Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಸುರಕ್ಷತೆಗೆ ನಮ್ಮ ಬದ್ಧತೆ

ನೀವು ಸ್ವತಂತ್ರವಾಗಿ ಚಲಿಸಬೇಕೆಂದು ನಾವು ಬಯಸುತ್ತೇವೆ, ನಿಮ್ಮ ಸಮಯವನ್ನು ಹೆಚ್ಚು ಬಳಸಿಕೊಳ್ಳಿ ಮತ್ತು ನಿಮಗೆ ಹೆಚ್ಚು ಮುಖ್ಯವಾದ ಜನರು ಮತ್ತು ಸ್ಥಳಗಳೊಂದಿಗೆ ಸಂಪರ್ಕ ಹೊಂದಿರಿ. ಅದಕ್ಕಾಗಿಯೇ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಮಾನದಂಡಗಳ ರಚನೆಯಿಂದ ಹಿಡಿದು ತಂತ್ರಜ್ಞಾನದ ಅಭಿವೃದ್ಧಿಯವರೆಗೆ ನಾವು ಸುರಕ್ಷತೆಗೆ ಬದ್ಧರಾಗಿದ್ದೇವೆ.

COVID-19 ಸಮಯದಲ್ಲಿ ಪರಸ್ಪರ ಸುರಕ್ಷಿತವಾಗಿರಲು ಸಹಾಯ ಮಾಡುವುದು

ನಾವು ಕೊರೊನಾವೈರಸ್ (COVID-19) ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ನಮ್ಮ ಪ್ಲಾಟ್‌ಫಾರ್ಮ್ ಅನ್ನು ಅವಲಂಬಿಸಿರುವ ವ್ಯಕ್ತಿಗಳನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡಲೆಂದು ಅವಿರತ ಶ್ರಮಿಸುತ್ತಿದ್ದೇವೆ.

  • ಮನೆ ಬಾಗಿಲಿಗೆ ತಲುಪಿಸುವ ನಮ್ಮ ಹೊಸ ಸುರಕ್ಷತೆ ಮಾನದಂಡ

    ನಮ್ಮ ಸಮುದಾಯಗಳು ಮತ್ತೆ ಸಂಚಾರವನ್ನು ಪ್ರಾರಂಭಿಸಿದಾಗ, ನೀವು Uber ‌ಜೊತೆಗೆ ಸವಾರಿ ಮಾಡುವಾಗ ನಿಮ್ಮಲ್ಲಿ ಸುರಕ್ಷಿತ ಭಾವನೆ ಮೂಡಬೇಕೆಂಬುದು ನಮ್ಮ ಬಯಕೆ. ಅದಕ್ಕಾಗಿಯೇ ನಾವು ಡೋರ್-ಟು-ಡೋರ್ ಸುರಕ್ಷತೆ ಮಾನದಂಡವನ್ನು ಪರಿಚಯಿಸುತ್ತಿದ್ದೇವೆ. Uber ನ ನವೀನ ತಂತ್ರಜ್ಞಾನದಿಂದ ಸಂಚಾಲಿಸಲ್ಪಟ್ಟಿದ್ದು, ಹಂಚಿಕೆಯ ಜವಾಬ್ದಾರಿಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯ ತಜ್ಞರ ಮಾರ್ಗದರ್ಶನವೂ ಸೇರಿದಂತೆ, ಈ ಹೊಸ ಕ್ರಮಗಳನ್ನು ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

  • ನಾವೆಲ್ಲರೂ ಮಾಡಬೇಕಾದ ಕೆಲಸಗಳು

    ಲಸಿಕೆಯನ್ನು ಪಡೆದಿದ್ದರೂ ಸಹ, ಎಲ್ಲಾ ಸವಾರರು ಮತ್ತು ಚಾಲಕರು Uber ಬಳಸುವಾಗ ಕಡ್ಡಾಯವಾಗಿ ಫೇಸ್ ಕವರ್ ಅಥವಾ ಮಾಸ್ಕ್ ಧರಿಸಬೇಕು.

  • ಫೇಸ್ ಕವರ್ ಪರಿಶೀಲನೆ

    ಚಾಲನೆಯನ್ನು ಪ್ರಾರಂಭಿಸುವ ಮೊದಲು ಚಾಲಕರು ತಮ್ಮ ಫೋಟೋ ತೆಗೆದುಕೊಳ್ಳುವಂತೆ ನಾವು ತಿಳಿಸುತ್ತೇವೆ ಮತ್ತು ಅವರು ಫೇಸ್ ಕವರ್ ಅಥವಾ ಮಾಸ್ಕ್ ಅನ್ನು ಧರಿಸಿದ್ದಾರೆಯೇ ಎಂದು ಪರಿಶೀಲಿಸಲು ನಮ್ಮ ತಂತ್ರಜ್ಞಾನವು ಸಹಾಯ ಮಾಡುತ್ತದೆ.

  • ಚಾಲಕರಿಗೆ ಆರೋಗ್ಯ ಮತ್ತು ಸುರಕ್ಷತೆ ಪೂರೈಕೆಗಳು

    ಆಹಾರವನ್ನು ಸುರಕ್ಷಿತವಾಗಿ ಡೆಲಿವರಿ ಮಾಡಲು ಚಾಲಕರು ಮತ್ತು ಡೆಲಿವರಿ ಮಾಡುವ ವ್ಯಕ್ತಿಗಳಿಗೆ ಫೇಸ್ ಕವರ್‌ಗಳು, ಸೋಂಕುನಿವಾರಕಗಳು ಮತ್ತು ಕೈಗವಸುಗಳಂತಹ ಆರೋಗ್ಯ ಮತ್ತು ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ.

  • ತಜ್ಞರ ನೇತೃತ್ವದ ಮಾರ್ಗದರ್ಶನ

    ಸುರಕ್ಷತಾ ಸಲಹೆಗಳು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನಾವು ವಿಶ್ವ ಆರೋಗ್ಯ ಸಂಸ್ಥೆ (WHO) ಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.

  • ಸವಾರಿ ಸುರಕ್ಷತೆ ಅಭಿಪ್ರಾಯ

    ಚಾಲಕರು ಫೇಸ್ ಕವರ್ ಅಥವಾ ಮಾಸ್ಕ್ ಧರಿಸದೆ ಇರುವುದರಿಂದ ಆರೋಗ್ಯ ಸಮಸ್ಯೆಗಳ ಕುರಿತು ಅಭಿಪ್ರಾಯವನ್ನು ತಿಳಿಸಲು ನಿಮಗೆ ಈಗ ಸಾಧ್ಯವಾಗುತ್ತದೆ. ಇದು ನಾವು ಇನ್ನಷ್ಟು ಸುಧಾರಣೆ ಕ್ರಮಗಳನ್ನು ಜಾರಿಗೆ ತರಲು ಮತ್ತು ಪ್ರತಿಯೊಬ್ಬರನ್ನು ಜವಾಬ್ದಾರರನ್ನಾಗಿ ಮಾಡಲು ಸಹಾಯ ಮಾಡುತ್ತದೆ.

1/6

ನಿಮ್ಮ ಅನುಭವಕ್ಕೆ ಸುರಕ್ಷತೆಯನ್ನು ಹೇಗೆ ನಿರ್ಮಿಸಲಾಗಿದೆ

ಆಪ್ ನಲ್ಲಿ ಸುರಕ್ಷತಾ ವೈಶಿಷ್ಟ್ಯಗಳು

ನಿಮ್ಮ ಟ್ರಿಪ್ ನ ವಿವರಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಟ್ರಿಪ್ ಅನ್ನು ಟ್ರ್ಯಾಕ್ ಮಾಡಿ. ನಿಮ್ಮ ಬೆರಳ ತುದಿಯಲ್ಲಿಯೇ ಮನಸ್ಸಿನ ಶಾಂತಿಯನ್ನು ಇರಿಸಲು ನಮ್ಮ ತಂತ್ರಜ್ಞಾನ ಸಹಾಯ ಮಾಡುತ್ತದೆ.

ಒಂದು ಅಂತರ್ಗತ ಸಮುದಾಯ

ಲಕ್ಷಾಂತರ ಸವಾರರು ಮತ್ತು ಚಾಲಕರು ಸರಿಯಾದ ಕೆಲಸವನ್ನು ಮಾಡಲು ಒಬ್ಬರಿಗೊಬ್ಬರು ಜವಾಬ್ದಾರರಾಗಿರುವ ಸಮುದಾಯ ಮಾರ್ಗಸೂಚಿಗಳನ್ನು ಹಂಚಿಕೊಳ್ಳುತ್ತಾರೆ.

ಪ್ರತಿ ತಿರುವಿನಲ್ಲಿಯೂ ಬೆಂಬಲ

ವಿಶೇಷ ತರಬೇತಿ ಪಡೆದ ತಂಡವು 24/7 ಲಭ್ಯವಿರುತ್ತದೆ. ಯಾವುದೇ ಪ್ರಶ್ನೆಗಳು ಅಥವಾ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ಆಪ್ ಮೂಲಕ ಹಗಲು ಅಥವಾ ರಾತ್ರಿ ಅವರನ್ನು ಸಂಪರ್ಕಿಸಬಹುದು.

ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ನಿರ್ಮಿಸುವುದು.

ಚಾಲಕರ ಸುರಕ್ಷತೆ

ಯಾವುದೇ ಪ್ರಶ್ನೆಗಳು ಅಥವಾ ಸುರಕ್ಷತಾ ಕಾಳಜಿಗಳ ಬಗ್ಗೆ ಸಹಾಯ ಮಾಡಲು 24/7 ಬೆಂಬಲವನ್ನು ನಂಬಿರಿ. ನಿಮ್ಮ ಟ್ರಿಪ್ ಅನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ನಮ್ಮ ದೃಷ್ಟಿ ನಿಮ್ಮ ಸುರಕ್ಷತೆಯ ಮೇಲೆ ಇದೆ, ಆದ್ದರಿಂದ ಅವಕಾಶ ಇರುವ ಸ್ಥಳಕ್ಕೆ ನೀವು ಹೋಗಬಹುದು.

ಸವಾರರ ಸುರಕ್ಷತೆ

ಪ್ರತಿದಿನ ಲಕ್ಷಾಂತರ ಸವಾರಿಗಳನ್ನು ವಿನಂತಿಸಲಾಗುತ್ತದೆ. ಆ್ಯಪ್‌ನಲ್ಲಿ ಅಂತರ್ನಿರ್ಮಿತವಾಗಿರುವ ಸುರಕ್ಷತಾ ವೈಶಿಷ್ಟ್ಯಗಳಿಗೆ ಪ್ರತಿ ಸವಾರರೂ ಪ್ರವೇಶವನ್ನು ಹೊಂದಿರುತ್ತಾರೆ. ಮತ್ತು ನಿಮಗೆ ಅಗತ್ಯವಿದ್ದಲ್ಲಿ ಪ್ರತಿ ಸವಾರಿಗೆ ಒಂದು ಬೆಂಬಲ ತಂಡವಿರುತ್ತದೆ.

“ಪ್ರತಿದಿನ, ನಮ್ಮ ತಂತ್ರಜ್ಞಾನವು ಲಕ್ಷಾಂತರ ಜನರನ್ನು ವಿಶ್ವದ ನಗರಗಳಲ್ಲಿನ ಕಾರುಗಳಲ್ಲಿ ಒಟ್ಟುಗೂಡಿಸುತ್ತದೆ. ಜನರನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವುದು ದೊಡ್ಡ ಜವಾಬ್ದಾರಿಯಾಗಿದೆ ಮತ್ತು ನಾವು ಇದನ್ನು ಲಘುವಾಗಿ ಪರಿಗಣಿಸುವುದಿಲ್ಲ.”

ದಾರಾ ಖುಸ್ರೋಶಾಹಿ, Uber CEO

ವ್ಯತ್ಯಾಸವನ್ನು ಮಾಡಲು ಪಾಲುದಾರಿಕೆ

ಸುರಕ್ಷತೆಗೆ ನಮ್ಮ ಬದ್ಧತೆ ನಿಮ್ಮ ಸವಾರಿಯನ್ನು ಮೀರಿದೆ. ರಸ್ತೆಗಳು ಮತ್ತು ನಗರಗಳನ್ನು ಎಲ್ಲರಿಗೂ ಸುರಕ್ಷಿತವಾಗಿಸಲು ಸಹಾಯ ಮಾಡಲು ನಾವು - ಸಾರ್ವಜನಿಕ ಸುರಕ್ಷತಾ ಅಧಿಕಾರಿಗಳಿಂದ ಹಿಡಿದು ಹಿಂಸಾಚಾರ ವಿರೋಧಿ ಸಂಸ್ಥೆಗಳವರೆಗೆ - ಪ್ರಮುಖ ತಜ್ಞರೊಂದಿಗೆ ಕೈಜೋಡಿಸಿದ್ದೇವೆ.

ಚಾಲಕರ ಸುರಕ್ಷತೆ

ನೀವು ಯಾವಾಗ ಮತ್ತು ಎಲ್ಲಿ ಬೇಕಾದರೂ ವಿಶ್ವಾಸದಿಂದ ಡ್ರೈವ್ ಮಾಡಿ.

ಸವಾರರ ಸುರಕ್ಷತೆ

ಯಾವಾಗ ಬೇಕಾದರೂ ಆರಾಮವಾಗಿ ಅಲ್ಲಿಗೆ ಹೋಗಿ.

*ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಪ್ರದೇಶವಾರು ಬದಲಾಗುತ್ತವೆ ಮತ್ತು ಲಭ್ಯವಿಲ್ಲದೇ ಇರಬಹುದು.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو