Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ
ಸವಾರಿಯನ್ನು ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ. Uber ರಿಸರ್ವ್ ಮೂಲಕ ನಿಮ್ಮ ಸವಾರಿಯನ್ನು 90 ದಿನಗಳ ತನಕ ಮುಂಚಿತವಾಗಿ ಕಾದಿರಿಸಿ, ಆದ್ದರಿಂದ ವಾಹನವನ್ನು ಹತ್ತುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ಸಂಗತಿಯಾಗಿರುತ್ತದೆ.
ವಿಶ್ವಾಸಾರ್ಹವಾಗಿ ಸಮಯಕ್ಕೆ
ಒತ್ತಡ-ರಹಿತ ಸವಾರಿಗಾಗಿ ನಿಮ್ಮನ್ನು ಸಮಯಕ್ಕೆ ಸರಿಯಾಗಿ ಪಿಕಪ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ತಂತ್ರಜ್ಞಾನವು ಸಹಾಯ ಮಾಡುತ್ತದೆ.
ನೀವು ಬಂದ ಕೂಡಲೆ ಸಿದ್ಧ
ನಿಮ್ಮ ಸವಾರಿ ನಿಮ್ಮ ವೇಳಾಪಟ್ಟಿಯಲ್ಲಿದ್ದು, ಇದು 15 ನಿಮಿಷಗಳ ಕಾಯುವ ಸಮಯವನ್ನು ಒಳಗೊಂಡಿರುತ್ತದೆ.¹
ನಿಮಗಾಗಿ ರೂಪಿಸಲಾಗಿದೆ
ಪ್ರತಿ ಬಜೆಟ್ ಮತ್ತು ಸಂದರ್ಭಕ್ಕಾಗಿ ಸವಾರಿ ಆಯ್ಕೆಗಳು—ಮತ್ತು ನಿಮ್ಮ ಮೆಚ್ಚಿನ ಡ್ರೈವರ್‌ಗಾಗಿ ವಿನಂತಿಸಿ.²
ಪ್ರಯಾಣಕ್ಕೆ ಸೂಕ್ತವಾಗಿದೆ
ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಗಿ ಬರಲು ಕಾಯ್ದಿರಿಸುವಿಕೆಗಳು ಲಭ್ಯವಿವೆ. ನಿಮ್ಮ ವಿಮಾನ ವಿಳಂಬವಾಗಿದ್ದರೂ ಕೂಡ—ನಮ್ಮ ಫ್ಲೈಟ್-ಟ್ರ್ಯಾಕಿಂಗ್ ತಂತ್ರಜ್ಞಾನವು ನೀವು ತಲುಪಬೇಕಾದ ಸ್ಥಳದಲ್ಲಿ ಇಳಿದಾಗ ನಿಮ್ಮ ಸವಾರಿ ಸಿದ್ಧವಾಗುವುದನ್ನು ಖಚಿತಪಡಿಸುತ್ತದೆ.³
ರಿಸರ್ವ್
ನಿಮ್ಮ ಅಪ್‌ಡೇಟ್ ಮಾಡಲಾದ Uber ಆ್ಯಪ್‍ನಲ್ಲಿ ರಿಸರ್ವ್ ಐಕಾನ್ ಟ್ಯಾಪ್ ಮಾಡಿ. ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ರಿಸರ್ವ್ ಮಾಡಿ.
ದೃಢೀಕರಣವನ್ನು ಸ್ವೀಕರಿಸಿ
ಆ್ಯಪ್‍ನಲ್ಲಿ ನಿಮ್ಮ ರಿಸರ್ವೇಶನ್ ವಿವರಗಳನ್ನು ಉಲ್ಲೇಖಿಸಿ ಮತ್ತು ನಿಮ್ಮ ಟ್ರಿಪ್ ಹತ್ತಿರವಾಗುತ್ತಿದ್ದಂತೆ ನಿಮ್ಮ ನಿಯೋಜಿತ ಚಾಲಕರನ್ನು ಪರಿಶೀಲಿಸಿ. ಒಂದು ಗಂಟೆಯ ತನಕ ಮುಂಚಿತವಾಗಿ ಯಾವುದೇ ಶುಲ್ಕವಿಲ್ಲದೆ ರದ್ದುಗೊಳಿಸಿ.⁴
ಸವಾರಿ
ನಿಮ್ಮ ಕಾಯ್ದಿರಿಸುವಿಕೆಯಲ್ಲಿ ಒಳಗೊಂಡಿರುವ ಕಾಯುವ ಸಮಯದೊಳಗೆ ನಿಮ್ಮ ಚಾಲಕರನ್ನು ಹೊರಗೆ ಭೇಟಿ ಮಾಡಿ. ಸವಾರಿಯನ್ನು ಆನಂದಿಸಿ.
ನಿಮ್ಮ ಸವಾರಿ ವಿನಂತಿಯನ್ನು ಚಾಲಕರು ಸ್ವೀಕರಿಸುತ್ತಾರೆಂದು Uber ಯಾವುದೇ ಖಾತರಿ ನೀಡುವುದಿಲ್ಲ. ನಿಮ್ಮ ಚಾಲಕರ ವಿವರಗಳನ್ನು ನೀವು ಸ್ವೀಕರಿಸಿದ ನಂತರ ನಿಮ್ಮ ಸವಾರಿಯನ್ನು ದೃಢೀಕರಿಸಲಾಗುತ್ತದೆ. ಆಯ್ದ ನಗರಗಳಲ್ಲಿ ರಿಸರ್ವ್ ಲಭ್ಯವಿದೆ.
¹ ನೀವು ಆಯ್ಕೆ ಮಾಡುವ ವಾಹನದ ಆಯ್ಕೆಯ ಆಧಾರದ ಮೇಲೆ ಕಾಯುವ ಸಮಯ ಬದಲಾಗುತ್ತದೆ.
² ಆಯ್ದ ಪ್ರದೇಶಗಳಲ್ಲಿ ಮಾತ್ರ ಮೆಚ್ಚಿನ ಡ್ರೈವರ್ ವೈಶಿಷ್ಟ್ಯಲಭ್ಯವಿದೆ.
³ ಆಯ್ದ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದೆ. ನಿಮ್ಮ ವಿಮಾನದ ಅಂದಾಜು ಆಗಮನದ ಸಮಯದ ನಂತರ ಒಂದು ಗಂಟೆಯವರೆಗೆ ಕಾಯುವ ಸಮಯ ಉಚಿತವಾಗಿರುತ್ತದೆ. ಅದರ ನಂತರ, ಚಾಲಕರು ಟ್ರಿಪ್ ವಿನಂತಿಯನ್ನು ರದ್ದುಗೊಳಿಸಬಹುದು ಮತ್ತು ಒಟ್ಟು ಶುಲ್ಕವನ್ನು ನಿಮಗೆ ವಿಧಿಸಲಾಗುತ್ತದೆ. ನಿಮ್ಮ ಪ್ರಯಾಣದ ವಿವರಗಳನ್ನು ನೀವು ಸ್ವೀಕರಿಸಿದ ನಂತರ ಮಾತ್ರ ನಿಮ್ಮ ಟ್ರಿಪ್ ವಿನಂತಿಯನ್ನು ದೃಢೀಕರಿಸಲಾಗುತ್ತದೆ. ಆದಾಗ್ಯೂ, ನಿಮ್ಮ ಟ್ರಿಪ್ ವಿನಂತಿಯನ್ನು ರದ್ದುಗೊಳಿಸುವ ಆಯ್ಕೆ ನಿಮ್ಮ ಚಾಲಕರಿಗೆ ಮುಕ್ತವಾಗಿರುತ್ತದೆ. ಈ ಪ್ರಕರಣದಲ್ಲಿ, ಟ್ರಿಪ್ ವಿನಂತಿಯನ್ನು ಹತ್ತಿರದ ಇನ್ನೊಬ್ಬ ಚಾಲಕನಿಗೆ ನಿಯೋಜಿಸಲಾಗುತ್ತದೆ. ನಿಮ್ಮ ಟ್ರಿಪ್ ವಿನಂತಿಯನ್ನು ಚಾಲಕರು ಸ್ವೀಕರಿಸುತ್ತಾರೆ ಎಂಬ ಖಾತರಿಯನ್ನು Uber ನೀಡುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
⁴ರಿಸರ್ವೇಶನ್‌ಗಳೊಂದಿಗೆ ರದ್ದುಮಾಡುವಿಕೆ ಶುಲ್ಕಗಳು ಅಧಿಕವಾಗಿರುತ್ತವೆ. ನಿಮ್ಮ ರಿಸರ್ವೇಶನ್ ಪಿಕ್-ಅಪ್ ಸಮಯಕ್ಕೂ ಮೊದಲಿನ 60 ನಿಮಿಷಗಳಿರುವವರೆಗೆ ನೀವು ಯಾವುದೇ ಶುಲ್ಕವಿಲ್ಲದೆ ರದ್ದುಮಾಡಬಹುದು. ನಿಮ್ಮ ರಿಸರ್ವೇಶನ್ ಸಮಯಕ್ಕಿಂತ 60 ಕ್ಕಿಂತ ಕಡಿಮೆ ನಿಮಿಷಗಳ ಮೊದಲು ನೀವು ರದ್ದುಗೊಳಿಸಿದರೆ, ನಿಮ್ಮ ಚಾಲಕರ ಸಮಯಕ್ಕಾಗಿ ನಿಮಗೆ ರದ್ದುಮಾಡುವಿಕೆ ಶುಲ್ಕವನ್ನು ವಿಧಿಸಲಾಗುತ್ತದೆ. ಯಾವುದೇ ಚಾಲಕರು ನಿಮ್ಮ ಟ್ರಿಪ್ ಅನ್ನು ಇನ್ನೂ ದೃಢೀಕರಿಸದಿದ್ದಲ್ಲಿ ನಿಮಗೆ ರದ್ದುಮಾಡುವಿಕೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ನಿಮ್ಮ ಚಾಲಕರು ಮಾರ್ಗದಲ್ಲಿದ್ದಾಗ ನೀವು ಸೂಚನೆಯನ್ನು ಸ್ವೀಕರಿಸುತ್ತೀರಿ. ನಿಮ್ಮ ಉತ್ಪನ್ನವನ್ನು ನೀವು ಆಯ್ಕೆಮಾಡಿದ ನಂತರ ಶುಲ್ಕ ವಿವರಣೆ ಪುಟದಲ್ಲಿ ಕನಿಷ್ಠ ಶುಲ್ಕದ ಮೊತ್ತವು ಲಭ್ಯವಿರುತ್ತದೆ.
ಕಂಪನಿ