ಹೊಸ ಡ್ರೈವರ್ ಆಪ್ ಅನ್ನು ಪರಿಚಯಿಸಲಾಗುತ್ತಿದೆ, ರಸ್ತೆಯಲ್ಲಿ ನಿಮ್ಮ ಪಾರ್ಟ್‌ನರ್
ಹೊಸ ಡ್ರೈವರ್ ಆಪ್ ನೈಜ-ಸಮಯದ ಮಾಹಿತಿಯೊಂದಿಗೆ ಉತ್ತಮವಾಗಿ ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಬಳಸಲು ಸುಲಭ ಮತ್ತು ಹೆಚ್ಚು ವಿಶ್ವಾಸಾರ್ಹ, ಆಪ್ ಈಗ- ಪಾರ್ಟ್‌ನರ್‌ರಂತೆ ನಿಮ್ಮನ್ನು-ಪ್ರತಿ ತಿರುವಿನಲ್ಲಿಯೂ ಬೆಂಬಲಿಸುತ್ತದೆ.
ಕಾರ್ಯನಿರತವಾಗಿದ್ದಾಗ ಎಲ್ಲಿ ಡ್ರೈವ್ ಮಾಡಬೇಕು ಎಂಬುದರ ಕುರಿತು ಎಚ್ಚರಿಕೆಗಳನ್ನು ಪಡೆಯಿರಿ
ಹತ್ತಿರದಲ್ಲಿಯೇ ಹೆಚ್ಚಿನ ಪ್ರವಾಸಗಳನ್ನು ಹುಡುಕಲು ನಿಮ್ಮ ನಕ್ಷೆಯಲ್ಲಿ ಅವಕಾಶಗಳನ್ನು ಒತ್ತಿರಿ ಮತ್ತು ನಿಮಗೆ ಅಲ್ಲಿಗೆ ಮಾರ್ಗದರ್ಶನ ನೀಡಲು ಆಪ್ ಅನ್ನು ಕೇಳಿ.
ನಿಮ್ಮ ಮುಂದಿನ ನಡೆಯನ್ನು ತಿಳಿಯಿರಿ
ನೀವು ಕಾರ್ಯನಿರತ ಪ್ರದೇಶದಲ್ಲಿದ್ದಾಗ ನಿಮ್ಮ ನಕ್ಷೆಯ ಪರದೆಯ ಕೆಳಭಾಗದಲ್ಲಿರುವ ಸ್ಥಿತಿ ಪಟ್ಟಿ ನಿಮಗೆ ತಿಳಿಸುತ್ತದೆ. ಆ ರೀತಿಯಲ್ಲಿ, ನೀವು ಡ್ರೈವಿಂಗ್ ಮುಂದುವರಿಸಬಹುದೇ ಅಥವಾ ಅಲ್ಲೇ ನಿಲ್ಲಬೇಕೆ ಎಂಬುದರ ಬಗ್ಗೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಬಹುದು.
ನಿಮ್ಮ ಗಳಿಕೆಗಳನ್ನು ಒಂದು ನೋಟದಲ್ಲಿ ಟ್ರ್ಯಾಕ್ ಮಾಡಿ.
ನಿಮ್ಮ ದೈನಂದಿನ ಮತ್ತು ಸಾಪ್ತಾಹಿಕ ಗಳಿಕೆಯ ಗುರಿಗಳತ್ತ ನಿಮ್ಮ ಪ್ರಗತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಿ. ನಿಮ್ಮ ಗಳಿಕೆಯ ಸಾರಾಂಶಗಳನ್ನು ಕೇವಲ ಒತ್ತುವ ಮೂಲಕ ನೋಡಬಹುದು.
ಗಳಿಕೆಗಳನ್ನು ಟ್ರ್ಯಾಕ್ ಮಾಡುವುದು ಹೇಗೆ: ನಿಮ್ಮ ನಕ್ಷೆಯ ಪರದೆಯಲ್ಲಿ ದರ ಐಕಾನ್ ಒತ್ತಿರಿ, ನಂತರ ನಿಮ್ಮ ಗಳಿಕೆಗಳನ್ನು ಅನ್ವೇಷಿಸಲು ಬಲ ಮತ್ತು ಎಡಕ್ಕೆ ಸ್ವೈಪ್ ಮಾಡಿ.
ನಿಮ್ಮ ದಿನವನ್ನು ಸುಲಭವಾಗಿ ಯೋಜಿಸಿ.
ಗಂಟೆಯ ಪ್ರವೃತ್ತಿಗಳನ್ನು ನೋಡಿ, ಆದ್ಯತೆಗಳನ್ನು ಇರಿಸಿ ಮತ್ತು ಪ್ರಮೋಷನ್‌ಗಳನ್ನು ವೀಕ್ಷಿಸಿ - ಎಲ್ಲವೂ ಒಂದೇ ಸ್ಥಳದಲ್ಲಿ.
ಟ್ರಿಪ್ ಪ್ಲಾನರ್ ಅನ್ನು ಹೇಗೆ ಹುಡುಕುವುದು: ನಿಮ್ಮ ನಕ್ಷೆ ಪರದೆಯ ಕೆಳಗಿನ ಎಡ ಮೂಲೆಯಲ್ಲಿರುವ ಬಾಣದ ಗುರುತನ್ನು ಐಕಾನ್ ಒತ್ತಿರಿ. ಡೆಲಿವರಿ ಪಾರ್ಟ್‌ನರ್‌ಗಳಿಗೆ, ಈ ವೈಶಿಷ್ಟ್ಯವು ನಿಮ್ಮ ಆಪ್‌ಗೆ ಶೀಘ್ರದಲ್ಲೇ ಬರಲಿದೆ.
ನೀವು ಸೇವೆಯನ್ನು ಕಳೆದುಕೊಂಡಾಗಲೂ ಸಹ ಆಪ್ ಅನ್ನು ಅವಲಂಬಿಸಿ
ನಿಮ್ಮ ಸಂಪರ್ಕವನ್ನು ಕಳೆದುಕೊಂಡಿದ್ದೀರಾ? ಏನೇ ಆಗಲಿ ನೀವು ಇನ್ನೂ ಟ್ರಿಪ್‌ಗಳನ್ನು ಪ್ರಾರಂಭಿಸಬಹುದು ಮತ್ತು ಕೊನೆಗೊಳಿಸಬಹುದು.
ನವೀಕೃತವಾಗಿರಿ.
ಮುಂಬರುವ ಸಂಗತಿಗಳು ಮತ್ತು ಗಳಿಕೆಯ ಅವಕಾಶಗಳನ್ನು ಹಿಡಿದು ನಿಮ್ಮ ಖಾತೆ ಮತ್ತು ಹೊಸ ವೈಶಿಷ್ಟ್ಯಗಳ ಮಾಹಿತಿಯವರೆಗೆ ಎಲ್ಲದರ ಬಗ್ಗೆ ಸಂದೇಶಗಳನ್ನು ಪಡೆಯಿರಿ.
ಅಧಿಸೂಚನೆಗಳನ್ನು ಹೇಗೆ ಹುಡುಕುವುದು: ನಿಮಗೆ ಹೊಸ ಸಂದೇಶಗಳು ಬಂದಾಗ, ನಿಮ್ಮ ನಕ್ಷೆಯ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಫೋಟೋದಲ್ಲಿ ಬ್ಯಾಡ್ಜ್ ಕಾಣಿಸುತ್ತದೆ. ಓದಲು ಅವುಗಳನ್ನು ಒತ್ತಿರಿ.
ಆಪ್ ಅನ್ನು ಹೇಗೆ ಬಳಸುವುದು ಎಂದು ತಿಳಿಯಿರಿ
ಇದು ನಿಮ್ಮ ಮೊದಲ ಪ್ರವಾಸ ಆಗಿರಲಿ ಅಥವಾ ನಿಮ್ಮ 100 ನೇ ಪ್ರವಾಸ ಆಗಿರಲಿ, ನೀವು ಈಗ ಸಲಹೆಗಳು ಮತ್ತು ತಿಳಿವಳಿಕೆ ವೀಡಿಯೊಗಳಿಂದ ತುಂಬಿರುವ ಸಂಪನ್ಮೂಲವನ್ನು ಹೊಂದಿದ್ದೀರಿ.
ಡ್ರೈವರ್ ಆಪ್ ಬೇಸಿಕ್ಸ್‌ಗಳನ್ನು ಹೇಗೆ ಹುಡುಕುವುದು: ನಿಮ್ಮ ನಕ್ಷೆ ಪರದೆಯ ಮೇಲಿನ ಬಲಭಾಗದಲ್ಲಿ ನಿಮ್ಮ ಫೋಟೋವನ್ನು ಒತ್ತಿರಿ. ನಂತರ ಖಾತೆಯ ಮೇಲಿರುವ ಸಹಾಯ ಒತ್ತಿರಿ.
ಹೆಚ್ಚಿನ ಗಳಿಕೆಗಳಿಗೆ ನ್ಯಾವಿಗೇಟ್ ಮಾಡಿ
ಬೂಸ್ಟ್ ಪ್ರದೇಶದ ಮೇಲೆ ಒತ್ತಿರಿ, ಅಲ್ಲಿ ನಿಮ್ಮ ಪ್ರಮಾಣಿತ ದರಗಳ ಮೇಲೆ ನೀವು ಹೆಚ್ಚುವರಿ ಸಂಪಾದಿಸಬಹುದು, ಮತ್ತು ನೀವು ಅಲ್ಲಿ ಸಂಚರಿಸಲು ಬಯಸುತ್ತೀರಾ ಎಂದು ಆಪ್ ಕೇಳುತ್ತದೆ.
ಡ್ರೈವರ್ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ
ಆನ್‌ಲೈನ್ ಹೋಗುವುದು
ಡ್ರೈವರ್ ಆ್ಯಪ್ ಯಾವಾಗಲೂ ಲಭ್ಯವಿದೆ. ಆದ್ದರಿಂದ ನೀವು ಚಾಲನೆ ಮಾಡಲು ಅಥವಾ ವಿತರಣೆ ಮಾಡಲು ಸಿದ್ಧವಾದಾಗ, ಆಪ್ ಅನ್ನು ತೆರೆಯಿರಿ ಮತ್ತು ಗೋ ಒತ್ತಿರಿ.
ಟ್ರಿಪ್ ಮತ್ತು ವಿತರಣೆ ವಿನಂತಿಗಳನ್ನು ಸ್ವೀಕರಿಸುವುದು
ಒಮ್ಮೆ ಆನ್‌ಲೈನ್ ಇದ್ದಲ್ಲಿ, ನಿಮ್ಮ ಪ್ರದೇಶದಿಂದ ಬರುವ ವಿನಂತಿಗಳನ್ನು ಸ್ವೀಕರಿಸಲು ಸ್ವಯಂಚಾಲಿತವಾಗಿ ಪ್ರಾರಂಭಿಸುತ್ತೀರಿ. ನಿಮ್ಮ ಫೋನ್ ಸದ್ದು ಮಾಡುತ್ತದೆ. ಸ್ವೀಕರಿಸಲು ಸ್ವೈಪ್ ಮಾಡಿ.
ತಿರುವು-ಪ್ರಕಾರ ನಿರ್ದೇಶನಗಳು
ನಿಮ್ಮ ಗ್ರಾಹಕರನ್ನು ಹುಡುಕಲು ಮತ್ತು ಅವರ ತಲುಬೇಕಾದ ಸ್ಥಳಕ್ಕೆ ನ್ಯಾವಿಗೇಟ್ ಮಾಡಲು ಆಪ್ ಸುಲಭಗೊಳಿಸುತ್ತದೆ.
ಪ್ರತಿ ಟ್ರಿಪ್‌ನೊಂದಿಗೆ ಗಳಿಕೆಗಳು
ಪ್ರತಿ ಪ್ರವಾಸದ ನಂತರ ನೀವು ಎಷ್ಟು ಗಳಿಸಿದ್ದೀರಿ ಎಂದು ನೋಡಿ ಮತ್ತು ನಿಮ್ಮ ದೈನಂದಿನ ಮತ್ತು ಸಾಪ್ತಾಹಿಕ ಗಳಿಕೆಗಳ ಗುರಿಗಳತ್ತ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಿ. ಗಳಿಕೆಗಳು ಪ್ರತಿ ವಾರ ನಿಮ್ಮ ಬ್ಯಾಂಕ್ ಖಾತೆಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತವೆ.
ರೇಟಿಂಗ್ ವ್ಯವಸ್ಥೆ
ಸವಾರರು ಮತ್ತು ಚಾಲಕರಿಗೆ ಮತ್ತು ಇತರ ಗ್ರಾಹಕರಿಗೆ ಪ್ರತಿ ಟ್ರಿಪ್ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಲಾಗುತ್ತದೆ.
ನಿಮ್ಮ ನಗರ ಮತ್ತು ಪ್ರದೇಶದ ಆಧಾರದ ಮೇಲೆ ವೈಶಿಷ್ಟ್ಯದ ಲಭ್ಯತೆ ಬದಲಾಗಬಹುದು.
ಕಂಪನಿ