Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಉನ್ನತ ಶಿಕ್ಷಣ ನಿಮ್ಮ ಕೈಗೆಟುಕುವ ಅಂತರದಲ್ಲಿದೆ

ಬೋಧನೆ ಇಲ್ಲದೆಯೇ ಉನ್ನತ ಶಿಕ್ಷಣ

ಪದವಿಪೂರ್ವ ಶಿಕ್ಷಣ

80 ಕ್ಕೂ ಹೆಚ್ಚು ಪದವಿಪೂರ್ವ ಶಿಕ್ಷಣದ ಪ್ರೋಗ್ರಾಂಗಳು ನಿಮ್ಮ ಆಯ್ಕೆಗೆ ಲಭ್ಯವಿವೆ.

ಇಂಗ್ಲಿಷ್ ಭಾಷೆಯ ಕೋರ್ಸ್‌ಗಳು

ನಿಮ್ಮ ಓದು, ಬರವಣಿಗೆ, ಆಲಿಸುವಿಕೆ ಮತ್ತು ಮಾತನಾಡುವ ಕೌಶಲ್ಯವನ್ನು ಇನ್ನಷ್ಟು ಸುಧಾರಿಸಿ.

ಉದ್ಯಮಶೀಲತೆ ಪ್ರೋಗ್ರಾಂ

ವ್ಯವಹಾರವನ್ನು ಪ್ರಾರಂಭಿಸುವುದು, ವೃದ್ಧಿಸುವುದು ಮತ್ತು ಯಶಸ್ವಿಯಾಗಿ ನಡೆಸುವುದು ಹೇಗೆ ಎಂಬುದರ ಕುರಿತು ತಿಳಿಯಿರಿ.

ASU ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿರುವ ಚಾಲಕರನ್ನು ಭೇಟಿ ಮಾಡಿ

 • "ನಾನು ಪ್ರಾರಂಭಿಸಿದ ಪ್ರಯಾಣವನ್ನು ಮುಗಿಸಲು ಒದಗಿಬಂದ ಅವಕಾಶವಿದು."

  —ಪಾಲ್, ಚಾಲಕ, ಬೋಸ್ಟನ್

  ಪಾಲ್ ಅವರು ಯುಎಸ್‌ನಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡುವ ಕನಸು ಕಾಣುತ್ತಾ ಕೀನ್ಯಾವನ್ನು ತೊರೆದರು. ತನ್ನ ಕುಟುಂಬವನ್ನು ನೋಡಿಕೊಳ್ಳಲು ಅವರು ಶಾಲೆ ತೊರೆಯಬೇಕಾದ ಸ್ಥಿತಿ ಬಂದಾಗ, ಎಂದೋ ಒಂದು ದಿನ ತಮ್ಮ ಶಿಕ್ಷಣವನ್ನು ಮುಗಿಸುವ ಅವಕಾಶ ಸಿಗುತ್ತದೆ ಎಂಬುದರ ಅರಿವಿರಲಿಲ್ಲ. ಈಗ ಅವರು ಸೈಕಾಲಜಿ ಅಧ್ಯಯನ ಮಾಡುತ್ತಿದ್ದಾರೆ.

  Youtube
 • "ನನ್ನ ಕನಸಿನ ಈ ಪದವಿಯನ್ನು ನಿಜವಾಗಿಯೂ ಪಡೆಯಬಲ್ಲೆ."

  —ಎಮಿಲಿ, ಚಾಲಕ, ಡೆನ್ವರ್

  ಎಮಿಲಿ ಟೆಕ್ ಉದ್ಯಮದಲ್ಲಿ ಉದ್ಯೋಗ ಪಡೆಯುವ ಗುರಿಯನ್ನು ಹೊಂದಿರುವ ಎರಡನೇ ದರ್ಜೆ ಶಿಕ್ಷಕಿಯಾಗಿದ್ದರು. ಆಕೆಯು ಆ ಕ್ಷೇತ್ರಕ್ಕೆ ಕಾಲಿಡಲು ನೆರವಾಗುವ ಪದವಿ ಶಿಕ್ಷಣವನ್ನು ಪಡೆಯಲು ದಾರಿ ಕಾಣಬೇಕಿತ್ತು. ಇದೀಗ ಆಕೆ UX ಡಿಸೈನ್ ಕೋರ್ಸ್ ಅನ್ನು ಅಧ್ಯಯನ ಮಾಡುತ್ತಿದ್ದಾರೆ.

  Youtube
 • "ನಾನು ನನ್ನ ಹೆಂಡತಿಗೆ ಕಾಲೇಜು ಶಿಕ್ಷಣವನ್ನು ಕೊಡಿಸಬಹುದೆಂದು ತಿಳಿದು, ಅದನ್ನು ನಂಬಲು ಸಾಧ್ಯವಾಗಲಿಲ್ಲ."

  —ಡ್ಯಾರಿನ್, ಚಾಲಕರು, ಫೀನಿಕ್ಸ್

  ಶಾನನ್ ಕಾಲೇಜು ಶಿಕ್ಷಣವನ್ನು ಮುಗಿಸಲು ಅವಕಾಶವೇ ಸಿಗಲಿಲ್ಲ. ಚಾಲಕರಾಗಿರುವ ಆಕೆಯ ಪತಿ ಡ್ಯಾರಿನ್, ಟ್ಯೂಷನ್ ಕವರೇಜ್‌ಗೆ ಅರ್ಹತೆ ಪಡೆದಾಗ, ಕೂಡಲೇ ಅದನ್ನು ಆಕೆಗೆ ವರ್ಗಾಯಿಸಿದರು. ಈಗ ಆಕೆ ತನ್ನ ಪದವಿ ಶಿಕ್ಷಣವನ್ನು ಅಭ್ಯಸಿಸುತ್ತಿದ್ದಾರೆ.

  Youtube
1/3

ಕುಟಂಬದ ಸದಸ್ಯರಿಗೆ ಸುಸ್ವಾಗತ

ಈ ಅವಕಾಶವನ್ನು ನಿಮಗಾಗಿ ಬಳಸಿಕೊಳ್ಳಬಹುದು ಅಥವಾ ಅರ್ಹ ಬಾಳಸಂಗಾತಿ, ಸಂಗಾತಿ, ಮಕ್ಕಳು, ಒಡಹುಟ್ಟಿದವರು, ಪೋಷಕರು, ಪಾಲಕರು ಅಥವಾ ಆಶ್ರಿತರಿಗೆ ಬೇಕಾದರೂ ವರ್ಗಾಯಿಸಬಹುದು.

ಅರ್ಹತೆ ಪಡೆಯುವ ಬಗೆ ಹೇಗೆ

ನೀವು 3,000 ಟ್ರಿಪ್‌ಗಳನ್ನು ಪೂರ್ಣಗೊಳಿಸಿದಾಗ ಮತ್ತು Uber Plus ಗೋಲ್ಡ್, ಡೈಮಂಡ್ ಅಥವಾ ಪ್ಲಾಟಿನಂ ಸ್ಥಿತಿಯನ್ನು ತಲುಪಿದಾಗ ಈ ಅವಕಾಶ ನಿಮ್ಮದಾಗಲಿದೆ.

ದಾರಿ ನಿಮ್ಮದು

ಆಗಾಗ ಕೇಳಲಾಗುವ ಪ್ರಶ್ನೆಗಳು

 • ಯುಎಸ್‌ನಲ್ಲಿ Uber Plus ಪ್ರೋಗ್ರಾಂ ಮೂಲಕ ಗೋಲ್ಡ್, ಪ್ಲಾಟಿನಮ್ ಅಥವಾ ಡೈಮಂಡ್ ಸ್ಥಿತಿಯನ್ನು ಸಾಧಿಸಿರುವ ಮತ್ತು 3,000 ಅಥವಾ ಅದಕ್ಕಿಂತ ಹೆಚ್ಚು ಜೀವಿತಾವಧಿ ಟ್ರಿಪ್‌ಗಳನ್ನು ಪೂರ್ಣಗೊಳಿಸಿರುವ ಸವಾರರು, ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ (ASU) ಲಭ್ಯವಿರುವ ಆನ್‌ಲೈನ್ ಕೋರ್ಸ್‌ಗಳಿಗೆ ಸಂಪೂರ್ಣ ಭೋದನಾ ಕವರೇಜ್ ಅನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

  ಅರ್ಹ ಚಾಲಕರು ಈ ರಿವಾರ್ಡ್ ಅನ್ನು ಅರ್ಹ ಕುಟುಂಬದ ಸದಸ್ಯರಿಗೆ ಅಂದರೆ ಬಾಳಸಂಗಾತಿ ಅಥವಾ ಸಂಗಾತಿ, ಮಕ್ಕಳು ಅಥವಾ ಆಶ್ರಿತರು, ಒಡಹುಟ್ಟಿದವರು, ಪಾಲಕರು ಇಲ್ಲವೇ ಪೋಷಕರಿಗೆ ವರ್ಗಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

 • ನೀವು ಹೆಚ್ಚು ಕಾಳಜಿವಹಿಸುವ ಜನರ ಕನಸುಗಳನ್ನು ಸಾಕಾರಗೊಳಿಸಲು, ಅರ್ಹ ಚಾಲಕರು ತಮಗೆ ಸಿಗುವ ಪ್ರತಿಫಲವನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಬಹುದು. ಆ ಕುಟುಂಬ ಸದಸ್ಯರಿಗೆ ನೀವಾಗಲೀ ಮತ್ತು ನಿಮ್ಮ ಕುಟುಂಬವಾಗಲೀ ಯಾವುದೇ ಬೋಧನಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಕುಟುಂಬ ಸದಸ್ಯರೆಂದರೆ:

  • ಸಂಗಾತಿ ಅಥವಾ ಬಾಳ ಸಂಗಾತಿ

  • ಮಕ್ಕಳು

  • ಒಡಹುಟ್ಟಿದವರು

  • ಆಶ್ರಿತರು

  • ಪೋಷಕರು ಅಥವಾ ಪಾಲಕರು

 • ಇದು ವಿದ್ಯಾರ್ಥಿ ಸಾಲ ಅಥವಾ ಮರುಪಾವತಿ ಅಲ್ಲ; Uber ಮುಂಚಿತವಾಗಿ ನಿಮ್ಮ ಭೋದನಾ ಶುಲ್ಕವನ್ನು ಭರಿಸುತ್ತದೆ.

  ಅರ್ಹ ಚಾಲಕರು ಅಥವಾ ಅವರ ಅರ್ಹ ಕುಟುಂಬ ಸದಸ್ಯರು ಪಠ್ಯಪುಸ್ತಕಗಳು ಮತ್ತು ಬೋಧನಾ ಶುಲ್ಕದ ಮೇಲಿನ ವಾರ್ಷಿಕ ತೆರಿಗೆಗಳಂತಹ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ತೆಗೆದುಕೊಳ್ಳುವ ಕೋರ್ಸ್‌ಗಳ ಆಧಾರದ ಮೇಲೆ ತೆರಿಗೆಗಳು ಮತ್ತು ಪಠ್ಯಪುಸ್ತಕ ವೆಚ್ಚಗಳು ಬದಲಾಗುತ್ತವೆ.

  ನೀವು ASU ಆನ್‌ಲೈನ್ ಮೂಲಕ ಪದವಿಪೂರ್ವ ಶಿಕ್ಷಣವನ್ನು ಪಡೆಯಲು ಆಯ್ಕೆ ಮಾಡಿದರೆ, ದಾಖಲಾತಿ ಪ್ರಕ್ರಿಯೆಯಲ್ಲಿ ಫೆಡರಲ್ ವಿದ್ಯಾರ್ಥಿ ಸಹಾಯಕ್ಕಾಗಿ ಉಚಿತ ಅಪ್ಲಿಕೇಶನ್ (FAFSA) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದು ವಿದ್ಯಾರ್ಥಿ ಸಾಲ ಅಥವಾ ಮರುಪಾವತಿಗಾಗಿನ ಅರ್ಜಿಯಲ್ಲ - ಇದು ಫೆಡರಲ್ ಅನುದಾನ ಮತ್ತು ವಿದ್ಯಾರ್ಥಿ ವೇತನವನ್ನು ಪಡೆಯಲು ನೀವು ಅರ್ಹತೆ ಹೊಂದಿದ್ದೀರಾ ಮತ್ತು ಉಚಿತ ರಿವಾರ್ಡ್ ಸಹಾಯವೆಂದು ಪರಿಗಣಿಸಲಾಗಿದೆಯೆ ಮತ್ತು ಮರುಪಾವತಿ ಅಗತ್ಯವಿಲ್ಲ ಎಂಬುದನ್ನು ತೋರಿಸಬಲ್ಲ ಒಂದು ಅಪ್ಲಿಕೇಶನ್ ಆಗಿದೆ. ನೀವು FAFSA ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮತ್ತು ವಿದ್ಯಾರ್ಥಿ ಸಾಲಗಳಿಗೆ ಅರ್ಹತೆ ಹೊಂದಿದ್ದೀರಿ ಎಂದು ಕಂಡುಕೊಂಡರೆ, ಪಠ್ಯಪುಸ್ತಕಗಳು ಮತ್ತು ಇತರ ಸರಬರಾಜುಗಳಂತಹ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಆ ಮೊತ್ತವನ್ನು ಸದುಪಯೋಗಪಡಿಸಿಕೊಳ್ಳಬಹುದು (ಪ್ರತಿ ಸೆಮಿಸ್ಟರ್‌ಗೆ ಸುಮಾರು $650).

 • ಅರ್ಹ ಚಾಲಕರು ಅಥವಾ ಕುಟುಂಬದ ಸದಸ್ಯರು ತಮ್ಮ 100% ಬೋಧನೆ ಕವರೇಜ್ ಅನ್ನು 2 ರೀತಿಯ ಶೈಕ್ಷಣಿಕ ಕೊಡುಗೆಗಳಲ್ಲಿ ಸದುಪಯೋಗಪಡಿಸಿಕೊಳ್ಳಬಹುದು:

  ಪದವಿಪೂರ್ವ ಶಿಕ್ಷಣದ ಮೇಲಿನ ಕ್ರೆಡಿಟ್‌ಗಳು

  ASU ಆನ್‌ಲೈನ್ ಮೂಲಕ 80 ಕ್ಕೂ ಹೆಚ್ಚು ಸಂಪೂರ್ಣ ಮಾನ್ಯತೆ ಪಡೆದಿರುವ ಪದವಿ ಶಿಕ್ಷಣದ ಪ್ರೋಗ್ರಾಂಗಳಿಗೆ ನಿಮಗೆ ಪ್ರವೇಶವಿದೆ. ಆನ್‌ಲೈನ್‌ನಲ್ಲಿ ಗಳಿಸುವ ಡಿಪ್ಲೋಮಾ ಮತ್ತು ಟ್ರಾನ್ಸ್‌ಕ್ರಿಪ್ಟ್ ಪ್ರಮಾಣಪತ್ರಗಳು ಕ್ಯಾಂಪಸ್‌ನಲ್ಲಿ ಗಳಿಸುವ ಪ್ರಮಾಣಪತ್ರಗಳಷ್ಟೇ ಮಾನ್ಯತೆ ಪಡೆದಿರುತ್ತವೆ—“ಅರಿಜೋನಾ ಸ್ಟೇಟ್ ಯೂನಿವರ್ಸಿಟಿ”ಯಲ್ಲಿ ಓದಿದಂತೆಯೇ ಆನ್‌ಲೈನ್ ಕೋರ್ಸ್‌ಗಳನ್ನು ಅದೇ ಪ್ರಶಸ್ತಿ-ವಿಜೇತ ASU ಅಧ್ಯಾಪಕರು ಭೋದಿಸುತ್ತಾರೆ.

  ನೀವು ಆರಂಭದಲ್ಲಿ ASU ಆನ್‌ಲೈನ್ ಪದವಿಪೂರ್ವ ಶಿಕ್ಷಣ ಪ್ರೋಗ್ರಾಂಗೆ ಪ್ರವೇಶ ಪಡೆಯದಿದ್ದರೆ, ಅರ್ಹ ಚಾಲಕರು ಅಥವಾ ಕುಟುಂಬ ಸದಸ್ಯರಿಗೆ ASU ನ ಗಳಿಕೆ ಪ್ರವೇಶ ಕಾರ್ಯಕ್ರಮಕ್ಕೆ ಪ್ರವೇಶವಿದೆ, ಇದು ASU ನಲ್ಲಿ ಪ್ರವೇಶ ಪಡೆಯಲು ಭವಿಷ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೋರ್ಸ್‌ಗಳ ಸರಣಿಯಾಗಿದೆ.

  ಇಂಗ್ಲೀಷ್ ಭಾಷೆ &/ಅಥವಾ ಉದ್ಯಮಶೀಲತೆಯಲ್ಲಿ ಶೈಕ್ಷಣಿಕ ಕೋರ್ಸ್‌ಗಳನ್ನು ಮುಂದುವರಿಸುವುದು

  ಪದವಿ ಶಿಕ್ಷಣವನ್ನು ಬಯಸದವರಿಗೆ, ASU ಅರ್ಹ ಚಾಲಕರು ಅಥವಾ ಕುಟುಂಬದ ಸದಸ್ಯರಿಗಾಗಿ 2 ರೀತಿಯ ಮುಂದುವರಿದ ಶಿಕ್ಷಣ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನೀಡುತ್ತದೆ. ಇಂಗ್ಲೀಷ್ ಭಾಷಾ ಕೌಶಲ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಬಯಸುವವರಿಗೆ, ನಿಮ್ಮ ಓದುವಿಕೆ ಶೈಲಿ, ಬರವಣಿಗೆ ಮತ್ತು ಮಾತನಾಡುವ ಸಾಮರ್ಥ್ಯವನ್ನು ಸುಧಾರಿಸಲು ಇಂಗ್ಲೀಷ್ ಭಾಷಾ ಕಲಿಕೆ (ELL) ಕೋರ್ಸ್‌ಗೆ ಸೇರಿಕೊಳ್ಳಬಹುದು. ನಿಮ್ಮ ಪ್ರಾವೀಣ್ಯತೆಯ ಆಧಾರದ ಮೇಲೆ ELL ಕೋರ್ಸ್‌ಗಳನ್ನು 8 ವಿಭಿನ್ನ ನಿರರ್ಗಳತೆ ಮಟ್ಟದಲ್ಲಿ ನೀಡಲಾಗುತ್ತದೆ ಮತ್ತು ಪ್ರತಿ ಕೋರ್ಸ್ ಪೂರ್ಣಗೊಳ್ಳಲು ಸುಮಾರು 8 ವಾರಗಳಷ್ಟು ಸಮಯ ಬೇಕಾಗುತ್ತದೆ. ತಮ್ಮ ಉದ್ಯಮಶೀಲತಾ ಕೌಶಲ್ಯ ಸಮೂಹವನ್ನು ಬೆಳೆಸಲು ಬಯಸುವವರಿಗೆ, ASU 5 ಕೋರ್ಸ್‌ಗಳ ಕಾರ್ಯಕ್ರಮವನ್ನು Uber ಗಾಗಿಯೇ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿದೆ, ಅದು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು, ಬೆಳೆಯಲು ಮತ್ತು ನಿರ್ವಹಿಸಲು ಅಗತ್ಯವಾದ ಮೂಲಭೂತ ಕೌಶಲ್ಯಗಳನ್ನು ಕಲಿಸುತ್ತದೆ.

 • ನೀವು ಗೋಲ್ಡ್, ಪ್ಲಾಟಿನಂ ಅಥವಾ ಡೈಮಂಡ್ ಸ್ಥಿತಿಯನ್ನು ಕಾಪಾಡಿಕೊಳ್ಳುವವರೆಗೂ ಭೋದನಾ ಕವರೇಜ್‌ಗೆ ಅರ್ಹರಾಗಿರುತ್ತೀರಿ. ನಿಮ್ಮ Uber Plus ಸ್ಟೇಟಸ್ ‘ನೀಲಿ’ ಗೆ ಬದಲಾದರೆ, ನೀವು 3-ತಿಂಗಳ ರಿಯಾಯಿತಿ ಅವಧಿಯನ್ನು ಹೊಂದಿರುತ್ತೀರಿ. ಗೋಲ್ಡ್, ಪ್ಲಾಟಿನಂ ಅಥವಾ ಡೈಮಂಡ್ ಸ್ಥಿತಿಗೆ ಪುನಃ ಅರ್ಹತೆ ಪಡೆಯುವ ಮೂಲಕ ನೀವು ಭೋದನೆ ಕವರೇಜ್‌ಗೆ ಅರ್ಹತೆಯನ್ನು ಮರಳಿ ಪಡೆಯಬಹುದು. ನೀವು ಅರ್ಹತೆ ಪಡೆದಾಗ ಪ್ರಾರಂಭಿಸಿದ ಎಲ್ಲಾ ಕೋರ್ಸ್‌ಗಳಿಗೆ ಬೋಧನೆ ಕವರೇಜ್ ಒಳಗೊಂಡಿರುತ್ತದೆ, ನಿಮ್ಮ ಅರ್ಹತೆಯು ತರುವಾಯ ತರಗತಿಯ ಅವಧಿಯಲ್ಲಿ ಕಳೆದುಹೋದರೂ ಸಹ ಹಾಗೆಯೇ ಇರುತ್ತದೆ.

 • Uber Plus ಇದು ನಿಮ್ಮ ಚಾಲನೆ ಕೆಲಸದ ಒಳಗೂ ಮತ್ತು ಹೊರಗೂ ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಸಹಾಯ ಮಾಡುವಂತಹ ಹೊಸ ರಿವಾರ್ಡ್‌ಗಳ ಪ್ರೋಗ್ರಾಂ ಆಗಿದೆ. ನೀವು ಟ್ರಿಪ್ ಸ್ವೀಕರಿಸುವ ಮೂಲಕ ಸವಾರರಿಗೆ ಉತ್ತಮ ಸೇವೆಗಳನ್ನು ಒದಗಿಸಿದಂತೆಲ್ಲಾ, ನಿಮ್ಮ Uber Plus ಸ್ಟೇಟಸ್‌ನಲ್ಲಿ ಪರಿಗಣಿಸಲ್ಪಡುವ ಪಾಯಿಂಟ್‌ಗಳನ್ನು ಗಳಿಸುತ್ತೀರಿ. ನೀವು ಉನ್ನತ ಸ್ಥಾನಮಾನವನ್ನು ತಲುಪುತ್ತಿದ್ದಂತೆ, ASU ಆನ್‌ಲೈನ್‌ನಲ್ಲಿ 100% ಬೋಧನಾ ಶುಲ್ಕದಂಹತ ಹೊಸ ರಿವಾರ್ಡ್‌ಗಳನ್ನು ಗಳಿಸುವ ಅವಕಾಶ ನಿಮ್ಮದಾಗಲಿದೆ.

 • ನಿಮ್ಮ ಬೋಧನಾ ಶುಲ್ಕ ಪ್ರಯೋಜನ, ನೋಂದಣಿ ಪ್ರಕ್ರಿಯೆ, ಕೋರ್ಸ್‌ಗಳು ಹಾಗೂ ಹೆಚ್ಚಿನವುಗಳ ಬಗ್ಗೆ ತಿಳಿಯಲು, ASU ವೆಬ್‌ಸೈಟ್ ಗೆ ಭೇಟಿ ನೀಡಬಹುದು.

  ನೀವು ಪದವಿಪೂರ್ವ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿದ್ದರೆ, 844-369-6587 ಗೆ ಕರೆ ಮಾಡಿ ನಿಮ್ಮ ನಿಯೋಜಿತ ದಾಖಲಾತಿ ತರಬೇತಿದಾರರ ಜೊತೆಗೆ ನೇರವಾಗಿ ಮಾತನಾಡಬಹುದು, ಅವರು ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ಪ್ರಾರಂಭಿಸಲು, Uber ಮೂಲಕ ನೀವು ಪಡೆದಿರುವ ಬೋಧನಾ ಶುಲ್ಕ ಪ್ರಯೋಜನದ ಕುರಿತು ತಿಳಿಸಿ.

ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಹಕ್ಕುನಿರಾಕರಣೆ: 100% ಟ್ಯೂಷನ್ ಕವರೇಜ್ ಶುಲ್ಕವನ್ನು ಸ್ವೀಕರಿಸಲು, ನೀವು Uber Plus ಗೋಲ್ಡ್, ಪ್ಲಾಟಿನಂ ಅಥವಾ ಡೈಮಂಡ್ ಸ್ಥಿತಿಯನ್ನು ಹೊಂದಿರಬೇಕು ಮತ್ತು 3,000 ಟ್ರಿಪ್‌ಗಳನ್ನು ಪೂರ್ಣಗೊಳಿಸಿರಬೇಕು. ಅರ್ಹ ಕುಟುಂಬದ ಸದಸ್ಯರು ಮಾತ್ರ. ತೆರಿಗೆಗಳು, ಪಠ್ಯಪುಸ್ತಕಗಳು ಮತ್ತು ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳು ಜವಾಬ್ದಾರರಾಗಿರುತ್ತಾರೆ. ನಿಯಮಗಳು, ಷರತ್ತುಗಳು ಹಾಗೂ ಇತರ ಮಿತಿಗಳು ಅನ್ವಯಿಸುತ್ತವೆ.