Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಪಾವತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ

When you drive with Uber, your earnings are transferred automatically, so you don't have to worry about paperwork. Find out how to add a bank account and how to cash out.

Looking for delivery info? Switch to delivery

ಬ್ಯಾಂಕ್ ವರ್ಗಾವಣೆಯನ್ನು ಹೇಗೆ ಸೆಟಪ್ ಮಾಡುವುದು

1. ಆ್ಯಪ್‍ ಬಳಸಿ ಅಥವಾ ಆನ್‌ಲೈನ್‌ನಲ್ಲಿ ಸೈನ್ ಇನ್ ಮಾಡಿ

ಡ್ರೈವರ್ ಆ್ಯಪ್‍ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಲು, ಆ್ಯಪ್‍ ಮೆನುವಿನಲ್ಲಿ ಪಾವತಿಗಳು ಎಂಬಲ್ಲಿಗೆ ಹೋಗಿ. ಇದಕ್ಕೆ ಬದಲಾಗಿ, driver.uber.com ಗೆ ಭೇಟಿ ನೀಡಿ, ಸೈನ್ ಇನ್ ಮಾಡಿ ಮತ್ತು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿರುವ ಬ್ಯಾಂಕಿಂಗ್ ಟ್ಯಾಬ್‌ಗೆ ಹೋಗಿ.

2. ನಿಮ್ಮ ಬ್ಯಾಂಕ್ ವಿವರಗಳನ್ನು ಸೇರಿಸಿ

ನಿಮ್ಮ ಬ್ಯಾಂಕ್ ವಿವರಗಳು, ಪೂರ್ಣ ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಇತ್ತೀಚಿನ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡಂತೆ ಭರ್ತಿ ಮಾಡಿ. ಯಾವುದೇ ವಿವರಗಳು ತಪ್ಪಾಗಿದ್ದರೆ, ನಿಮ್ಮ ಠೇವಣಿ ವಿಳಂಬವಾಗಬಹುದು.

3. ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಹುಡುಕಲು ಸಾಧ್ಯವಿಲ್ಲವೇ?

ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ನಿಮ್ಮ ಬ್ಯಾಂಕ್ ವಿವರಗಳನ್ನು ನೀವು ಕಾಣಬಹುದು. ನಿಮ್ಮಲ್ಲಿ ಹೆಚ್ಚುವರಿ ಪ್ರಶ್ನೆಗಳಿದ್ದರೆ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

Uber ಗೆ ಪಾವತಿಗಳನ್ನು ಹೇಗೆ ಸಲ್ಲಿಸುವುದು

ನೀವು ಸಂಗ್ರಹಿಸುವ ಹಣದ ಒಂದು ಭಾಗವನ್ನು ನೀವು ಇಟ್ಟುಕೊಳ್ಳಬಹುದಾಗಿದ್ದು, ಇನ್ನೊಂದು ಭಾಗವನ್ನು Uber ‌ಗೆ ಪಾವತಿಸಬೇಕಾಗುತ್ತದೆ. Uber ಪಾರ್ಟ್‌ನರ್ ಆ್ಯಪ್‍ನಲ್ಲಿನ ವಹಿವಾಟು ಚಟುವಟಿಕೆ ಪರದೆಯಲ್ಲಿ ನೀವು Uber ಗೆ ಪಾವತಿಸಬೇಕಾದ ಹಣವನ್ನು ಟ್ರ್ಯಾಕ್ ಮಾಡಬಹುದು.

ರಿಟರ್ನ್ ಪಾವತಿ ಆಯ್ಕೆಗಳು ಮತ್ತು ಹೇಗೆ ಸೆಟಪ್ ಮಾಡುವುದು ಎಂಬುದರ ಕುರಿತು ತಿಳಿಯಲು ಕೆಳಗೆ ಓದಿ.

1. ಆನ್‌ಲೈನ್‌ನಲ್ಲಿ ಪಾವತಿಸಿ

ಅಥವಾ

  1. Google Play Store ಅಥವಾ App Store ನಿಂದ BHIM ಆ್ಯಪ್‍ ಡೌನ್‌ಲೋಡ್ ಮಾಡಿ.
  2. BHIM ಆ್ಯಪ್‍ ತೆರೆಯಿರಿ
  3. BHIM ಆ್ಯಪ್‍ನಲ್ಲಿ ನೀವು ಬಯಸಿದ ಭಾಷೆಯನ್ನು ಆಯ್ಕೆ ಮಾಡಿ
  4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಸಂಖ್ಯೆಯನ್ನು ದೃಢೀಕರಿಸಿ. ಆ್ಯಪ್‍ನಲ್ಲಿ OTP ಯನ್ನು ವಿನಂತಿಸಲಾಗಿದೆ ಮತ್ತು ಸ್ವಯಂ ಸ್ವೀಕರಿಸಲಾಗಿದೆ. ಹಸ್ತಚಾಲಿತವಾಗಿ OTP ನಮೂದಿಸುವ ಅಗತ್ಯವಿಲ್ಲ. ಮುಂದೆ ಕ್ಲಿಕ್ ಮಾಡಿ
  5. ನೀವು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ ಮತ್ತು ಅದು ನಿಮ್ಮ Uber ಖಾತೆಗೆ ಲಿಂಕ್ ಮಾಡಲಾದ ಅದೇ ಬ್ಯಾಂಕ್ ಎಂದು ಖಚಿತಪಡಿಸಿಕೊಳ್ಳಿ
  6. ವಹಿವಾಟುಗಳ ದೃಢೀಕರಣಕ್ಕಾಗಿ UPI ಪಿನ್ ಬಳಸಲಾಗುತ್ತದೆ.
  7. ನೀವು UPI ಪಿನ್ ಅನ್ನು ಬೇರೆ ಯಾವುದೇ UPI ಸಕ್ರಿಯಗೊಳಿಸಿದ ಆ್ಯಪ್‍ನಲ್ಲಿ ಸೆಟಪ್ ಮಾಡಿದ್ದರೆ, BHIM ಆ್ಯಪ್‌ನಲ್ಲೂ ಅದೇ UPI ಪಿನ್ ಬಳಸಬಹುದು.
  8. ಮುಂದಿನ ಹಂತದಲ್ಲಿ, ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ 6 ಅಂಕಿಗಳು ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸಿ. ಸರಿ ಒತ್ತಿರಿ.
  9. ಆ್ಯಪ್‍ನಲ್ಲಿ ಬ್ಯಾಂಕ್ OTP ವಿನಂತಿಸಲಾಗಿದೆ ಮತ್ತು ಸ್ವಯಂ ಸ್ವೀಕರಿಸಲಾಗಿದೆ. ಹಸ್ತಚಾಲಿತವಾಗಿ OTP ನಮೂದಿಸುವ ಅಗತ್ಯವಿಲ್ಲ.
  10. ನಿಮ್ಮ ಹೊಸ UPI ಪಿನ್ (mPIN) ಹೊಂದಿಸಿ. ಖಚಿತಪಡಿಸಲು UPI ಪಿನ್ ಸಂಖ್ಯೆಯನ್ನು ಮರು ನಮೂದಿಸಿ. ನಿಮ್ಮ ಆ್ಯಪ್‍ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದೆ.
  11. BHIM ಆ್ಯಪ್‍ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಆ್ಯಪ್‍‌ನಿಂದ ನಿಮ್ಮ ಖಾತೆಯ ಬಾಕಿ ಮೊತ್ತವನ್ನು ಪರಿಶೀಲಿಸಿ ಮತ್ತು ಅದನ್ನು ದೃಢೀಕರಿಸಿ.
  12. ನಿಮ್ಮ ವರ್ಚುವಲ್ ಪಾವತಿ ವಿಳಾಸ (VPA) ಐಡಿ ಅಥವಾ UPI ID ಹೊಂದಿಸಲು, 'ಪ್ರೊಫೈಲ್' ಪುಟಕ್ಕೆ ಹೋಗಿ. ಒಬ್ಬ ಪಾರ್ಟ್‌ನರ್ ಒಂದೇ ಬ್ಯಾಂಕ್ ಖಾತೆಗಾಗಿ ಎರಡು ವರ್ಚುವಲ್ ಪೇಮೆಂಟ್ ವಿಳಾಸಗಳನ್ನು ಹೊಂದಿಸಬಹುದು.
  13. BHIM ಆ್ಯಪ್‍ನಲ್ಲಿ 3 ಆಯ್ಕೆಗಳಿವೆ - “ಕಳುಹಿಸಿ”, “ಸ್ವೀಕರಿಸಿ” ಮತ್ತು “ಸ್ಕ್ಯಾನ್ ಮಾಡಿ & ಪಾವತಿಸಿ"
  14. ಆನ್‌ಲೈನ್‌ನಲ್ಲಿ ಹೇಗೆ ಪಾವತಿಸಬೇಕು ಎಂಬ ವೀಡಿಯೊ ಸಮೇತವಾಗಿ ಮುಂದಿನ 5 ನಿಮಿಷಗಳಲ್ಲಿ ನೀವು ನಮ್ಮಿಂದ ಸಂದೇಶವನ್ನು ಸ್ವೀಕರಿಸುತ್ತೀರಿ. ನಿಮ್ಮ UPI ಖಾತೆಯನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಹೇಗೆ ಪಾವತಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಇದರ ಮೇಲೊಮ್ಮೆ ಕಣ್ಣಾಡಿಸಿ.

2. ಆಫ್‌ಲೈನ್‌ನಲ್ಲಿ ಪಾವತಿಸಿ

3. ಪಾರ್ಟ್‌ನರ್ ಸೇವಾ ಕೇಂದ್ರ

ಹಂತಗಳು

  1. ಕೆಳಗಿನ ವಿಷಯಗಳ ಕುರಿತು ಬೆಂಬಲಕ್ಕಾಗಿ ಪಾರ್ಟ್‌ನರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ:
    • ಸ್ಮಾರ್ಟ್‌ಫೋನ್
    • ಬ್ಯಾಂಕ್ ಖಾತೆಯ ಎಟಿಎಂ/ಡೆಬಿಟ್ ಕಾರ್ಡ್
    • ಬ್ಯಾಂಕ್ ನೋಂದಾಯಿತ ಫೋನ್ ಸಂಖ್ಯೆ SIM
  2. UPI ಆ್ಯಪ್‍ ಅನ್ನು ಇನ್‌ಸ್ಟಾಲ್ ಮಾಡಲು ಅವರು ನಿಮಗೆ ಸಹಾಯ ಮಾಡುತ್ತಾರೆ ಮತ್ತು ನೀವು ಅದನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಪಾವತಿಸಬಹುದು. ಪಾವತಿಗಾಗಿ ಬಳಸುವ ಬ್ಯಾಂಕ್ ಖಾತೆ ಅಥವಾ VPA ನಲ್ಲಿ ಸಾಕಷ್ಟು ಹಣ ಇರಬೇಕು ಎಂಬುದು ನಿಮ್ಮ ಗಮನಕ್ಕಿರಲಿ.
  3. ನಿಮ್ಮ UPI ID ಯನ್ನು ಒಮ್ಮೆ BHIM ಆ್ಯಪ್‍ನೊಂದಿಗೆ ಲಿಂಕ್ ಮಾಡಿದ ನಂತರ, ಭವಿಷ್ಯದ ಪೇಮೆಂಟ್‌ ಮಾಡಲು ನೀವು PSK ಗೆ ಬರಬೇಕಾಗಿಲ್ಲ.
  4. ನೀವು ಏಜೆಂಟರಿಗೆ ಪಾವತಿಸಬಹುದು, ಪೇಮೆಂಟ್ ಅನ್ನು ನಿಮ್ಮ ಖಾತೆಗೆ ಸರಿಹೊಂದಿಸಲಾಗುತ್ತದೆ ಮತ್ತು ನಿಮ್ಮ ಫ್ಲೀಟ್ ಅನ್ನು 24 ಗಂಟೆಗಳಲ್ಲಿ ಪುನಃ ಸಕ್ರಿಯಗೊಳಿಸಲಾಗುತ್ತದೆ.

ಪ್ರಮುಖ ಸೂಚನೆ:

ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಠೇವಣಿ ಇಡುವಂತೆ ಶಿಫಾರಸು ಮಾಡಲಾಗಿದೆ, ಏಕೆಂದರೆ ಅದನ್ನು Uber ಗೆ ಪಾವತಿಸಬೇಕಾದ ಸಮಯಕ್ಕೆ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂದು ಖಚಿತಪಡಿಸಿಕೊಳ್ಳಲು ನಗದು ಡೆಲಿವರಿಯಿಂದ ಸಂಗ್ರಹಿಸಲಾಗುತ್ತದೆ. ಪಾವತಿಯನ್ನು ವಾರಕ್ಕೊಮ್ಮೆ Uber ಸಂಗ್ರಹಿಸುತ್ತದೆ.

Uber ನಿಂದ ಪಾವತಿಯನ್ನು ಸಂಗ್ರಹಿಸಲು ಸಾಧ್ಯವಾಗದಿದ್ದರೆ, ಹಣವನ್ನು ಒಳಗೊಂಡಿರುವ ಡೆಲಿವರಿ ಟ್ರಿಪ್‌ಗಳಿಗೆ ನೀವು ಪ್ರವೇಶವನ್ನು ಕಳೆದುಕೊಳ್ಳಬಹುದು. ಅನೇಕ ಪಾವತಿಗಳನ್ನು ಸಂಗ್ರಹಿಸಲು Uber ಗೆ ಸಾಧ್ಯವಾಗದಿದ್ದರೆ, ನಿಮ್ಮ ಡೆಲಿವರಿ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

ಆ್ಯಪ್ ಮೂಲಕ ನಿಮ್ಮ ಗುರಿಗೆ ಚಾಲನೆ ನೀಡಿ

ಈ ವೆಬ್ ಪುಟದಲ್ಲಿ ಒದಗಿಸಲಾದ ಮಾಹಿತಿಯು, ಕೇವಲ ಮಾಹಿತಿ ಉದ್ದೇಶಗಳನ್ನು ಹೊಂದಿದೆ ಹಾಗೂ ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪ‌ಟ್ಟಿದೆ ಹಾಗೂ ಯಾವುದೇ ಸೂಚನೆಯನ್ನು ನೀಡದೆ ಪರಿಷ್ಕರಿಸಬಹುದಾಗಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو