Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಪೂಲ್

ಮನೆ ಬಾಗಿಲಿಗೆ ಅಥವಾ ಸಣ್ಣ ನಡಿಗೆಯೊಂದಿಗೆ, ಹಂಚಿಕೊಂಡ ಸವಾರಿಗಳು

Uber Pool ನೊಂದಿಗೆ ಏಕೆ ಸವಾರಿ ಮಾಡಬೇಕು

ದಾರಿಯುದ್ದಕ್ಕೂ ಪಿಕಪ್

ಕಾರಿನಲ್ಲಿನ ಖಾಲಿ ಆಸನಗಳನ್ನು ತುಂಬಲು Uber ಆ್ಯಪ್ ನಿಮ್ಮ ಮಾರ್ಗದಲ್ಲಿ ಸವಾರರನ್ನು ಹುಡುಕುತ್ತದೆ. ನಿಮ್ಮ ಸಹ-ಸವಾರರನ್ನು ಕಿರುನಗೆಯಿಂದ ಸ್ವಾಗತಿಸಿ, ನೀವು ಹಣವನ್ನು ಉಳಿಸುತ್ತಿದ್ದೀರಿ.

ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ

ಹೆಚ್ಚುವರಿ ಸವಾರರೊಂದಿಗೆ, ಅಲ್ಲಿಗೆ ಹೋಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಆ್ಯಪ್‍ನಲ್ಲಿ ನಿಮ್ಮ ಅಂದಾಜು ಆಗಮನದ ಸಮಯವನ್ನು ನೀವು ಯಾವಾಗಲೂ ನೋಡುತ್ತೀರಿ. ನೀವು ತರಾತುರಿಯಲ್ಲಿದ್ದರೆ, UberX ಬಳಸಿ ನೋಡಿ.

ಪ್ರತಿ ವಿನಂತಿಗೆ ಗರಿಷ್ಠ 2 ಸೀಟ್‌ಗಳು

ನೀವು ಸ್ನೇಹಿತರೊಡನೆ Uber Pool ಬಳಸಿ ಸವಾರಿ ಮಾಡಲು ವಿನಂತಿಸಬಹುದು, ಆದರೆ ನೀವು 2 ಕ್ಕೂ ಹೆಚ್ಚು ಜನರು ಅಥವಾ ಹೆಚ್ಚುವರಿ ಸಾಮಾನುಗಳೊಂದಿಗೆ ಸವಾರಿ ಮಾಡುತ್ತಿದ್ದರೆ, ಹೆಚ್ಚಿನ ಆಸನಗಳು ಲಭ್ಯವಿರುವ UberX ಅಥವಾ ಇತರ ಆಯ್ಕೆಗಳನ್ನು ಆರಿಸಿ.

UberPool ಹೇಗೆ ಕಾರ್ಯನಿರ್ವಹಿಸುತ್ತದೆ

1. ವಿನಂತಿ

Uber ಆ್ಯಪ್ ತೆರೆಯಿರಿ ಮತ್ತು " ಎಲ್ಲಿಗೆ? " ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ UberPool ರೈಡ್ ಆಯ್ಕೆಯನ್ನು ಟ್ಯಾಪ್ ಮಾಡಿ. ಆಮೇಲೆ UberPool ಖಚಿತಪಡಿಸಿ ಟ್ಯಾಪ್ ಮಾಡಿ. ನೀವು ಗರಿಷ್ಠ 2 ಜನರಿಗೆ UberPool ವಿನಂತಿ ಮಾಡಬಹುದು.

ನಿಮ್ಮ ಡ್ರೈವರ್ ಬರುವವರೆಗೆ ನೀವು ಸಮಯವನ್ನು ನೋಡುತ್ತೀರಿ, ಜೊತೆಗೆ ನಿಮ್ಮ ತಲುಪಬೇಕಾದ ಸ್ಥಳವನ್ನು ತಲುಪುವ ಸಮಯದ ಅಂದಾಜು ವಿಂಡೋ ಸಹ ಕಾಣಿಸುತ್ತದೆ.

2. ಸವಾರಿ

ನಿಮ್ಮ ಪಿಕಪ್ ಸ್ಥಳಕ್ಕೆ ನಡೆದು ಹೋಗುತ್ತಿರುವಾಗಲೇ Uber ಆ್ಯಪ್‍ನಲ್ಲಿನ ನಕ್ಷೆಯನ್ನು ನೋಡಿ. ನೀವು ಪ್ರಯಾಣಿಸುವ ಕಾರಿನಲ್ಲಿ ನಿಮಗಾಗಿ ಯಾರೂ ಕಾಯಬಾರದು ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಚಾಲಕರು ಬರುವ ಮೊದಲೇ ಕರ್ಬ್ ಬಳಿ ಇರಿ.

ನಿಮ್ಮ ದಾರಿಯಲ್ಲಿ ಸಾಗುವ ಇತರ ಸವಾರರೊಂದಿಗೆ ನಾವು ನಿಮ್ಮ ಕಾರನ್ನು ಹೊಂದಾಣಿಕೆ ಮಾಡುತ್ತೇವೆ. ಈ ರೀತಿಯಾಗಿ ನಾವು ನಿಮಗೆ ಕಡಿಮೆ ಬೆಲೆಯನ್ನು ನೀಡಬಹುದು, ಆದ್ದರಿಂದ ನಿಮ್ಮ ಟ್ರಿಪ್‌ನಲ್ಲಿ ಹೆಚ್ಚುವರಿ ಪಿಕಪ್‌ಗಳು ಮತ್ತು/ಅಥವಾ ಡ್ರಾಪ್‌ಆಫ್‌ಗಳನ್ನು ನಿರೀಕ್ಷಿಸಿ.

3. ಹಾಪ್ ಔಟ್

ನೀವು ತಲುಪಬೇಕಾದ ಸ್ಥಳವನ್ನು ತಲುಪಿದಾಗ ಕಾರಿನಿಂದ ಇಳಿಯಿರಿ. ನೀವು ಸೇರಿಸಿರುವ ಪಾವತಿ ವಿಧಾನಕ್ಕೆ ನಾವು ದರವನ್ನು ಸ್ವಯಂಚಾಲಿತವಾಗಿ ವಿಧಿಸುತ್ತೇವೆ. ನಿಮ್ಮದು 5 ಸ್ಟಾರ್‌ಗಳ ಟ್ರಿಪ್ ಆಗಿದ್ದರೆ, ನಿಮ್ಮ ಟ್ರಿಪ್ ಮುಗಿದ ಬಳಿಕ ಚಾಲಕರಿಗೆ ಟಿಪ್ಸ್ ನೀಡಲು ಪರಿಗಣಿಸಿ.

Uber ಬೆಲೆ ಅಂದಾಜುಗಾರ

ಮಾದರಿ ಸವಾರಿ ಬೆಲೆಗಳು ಅಂದಾಜುಗಳು ಮಾತ್ರ ಮತ್ತು ರಿಯಾಯಿತಿಗಳು, ಭೌಗೋಳಿಕತೆ, ಸಂಚಾರ ವಿಳಂಬಗಳು ಅಥವಾ ಇತರ ಅಂಶಗಳಿಂದಾಗಿ ವ್ಯತ್ಯಾಸಗಳನ್ನು ಪ್ರತಿಬಿಂಬಿಸುವುದಿಲ್ಲ. ಫ್ಲಾಟ್ ದರಗಳು ಮತ್ತು ಕನಿಷ್ಠ ಶುಲ್ಕಗಳು ಅನ್ವಯವಾಗಬಹುದು. ಸವಾರಿಗಳು ಮತ್ತು ನಿಗದಿತ ಸವಾರಿಗಳ ನಿಜವಾದ ಬೆಲೆಗಳು ಬದಲಾಗಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

  • ಇದು ಕಾರಿನಲ್ಲಿರುವ ಸ್ಥಳಾವಕಾಶ ಮತ್ತು ಸವಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ನೀವು ಲಗೇಜ್ ಜೊತೆಗೆ ಪ್ರಯಾಣಿಸುತ್ತಿದ್ದರೆ, UberX ಬಳಸುವಂತೆ ಶಿಫಾರಸು ಮಾಡುತ್ತೇವೆ.

  • Uber Pool ಪ್ರತಿ ವಿನಂತಿಗೆ 1-2 ಸವಾರರನ್ನು ಮಾತ್ರ ಅನುಮತಿಸುತ್ತದೆ, ಆದರೆ ನೀವು ದೊಡ್ಡ ಗುಂಪುಗಳಿಗೆ UberX ಅಥವಾ ಇತರ ಆಯ್ಕೆಗಳನ್ನು ಬಳಸಬಹುದು.

  • ಸರಾಸರಿಯಾಗಿ, UberPool ನೊಂದಿಗೆ ಸವಾರಿ ಮಾಡುವುದು ನಿಮ್ಮ ಒಟ್ಟಾರೆ ಟ್ರಿಪ್‌ನ ಸಮಯಕ್ಕೆ ಕೆಲವೇ ಹೆಚ್ಚುವರಿ ನಿಮಿಷಗಳನ್ನು ಸೇರಿಸುತ್ತದೆ. ನೀವು ಸವಾರಿ ಮಾಡುವಾಗ ನಿಮ್ಮ ಅಂದಾಜು ಆಗಮನದ ಸಮಯವನ್ನು ನೀವು ಯಾವಾಗಲೂ ಆ್ಯಪ್‍ನಲ್ಲಿ ಕಾಣುತ್ತೀರಿ.

  • ಪಿಕಪ್ ಮತ್ತು ಡ್ರಾಪ್‌ಆಫ್ ಆರ್ಡರ್ ಅನ್ನು ನೀವು ತಲುಪಬೇಕಾದ ಸ್ಥಳದ ಮಾರ್ಗದಲ್ಲಿ ಎಲ್ಲಿ ಬರುತ್ತದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ, ಮೊದಲು ಯಾರನ್ನು ಪಿಕಪ್ ಮಾಡಲಾಗಿದೆ ಎಂಬುದರ ಮೇಲೆ ಅಲ್ಲ.

  • ನಿಮ್ಮ ಟ್ರಿಪ್‌ನ ಸಮಯದಲ್ಲಿ ಸವಾರರು ಹತ್ತಬಹುದು ಮತ್ತು ಇಳಿಯಬಹುದು. ಎಲ್ಲಾ ಖಾಲಿ ಸೀಟ್‌ಗಳು ಭರ್ತಿಯಾದರೆ, ಹೆಚ್ಚುವರಿ ಸವಾರರನ್ನು ಹುಡುಕುವುದನ್ನು ಆ್ಯಪ್‍ ನಿಲ್ಲಿಸುತ್ತದೆ. ಅಲ್ಲದೇ, ನಿಮ್ಮ ಆಗಮನದ ಸಮಯಕ್ಕೆ ನೀವು ಸರಿಯಾಗಿ ತಲುಪುತ್ತೀರಾ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇದು ಹೆಚ್ಚುವರಿ ಸವಾರರನ್ನು ಹುಡುಕುವುದನ್ನು ನಿಲ್ಲಿಸುತ್ತದೆ.

  • ಕೆಲವು ಪಿಕಪ್‌ಗಳು ಮತ್ತು ಡ್ರಾಪ್‌ಆಫ್‌ಗಳು ಸ್ವಲ್ಪಮಟ್ಟಿಗೆ ಮಾರ್ಗದಿಂದ ಬೇರೆಯಾಗಿದ್ದರೂ, ಆ್ಯಪ್‍ನಲ್ಲಿ ತೋರಿಸಿರುವ ಸಮಯಕ್ಕೆ ನೀವು ಆಗಮಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ಆ್ಯಪ್ ಯಾವಾಗಲೂ ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತದೆ.

Uber ನಿಂದ ಇನ್ನಷ್ಟು

ಯಾವಾಗಲೂ ನಿಮಗೆ ಬೇಕಾದ ಸವಾರಿ

1/6

ಈ ವೆಬ್ ಪುಟದಲ್ಲಿ ನೀಡಲಾದ ಅಂಶಗಳು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರದೇಶ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಸೂಚನೆ ಇಲ್ಲದೆ ನವೀಕರಿಸಬಹುದಾಗಿದೆ.