Uber ನ 2022 ESG ವರದಿಯು ನಮ್ಮ ವ್ಯವಹಾರ ಮತ್ತು ಭಾಗೀದಾರರಿಗೆ ಹಾಗೂ ಕೆಲಸಕ್ಕಾಗಿ, ಆಹಾರ, ಸರಕುಗಳ ತಲುಪಿಸುವಿಕೆಗಾಗಿ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ನಮ್ಮ ಪ್ಲಾಟ್‌ಫಾರ್ಮ್ ಬಳಸುವ ನಮ್ಮ ಚಾಲಕರು, ಕೊರಿಯರ್‌ಗಳು, ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅತಿ ಮುಖ್ಯವಾಗಿರುವ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ವಿಚಾರಗಳ ಕುರಿತು ನಮ್ಮ ದೃಷ್ಟಿಕೋನಗಳನ್ನು ಬಿಂಬಿಸುತ್ತದೆ. ಈ ನಿರಂತರ ಸಂಬಂಧಗಳು ಸಮಗ್ರತೆ, ಹೊಣೆಗಾರಿಕೆ ಮತ್ತು ಗೌರವದ ಆಧಾರದ ಮೇಲೆ ನಿಂತಿವೆ ಹಾಗೂ ಜಗತ್ತು ಉತ್ತಮದೆಡೆಗೆ ಸಾಗುವ ಮಾರ್ಗವನ್ನು ಮರುಕಲ್ಪಿಸಲು ನಮ್ಮನ್ನು ಸಶಕ್ತಗೊಳಿಸುತ್ತದೆ.
ಅನ್ಯಥಾ ಸೂಚಿಸದ ಹೊರತು ಡೇಟಾವು ಡಿಸೆಂಬರ್ 31, 2021 ರಲ್ಲಿದ್ದಂತೆ ಇದೆ. ವರದಿಯಲ್ಲಿನ ನಿರೂಪಣೆಗಳು ಜುಲೈ 2022 ರವರೆಗಿನ ಸಮಸ್ಯೆಗಳನ್ನು ಒಳಗೊಂಡಿರಬಹುದು.
ESG ಮುಖ್ಯಾಂಶಗಳು
ಪರಿಸರ
- 2040 ರ ವೇಳೆಗೆ ಜಾಗತಿಕವಾಗಿ ಶೂನ್ಯ-ಹೊರಸೂಸುವಿಕೆ ವಾಹನಗಳಲ್ಲಿ, ಮೈಕ್ರೋಮೊಬಿಲಿಟಿ ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ 100% ಸವಾರಿಗಳನ್ನು ಹೊಂದಲು ಶ್ರಮಿಸುತ್ತಿದ್ದೇವೆ
- Q2, 2022 ರಂತೆ, ಕೆನಡಾ, ಯುರೋಪ್ ಮತ್ತು US ನಲ್ಲಿ Uber ಪ್ಲಾಟ್‌ಫಾರ್ಮ್‌ನಾದ್ಯಂತ 26,000 ಮಾಸಿಕ ಸರಾಸರಿ ಸಕ್ರಿಯ ಶೂನ್ಯ-ಹೊರಸೂಸುವಿಕೆ ವಾಹನಗಳ ಚಾಲಕರು 1.33 ಕೋಟಿ ಟ್ರಿಪ್‌ಗಳನ್ನು ಒದಗಿಸುತ್ತಿದ್ದಾರೆ
- ಮೊದಲ ಬಾರಿಗೆ, ನಾವು ಜಾಗತಿಕ ಸ್ಕೋಪ್ 1, 2 ಮತ್ತು 3 ಹೊರಸೂಸುವಿಕೆಗಳನ್ನು ವರದಿ ಮಾಡಿದ್ದೇವೆ
- ನಮ್ಮ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯನಿರ್ವಹಣೆ ವರದಿ ಅನ್ನು ಪರಿಷ್ಕರಿಸಿದ್ದೇವೆ
- ಸುಸ್ಥಿರತೆಯ ಲೆಕ್ಕಾಚಾರ ಮಾನದಂಡಗಳ ಮಂಡಳಿ (SASB) ಮತ್ತು ಹವಾಮಾನ-ಸಂಬಂಧಿತ ವಿತ್ತೀಯ ಬಹಿರಂಗಪಡಿಸುವಿಕೆಗಳ ಕಾರ್ಯಪಡೆ (TCFD) ಇವುಗಳ ಶಿಫಾರಸುಗಳಿಗೆ ಸೂಚಿಕೆಗೊಳಿಸಲಾಗಿದೆ
- ನಮ್ಮ US ಕೆಲಸದ ಸ್ಥಳಗಳಾದ್ಯಂತ ಬಳಸುವ ಇಂಧನವನ್ನು 100% ನವೀಕರಿಸಬಹುದಾದ ಇಂಧನದೊಂದಿಗೆ ನಾವು ಹೊಂದಿಸುತ್ತಿದ್ದೇವೆ
ಸಾಮಾಜಿಕ
- ಚಾಲಕ ಮತ್ತು ಕೊರಿಯರ್ ಯೋಗಕ್ಷೇಮ: ಜಾಗತಿಕವಾಗಿ ವಿವಿಧ ಸೆಷನ್‌ಗಳ ಮೂಲಕ ಚಾಲಕರು ಮತ್ತು ಕೊರಿಯರ್‌ಗಳ ಸಮೀಕ್ಷೆ ಕೈಗೊಳ್ಳಲಾಗಿದೆ, ಉದ್ಯೋಗಿಗಳಿಗೆ (ಅಧಿಕಾರಿಗಳು ಸೇರಿದಂತೆ) ಅನುಭವವನ್ನು ಚೆನ್ನಾಗಿ ಅರಿಯಲು ಚಾಲನೆ ಮಾಡಲು ಮತ್ತು ಡೆಲಿವರಿ ಮಾಡಲು ಕೇಳಿದ್ದೇವೆ ಮತ್ತು ಸ್ವತಂತ್ರ ಕೆಲಸವನ್ನು ಸುಧಾರಿಸುವ ಅವಕಾಶಗಳ ಕುರಿತು ಕೆಲವು ದೇಶಗಳಲ್ಲಿ ಪಾರದರ್ಶಕ ವರದಿಗಳನ್ನು ಪ್ರಕಟಿಸಿದ್ದೇವೆ
- ಬಳಕೆದಾರರ ಸುರಕ್ಷತೆ: ನಮ್ಮ ಎರಡನೆಯ US ಸುರಕ್ಷತಾ ವರದಿ ಅನ್ನು ಬಿಡುಗಡೆಗೊಳಿಸಿದ್ದೇವೆ
- ಜನರು ಮತ್ತು ಸಂಸ್ಕೃತಿ: ಮಾನವ ಬಂಡವಾಳ ನಿರ್ವಹಣೆ, DEI ವಿಚಾರಗಳು ಸೇರಿದಂತೆ ಹೆಚ್ಚಿನದನ್ನು ಒಳಗೊಂಡಿರುವ ನಮ್ಮ 5 ನೇ ವರದಿಯನ್ನುಪ್ರಕಟಿಸಿದ್ದೇವೆ
- ಸ್ಥಳೀಯ ಪರಿಣಾಮ: ನಿರ್ಣಾಯಕ ESG ಮತ್ತು ಮಧ್ಯಸ್ಥಗಾರರ ವಿಚಾರಗಳ ಕುರಿತಂತೆ ನಾವು ಡಜನ್‌ಗಟ್ಟಲೆ ಪೋಸ್ಟ್‌ಗಳು, ಲೇಖನಗಳು ಮತ್ತು ಪ್ರಭಾವ ಬೀರುವ ವರದಿಗಳನ್ನು ಪ್ರಕಟಿಸಿದ್ದೇವೆ
- ನಗರ ಪ್ರದೇಶದಲ್ಲಿ ಬಳಕೆ: ನಾವು ನಗರಾಭಿವೃದ್ಧಿ, ಸಾರಿಗೆ ಮತ್ತು ರೈಡ್‌ಶೇರಿಂಗ್ ಕುರಿತಂತೆ ಜಗತ್ತಿನಾದ್ಯಂತದ 8 ನಗರಗಳಲ್ಲಿ ನಡೆಸಿದ ಅಧ್ಯಯನದ ವಿಶ್ಲೇಷಣೆ ಯನ್ನು ಪ್ರಕಟಿಸಿದ್ದೇವೆ
ಆಡಳಿತ
- ಡೇಟಾ ಗೌಪ್ಯತೆ: ಬಳಕೆದಾರರಿಗೆ ತಮ್ಮ ಗೌಪ್ಯತೆಯ ಆದ್ಯತೆಗಳನ್ನು ನಿರ್ವಹಿಸಲು ಕೇಂದ್ರ ಸ್ಥಳವಾಗಿರುವ ನಮ್ಮ ಹೊಸ ಗೌಪ್ಯತೆ ಕೇಂದ್ರ ಅನ್ನು ಆರಂಭಿಸಿದ್ದೇವೆ ಮತ್ತು ನಮ್ಮ ಇತ್ತೀಚಿನ ಸರ್ಕಾರದ ಪಾರದರ್ಶಕತೆ ವರದಿ ಅನ್ನು ಬಿಡುಗಡೆಗೊಳಿಸಿದ್ದೇವೆ
- ಡೇಟಾ ಭದ್ರತೆ: ಮಹತ್ವದ ಬ್ಯುಸಿನೆಸ್ ಲೈನ್‌ಗಳಿಗಾಗಿ ಪ್ರಮುಖ ಪ್ರಮಾಣೀಕರಣಗಳು ಮತ್ತು ವರದಿಗಳನ್ನು ಪಡೆದುಕೊಂಡಿದ್ದೇವೆ (ISO 27001, SOC 2, SOC 2 Type 2)
- ನೀತಿ ಮತ್ತು ಕಾರ್ಯತಂತ್ರ: ನಮ್ಮ ಮಾನವ ಹಕ್ಕುಗಳ ನೀತಿ, ಪರಿಸರ ನೀತಿ, ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧದ ನೀತಿ ಮತ್ತು ಜಾಗತಿಕ ತೆರಿಗೆ ತಂತ್ರಗಾರಿಕೆ ಅನ್ನು ಪ್ರಕಟಿಸಿದ್ದೇವೆ.
- ರಾಜಕೀಯ ಚಟುವಟಿಕೆಗಳು: 2022 ರಲ್ಲಿ, ನಾವು Uber ನ US ರಾಜಕೀಯ ತೊಡಗಿಸಿಕೊಳ್ಳುವಿಕೆ ವರದಿ ಯನ್ನು ಬಿಡುಗಡೆಗೊಳಿಸಿದ್ದೇವೆ, ಇದು ನಮ್ಮ US ಕಾರ್ಪೊರೇಟ್ ರಾಜಕೀಯ ಚಟುವಟಿಕೆ ನೀತಿ, ಬೋರ್ಡ್-ಹಂತದ ಮೇಲ್ವಿಚಾರಣೆ ಮತ್ತು ನೇರ ಲಾಬಿ ಚಟುವಟಿಕೆಗಳ ಸಾರಾಂಶವನ್ನು ಒಳಗೊಂಡಿದೆ.
ಪರಿಣಾಮ
ಪ್ರಪಂಚದಾದ್ಯಂತ, Uber ಹೊಸ ಸಾಮಾನ್ಯ ಸ್ಥಿತಿಯ ನಡುವೆ ಉತ್ತಮವಾಗಿ ಮರು ನಿರ್ಮಿಸುವ ಪ್ರಕ್ರಿಯೆಯ ಭಾಗವಾಗಿದೆ. ನಾವು ನಗರಗಳು ಮತ್ತು ಎನ್‌ಜಿಒಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ, ಆರೋಗ್ಯ ಮತ್ತು ಚಲನಶೀಲತೆ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ ಹಾಗೂ ಜನರು ಮತ್ತು ನಗರಗಳ ಪ್ರಗತಿಗೆ ವಿವಿಧ ಹೊಸ ಉತ್ಪನ್ನಗಳು ಮತ್ತು ಕೊಡುಗೆಗಳ ಮೂಲಕ Uber ಗೆ ಹೊಸ ಬಳಕೆದಾರರನ್ನು ಪರಿಚಯಿಸುತ್ತಿದ್ದೇವೆ. ಈ ಸವಾಲುಭರಿತ, ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ ನಗರಗಳಿಗಾಗಿ ಕಾರ್ಯನಿರ್ವಹಿಸುವ ಮೂಲಕ ನಾವು ಯಾವಾಗಲೂ ಸರಿಯಾದ ಕೆಲಸವನ್ನು ಮಾಡಲು ಶ್ರಮಿಸುತ್ತೇವೆ. ಅವಧಿ.
ಚಾಲಕ ಮತ್ತು ಕೊರಿಯರ್ ಯೋಗಕ್ಷೇಮ
Uber 2010 ರಲ್ಲಿ ಪ್ರಾರಂಭವಾದಾಗಿನಿಂದ, ನಮ್ಮ ತಂತ್ರಜ್ಞಾನವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಯಾವಾಗ ಬೇಕಾದರೂ, ಎಲ್ಲಿಯಾದರೂ ಅವರ ಅನುಕೂಲಕ್ಕೆ ತಕ್ಕಂತೆ ಹಣ ಸಂಪಾದಿಸಲು ಅವಕಾಶ ಮಾಡಿಕೊಟ್ಟಿದೆ. ಇಂದು, Uber ಕೆಲಸಕ್ಕಾಗಿ ವಿಶ್ವದ ಅತಿದೊಡ್ಡ ಮುಕ್ತ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ ಮತ್ತು 72 ದೇಶಗಳಲ್ಲಿ ಹಾಗೂ 10,000 ಕ್ಕೂ ಹೆಚ್ಚು ನಗರಗಳಲ್ಲಿ ಹಣ ಸಂಪಾದನೆಯ ಅವಕಾಶಗಳನ್ನು ಒದಗಿಸುತ್ತದೆ. 2016 ಮತ್ತು 2021 ರ ನಡುವೆ, 3.1 ಕೋಟಿಗೂ ಹೆಚ್ಚು ಜನರು ಹಣ ಸಂಪಾದನೆಗಾಗಿ Uber ನ ಪ್ಲಾಟ್‌ಫಾರ್ಮ್ ಬಳಸಿದ್ದಾರೆ. ಒಟ್ಟಾರೆಯಾಗಿ, ಅವರು ಟಿಪ್ಸ್ ಹೊರತುಪಡಿಸಿ US$150 ಶತಕೋಟಿಗಿಂತ ಹೆಚ್ಚಿನ ಆದಾಯವನ್ನು ಜನರೇಟ್ ಮಾಡಿದ್ದಾರೆ.
Uber ಬಳಸುವ ಚಾಲಕರು ಮತ್ತು ಕೊರಿಯರ್‌ಗಳು ಅವರು ಸೇವೆ ಸಲ್ಲಿಸುವ ನಗರಗಳು ಮತ್ತು ದೇಶಗಳಂತೆ ವೈವಿಧ್ಯಮಯವಾಗಿದ್ದಾರೆ. ಅವರು ವೃತ್ತಿಪರ ಚಾಲಕರು, ಅನುಭವಿಗಳು, ವಿದ್ಯಾರ್ಥಿಗಳು, ಕೆಲಸಕ್ಕೆ ಮರಳುವ ಪೋಷಕರು, ಪ್ರಾಥಮಿಕ ಆದಾಯಕ್ಕೆ ಪೂರಕ ಆದಾಯ ಗಳಿಸುವ ಜನರು ಮತ್ತು ಇವರ ನಡುವೆ ಇರುವ ಏಲ್ಲರೂ ಒಳಗೊಂಡಿರುತ್ತಾರೆ.
ಜನರು ಮತ್ತು ಸಂಸ್ಕೃತಿ
ನಮ್ಮ ಧ್ಯೇಯೋದ್ದೇಶದಿಂದ ಪ್ರೇರಿತರಾದ ಮತ್ತು ಕ್ರಿಯಾಶೀಲರಾದ ವಿವಿಧ ಜನಾಂಗಗಳ ಜನರನ್ನು ನಾವು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಪ್ರಪಂಚದಾದ್ಯಂತ ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಎಲ್ಲರಿಗೂ ಅವರ ಅನುಭವವನ್ನು ಸುಧಾರಿಸಲು ಸಹಾಯ ಮಾಡುವ ಇಚ್ಛೆಯಿರುವ ಸಾಧಕರ ಅಗತ್ಯ ನಮಗಿದೆ. ನಾವು ಎಲ್ಲರಿಗೂ ಸೂಕ್ತ ಆಯ್ಕೆಯಾಗಿರುವುದಿಲ್ಲ ಎಂಬುದು ನಮಗೆ ತಿಳಿದಿದೆ, ಅದಕ್ಕಾಗಿಯೇ ನಾವು ಯಾರೆಂಬುದರ ಬಗ್ಗೆ ಮತ್ತು Uber ನಲ್ಲಿ ಕೆಲಸ ಮಾಡುವುದು ಹೇಗಿರುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾಗಿರಲು ನಾವು ಬದ್ಧರಾಗಿದ್ದೇವೆ.
ಉದ್ಯೋಗಿಗಳಿಗೆ ಹೆಚ್ಚು ಮುಖ್ಯವಾದುದನ್ನು ಅರ್ಥಮಾಡಿಕೊಳ್ಳಲು ಮತ್ತು ಅವರು ಇಲ್ಲಿ ಏಕೆ ಉಳಿಯಬಯಸುತ್ತಾರೆ ಮತ್ತು ಇಲ್ಲಿಯೇ ತಮ್ಮ ವೃತ್ತಿಯಲ್ಲಿ ಉನ್ನತಿ ಸಾಧಿಸಲು ಏಕೆ ಬಯಸುತ್ತಾರೆ ಎಂಬುದನ್ನು ತಿಳಿಯಲು ನಾವು ಅವರಿಂದ ಡೇಟಾವನ್ನು ಸಂಗ್ರಹಿಸುತ್ತಿದ್ದೇವೆ. ನಮ್ಮ ಆದ್ಯತೆಗಳು ಮತ್ತು ವಿಧಾನವನ್ನು ಸ್ಪಷ್ಟಪಡಿಸಲು ನಾವು ಈ ಒಳನೋಟವನ್ನು ಬಳಸುತ್ತಿದ್ದೇವೆ ಮತ್ತು ಇದರ ಪರಿಣಾಮವಾಗಿ ನಾವು 6 ವಿಭಿನ್ನ ಉದ್ಯೋಗಿ ಅಗತ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ: ಹೆಮ್ಮೆ, ನಮ್ಮದೆಂಬ ಭಾವನೆ, ಸಮಾನತೆ, ಬೆಳವಣಿಗೆ, ಸಂಭಾವನೆ, ಯೋಗಕ್ಷೇಮ ಮತ್ತು ನಂಬಿಕೆ. ನಮ್ಮ ವೈವಿಧ್ಯಮಯ ಕಾರ್ಯಪಡೆಯ ಅಗತ್ಯತೆಗಳನ್ನು ನಾವು ಪರಿಗಣಿಸುತ್ತೇವೆ ಮತ್ತು ಈ ಪ್ರತಿಯೊಂದು ನಿರ್ಣಾಯಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ, ಸಮಾನವಾದ ಮತ್ತು ಅಂತರ್ಗತ ಅನುಭವವನ್ನು ರಚಿಸುವುದನ್ನು ಮುಂದುವರಿಸುತ್ತೇವೆ ಎಂಬುದನ್ನು ಈ ಮಾನವ ಬಂಡವಾಳದ ಕಾರ್ಯತಂತ್ರವು ಖಚಿತಪಡಿಸುತ್ತದೆ.
ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ
ಭೂಮಿಯ ಮೇಲಿನ ಅತ್ಯಂತ ಸ್ವಚ್ಛ ಪ್ಲಾಟ್‌ಫಾರ್ಮ್. ಅದು ನಮ್ಮ ಗುರಿ. ಏಕೆಂದರೆ, ಇದು ನಮ್ಮ ವ್ಯವಹಾರ ಮತ್ತು ನಮ್ಮ ಪ್ಲಾಟ್‌ಫಾರ್ಮ್ ಅನ್ನು ಅವಲಂಬಿಸಿರುವ ಎಲ್ಲರಿಗಾಗಿ ಮಾಡಬಹುದಾದ ಸರಿಯಾದ ಕೆಲಸವಾಗಿದೆ. ಅದನ್ನು ಸಾಧಿಸುವುದರಿಂದ ನಮ್ಮ ಹೂಡಿಕೆದಾರರು, ನಮ್ಮ ಉದ್ಯೋಗಿಗಳು, ನಮ್ಮ ಬಳಕೆದಾರರು, ನಾವು ಸೇವೆ ಸಲ್ಲಿಸುವ ನಗರಗಳು ಮತ್ತು ಒಟ್ಟಾರೆಯಾಗಿ ಇಡೀ ಜಗತ್ತಿಗೆ ಪ್ರಯೋಜನಕಾರಿಯಾಗಲಿದೆ ಎಂದು ನಾವು ನಂಬುತ್ತೇವೆ.
ನಾವು ಈ ಪಯಣವನ್ನು 2020 ರಲ್ಲಿ ಪ್ರಮುಖ ಬದ್ಧತೆಗಳೊಂದಿಗೆ ಪ್ರಾರಂಭಿಸಿದ್ದೇವೆ. ನಾವು 2040 ರ ವೇಳೆಗೆ ಎಲ್ಲಾ ಸ್ಕೋಪ್ 1, 2 ಮತ್ತು 3 ಕಾರ್ಬನ್ ಹೊರಸೂಸುವಿಕೆಗಳಲ್ಲಿ ಶೂನ್ಯ ಸಹಿಷ್ಣುತೆ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಅದನ್ನು ಸಾಧಿಸುವ ಭಾಗವಾಗಿ ನಾವು ನಮ್ಮ ಪ್ರಯಾಣಿಕರ ಮೊಬಿಲಿಟಿ ಪ್ಲಾಟ್‌ಫಾರ್ಮ್‌ನಲ್ಲಿ, ಮೈಕ್ರೋಮೊಬಿಲಿಟಿಯಲ್ಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ 2030 ರ ವೇಳೆಗೆ US, ಕೆನಡಾ ಮತ್ತು ಯುರೋಪ್‌ನಲ್ಲಿ ಹಾಗೂ 2040 ರ ಹೊತ್ತಿಗೆ ನಾವು ಜಾಗತಿಕವಾಗಿ ಕಾರ್ಯನಿರ್ವಹಿಸುವ ಪ್ರತಿ ಸ್ಥಳದಲ್ಲಿ 100% ಸವಾರಿಗಳನ್ನು ಶೂನ್ಯ ಕಾರ್ಬನ್ ಹೊರಸೂಸುವಿಕೆ ವಾಹನಗಳನ್ನು (ZEV ಗಳು) ಬಳಸಿ ನಡೆಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದೇವೆ.
ಪಾರದರ್ಶಕತೆಗೆ ನಮ್ಮ ಬದ್ಧತೆಯ ಭಾಗವಾಗಿ ಮತ್ತು ಹವಾಮಾನ-ಕಾರ್ಬನ್ ಹೊರಸೂಸುವಿಕೆ ಲೆಕ್ಕಾಚಾರದಲ್ಲಿ, ಯೋಜನೆ ಮತ್ತು ಬಹಿರಂಗಪಡಿಸುವಿಕೆಯಲ್ಲಿ ಅತ್ಯುನ್ನತ ಮಾನದಂಡಗಳನ್ನು ತಲುಪುವ ನಮ್ಮ ಗುರಿಯ ಭಾಗವಾಗಿ ನಾವು ಹವಾಮಾನ-ಸಂಬಂಧಿತ ವಿತ್ತೀಯ ಬಹಿರಂಗಪಡಿಸುವಿಕೆಗಳ ಕಾರ್ಯಪಡೆಯ (TCFD) ಶಿಫಾರಸುಗಳಿಗೆ ಅನುಗುಣವಾಗಿ ವಿಶ್ಲೇಷಣೆಯನ್ನು ನಡೆಸಿದ್ದೇವೆ. ಈ ವಿಶ್ಲೇಷಣೆಯ ವಿಸ್ತೃತ ವಿವರಗಳನ್ನು ಈ ವಿಭಾಗದಲ್ಲಿ ನಂತರ ಕಾಣಬಹುದು ಮತ್ತು ಉದ್ದಕ್ಕೂ ಅದನ್ನು ಉಲ್ಲೇಖಿಸಲಾಗಿದೆ. ಹೆಚ್ಚುವರಿಯಾಗಿ, 2040 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಗಳಿಗೆ ನಮ್ಮ ಬದ್ಧತೆಯ ಭಾಗವಾಗಿ ನಾವು ವಿಜ್ಞಾನ-ಆಧಾರಿತ ಗುರಿಗಳ ಉಪಕ್ರಮ ಮತ್ತು ಹವಾಮಾನ ಪ್ರತಿಜ್ಞೆಗೆ ಸೇರಿಕೊಂಡಿದ್ದೇವೆ. 2021 ರಲ್ಲಿ, ನಾವು ಪರಿಸರ ನೀತಿಯನ್ನು ಪ್ರಕಟಿಸಿದ್ದೆವು.
ಆಡಳಿತ
ನಮ್ಮ ನಿರ್ದೇಶಕರ ಮಂಡಳಿಯು ಅತ್ಯುತ್ತಮ ದರ್ಜೆಯ ಕಾರ್ಪೊರೇಟ್ ಆಡಳಿತ ನೀಡಲು ಬದ್ಧವಾಗಿದೆ ಮತ್ತು ನಮ್ಮ ಸಂಸ್ಕೃತಿ, ಆಡಳಿತ ಹಾಗೂ ಕಾರ್ಪೊರೇಟ್ ಜವಾಬ್ದಾರಿಗೆ ಸಂಬಂಧಿಸಿದಂತೆ ನಮ್ಮ ಷೇರುದಾರರೊಂದಿಗೆ ನಾವು ಪಾರದರ್ಶಕವಾಗಿರಬೇಕು ಮತ್ತು ಜವಾಬ್ದಾರರಾಗಿರಬೇಕು ಎಂದು ದೃಢವಾಗಿ ನಂಬುತ್ತದೆ. ವಿಶ್ವ-ದರ್ಜೆಯ ಸಾರ್ವಜನಿಕ ಕಂಪನಿ ಆಡಳಿತ ರಚನೆಯನ್ನು ನಿರ್ಮಿಸುವ ನಮ್ಮ ಪಯಣದಲ್ಲಿ ನಾವು ವೈವಿಧ್ಯಮಯ ಹಿನ್ನೆಲೆಗಳು, ಕೌಶಲ್ಯಗಳು ಮತ್ತು ಅನುಭವಗಳೊಂದಿಗೆ ನಿರ್ದೇಶಕರ ಮಂಡಳಿಯನ್ನು ಬಲಪಡಿಸಿದ್ದೇವೆ ಮತ್ತು ಬೆಳೆಸಿದ್ದೇವೆ.
ನಮ್ಮ ವಸ್ತುಸ್ಥಿತಿಯ ಮೌಲ್ಯಮಾಪನದಲ್ಲಿ ಗುರುತಿಸಲಾದ ESG ವಿಚಾರಗಳು ನಮ್ಮ ವ್ಯವಹಾರ ಮತ್ತು ವ್ಯವಹಾರ ತಂತ್ರಗಾರಿಕೆಯ ದೀರ್ಘಾವಧಿಯ ಯಶಸ್ಸಿಗೆ ಮುಖ್ಯವಾಗಿವೆ. ಅಂತೆಯೇ ಮತ್ತು ಸೂಕ್ತವಾದಂತೆ, ಅವುಗಳನ್ನು Uber ನ ನಿರ್ದೇಶಕರ ಮಂಡಳಿ ಮತ್ತು ಮಂಡಳಿಯ ಸ್ವತಂತ್ರ ಲೆಕ್ಕಪರಿಶೋಧನೆ, ಪರಿಹಾರ ಹಾಗೂ ನಾಮನಿರ್ದೇಶನ ಮತ್ತು ಆಡಳಿತ ಸಮಿತಿಗಳು ಮೇಲ್ವಿಚಾರಣೆ ಮಾಡುತ್ತವೆ.
ಈ ವರದಿಯು ಅಪಾಯಗಳು ಮತ್ತು ಅನಿಶ್ಚಿತತೆಗಳನ್ನು ಒಳಗೊಂಡಿರುವ ನಮ್ಮ ಭವಿಷ್ಯದ ವ್ಯವಹಾರ ನಿರೀಕ್ಷೆಗಳ ಕುರಿತು ಮುಂದಿನ ಹಾದಿಯ ಬಗ್ಗೆ ಹೇಳಿಕೆಗಳನ್ನು ಹೊಂದಿರಬಹುದು. ವಾಸ್ತವಿಕ ಫಲಿತಾಂಶಗಳು ಊಹಿಸಿದ ಫಲಿತಾಂಶಗಳಿಗಿಂತ ಭೌತಿಕವಾಗಿ ಭಿನ್ನವಾಗಿರಬಹುದು ಮತ್ತು ವರದಿ ಮಾಡಿದ ಫಲಿತಾಂಶಗಳನ್ನು ಭವಿಷ್ಯದ ಕಾರ್ಯನಿರ್ವಹಣೆಯ ಸೂಚಕ ಎಂದು ಪರಿಗಣಿಸಬಾರದು. ಇನ್ನಷ್ಟು ವಿವರಗಳಿಗಾಗಿ ದಯವಿಟ್ಟು ನಮ್ಮ 2022 ESG ವರದಿ ಅನ್ನು ನೋಡಿ.
ಈ ವರದಿಯಲ್ಲಿನ ಹಸಿರುಮನೆ ಅನಿಲ ಹೊರಸೂಸುವಿಕೆಗಳ ಡೇಟಾವನ್ನು ಲಾಯ್ಡ್ಸ್ ರಿಜಿಸ್ಟರ್ ಕ್ವಾಲಿಟಿ ಅಶ್ಯೂರೆನ್ಸ್ ಪರಿಶೀಲಿಸಿದೆ. LRQA ನ ಪರಿಶೀಲನೆ ಹೇಳಿಕೆಯನ್ನು ಇಲ್ಲಿನೋಡಬಹುದು.
ಕಂಪನಿ