Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಆತ್ಮವಿಶ್ವಾಸದಿಂದ ಚಾಲನೆ ಮಾಡಿ

ಅವಕಾಶ ಎಲ್ಲಿದ್ದರೂ ಹೋಗಲು ಸಾಧ್ಯವಾಗಲು ನೀವು ಅರ್ಹರಾಗಿರುತ್ತೀರಿ. ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನವರನ್ನು ರಕ್ಷಿಸಲು ಸಹಾಯ ಮಾಡುವ ರಸ್ತೆ ಮೇಲಿನ ಬೆಂಬಲ ಮತ್ತು ತಂತ್ರಜ್ಞಾನದೊಂದಿಗೆ ಅಲ್ಲಿಗೆ ಹೋಗಿ.

ಇನ್ನು ಮುಂದೆ ಮಾಸ್ಕ್‌ಗಳು ಅಗತ್ಯವಿಲ್ಲ

ಏಪ್ರಿಲ್ 19, 2022 ರಿಂದ, Uber ಬಳಸುವಾಗ ಸವಾರರು ಮತ್ತು ಚಾಲಕರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದಾಗ್ಯೂ, ನೀವು ಕೆಲವು ವೈಯಕ್ತಿಕ ಅಪಾಯಕಾರಿ ಅಂಶಗಳು ಮತ್ತು/ಅಥವಾ ನಿಮ್ಮ ಪ್ರದೇಶದಲ್ಲಿ ಹೆಚ್ಚಿನ ಪ್ರಸರಣ ಮಟ್ಟವನ್ನು ಹೊಂದಿದ್ದರೆ ಮಾಸ್ಕ್ ಧರಿಸುವುದನ್ನು ರೋಗ ನಿಯಂತ್ರಣ ಕೇಂದ್ರ ಇನ್ನೂ ಶಿಫಾರಸು ಮಾಡುತ್ತದೆ.

ನೆನಪಿಡಿ: ವೈಯಕ್ತಿಕ ಅಥವಾ ಕೌಟುಂಬಿಕ ಆರೋಗ್ಯದ ಕಾರಣದಿಂದ ಅನೇಕ ಜನರು ಇನ್ನೂ ಮಾಸ್ಕ್ ಧರಿಸುವುದು ಸೇಫರ್ ಎಂದು ಭಾವಿಸುತ್ತಾರೆ. ಆದ್ದರಿಂದ, ದಯವಿಟ್ಟು ಅವರ ಆದ್ಯತೆಗಳನ್ನು ಗೌರವಿಸಿ. ಮತ್ತು ನೀವು ಯಾವಾಗಲಾದರೂ ಅನಾನುಕೂಲ ಅನುಭವಿಸಿದರೆ, ನೀವು ಯಾವುದೇ ಸಮಯದಲ್ಲಿ ಟ್ರಿಪ್ ಅನ್ನು ರದ್ದುಗೊಳಿಸಬಹುದು.

ನಮ್ಮ 'ಮುಂಬದಿ ಸೀಟ್‌ ಇಲ್ಲ' ಎಂಬ ನೀತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ

ಇನ್ನು ಮುಂದೆ ಸವಾರರು ಹಿಂದಿನ ಸೀಟ್‌ನಲ್ಲಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಆದಾಗ್ಯೂ, ನಿಮಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಲು, ಸವಾರರು ತಮ್ಮ ಸಮೂಹ ಗಾತ್ರದ ಕಾರಣದಿಂದಾಗಿ ಮುಂಭಾಗದ ಸೀಟ್ ‌ಅನ್ನು ಅಗತ್ಯವಿದ್ದರೆ ಮಾತ್ರ ಬಳಸಬೇಕೆಂದು ನಾವು ಇನ್ನೂ ಕೇಳುತ್ತಿದ್ದೇವೆ.

ಪರಸ್ಪರ ಕಾಳಜಿ ವಹಿಸಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು

ಸಾಂಕ್ರಾಮಿಕ ರೋಗವು ಕಷ್ಟಕರವಾಗಿದೆ ಎಂದು ನಮಗೆ ತಿಳಿದಿದೆ. ಆದರೆ, ನೀವು ನಮ್ಮ ಸಮುದಾಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ—ಅದು ಮಾಸ್ಕ್ ಧರಿಸುವುದಾಗಿರಲಿ, ಒಬ್ಬರಿಗೊಬ್ಬರು ಸ್ಥಳಾವಕಾಶವನ್ನು ಮಾಡಿಕೊಡುವುದಾಗಿರಲಿ ಅಥವಾ ಜನರಿಗೆ ಬೇಕಾದ ಆಹಾರವನ್ನು ಪಡೆಯಲು ಸಹಾಯ ಮಾಡುವುದಾಗಿರಲಿ, ಹೆಚ್ಚುವರಿ ಶ್ರಮ ವಹಿಸುವುದನ್ನು ಮುಂದುವರಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

ಚಾಲನೆ ಮಾಡುವಾಗ ಮತ್ತು ಡೆಲಿವರಿ ಮಾಡುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಈಗಲೂ ಮುಖ್ಯವಾಗಿದೆ. ಹೆಚ್ಚುವರಿ ಗಾಳಿ ಹರಿದಾಡುವುವಿಕೆಗಾಗಿ ನಿಮ್ಮ ಕಿಟಕಿಗಳನ್ನು ಇಳಿಸಲು ಮರೆಯದಿರಿ, ಟ್ರಿಪ್‌ಗಳು ಅಥವಾ ಡೆಲಿವರಿಗಳ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಿ ಮತ್ತು ಯಾವಾಗಲೂ ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳಿ.

ನಮ್ಮ ಡೋರ್-ಟು-ಡೋರ್ ಸುರಕ್ಷತೆ ಮಾನದಂಡ

Uber ನ ನವೀನ ತಂತ್ರಜ್ಞಾನದಿಂದ ಸಂಚಾಲಿಸಲ್ಪಟ್ಟಿದ್ದು, ಹಂಚಿಕೆಯ ಜವಾಬ್ದಾರಿಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯ ತಜ್ಞರ ಮಾರ್ಗದರ್ಶನವೂ ಸೇರಿದಂತೆ, ಈ ಹೊಸ ಕ್ರಮಗಳನ್ನು ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

 • ನಮ್ಮ ಡೋರ್-ಟು-ಡೋರ್ ಸುರಕ್ಷತೆ ಮಾನದಂಡ

  ನಿಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುವ ಹೊಸ ಕ್ರಮಗಳು.

 • ನಾವೆಲ್ಲರೂ ಮಾಡಬೇಕಾದ ಕೆಲಸಗಳು

  ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು, ಎಲ್ಲಾ ಸವಾರರು ಫೇಸ್ ಕವರ್ ಅಥವಾ ಮಾಸ್ಕ್ ಅನ್ನು ಧರಿಸಬೇಕಾಗುತ್ತದೆ. ನಿಮ್ಮಲ್ಲಿ ಪ್ರತಿಯೊಬ್ಬರ ನಡುವೆ ಹೆಚ್ಚಿನ ಅಂತರವನ್ನು ಕಾಪಾಡಲು ಸವಾರರಿಗೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಇನ್ನು ಮುಂದೆ ಅವಕಾಶವಿರುವುದಿಲ್ಲ.

 • ಫೇಸ್ ಕವರ್ ಪರಿಶೀಲನೆ

  ನೀವು ಆನ್‌ಲೈನ್‌ಗೆ ಹೋಗುವ ಮೊದಲು, ನಿಮ್ಮ ಫೋಟೋ ತೆಗೆದುಕೊಳ್ಳುವಂತೆ ನಾವು ತಿಳಿಸುತ್ತೇವೆ ಮತ್ತು ನೀವು ಫೇಸ್ ಕವರ್ ಅಥವಾ ಮಾಸ್ಕ್ ಅನ್ನು ಧರಿಸಿದ್ದೀರಾ ಎಂದು ಪರಿಶೀಲಿಸಲು ನಮ್ಮ ತಂತ್ರಜ್ಞಾನವು ಸಹಾಯ ಮಾಡುತ್ತದೆ.

 • ಆರೋಗ್ಯ ಮತ್ತು ಸುರಕ್ಷತಾ ಸಾಧನಗಳ ಪೂರೈಕೆಗಳು

  ಆಹಾರವನ್ನು ಸುರಕ್ಷಿತವಾಗಿ ಡೆಲಿವರಿ ಮಾಡುವುದಕ್ಕಾಗಿ ನಿಮಗೆ ಫೇಸ್ ಕವರ್, ಸೋಂಕುನಿವಾರಕ ಮತ್ತು ಕೈಗವಸುಗಳಂತಹ ಆರೋಗ್ಯ ಮತ್ತು ಸುರಕ್ಷತಾ ಸಾಮಾಗ್ರಿಗಳನ್ನು ಒದಗಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

 • ತಜ್ಞರ ನೇತೃತ್ವದ ಮಾರ್ಗದರ್ಶನ

  ಸುರಕ್ಷತಾ ಸಲಹೆಗಳು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನಾವು ವಿಶ್ವ ಆರೋಗ್ಯ ಸಂಸ್ಥೆ (WHO) ಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ.

 • ಸವಾರಿ ಸುರಕ್ಷತೆ ಅಭಿಪ್ರಾಯ

  ಸವಾರರು ಫೇಸ್ ಕವರ್ ಅಥವಾ ಮಾಸ್ಕ್ ಧರಿಸದೆ ಇರುವುದರಿಂದ ಆರೋಗ್ಯ ಸಮಸ್ಯೆಗಳ ಕುರಿತು ಅಭಿಪ್ರಾಯವನ್ನು ತಿಳಿಸಲು ನಿಮಗೆ ಈಗ ಸಾಧ್ಯವಾಗುತ್ತದೆ. ಇದು ನಾವು ಇನ್ನಷ್ಟು ಸುಧಾರಣೆ ಕ್ರಮಗಳನ್ನು ಜಾರಿಗೆ ತರಲು ಮತ್ತು ಪ್ರತಿಯೊಬ್ಬರನ್ನು ಜವಾಬ್ದಾರರನ್ನಾಗಿ ಮಾಡಲು ಸಹಾಯ ಮಾಡುತ್ತದೆ.

1/6

ಸುರಕ್ಷಿತ ಅನುಭವವನ್ನು ವಿನ್ಯಾಸಗೊಳಿಸಲಾಗುತ್ತಿದೆ

ನಿಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವ ವೈಶಿಷ್ಟ್ಯಗಳು

ನಿಮ್ಮ ಪ್ರೀತಿಪಾತ್ರರು ಮತ್ತು ನಮ್ಮ ಸಪೋರ್ಟ್ ತಂಡದೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಸಹಾಯ ಮಾಡಲು ಆಪ್‌ ಅನ್ನು ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ, ಆದ್ದರಿಂದ ನೀವು ಇನ್ನೂ ಮುಂದಕ್ಕೆ ಹೋಗಬಹುದು.

ನಿಮಗೆ ಅಗತ್ಯವಿದ್ದಲ್ಲಿ, ಸಹಾಯ

ಆಪ್‌ನಿಂದಲೇ ಯಾವುದೇ ಸಮಯದಲ್ಲಿ ವಿಶೇಷವಾಗಿ ತರಬೇತಿ ಪಡೆದ ಅವಘಡ ಪ್ರತಿಸ್ಪಂದಿ ತಂಡಗಳು ಲಭ್ಯವಿರುತ್ತವೆ.

ಒಂದು ಅಂತರ್ಗತ ಸಮುದಾಯ

ನಗರಗಳು ಮತ್ತು ಸುರಕ್ಷತಾ ತಜ್ಞರೊಂದಿಗಿನ ನಮ್ಮ ಜಂಟಿ ಪ್ರಯತ್ನಗಳ ಮೂಲಕ ಮತ್ತು ಒಟ್ಟಾಗಿ ಕೆಲಸ ಮಾಡುವ ಮೂಲಕ, ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ನಿರ್ಮಿಸಲು ನಾವು ಸಹಾಯ ಮಾಡುತ್ತಿದ್ದೇವೆ.

ನಿಮ್ಮ ಸುರಕ್ಷತೆ ನಮ್ಮನ್ನು ಪ್ರೇರೇಪಿಸುತ್ತದೆ

ಸುರಕ್ಷತೆಯನ್ನು ಅನುಭವವಾಗಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ನೀವು ರಾತ್ರಿಯಲ್ಲಿ ಡ್ರೈವ್ ಮಾಡಲು ಆರಾಮದಾಯಕತೆ ಕಂಡುಕೊಳ್ಳುತ್ತೀರಿ. ಆದ್ದರಿಂದ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ನಿಮ್ಮ ಪ್ರೀತಿಪಾತ್ರರಿಗೆ ಹೇಳಬಹುದು. ಏನಾದರೂ ಸಂಭವಿಸಿದಲ್ಲಿ ನೀವು ಯಾರನ್ನಾದರೂ ಸಹಾಯಕ್ಕೆ ಹೊಂದಿರುವಿರಿ ಎಂದು ನಿಮಗೆ ತಿಳಿದಿದೆ. *

24/7 ಅಪಘಾತ ಬೆಂಬಲ

ಅಪಘಾತ ಪ್ರತಿಸ್ಪಂದನೆಗೆ ತರಬೇತಿ ಪಡೆದ Uber ಕಸ್ಟಮರ್ ಅಸೋಸಿಯೇಟ್‌ಗಳು ದಿನವಿಡೀ ಲಭ್ಯವಿರುತ್ತಾರೆ.

ನನ್ನ ರೈಡ್ ಅನ್ನು ಅನುಸರಿಸಿ

ಸ್ನೇಹಿತರು ಮತ್ತು ಕುಟುಂಬವು ನಿಮ್ಮ ರೂಟ್ ಅನ್ನು ಅನುಸರಿಸಬಹುದು ಮತ್ತು ನೀವು ಬಂದ ಕೂಡಲೇ ತಿಳಿಯುತ್ತದೆ.

2-ವೇ ರೇಟಿಂಗ್‌ಗಳು

ನಿಮ್ಮ ಪ್ರತಿಕ್ರಿಯೆ ಅತ್ಯಂತ ಮುಖ್ಯ. ಕಡಿಮೆ-ರೇಟ್‌ನ ಟ್ರಿಪ್‌ಗಳನ್ನು ಲಾಗ್ ಮಾಡಲಾಗಿದೆ ಮತ್ತು Uber ಸಮುದಾಯವನ್ನು ರಕ್ಷಿಸಲು ಬಳಕೆದಾರರನ್ನು ತೆಗೆದುಹಾಕಬಹುದು.

ಫೋನ್ ಅನಾಮಧೇಯೀಕರಣ

ಆಪ್‌ ಮೂಲಕ ನಿಮ್ಮ ರೈಡರ್ ಅನ್ನು ನೀವು ಸಂಪರ್ಕಿಸಬೇಕಾದರೆ, ನಿಮ್ಮ ಫೋನ್ ನಂಬರ್ ಖಾಸಗಿಯಾಗಿಯೇ ಉಳಿಯಬಹುದು.

GPS ಟ್ರ್ಯಾಕಿಂಗ್

ಆರಂಭದಿಂದ ಮುಕ್ತಾಯಗೊಳಿಸುವ ತನಕ ಎಲ್ಲಾ Uber ಟ್ರಿಪ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ, ಆದ್ದರಿಂದ ಏನಾದರೂ ಸಂಭವಿಸಿದಲ್ಲಿ ನಿಮ್ಮ ಟ್ರಿಪ್‌ನ ದಾಖಲೆ ಇರುತ್ತದೆ.

ಎಲ್ಲರಿಗೂ ಸುರಕ್ಷಿತ ರಸ್ತೆಗಳು, ನಿಮಗೆ ಧನ್ಯವಾದಗಳು

ನಗರಗಳನ್ನು ಸುರಕ್ಷಿತವಾಗಿಸಲು ಮತ್ತು ರಸ್ತೆಗಳನ್ನು ಸ್ನೇಹಪರವಾಗಿ ಮಾಡಲು ಸಹಾಯ ಮಾಡುವುದಕ್ಕೆ ನೀವು ಪ್ರಮುಖ ಪಾತ್ರ ವಹಿಸುತ್ತೀರಿ.

ಡ್ರೈವ್ ಮಾಡುವಾಗ ಗಮನಹರಿಸುವುದು

ಪೋಸ್ಟ್ ಮಾಡಿದ ವೇಗದ ಮಿತಿಯೊಳಗೆ ನೀವು ಚಾಲನೆ ಮಾಡುತ್ತಿದ್ದೀರಿ ಎಂದು ಆ್ಯಪ್ ನಿಮಗೆ ನೆನಪಿಸುತ್ತದೆ, ಆದ್ದರಿಂದ ನೀವು ಚಾಲನೆ ಮಾಡುವಾಗ ಎಚ್ಚರವಾಗಿರಬಹುದು.

ಸುರಕ್ಷತಾ ಸಲಹೆಗಳು

ಸವಾರರನ್ನು ಪಿಕಪ್ ಮಾಡಲು ಸುರಕ್ಷಿತ ಸ್ಥಳವನ್ನು ಹುಡುಕುವುದರಿಂದ ಹಿಡಿದು ಅವರಿಗೆ ಬಕಲ್ ಅಪ್ ಮಾಡಲು ನೆನಪಿಸುವವರೆಗೆ, ನಿಮ್ಮ ಸುರಕ್ಷತೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರ ಸುರಕ್ಷತೆಯಲ್ಲಿ ನೀವು ದೊಡ್ಡ ವ್ಯತ್ಯಾಸವನ್ನು ಮಾಡಬಹುದು.

ನಮ್ಮ ಸಮುದಾಯವನ್ನು ಬಲಪಡಿಸುವುದು

Uber ನ ಸಮುದಾಯ ಮಾರ್ಗಸೂಚಿಗಳು ರೈಡರ್‌ಗಳು ಮತ್ತು ಡ್ರೈವರ್‌ಗಳ ಒತ್ತಡ ರಹಿತ ರೈಡ್ ಅನ್ನು ಆನಂದಿಸಲು ಸಹಾಯ ಮಾಡುತ್ತದೆ. ಮಾರ್ಗಸೂಚಿಗಳನ್ನು ಅನುಸರಿಸದ ಯಾವುದೇ ವ್ಯಕ್ತಿಯನ್ನು ಇಡೀ Uber ಸಮುದಾಯದ ಸುರಕ್ಷತೆಗಾಗಿ ವೇದಿಕೆಯಿಂದ ತೆಗೆದುಹಾಕುವ ಅಪಾಯವಿದೆ.

*ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಪ್ರದೇಶವಾರು ಬದಲಾಗುತ್ತವೆ ಮತ್ತು ಲಭ್ಯವಿಲ್ಲದೇ ಇರಬಹುದು.

¹ ಈ ವೈಶಿಷ್ಟ್ಯವು ಜಾರಿಗೊಳ್ಳುವ ಪ್ರಕ್ರಿಯೆಯಲ್ಲಿದೆ ಮತ್ತು ಪ್ರಸ್ತುತ ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو