Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ಕಂಪನಿಯ ನಿಯಮಿತ ಪ್ರಯಾಣವನ್ನು ಸುಲಭಗೊಳಿಸಲಾಗಿದೆ

ನಿಮ್ಮ ಉದ್ಯೋಗಿಗಳು ದೈನಂದಿನ ಚಾಲನೆಯ ಕುರಿತು ಚಿಂತಿಸಬೇಕಾಗಿಲ್ಲ. ನಿಮ್ಮ ಉದ್ಯೋಗಿಗಳಿಗೆ ನಿಯಮಿತ ಪ್ರಯಾಣ ಪ್ರೋಗ್ರಾಂ ಪ್ರಯೋಜನವನ್ನು ನೀಡಿ. ಇದರಿಂದ ಅವರು ಕಚೇರಿಯಿಂದ ಮನೆಗೆ ಅಥವಾ ಮನೆಯಿಂದ ಕಚೇರಿಗೆ ವಿಶ್ವಾಸಾರ್ಹವಾಗಿ ಪ್ರಯಾಣಿಸಬಹುದು.

ಉದ್ಯೋಗಿಗಳ ದೊಡ್ಡ ಗುಂಪುಗಳನ್ನು ಸಾಗಿಸಲು ನೋಡುತ್ತಿರುವಿರಾ? ಉದ್ಯೋಗಿ ಶಟಲ್ ಪರಿಹಾರಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.

ನಿಮ್ಮ ತಂಡಕ್ಕಾಗಿ ಕಸ್ಟಮೈಸ್ ಮಾಡಬಹುದಾದ ಪ್ರೋಗ್ರಾಂಗಳು

ಮನೆ ಬಾಗಿಲಿಗೆ ನಿಯಮಿತ ಪ್ರಯಾಣ

Uber ನೊಂದಿಗೆ ನಿಮ್ಮ ಉದ್ಯೋಗಿಗಳ ಸವಾರಿಗಳ ಸಂಪೂರ್ಣ ಇಲ್ಲವೇ ಭಾಗಶಃ ಶುಲ್ಕವನ್ನು ಭರಿಸಿ. ನಿಮ್ಮ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ನಾವು ಹೊಸ COVID-19 ಸುರಕ್ಷತೆ ಕ್ರಮಗಳನ್ನು ಪರಿಚಯಿಸಿದ್ದೇವೆ.

ಮೊದಲ ಮತ್ತು ಕೊನೆಯ ಮೈಲಿ

ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ಹೋಗಲು ಮತ್ತು ಬರಲು ನಿಮ್ಮ ತಂಡಕ್ಕೆ ಸಹಾಯ ಮಾಡಿ. ಪ್ರಯಾಣದ ಕೊನೆಯ ಅಲ್ಪ ಅವಧಿಗೆ ಪಾವತಿಸಲು ಅವರಿಗೆ ಸಹಾಯ ಮಾಡಲು ಅವರ ಸವಾರಿಯ ವೆಚ್ಚವನ್ನು ಭರಿಸಿ.

ತಡರಾತ್ರಿ ಸವಾರಿಗಳು

ಎಷ್ಟೇ ತಡವಾದರೂ, Uber ಜೊತೆಗೆ ಸವಾರಿ ವೆಚ್ಚವನ್ನು ಭರಿಸುವ ಮೂಲಕ, ಕತ್ತಲಾದ ನಂತರ ನಿಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿ ಮನೆಗೆ ಸೇರಿಸಿ.

ನಿಮ್ಮ ತಂಡವು ಇಂದೇ ಸವಾರಿ ಕೈಗೊಳ್ಳಲಿ

ನಿಮ್ಮ ಪ್ರೋಗ್ರಾಂ ಕಸ್ಟಮೈಸ್ ಮಾಡಿ

ನಿಮ್ಮ ಉದ್ಯೋಗಿಗಳಿಗೆ ಸರಿಹೊಂದುವ ನಿಯಮಿತ ಪ್ರಯಾಣ ಪ್ರೋಗ್ರಾಂ ಅನ್ನು ಹೊಂದಿಸಿ. ಎಷ್ಟು ಮೊತ್ತದ ಶುಲ್ಕವನ್ನು ಕವರ್ ಮಾಡಲಾಗುತ್ತದೆ, ಅವರು ಯಾವ ಸಮಯದಲ್ಲಿ ಸವಾರಿ ಮಾಡುತ್ತಾರೆ ಮತ್ತು ಅವರು ಯಾವ ಬಗೆಯ ವಾಹನಕ್ಕೆ ವಿನಂತಿಸುತ್ತಾರೆ ಎಂಬುದನ್ನು ನಿಯಂತ್ರಿಸಿ.

ನಿಮ್ಮ ಉದ್ಯೋಗಿಗಳನ್ನು ಸೇರಿಸಿ

ನಿಮ್ಮ ಕಂಪನಿಯ ಖಾತೆಗೆ ಸೇರಲು ನಿಮ್ಮ ತಂಡವನ್ನು ಆಹ್ವಾನಿಸಿ. ನೀವು ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಬಹುದು, CSV ಫೈಲ್ ಅನ್ನು ಅಪ್‌ಲೋಡ್ ಮಾಡಬಹುದು ಅಥವಾ ನಿಮ್ಮ ಉದ್ಯೋಗಿ ನಿರ್ವಹಣಾ ಸಿಸ್ಟಂನಲ್ಲಿ ಸಿಂಕ್ ಮಾಡಬಹುದು.

ಉದ್ಯೋಗಿಗಳು ಸವಾರಿಗಳಿಗೆ ವಿನಂತಿಸಲು ಅವಕಾಶ ಕಲ್ಪಿಸಿ

ನಿಮ್ಮ ಉದ್ಯೋಗಿಗಳಿಗೆ ಸವಾರಿ ಬೇಕೆಂದಾಗ, ಅವರು ತಮ್ಮ ಬ್ಯುಸಿನೆಸ್ ಪ್ರೊಫೈಲ್‌ಗೆ ಬದಲಿಸಿಕೊಳ್ಳಬಹುದು ಮತ್ತು Uber ಆ್ಯಪ್‌ನಲ್ಲಿ ಸವಾರಿಯನ್ನು ವಿನಂತಿಸಬಹುದು.

ನಿಯಮಿತ ಪ್ರಯಾಣ ಪ್ರೋಗ್ರಾಂ ನಿಮ್ಮ ವ್ಯವಹಾರಕ್ಕೆ ಹೇಗೆ ಸಹಾಯ ಮಾಡುತ್ತದೆ

ಒತ್ತಡ-ಮುಕ್ತ, ವಿಶ್ವಾಸಾರ್ಹ ಸವಾರಿಗಳು

COVID-19 ಸುರಕ್ಷತಾ ಚೆಕ್‌ಲಿಸ್ಟ್‌ಗಳಿಂದ ಹಿಡಿದು ಕಡ್ಡಾಯ ಚಾಲಕರ ಹಿನ್ನೆಲೆ ಪರಿಶೀಲನೆಗಳವರೆಗೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ನಿಮ್ಮ ಸಾಧನೆಗೆ ಸಹಾಯ ಮಾಡುವ ವಿಶೇಷ ಅನುಕೂಲಗಳು

ನಿಮ್ಮ ದೈನಂದಿನ ಪ್ರಯಾಣಿಕ ಪ್ರಯೋಜನಗಳ ಭಾಗವಾಗಿ Uber ನೊಂದಿಗೆ ಸವಾರಿಗಳನ್ನು ಒದಗಿಸುವ ಮೂಲಕ ಉತ್ತಮ ಪ್ರತಿಭೆಯನ್ನು ಆಕರ್ಷಿಸಿ ಮತ್ತು ನಿಮ್ಮಲ್ಲಿ ಉಳಿಸಿಕೊಳ್ಳಿ.

ವೆಚ್ಚವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುವ ಪರಿಕರಗಳು

ಪಾರ್ಕಿಂಗ್ ಮತ್ತು ವಾರ್ಷಿಕ ಸಾರಿಗೆ ವೆಚ್ಚಗಳಲ್ಲಿ ಉಳಿತಾಯ ಮಾಡಿ. ಸ್ಥಳ ಮತ್ತು ದಿನದ ಸಮಯದ ಆಧಾರದ ಮೇಲೆ ಮಿತಿಗಳನ್ನು ಹೊಂದಿಸುವುದು ಸುಲಭ.

"ಸಾಮಾನ್ಯ ನಿಯಮಿತ ಪ್ರಯಾಣದ ಆಯ್ಕೆಗಳು ಲಭ್ಯವಿಲ್ಲದಿದ್ದಾಗ, ಪ್ರತಿದಿನ ಲೋವರ್ ಮ್ಯಾನ್‌ಹ್ಯಾಟನ್‌ಗೆ ಅಗತ್ಯವಾಗಿ ಪ್ರಯಾಣಿಸಬೇಕಿದ್ದ ಉದ್ಯೋಗಿಗಳಿಗೆ Uber for Business ಉತ್ತಮ ಮಾರ್ಗವನ್ನು ಒದಗಿಸಿತು."

ಸ್ಟೇಸಿ ಕನ್ನಿಂಗ್‌ಹ್ಯಾಮ್, ಅಧ್ಯಕ್ಷರು, NYSE

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

  • ಕಂಪನಿಗಳಿಗೆ ಕಾರ್ಪೊರೇಟ್ ಖಾತೆಯನ್ನು ಸೆಟಪ್‌ ಮಾಡಲು, ಪ್ರಯಾಣ ಪ್ರೋಗ್ರಾಂ ರಚಿಸಲು ಮತ್ತು ತಮ್ಮ ಉದ್ಯೋಗಿಗಳ ಸಾರಿಗೆ ವೆಚ್ಚಗಳನ್ನು ನಿರ್ವಹಿಸಲು Uber ಅನುಮತಿಸುತ್ತದೆ. ಈ ಪ್ರೋಗ್ರಾಂ ಮೂಲಕ, ಬ್ಯುಸಿನೆಸ್‌ಗಳು ತಮ್ಮ ಉದ್ಯೋಗಿಗಳಿಗೆ ತಮ್ಮ ಕಚೇರಿಗಳಿಗೆ, ಸಭೆಗಳಿಗೆ ಅಥವಾ ಇತರ ವ್ಯವಹಾರ-ಸಂಬಂಧಿತ ಚಟುವಟಿಕೆಗಳಿಗೆ ಉಚಿತ ಸವಾರಿಗಳನ್ನು ಒದಗಿಸಬಹುದು.

  • ಉದ್ಯೋಗಿಗಳು ದಿನದ ಯಾವುದೇ ಸಮಯದಲ್ಲಿ ಸವಾರಿಗಾಗಿ ವಿನಂತಿಸಬಹುದು. ಸಮಯ, ಸ್ಥಳ ಮತ್ತು ಖರ್ಚು ನಿರ್ಬಂಧಗಳನ್ನು ನಿಗದಿಪಡಿಸುವ ಮೂಲಕ ಉದ್ಯೋಗಿಗಳಿಗೆ ತಡರಾತ್ರಿಯ ಸವಾರಿಗಳನ್ನು ಒಳಗೊಳ್ಳಲು ನಿರ್ವಾಹಕರು Uber for Business ಡ್ಯಾಶ್‌ಬೋರ್ಡ್‌ನಲ್ಲಿ ಪ್ರಯಾಣ ಪ್ರೋಗ್ರಾಂಗಳನ್ನು ಸೆಟಪ್‌ ಮಾಡಬಹುದು.

  • ಭಾಗಶಃ ಅಥವಾ ಪೂರ್ಣ ಪ್ರಯಾಣ ಪ್ರಯೋಜನಗಳನ್ನು ಒದಗಿಸಲು ನಿರ್ವಾಹಕರು Uber for Business ಡ್ಯಾಶ್‌ಬೋರ್ಡ್‌ನಲ್ಲಿ ಪ್ರಯಾಣ ಪ್ರೋಗ್ರಾಂ ಅನ್ನು ಸೆಟಪ್‌ ಮಾಡಬಹುದು. ಪ್ರಯೋಜನವನ್ನು ಅದರ ಉದ್ದೇಶಿತ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ಉದ್ಯೋಗಿಗಳು, ದಿನದ ಸಮಯ, ಖರ್ಚು ಮೊತ್ತಗಳು ಮತ್ತು ಸ್ಥಳಗಳಿಗೆ ಪ್ರೋಗ್ರಾಂ ಅನ್ನು ನಿರ್ವಾಹಕರು ಕಸ್ಟಮೈಸ್ ಮಾಡಬಹುದು.

  • Uber for Business ಡ್ಯಾಶ್‌ಬೋರ್ಡ್‌ನಲ್ಲಿ ಉದ್ಯೋಗಿಗಳ ಚಟುವಟಿಕೆಗಳನ್ನು ವೀಕ್ಷಿಸುವ ಮೂಲಕ ಹಾಗೂ ಕೆಲವೊಂದು ನಿರ್ಬಂಧಗಳನ್ನು ಹೊಂದಿಸುವ ಮೂಲಕ ನಿರ್ವಾಹಕರು ವಂಚನೆಯ ಸಂಭಾವ್ಯತೆಯನ್ನು ಎರಡು ವಿಧಾನಗಳಲ್ಲಿ ಕಡಿಮೆಗೊಳಿಸಹುದು.

  • Uber ಆ್ಯಪ್‌ನಿಂದ ಸವಾರರು ಸುಲಭವಾಗಿ ಪ್ರಮುಖ ಸುರಕ್ಷತಾ ಮಾಹಿತಿಯನ್ನು ಆ್ಯಕ್ಸೆಸ್‌ ಮಾಡಬಹುದು, ತುರ್ತು ಸಹಾಯವನ್ನು ಪಡೆಯಬಹುದು ಮತ್ತು ತಮ್ಮ ಲೊಕೇಶನ್‌ ಶೇರ್‌ ಮಾಡಬಹುದು. ನಿರ್ವಾಹಕರು ನಿರ್ವಾಹಕ ಡ್ಯಾಶ್‌ಬೋರ್ಡ್‌ ಮೂಲಕ ಉದ್ಯೋಗಿಗಳ ಟ್ರಿಪ್‌ಗಳ ಕುರಿತು ಗೋಚರತೆಯನ್ನು ಸಹ ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಕಂಪನಿಗಳಿಗೆ ಗೋಚರತೆಯನ್ನು ಹೆಚ್ಚಿಸಲು Uber for Business ಅನ್ನು ಇಂಟರ್‌ನ್ಯಾಷನಲ್ SOS ನೊಂದಿಗೆ ಸಂಯೋಜಿಸಲಾಗಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو