Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗದರ್ಶಿ

ನೀವು ಪಟ್ಟಣದಾದ್ಯಂತ ಕೆಲಸ ಮಾಡುತ್ತಿರಲಿ ಅಥವಾ ಮನೆಯಿಂದ ದೂರದಲ್ಲಿರುವ ನಗರವನ್ನು ನೋಡಲು ಹೋಗುತ್ತಿರಿ, ಅಲ್ಲಿಗೆ ಹೋಗುವುದು ಸುಲಭವಾಗಬೇಕು. Uber ಆ್ಯಪ್‍ ಮೂಲಕ ಸವಾರಿ ಮಾಡುವುದು ಹೇಗೆ ಎಂದು ತಿಳಿಯಿರಿ.

search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

Uber ಆ್ಯಪ್‌ ಅನ್ನು ಹೇಗೆ ಬಳಸುವುದು

ಖಾತೆ ರಚಿಸಿ

All you need is an email address and phone number. You can request a ride from your browser or from the Uber app. To download the app, go to the App Store or Google Play.

ನಿಮ್ಮ ತಲುಪಬೇಕಾದ ಸ್ಥಳದ ಮಾಹಿತಿಯನ್ನು ನಮೂದಿಸಿ

ಆ್ಯಪ್‍ ತೆರೆಯಿರಿ ಮತ್ತು ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದನ್ನು ಎಲ್ಲಿಗೆ? ಎಂಬ ಬಾಕ್ಸ್‌ನಲ್ಲಿ ನಮೂದಿಸಿ. ನಿಮ್ಮ ಪಿಕಪ್ ಸ್ಥಳವನ್ನು ಖಚಿತಪಡಿಸಲು ಟ್ಯಾಪ್ ಮಾಡಿ ಮತ್ತು ದೃಢೀಕರಿಸಿ ಅನ್ನು ಟ್ಯಾಪ್ ಮಾಡಿ ಮತ್ತೆ ಹತ್ತಿರದ ಡ್ರೈವರ್‌ಗೆ ಹೊಂದಾಣಿಕೆಯಾಗುತ್ತದೆ.

ನಿಮ್ಮ ಡ್ರೈವರ್ ಅನ್ನು ಭೇಟಿ ಮಾಡಿ

ನೀವು ಅವರ ಆಗಮನವನ್ನು ನಕ್ಷೆಯಲ್ಲಿ ಟ್ರ್ಯಾಕ್ ಮಾಡಬಹುದು. ಅವರು ಕೆಲವು ನಿಮಿಷಗಳಷ್ಟು ದೂರದಲ್ಲಿರುವಾಗ, ನಿಮ್ಮ ಪಿಕಪ್ ಸ್ಥಳದಲ್ಲಿ ಅವರಿಗಾಗಿ ಕಾಯಿರಿ.

ನಿಮ್ಮ ಸವಾರಿಯನ್ನು ಪರಿಶೀಲಿಸಿ

ಪ್ರತಿ ಬಾರಿ ನೀವು Uber ನೊಂದಿಗೆ ಟ್ರಿಪ್ ಮಾಡುವಾಗ, ನಿಮ್ಮ ಆ್ಯಪ್‌‌ನಲ್ಲಿ ಒದಗಿಸಲಾದ ಲೈಸನ್ಸ್ ಪ್ಲೇಟ್, ಕಾರ್ ಮೇಕ್ ಮತ್ತು ಮಾಡೆಲ್ ಮತ್ತು ಡ್ರೈವರ್ ಫೋಟೋ ಮ್ಯಾಚ್ ಮಾಡುವ ಮೂಲಕ ನೀವು ಸರಿಯಾದ ಡ್ರೈವರ್‌ ಜೊತೆಗೆ ಸರಿಯಾದ ಕಾರು ಹತ್ತುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.

ಆ್ಯಪ್‍ ಮೂಲಕ ಮಾತ್ರ Uber ಟ್ರಿಪ್‌ಗಳನ್ನು ವಿನಂತಿಸಬಹುದು, ಆದ್ದರಿಂದ ವಾಹನ ಅಥವಾ ನಿಮ್ಮ ಆ್ಯಪ್‍‌ನಲ್ಲಿ ಪ್ರದರ್ಶಿತವಾದದ್ದಕ್ಕೆ ಹೊಂದಾಣಿಕೆಯಾಗದಂತಹ ಡ್ರೈವರ್ ಐಡೆಂಟಿಟಿ ಕಾರ್ಡ್ ಇರುವ ಕಾರಿನಲ್ಲಿ ಎಂ'ದಿಗೂ ಹೋಗಬೇಡಿ.

ಕುಳಿತುಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ

ನೀವು ಆಗಮಿಸಿದಾಗ, ಪಾವತಿಸುವುದು ಸುಲಭವಾಗಿರುತ್ತದೆ. ನಿಮ್ಮ ಪ್ರದೇಶವನ್ನು ಅವಲಂಬಿಸಿ, ನಿಮಗೆ ಆಯ್ಕೆಗಳಿವೆ. ಕ್ರೆಡಿಟ್ ಕಾರ್ಡ್ ಅಥವಾ Uber Cash ಬ್ಯಾಲೆನ್ಸ್‌ನಂತಹ ನಗದು ಅಥವಾ ಪಾವತಿ ವಿಧಾನವನ್ನು ಬಳಸಿ.

ನಿಮ್ಮ ಟ್ರಿಪ್ ಅನ್ನು ರೇಟ್ ಮಾಡಿ

ನಿಮ್ಮ ಟ್ರಿಪ್ ಹೇಗೆ ಹೋಯಿತು ಎಂಬುದನ್ನು ನಮಗೆ ತಿಳಿಸಿ. ನಿಮ್ಮ ಡ್ರೈವರ್‌ಗೆ ನೀವು ಅಭಿನಂದನೆಯನ್ನು ನೀಡಬಹುದು ಅಥವಾ ಆ್ಯಪ್‍ನಲ್ಲಿ ಟಿಪ್ ಅನ್ನು ಸೇರಿಸಬಹುದು.

ಪ್ರಾರಂಭದಿಂದ ಕೊನೆಯವರೆಗೂ ಸುಗಮ ಸವಾರಿ

ನೈಜ ಸಮಯದಲ್ಲಿ ಮುಂಗಡ ಬೆಲೆ

ನೀವು ಟ್ರಿಪ್ ಅನ್ನು ದೃಢೀಕರಿಸುವ ಮೊದಲು, ಬೆಲೆ ಅಂದಾಜುಗಳನ್ನು ನೋಡಿ ಆದ್ದರಿಂದ ನೀವು ಊಹಿಸಬೇಕಾಗಿಲ್ಲ ಮತ್ತು ಪ್ರತಿ ಬಾರಿಯೂ ಸರಿಯಾದ ಸವಾರಿಯನ್ನು ತಿಳಿದುಕೊಳ್ಳಲು ನೀವು ವೆಚ್ಚಗಳನ್ನು ಹೋಲಿಸಬಹುದು.

ನಿಮ್ಮ ಪಿಕಪ್ ಸ್ಥಳವನ್ನು ನಿಖರಗೊಳಿಸಿ

ನೀವು ಸವಾರಿಗಾಗಿ ವಿನಂತಿಸಿದಾಗ, ನಿಮ್ಮ ಡ್ರೈವರ್ ಅನ್ನು ಭೇಟಿ ಮಾಡಲು ಆ್ಯಪ್ ಸ್ವಯಂಚಾಲಿತವಾಗಿ ಅನುಕೂಲಕರ ಸ್ಥಳವನ್ನು ಸೂಚಿಸುತ್ತದೆ. ನಿಮ್ಮ ಸ್ಥಳವನ್ನು ಸರಿಹೊಂದಿಸಲು, ಹೊಸ ವಿಳಾಸವನ್ನು ಟೈಪ್ ಮಾಡಿ ಅಥವಾ ಬೂದು ವೃತ್ತದೊಳಗೆ ನಕ್ಷೆಯಲ್ಲಿ ನಿಮ್ಮ ಪಿನ್ ಅನ್ನು ಡ್ರ್ಯಾಗ್ ಮಾಡಿ.

ಡ್ರೈವಿಂಗ್ ವೀಲ್ ಹಿಂದಿರುವ ವ್ಯಕ್ತಿಯ ಕುರಿತು ತಿಳಿದುಕೊಳ್ಳಿ

ರೇಟಿಂಗ್‌ಗಳು ಮತ್ತು ಅಭಿನಂದನೆಗಳು ಸೇರಿದಂತೆ ನಿಮ್ಮ ಡ್ರೈವರ್ ಕುರಿತು ಮೋಜಿನ ಸಂಗತಿಗಳನ್ನು ನೋಡಲು ಆ್ಯಪ್‍ನಲ್ಲಿ ಡ್ರೈವರ್ ಪ್ರೊಫೈಲ್‌ಗಳನ್ನು ಪರಿಶೀಲಿಸಿ.

ರೇಟಿಂಗ್‌ಗಳು ಮತ್ತು ಸಲಹೆಗಳು

ರೇಟಿಂಗ್ ಟ್ರಿಪ್‌ಗಳ ಮೂಲಕ ನಿಮ್ಮ ಅನುಭವವನ್ನು ಸುಧಾರಿಸಲು ನಮಗೆ ಸಹಾಯ ಮಾಡಿ. ಅದ್ಭುತ ಡ್ರೈವರ್‌ಗಳಿಂದ ನೀವು ಉತ್ತಮ ಸೇವೆಯನ್ನು ಪಡೆದಿದ್ದರೆ, ನೀವು ಟಿಪ್ ಅನ್ನು ಸಹ ಸೇರಿಸಬಹುದು.

ಪ್ರತಿ ಸವಾರಿಯಲ್ಲಿ ಮನಸ್ಸಿನ ಶಾಂತಿ

ಚಾಲಕರ ಸ್ಕ್ರೀನಿಂಗ್ ಮತ್ತು ವಿಮೆಯಿಂದ ಹಿಡಿದು ನಿಮ್ಮ ಟ್ರಿಪ್ ಅನ್ನು ಟ್ರ್ಯಾಕ್ ಮಾಡಲು ಮತ್ತು ಸಂಪರ್ಕದಲ್ಲಿರಲು ನಿಮಗೆ ಅನುಮತಿಸುವ ಆ್ಯಪ್ ಫೀಚರ್‌ಗಳವರೆಗೆ, ನಿಮ್ಮ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ.

ಜನರು ವಿಶ್ವದಾದ್ಯಂತ ಚಲಿಸುವ ಮಾರ್ಗಗಳು

10,000 ಕ್ಕೂ ಹೆಚ್ಚು ನಗರಗಳಾದ್ಯಂತ ವಿವಿಧ ರೀತಿಯ ಸವಾರಿಗಳಿಗೆ ಪ್ರವೇಶದ ಜೊತೆಗೆ, ನೀವು ಬಯಸಿದ ಕಡೆಗೆ ಹೋಗುವ ಅಧಿಕಾರವನ್ನು Uber ಆ್ಯಪ್‍ ನಿಮಗೆ ನೀಡುತ್ತದೆ.

ಪರಿಚಯಿಸುತ್ತಿದ್ದೇವೆ Uber Plus

ಸರಳವಾದ, ಹೊಸ ಆ್ಯಪ್‍ನಲ್ಲಿ ಅದೇ ವಿಶ್ವಾಸಾರ್ಹ ಸವಾರಿಗಳನ್ನು ಪಡೆಯಿರಿ. Uber Lite ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಶೇಖರಣಾ ಸ್ಥಳ ಮತ್ತು ಡೇಟಾವನ್ನು ಉಳಿಸುತ್ತದೆ. ಜೊತೆಗೆ ಇದನ್ನು ಬಳಸುವುದು ಸುಲಭ ಮತ್ತು ದುರ್ಬಲ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿ ಸಹ ಇದು ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಪರಿಚಯಿಸುತ್ತಿದ್ದೇವೆ Uber Plus

ಸರಳವಾದ, ಹೊಸ ಆ್ಯಪ್‍ನಲ್ಲಿ ಅದೇ ವಿಶ್ವಾಸಾರ್ಹ ಸವಾರಿಗಳನ್ನು ಪಡೆಯಿರಿ. Uber Lite ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಶೇಖರಣಾ ಸ್ಥಳ ಮತ್ತು ಡೇಟಾವನ್ನು ಉಳಿಸುತ್ತದೆ. ಜೊತೆಗೆ ಇದನ್ನು ಬಳಸುವುದು ಸುಲಭ ಮತ್ತು ದುರ್ಬಲ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿ ಸಹ ಇದು ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

Lime ನೊಂದಿಗೆ ಇನ್ನಷ್ಟು ದೂರ ಹೋಗಿ

Uber ಆ್ಯಪ್ ಬಳಸಿಕೊಂಡು ಕೆಲವು ನಗರಗಳಲ್ಲಿ ನೀವು Lime ಇ-ಬೈಕ್ ಗಳು ಮತ್ತು ಇ-ಸ್ಕೂಟರ್‌ಗಳನ್ನು ಬಾಡಿಗೆಗೆ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಹತ್ತಿರದ ವಾಹನಗಳನ್ನು ಹುಡುಕಲು ಆ್ಯಪ್‌ನಲ್ಲಿನ ನಿರ್ದೇಶನಗಳನ್ನು ಅನುಸರಿಸಿ.

ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ

ಸವಾರರಿಂದ ಟಾಪ್ ಪ್ರಶ್ನೆಗಳು

  • Uber‌ ನಲ್ಲಿ, ನೀವು 30 ದಿನಗಳ ಮುಂಚಿತವಾಗಿ ಸವಾರಿಯನ್ನು ನಿಗದಿಪಡಿಸಬಹುದು. ಆ್ಯಪ್‍ ತೆರೆಯಿರಿ ಮತ್ತು ಎಲ್ಲಿಗೆ? ಗಮ್ಯಸ್ಥಾನ ಪೆಟ್ಟಿಗೆ ಪಕ್ಕದಲ್ಲಿರುವ ಕಾರು ಮತ್ತು ಗಡಿಯಾರ ಐಕಾನ್ ಅನ್ನು ಟ್ಯಾಪ್ ಮಾಡಿ.

  • ಆ್ಯಪ್‍ ತೆರೆಯಿರಿ ಮತ್ತು ಎಲ್ಲಿಗೆ? ಗಮ್ಯಸ್ಥಾನ ಪೆಟ್ಟಿಗೆ ಟ್ಯಾಪ್ ಮಾಡಿ. ಇದು ತೆರೆಯುತ್ತದೆ ಸವಾರರನ್ನು ಬದಲಿಸಿ ಸ್ಕ್ರಾಲ್-ಡೌನ್ ಆಯ್ಕೆ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿ. ಅವರು ಕಾರು ಮಾದರಿ ಮತ್ತು ಲೈಸೆನ್ಸ್ ಪ್ಲೇಟ್, ಡ್ರೈವರ್ ಹೆಸರು ಮತ್ತು ಸಂಪರ್ಕ ಮಾಹಿತಿ, ಮತ್ತು ಇಟಿಎ ಸೇರಿದಂತೆ ಟ್ರಿಪ್ ವಿವರಗಳೊಂದಿಗೆ ಪಠ್ಯ ಸಂದೇಶವನ್ನು ಸ್ವೀಕರಿಸುತ್ತಾರೆ.

  • ಸಮಯ ಮತ್ತು ದೂರವನ್ನು ಆಧರಿಸಿ ಬೆಲೆಗಳನ್ನು ಲೆಕ್ಕಹಾಕಲಾಗುತ್ತದೆ. ಅವುಗಳು ಹೆಚ್ಚುವರಿ ಶುಲ್ಕಗಳು, ನಿಮ್ಮ ಟ್ರಿಪ್‌ನ ಸಮಯದಲ್ಲಿ ಎದುರಾದ ಟೋಲ್‌ಗಳು, ರದ್ದತಿ ಮತ್ತು ಅನ್ವಯವಾಗಿದ್ದರೆ ಕಾಯುವ ಸಮಯ ಮತ್ತು ಬುಕಿಂಗ್ ಶುಲ್ಕಗಳಿಗೆ ಒಳಪಟ್ಟಿರುತ್ತವೆ.

    ಮುಂಗಡ ಬೆಲೆಯನ್ನು ಲೆಕ್ಕಹಾಕಲು ಹಲವಾರು ಡೇಟಾ ಪಾಯಿಂಟ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಅಂದಾಜು ಟ್ರಿಪ್ ಸಮಯ, ಮೂಲದಿಂದ ಗಮ್ಯಸ್ಥಾನಕ್ಕೆ ದೂರ, ದಿನದ ಸಮಯ, ಮಾರ್ಗ ಮತ್ತು ಬೇಡಿಕೆಯ ಮಾದರಿಗಳನ್ನು ಆಧರಿಸಿದೆ. ಇದು ಟೋಲ್‌ಗಳು, ತೆರಿಗೆಗಳು, ಇತರ ಶುಲ್ಕಗಳು ಮತ್ತು ಹೆಚ್ಚುವರಿ ಶುಲ್ಕಗಳನ್ನು ಸಹ ಒಳಗೊಂಡಿದೆ.

  • ರೇಟಿಂಗ್‌ಗಳು ಎರಡೂ ರೀತಿಯಲ್ಲಿ ನಡೆಯುತ್ತವೆ. ಡ್ರೈವರ್‌ಗಳಿಂದ ನಾವು ಹೆಚ್ಚಾಗಿ ಕೇಳುವ ಕೆಲವು ಪ್ರತಿಕ್ರಿಯೆಯೆಂದರೆ, ಸಂಭಾಷಣೆಯನ್ನು ಸ್ನೇಹಪರವಾಗಿರಿಸುವುದು, ಅವರ ಕಾರು ಮತ್ತು ಆಸ್ತಿಯನ್ನು ಗೌರವಿಸುವುದು, ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಬಾಗಿಲುಗಳನ್ನು ದಢಾರ್ ಎಂದು ಹಾಕದೆ ಇರುವುದು ಮತ್ತು ಡ್ರೈವ್ ಮಾಡುವಾಗ ಗಮನವನ್ನು ಬೇರೆಡೆ ಸೆಳೆಯದಿರುವುದು. ಹೆಚ್ಚಿನ ಸಲಹೆಗಾಗಿ, ನಮ್ಮ ಸಮುದಾಯ ಮಾರ್ಗಸೂಚಿಗಳಿಗೆ ಭೇಟಿ ನೀಡಿ.

  • ನಿಮ್ಮ ಸವಾರಿಗೆ ಮೊದಲು ಅಥವಾ ಸವಾರಿಯ ಸಮಯದಲ್ಲಿ ನೀವು 2 ಹೆಚ್ಚುವರಿ ನಿಲ್ದಾಣಗಳನ್ನು ಸೇರಿಸಬಹುದು. ಎಲ್ಲಿಗೆ? ಎಂಬುದರ ಗಮ್ಯಸ್ಥಾನ ಪೆಟ್ಟಿಗೆ ಪಕ್ಕದಲ್ಲಿ + ಟ್ಯಾಪ್ ಮಾಡಿ ನಿಮ್ಮ ವಿಳಾಸವನ್ನು ನಮೂದಿಸಲು. ನಿಮ್ಮ ಗಮ್ಯಸ್ಥಾನದ ಸಮಯ ಮತ್ತು ದೂರವನ್ನು ಆಧರಿಸಿ ನಿಮ್ಮ ಬೆಲೆಯನ್ನು ಅಡ್ಜಸ್ಟ್ ಮಾಡಬಹುದು.

*ಈ ವೈಶಿಷ್ಟ್ಯವು Uber Lite ಆ್ಯಪ್‌ನಲ್ಲಿ ಲಭ್ಯವಿಲ್ಲ. ಈ ವೆಬ್ ಪುಟದಲ್ಲಿ ನೀಡಲಾದ ಮಾಹಿತಿಯು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರದೇಶ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಸೂಚನೆ ಇಲ್ಲದೆ ನವೀಕರಿಸಬಹುದಾಗಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو