ಚಾಲಕರು Uber ನೊಂದಿಗೆ ಎಷ್ಟು ಹಣ ಗಳಿಸಬಹುದು?
ನೀವು Uber ಆ್ಯಪ್ನೊಂದಿಗೆ ಚಾಲನೆ ಮಾಡುವಾಗ ಗಳಿಸುವ ಹಣವು ಯಾವಾಗ, ಎಲ್ಲಿ, ಮತ್ತು ಎಷ್ಟು ಬಾರಿ ಚಾಲನೆ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ದರಗಳನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂಬುದನ್ನು ಕಂಡುಕೊಳ್ಳಿ ಮತ್ತು ನಿಮ್ಮ ಗಳಿಕೆಗಳನ್ನು ಹೆಚ್ಚಿಸಲು ಸಹ ಾಯ ಮಾಡುವ ಪ್ರಮೋಷನ್ಗಳ ಬಗ್ಗೆ ತಿಳಿಯಿರಿ.¹
ಗಳಿಕೆಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ
Uber ನೊಂದಿಗೆ ಡ್ರೈವ್ ಮಾಡಿ ಎಷ್ಟನ್ನು ಗಳಿಸಬಹುದು ಎಂದು ನೋಡಿದಾ ಗ ನೀವು ಆಶ್ಚರ್ಯ ಪಡಬಹುದು. ಪ್ರತಿ ಟ್ರಿಪ್ಗೆ ನೀವು ಗಳಿಸುವ ಮೊತ್ತವನ್ನು ನಿರ್ಧರಿಸಲು ಈ ಕೆಳಗಿನ ಅಂಶಗಳು ಸಹಾಯ ಮಾಡುತ್ತವೆ.
ಸರ್ಜ್
ಸವಾರರ ಬೇಡಿಕೆ ಯಾವಾಗ ಮತ್ತು ಎಲ್ಲಿ ಹೆಚ್ಚಿದೆ ಎಂದು ಕಂಡುಹಿಡಿಯಲು ನಿಮ್ಮ ಆಪ್ನಲ್ಲಿ ಹೀಟ್ ಮ್ಯಾಪ್ ಪರಿಶೀಲಿಸಿ, ಇದರಿಂದ ನಿಮ್ಮ ಪ್ರಮಾಣಿತ ಶುಲ್ಕಕ್ಕಿಂತ ನೀವು ಹೆಚ್ಚು ಹಣ ಗಳಿಸಬಹುದು.
ಕನಿಷ್ಠ ಟ್ರಿಪ್ ಗಳಿಕೆಗಳು
ಪ್ರತಿ ನಗರದಲ್ಲಿಯೂ ಯಾವುದೇ ಟ್ರಿಪ್ಗಾಗಿ ನೀವು ಗಳಿಸುವ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ. ಸಣ್ಣ ಟ್ರಿಪ್ ಗಳಲ್ಲಿಯೂ ನಿಮ್ಮ ಶ್ರಮಕ್ಕೆ ನಿಮ್ಮ ಗಳಿಕೆಯು ತಕ್ಕುದಾಗಿರುತ್ತದೆ ಎನ್ನುವುದನ್ನು ಇದು ಖಚಿತಪಡಿಸುತ್ತದೆ.
ಸೇವಾ ಶುಲ್ಕ
ಈ ಶುಲ್ಕವು ಆ್ಯಪ್ ಅಭಿವೃದ್ಧಿ ಮತ್ತು ಗ್ರಾಹಕರ ಸಹಾಯ ಸೇವೆಗಳು ಮುಂತಾದವುಗಳಿಗೆ ಹಣ ನೀಡಲು ನೆರವಾಗುತ್ತದೆ.
ರದ್ದುಮಾಡುವಿಕೆ
ಹೆಚ್ಚಿನ ಸಂದರ್ಭಗಳಲ್ಲಿ, ಸವಾರರು ವಿನಂತಿಯನ್ನು ರದ್ದುಗೊಳಿಸಿದರೆ ನೀವು ರದ್ದತಿ ಶುಲ್ಕವನ್ನು ಪಡೆಯುತ್ತೀರಿ.
ಪ್ರಮೋಷನ್ಗಳು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ
ನಿಮ್ಮ ಪ್ರದೇಶದಲ್ಲಿನ ಡ್ರೈವರ್ ಆ್ಯಪ್ ಹೆಚ್ಚಿನ ಸವಾರಿಯ ವಿನಂತಿಗಳನ್ನು ನಿರೀಕ್ಷಿಸುವ ಸ್ಥಳವನ್ನು ಆಧರಿಸಿ ಇನ್-ಆ್ಯಪ್ ಪ್ರಮೋಷನ್ಗಳು ನಿಮಗೆ ಮುಂದಿನ ಯೋಜನೆ ಮಾಡಲು ಮತ್ತು ಗಳಿಕೆಗಳನ್ನು ಗರಿಷ್ಠಗೊಳಿಸುವುದಕ್ಕಾಗಿ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ. ಎಲ್ಲಾ ಚಾಲಕರಿಗೆ ಎಲ್ಲಾ ಪ್ರಮೋಷನ್ಗಳು ಲಭ್ಯವಿರುವುದಿಲ್ಲ. ಕೆಳಗಿನ ನಿಯಮಗಳನ್ನು ನೋಡಿ.²
ನಿಗದಿತ ಸಂಖ್ಯೆಯ ಟ್ರಿಪ್ಗಳನ್ನು ತಲುಪಿ
ಕೊಡುಗೆ ಲಭ್ಯವಿರುವಾಗ ನೀವು ನಿಗದಿತ ಸಮಯದಲ್ಲಿ ನಿರ್ದಿಷ್ಟ ಸಂಖ್ಯೆಯ ಟ್ರಿಪ್ಗಳನ್ನು ಪೂರ್ಣಗೊಳಿಸಿದರೆ ಹೆಚ್ಚುವರಿ ಹಣವನ್ನು ಸಂಪಾದಿಸಬಹುದು.