತ್ಯವಿದೆ. ಗ್ರಾಹಕರಿಂದ ನಮ್ಮ ಉತ್ಪನ್ನಗಳ ನೈಜ-ಪ್ರಪಂಚದ ಬಳಕೆಯಿಂದ ಹೊರಸೂಸುವಿಕೆಯನ್ನು ಅಳೆಯುವ ಮತ್ತು ವರದಿ ಮಾಡುವ ಮೊದಲ ಸಂಚಾರ ಸೌಲಭ್ಯದ ಪ್ಲಾಟ್ಫಾರ್ಮ್ ಆಗಿರುವುದಕ್ಕೆ Uber ಹೆಮ್ಮೆಪಡುತ್ತದೆ."
- ದಾರಾ ಖೋಸ್ರೋಶಾಹಿ, ಸಿಇಒ, Uber
ಒಳನೋಟಗಳು ಮತ್ತು ಆಳವಾದ ಅಧ್ಯಯನ
ಯುರೋಪಿಯನ್ ರಾಜಧಾನಿ ನಗರಗಳಲ್ಲಿ ನಮ್ಮ ಸುಸ್ಥಿರತೆಯ ಬದ್ಧತೆಗಳ ಮೇಲಿನ ಪ್ರಗತಿ
ಖಾಸಗಿ ಕಾರು ಬಳಕೆಗಿಂತ ರೈಡ್ಶೇರಿಂಗ್ ಏಕೆ ಮೂಲಭೂತವಾಗಿ ಭಿನ್ನವಾಗಿದೆ
ಆಗಾಗ ಕೇಳಲಾಗುವ ಪ್ರಶ್ನೆಗಳು
- Uber ನ ಇತ್ತೀಚಿನ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆ ವರದಿಯಲ್ಲಿ ಏನಿದೆ?
ನಮ್ಮ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆ ವರದಿಯು ನಗರದ ಅಧಿಕಾರಿಗಳು, ಪರಿಸರ ಪ್ರಿಯರು, ಬಳಕೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಹವಾಮಾನ-ಸಂಬಂಧಿತ ಹೊರಸೂಸುವಿಕೆಗಳು, ವಿದ್ಯುದ್ದೀಕರಣದ ಪ್ರಗತಿ ಮತ್ತು Uber ಆ್ಯಪ್ ಮೂಲಕ ಸಕ್ರಿಯಗೊಳಿಸಲಾದ ಪ್ರಯಾಣಿಕ ಟ್ರಿಪ್ಗಳ ದಕ್ಷತೆಯ ಮೆಟ್ರಿಕ್ಗಳ ಕಾರ್ಯಕ್ಷಮತೆ ಆಧಾರಿತ ಮೆಟ್ರಿಕ್ಗಳನ್ನು ಒದಗಿಸುತ್ತದೆ.
2017 ರಿಂದ 2021 ರ ಮೊದಲಾರ್ಧದವರೆಗೆ US, ಕೆನಡಾ ಮತ್ತು ಯುರೋಪ್ನಾದ್ಯಂತ ಸೇವೆ ಸಲ್ಲಿಸಿದ ಲಕ್ಷಗಟ್ಟಲೆ ರೈಡ್ಗಳನ್ನು ಒಳಗೊಂಡಿರುವ ಈ ವರದಿಯು Uber ನ ಪ್ಲಾಟ್ಫಾರ್ಮ್ನ ಚಾಲಕರು ಮತ್ತು ಸವಾರರ ನೈಜ-ಪ್ರಪಂಚದ ಬಳಕೆಯಿಂದ ಸಂಗ್ರಹಿಸಲಾದ ಅನಾಮಧೇಯಗೊಳಿಸಲಾದ ಡೇಟಾವನ್ನು ಸಾರಾಂಶಗೊಳಿಸುತ್ತದೆ.
- Why are you publishing this report?
Uber ಆ್ಯಪ್ ಮೂಲಕ ಪೂರ್ಣಗೊಂಡ ಟ್ರಿಪ್ಗಳ ಪರಿಸರದ ಪ್ರಭಾವವು ಮುಖ್ಯವಾಗಿದೆ. ಕಾರ್ಯಕ್ಷಮತೆಯ ಬಗ್ಗೆ ಪಾರದರ್ಶಕವಾಗಿ ವರದಿ ಮಾಡುವುದು ಮತ್ತು ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಹೊರಸೂಸುವಿಕೆಗಳು Uber ನ ಇಂಗಾಲದ ಹೆಜ್ಜೆಗುರುತಿನ ಅತ್ಯಂತ ವಸ್ತು ಅಂಶವಾಗಿದೆ ಎಂದು ನಮ್ಮ ಅಂದಾಜುಗಳು ತೋರಿಸುತ್ತವೆ. ನಮ್ಮ ಉತ್ಪನ್ನಗಳ ನೈಜ-ಪ್ರಪಂಚದ ಬಳಕೆಯ ಆಧಾರದ ಮೇಲಿನ ಈ ವರದಿಯು ನಮ್ಮ ಹವಾಮಾನದ ಪ್ರಭಾವದ ಕುರಿತಂತೆ ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸುತ್ತದೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ.
ನಮ್ಮ ಮೊದಲ ವರದಿಗಾಗಿ, CAsPR 2020, ಇಲ್ಲಿಗೆ ಹೋಗಿ.
- What are the key measurements you use in the Climate Assessment and Performance Report?
- Uber ನಲ್ಲಿ ಚಾಲಕರಿಂದ EV ಬಳಕೆ: 2040 ರ ವೇಳೆಗೆ Uber ನಲ್ಲಿ 100% ಶೂನ್ಯ-ಹೊರಸೂಸುವಿಕೆಯ ಸಂಚಾರ ಸೌಲಭ್ಯವು ನಮ್ಮ ಗುರಿಯತ್ತ ನಮ್ಮ ಪ್ರಗತಿಯನ್ನು ಅಳೆಯುವ ಶೂನ್ಯ-ಹೊರಸೂಸುವಿಕೆ ವಾಹನಗಳಲ್ಲಿ (ZEVs) ಪೂರ್ಣಗೊಂಡಿರುವ ಆನ್-ಟ್ರಿಪ್ ಮೈಲಿಗಳು ಅಥವಾ ಕಿಲೋಮೀಟರ್ಗಳ ಪಾಲು
- ಪ್ರಯಾಣದ ದಕ್ಷತೆ, ಕಾರು ಬಳಕೆಯನ್ನು ಕಡಿಮೆ ಮಾಡುವಾಗ ಜನರು ಸಂಚರಿಸಲು ನಾವು ಎಷ್ಟು ಚೆನ್ನಾಗಿ ಸಹಾಯ ಮಾಡುತ್ತೇವೆ ಎಂಬುದನ್ನು ಇದು ಮೌಲ್ಯಮಾಪನ ಮಾಡುತ್ತದೆ
- ಇಂಗಾಲದ ತೀವ್ರತೆ, ಇದು ಪ್ರತಿ ಪ್ರಯಾಣಿಕ ಮೈಲಿಯಿಂದ ಉಂಟಾಗುವ ಹೊರಸೂಸುವಿಕೆಯನ್ನು ಅಳೆಯುತ್ತದೆ
- How will this report improve carbon intensity for rides on Uber?
ಮುಂದಿನ 2 ದಶಕಗಳಲ್ಲಿ Uber ನಿಂದ ಒದಗಿಸಲಾಗುವ ಪ್ರತಿಯೊಂದು ಪ್ರಯಾಣದ ಇಂಗಾಲದ ತೀವ್ರತೆಯನ್ನು ಶೂನ್ಯ ಹೊರಸೂಸುವಿಕೆಗೆ ತಗ್ಗಿಸುವ ದಿಟ್ಟ ಮಹತ್ವಾಕಾಂಕ್ಷೆಯನ್ನು ನಾವು ಹೊಂದಿದ್ದೇವೆ. ಇಂದು ನಾವು ಎಲ್ಲಿದ್ದೇವೆ ಎಂದು ತಿಳಿಯದೆ ಆ ಗುರಿಯನ್ನು ತಲುಪಲು ನಮಗೆ ಸಾಧ್ಯವಿಲ್ಲ.
Uber ನೊಂದಿಗೆ ಕೈಗೊಂಡ ಎಲ್ಲಾ ಪ್ರಯಾಣಿಕ ಟ್ರಿಪ್ಗಳಲ್ಲಿ ಕಾರ್ಬನ್-ತೀವ್ರತೆಯನ್ನು ಕಡಿಮೆ ಮಾಡಲು ನಾವು ಹೂಡಿಕೆಯ 4 ಸ್ತಂಭಗಳನ್ನು ಗುರುತಿಸುತ್ತೇವೆ:
- ಶೂನ್ಯ ಅಥವಾ ಕಡಿಮೆ-ಹೊರಸೂಸುವಿಕೆಯ ಸಂಚಾರ ಸೌಕರ್ಯದೊಂದಿಗೆ ಸವಾರರಿಗೆ ಸೇವೆ ಸಲ್ಲಿಸುವ ಪರಿಸರ ಸ್ನೇಹಿ ಉತ್ಪನ್ನಗಳನ್ನು ನಿರ್ಮಿಸುವುದು
- ಶೂನ್ಯ-ಹೊರಸೂಸುವಿಕೆ ಇರುವ ವಾಹನಗಳಿಗೆ ನ್ಯಾಯಯುತ ಪರಿವರ್ತನೆಯನ್ನು ಸಕ್ರಿಯಗೊಳಿಸಲು ಶಿಕ್ಷಣ, ಪ್ರೋತ್ಸಾಹಕಗಳು ಮತ್ತು ಉಳಿತಾಯ ಅವಕಾಶಗಳೊಂದಿಗೆ ಚಾಲಕರನ್ನು ಬೆಂಬಲಿಸುವುದು
- ಸ್ಕೂಟರ್ಗಳು, ಬೈಕ್ಗಳು ಮತ್ತು ಸಾರ್ವಜನಿಕ ಸಾರಿಗೆ ಸೇರಿದಂತೆ Uber ನಲ್ಲಿ ಹಲವು ವಿಧದ ಸಂಚಾರ ಆಯ್ಕೆಗಳನ್ನು ವಿಸ್ತರಿಸುವುದು
- ಹಾದಿಯುದ್ದಕ್ಕೂ ಪಾರದರ್ಶಕವಾಗಿರಿ ಮತ್ತು ಸಾರ್ವಜನಿಕರಿಗೆ ಉತ್ತರದಾಯಿತ್ವ ಹೊಂದಿರುವುದು
ಹೆಚ್ಚುವರಿಯಾಗಿ, ಈ ವರದಿಯಲ್ಲಿ ಹಂಚಿಕೊಂಡಿರುವಂತೆ ಡೇಟಾವು ಸುಸ್ಥಿರ ಸಾರಿಗೆ ಪರಿಹಾರಗಳ ನಡೆಯುತ್ತಿರುವ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಮತ್ತು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ.
- Do riders take trips with Uber instead of using lower-carbon options?
Uber ಆ್ಯಪ್ ನೊಂದಿಗಿನ ಸವಾರಿಗಳು ಸವಾರರಿಗೆ ಲಭ್ಯವಿರುವ ಅನೇಕ ಸಾರಿಗೆ ಆಯ್ಕೆಗಳಲ್ಲಿ ಒಂದಾಗಿದೆ. ಟ್ರಿಪ್ ಆಯ್ಕೆಯು ವಿವಿಧ ಸ್ಥಳೀಯ ಮಾರುಕಟ್ಟೆ ಪರಿಸ್ಥಿತಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ.
ಈ ವರದಿಯು ಚಾಲಕರು ಮತ್ತು ಸವಾರರ Uber ಆ್ಯಪ್ ನ ನೈಜ-ಪ್ರಪಂಚದ ಬಳಕೆಯಿಂದ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ಸವಾರಿಗಳ ಪರಿಣಾಮವನ್ನು ಪ್ರಮಾಣೀಕರಿಸುವಲ್ಲಿ ವಿಶೇಷವಾಗಿ ಕೇಂದ್ರೀಕೃತವಾಗಿದೆ ಮತ್ತು ನಮ್ಮ ಪ್ಲಾಟ್ಫಾರ್ಮ್ ಅನ್ನು ಬಳಸದೆ ಇರುವಾಗ ಜನರು ಏನು ಮಾಡುತ್ತಾರೆ ಎಂಬುದರ ಕುರಿತು ಹೆಚ್ಚುವರಿ ಊಹೆಗಳನ್ನು ಮಾಡುವ ಅಗತ್ಯವಿರುವ ಪ್ರತಿರೂಪದ ಸನ್ನಿವೇಶ ಮಾದರಿಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತದೆ.
Uber ನ ಪ್ಲಾಟ್ಫಾರ್ಮ್ನಲ್ಲಿನ ರೈಡ್ಶೇರ್ ಟ್ರಿಪ್ಗಳನ್ನು ಖಾಸಗಿ ಕಾರುಗಳಲ್ಲಿ ಬೇರೆಯವರ 100% ಟ್ರಿಪ್ಗಳನ್ನು ಬದಲಾಯಿಸಲು ಅಥವಾ ಇನ್ಯಾವುದಕ್ಕೂ ವಿನ್ಯಾಸಗೊಳಿಸಲಾಗಿಲ್ಲ. ಹೆಚ್ಚಿನ ಜನರಿಗೆ ಪ್ರಯಾಣದ ಪ್ರಾಥಮಿಕ ವಿಧಾನಕ್ಕಿಂತ ಹೆಚ್ಚಾಗಿ, ಇತರ ವಿಧಾನಗಳು ಲಭ್ಯವಿಲ್ಲದಿರುವಾಗ ಅಥವಾ ಕೆಲವು ಕಾರಣಗಳಿಗಾಗಿ ಕಾರ್ಯಸಾಧ್ಯವಾಗದಿದ್ದಾಗ ರೈಡ್ಶೇರಿಂಗ್ ಸಾಂದರ್ಭಿಕವಾಗಿ ಸಂಚಾರ ವಿಮೆಆಗಿ ಸೇವೆ ಒದಗಿಸುತ್ತದೆ. ವಾಸ್ತವವಾಗಿ, Uber ಸವಾರರು ಕಡಿಮೆ ಕಾರುಗಳನ್ನು ಹೊಂದಲು ಬಯಸುತ್ತಾರೆ ಮತ್ತು ಸಾಮಾನ್ಯ ಜನಸಂಖ್ಯೆಗಿಂತ ಹೆಚ್ಚು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ ಎಂಬುದು ವರ್ಷಗಳಿಂದ ತಿಳಿದಿರುವ ವಿಚಾರವಾಗಿದೆ. ತಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆಗೊಳಿಸಲು ಕಾರು-ಮುಕ್ತ ಅಥವಾ ಕಾರು ಕಡಿಮೆ ಬಳಕೆ ಜೀವನಶೈಲಿಯನ್ನು ಹೊಂದುವುದು ಸಾವಿರಾರು ಕುಟುಂಬಗಳು ತೆಗೆದುಕೊಳ್ಳಬಹುದಾದ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಮತ್ತು ಬೇಡಿಕೆಯ ಮೇರೆಗೆ ಮತ್ತು ಅಗತ್ಯವಿರುವಾಗ ಸಂಚಾರ ವ್ಯವಸ್ಥೆ ಪಡೆದುಕೊಳ್ಳಲು ಕುಟುಂಬಗಳಿಗೆ ನೆರವಾಗುತ್ತದೆ. ರೈಡ್ಶೇರ್ ಪ್ಲಾಟ್ಫಾರ್ಮ್ಗಳು ಮತ್ತು ಟ್ಯಾಕ್ಸಿ ಫ್ಲೀಟ್ಗಳು—ಒದಗಿಸುವ ಸೇವೆಯಂತಹ ಬೇಡಿಕೆಯ ಮೇರೆಗಿನ ಟ್ರಿಪ್ಗಳು—ಯಾವತ್ತೂ ನಗರ ವಾಹನಗಳು ಕ್ರಮಿಸಿದ ಮೈಲಿಗಳ ಕೆಲವು ಶೇಕಡಾವಾರು ಪಾಯಿಂಟ್ಗಳನ್ನು ಮಾತ್ರ ಒಳಗೊಂಡಿರುತ್ತವೆ ಮತ್ತು ಸಾರ್ವಜನಿಕ ಸಾರಿಗೆ ಮತ್ತು ಬೈಕಿಂಗ್, ಮೈಕ್ರೋಮೊಬಿಲಿಟಿ ಮತ್ತು ವಾಕಿಂಗ್ನಂತಹ ಸಕ್ರಿಯ ವಿಧಾನಗಳು ಮುನ್ನಡೆಸಬೇಕಾದ ದೊಡ್ಡ ಸಾರಿಗೆ ಪರಿಸರ ವ್ಯವಸ್ಥೆಯ ಬೆಂಬಲ ಪಾತ್ರವರ್ಗದ ಸದಸ್ಯರಾಗಿ ಪ್ರಮುಖ ಪಾತ್ರವನ್ನು ಹೇಗೆ ವಹಿಸುತ್ತವೆ ಎಂಬುದನ್ನು ನಮ್ಮ ಅಕ್ಟೋಬರ್ 2021 ರ ಮೌಲ್ಯಮಾಪನದಲ್ಲಿ ಓದಿ.
- Will you measure the same data for other countries or regions around the world?
2021 ರಲ್ಲಿ ಪ್ರಕಟವಾದ ನಮ್ಮ ಎರಡನೇ ವಾರ್ಷಿಕ ವರದಿಗೆ ನಾವು ಪ್ರಮುಖ ಯುರೋಪಿಯನ್ ಮಾರುಕಟ್ಟೆಗಳನ್ನು ಸೇರಿಸಿದ್ದೇವೆ ಮತ್ತು ಈಗ US, ಕೆನಡಾ ಮತ್ತು ನಮ್ಮ ಯುರೋಪಿಯನ್ ಮಾರುಕಟ್ಟೆಯ ಹೆಚ್ಚಿನ ಭಾಗದಲ್ಲಿ ಪ್ರಯಾಣಿಕರಿಗೆ ಸವಾರಿಗಳನ್ನು ಒದಗಿಸುತ್ತಿದ್ದೇವೆ. Uber ನಲ್ಲಿನ ಟ್ರಿಪ್ಗಳ ಪರಿಣಾಮವಾಗಿ ಉಂಟಾಗುವ ಹವಾಮಾನ ಹೊರಸೂಸುವಿಕೆ ಮತ್ತು ಇತರ ಕ್ಷೇತ್ರಗಳ ಮೇಲಿನ ಪ್ರಭಾವದ ಕುರಿತು ನಿಯಮಿತವಾಗಿ ವರದಿ ಮಾಡಲು ನಾವು ಬದ್ಧರಾಗಿದ್ದೇವೆ. ಸಮಯ ಸಂದ ಹಾಗೆ, ವರದಿಯಲ್ಲಿ ಒಳಗೊಂಡಿರುವ ಮಾರುಕಟ್ಟೆಗಳ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಯೋಜಿಸಿದ್ದೇವೆ.
- Uber Eats, Delivery ಮತ್ತು Uber Freight ವ್ಯವಹಾರಗಳ ಬಗ್ಗೆ ಏನು? ಈಗ Uber ನ ವ್ಯವಹಾರದಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಈ ಪ್ರದೇಶಗಳ ಪರಿಣಾಮವನ್ನು ನೀವು ಅಳೆಯುವಿರಾ?
ನಮ್ಮ 2021 ರ ವರದಿಯು US, ಕೆನಡಾ ಮತ್ತು ನಮ್ಮ ಯುರೋಪಿಯನ್ ಮಾರುಕಟ್ಟೆಯ ಹೆಚ್ಚಿನ ಭಾಗದಲ್ಲಿ ಪೂರ್ಣಗೊಳಿಸಿದ ಪ್ರಯಾಣಿಕರ ಸವಾರಿಗಳನ್ನು ಒಳಗೊಂಡಿದೆ. ಸಮಯ ಕಳೆದ ಹಾಗೆ, ಪಾರದರ್ಶಕತೆ, ಕಲಿಕೆಗಳು ಮತ್ತು ಸುಸ್ಥಿರತೆಯ ಕಾರ್ಯತಂತ್ರಗಳ ಕುರಿತಾದ ನಮ್ಮ ಧೋರಣೆಯನ್ನು ನಮ್ಮ ವಿತರಣೆ ಮತ್ತು ಸರಕು ವ್ಯವಹಾರಗಳಿಗೆ ವಿಸ್ತರಿಸಲು ನಾವು ಯೋಜಿಸಿದ್ದೇವೆ.
This page and the related Climate Assessment and Performance Report (“the report”) contain forward-looking statements regarding our future business expectations and goals, which involve risks and uncertainties. Actual results may differ materially from the results anticipated. For more information, please see our report.
ಕಂಪನಿ