Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಗ್ರಾಹಕರು, ಅತಿಥಿಗಳು, ಮತ್ತು ಉದ್ಯೋಗಿಗಳಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ

ಜಾಗತಿಕವಾಗಿ ಲಭ್ಯವಿರುವ Central ಮೂಲಕ ಯಾರಿಗಾದರೂ, ಅವರು Uber ಆ್ಯಪ್ ಹೊಂದಿಲ್ಲದಿದ್ದರೂ ಸಹ ಅವರಿಗೆ ಸವಾರಿಯನ್ನು ವಿನಂತಿಸಲು Uber for Business ಬಳಕೆದಾರರಿಗೆ ಜಗತ್ತಿನ ಅತಿದೊಡ್ಡ ಮೊಬಿಲಿಟಿ ನೆಟ್‌ವರ್ಕ್‌ ಅನ್ನು ಸಮಪರ್ಕಪವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಏನು ಸಾಧ್ಯ ಎಂದು ನೋಡಿ

ಗ್ರಾಹಕರಿಗೆ ಉತ್ತಮ, ವ್ಯವಹಾರಕ್ಕೆ ಇನ್ನೂ ಉತ್ತಮ

ವೆಚ್ಚಗಳನ್ನು ಆಪ್ಟಿಮೈಸ್ ಮಾಡಿ

ಕೈಗೊಂಡ ಸವಾರಿಗಳಿಗೆ ಮಾತ್ರ ಹಣವನ್ನು ಪಾವತಿಸುವ ಮೂಲಕ ಹಣ ಉಳಿಸಿ ಮತ್ತು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಖರ್ಚನ್ನು ಟ್ರ್ಯಾಕ್‌ ಮಾಡಿ.

ಗ್ರಾಹಕರ ಅನುಭವವನ್ನು ವೃದ್ಧಿಸಿ

ನಿಮ್ಮ ಗ್ರಾಹಕರಿಗೆ ಸವಾರಿಗಳನ್ನು ನಿಗದಿಪಡಿಸಿ. ಗಂಟೆಯ ಪ್ರಕಾರ ಪ್ರೀಮಿಯಂ ಸವಾರಿಗಳನ್ನು ವಿನಂತಿಸಿ ಅಥವಾ ಸವಾರಿಗಳನ್ನು ಬುಕ್‌ ಮಾಡಿ.

ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿ

ಪುನರಾವರ್ತಿತ ಸವಾರಿಗಳನ್ನು ನಿಗದಿಪಡಿಸಿ ಅಥವಾ ಕೇಂದ್ರೀಕೃತ ಡ್ಯಾಶ್‌ಬೋರ್ಡ್ ಮೂಲಕ ಅದೇ ಟ್ರಿಪ್ ಅನ್ನು ಸುಲಭವಾಗಿ ವಿನಂತಿಸಿ.

ಎರವಲು ಪಡೆದ ಕಾರುಗಳ ಮೇಲಿನ ನಿಮ್ಮ ಅವಲಂಬನೆಯನ್ನು ಕಡಿಮೆ ಮಾಡಿ

ಎರವಲು ಪಡೆದ ಕಾರು ಮತ್ತು ಶಟಲ್ ಬಳಕೆಯನ್ನು ಕಡಿಮೆ ಮಾಡಿ, ಜೊತೆಗೆ ಅವುಗಳಿಗೆ ಪಾವತಿಸುವ ಶುಲ್ಕವನ್ನೂ ಕಡಿಮೆಗೊಳಿಸಿ.

ಕೇಂದ್ರ ಡ್ಯಾಶ್‌ಬೋರ್ಡ್‌ನಿಂದ ಸವಾರಿಗಳ ಮೇಲ್ವಿಚಾರಣೆ ಮಾಡಿ

ಪ್ರಗತಿಯಲ್ಲಿರುವ ಮತ್ತು ಮುಂಬರುವ ಸವಾರಿಗಳ ಸ್ಟೇಟಸ್‌ ಅನ್ನು ಒಂದೇ ಸ್ಥಳದಲ್ಲಿ ನೋಡಿ.

ನಿಮ್ಮ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸಿ

ನಿಮ್ಮ ಉದ್ಯೋಗಿಗಳನ್ನು ಅವರಿಗೆ ಹೋಗಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತು ಬಳಕೆಯ ಬಗ್ಗೆ ಮಾಹಿತಿ ಪಡೆಯಿರಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ ನೋಡಿ

1/3

ನಿಮ್ಮ ವ್ಯವಹಾರಕ್ಕಾಗಿ ಕಸ್ಟಮೈಸ್ ಮಾಡಬಹುದಾದ ವೈಶಿಷ್ಟ್ಯಗಳು

 • ಒನ್-ವೇ ಅಥವಾ ರೌಂಡ್-ಟ್ರಿಪ್ ಸವಾರಿಗಳು

  ಒನ್-‌ವೇ ಸವಾರಿಯನ್ನು ವ್ಯವಸ್ಥೆಗೊಳಿಸಿ ಅಥವಾ ಅದನ್ನು ರೌಂಡ್ ಟ್ರಿಪ್‌ ಆಗಿ ಮಾಡಿ.

 • ನಿಗದಿತ ಸವಾರಿಗಳು

  30 ದಿನಗಳಷ್ಟು ಮುಂಚಿತವಾಗಿ ಸವಾರಿಗಳನ್ನು ಸುಲಭವಾಗಿ ನಿಗದಿಪಡಿಸಿ.

 • ಫ್ಲೆಕ್ಸಿಬಲ್ ಸವಾರಿಗಳು

  ನಿಮ್ಮ ಸವಾರರು ತಮ್ಮ ಸವಾರಿಯ ನಿಖರವಾದ ಸಮಯವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಿ.

 • ವಾಹನ ಪ್ರಕಾರಗಳ ಆಯ್ಕೆ

  ಲಭ್ಯವಿರುವ ಸವಾರಿ ಆಯ್ಕೆಗಳಲ್ಲಿ UberX, Uber Green, UberXL, Uber Black ಮತ್ತು ಇನ್ನಷ್ಟು ಸೇರಿವೆ.*

 • ಚಾಲಕರಿಗೆ ಮೆಮೊಗಳು ಮತ್ತು ಟಿಪ್ಪಣಿಗಳು

  ಚಾಲಕರಿಗೆ ಯಾವುದೇ ವಿಶೇಷ ಸೂಚನೆಗಳನ್ನು ಹೊಂದಿರುವ ಆಂತರಿಕ ಮೆಮೊ ಅಥವಾ ಟಿಪ್ಪಣಿ ಸೇರಿಸಿ.

 • ತಡೆರಹಿತ ಬಿಲ್ಲಿಂಗ್ ಮತ್ತು ವರದಿ ಮಾಡುವಿಕೆ

  ಪ್ರಯಾಣ ಡೇಟಾ ವರದಿಗಳನ್ನು ಪಡೆದುಕೊಳ್ಳಿ ಮತ್ತು ಮಾಸಿಕ ಸ್ಟೇಟ್‌ಮೆಂಟ್‌ಗಳೊಂದಿಗೆ ಖರ್ಚು ಕುರಿತು ಮಾಹಿತಿಯನ್ನು ಪಡೆಯಿರಿ.

1/6

ನೀವು ಯಾವುದೇ ಉದ್ಯಮದಲ್ಲಿದ್ದರೂ ನಿಮ್ಮ ವ್ಯವಹಾರವನ್ನು ವೃದ್ಧಿಸುತ್ತಾ ಇರಿ.

 • ಸೇವೆ ಮತ್ತು ದುರಸ್ತಿ ಸವಾರಿಗಳು

  ತಯಾರಕರು ಅಥವಾ ವಿತರಕ ಸಂಸ್ಥೆಯಲ್ಲಿ ತಮ್ಮ ಕಾರನ್ನು ಸರ್ವಿಸ್‌ ಅಥವಾ ದುರಸ್ತಿಗಾಗಿ ಇರಿಸಿರುವ ಗ್ರಾಹಕರಿಗೆ ಮನೆ ತಲುಪಲು ಸವಾರಿ ಒದಗಿಸಿ.

 • ಸಾಲದ ಕಾರು ಬದಲಿ

  ಕಾಯುವ ಸಮಯ ಮತ್ತು ಲಭ್ಯತೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ನಿಮ್ಮ ಎರವಲು ಪಡೆದ ಕಾರುಗಳು ಮತ್ತು ಶಟಲ್‌ಗಳ ಫ್ಲೀಟ್‌ಗೆ ರೈಡ್‌ಶೇರ್ ಆಯ್ಕೆಯನ್ನು ಸೇರಿಸಿ.

 • ಹೊಸ ಕಾರಿಗಾಗಿ ಸಾರಿಗೆ ವ್ಯವಸ್ಥೆ

  ಉದ್ಯೋಗಿಗಳು ಹೊಸ ಕಾರನ್ನು ಗ್ರಾಹಕರ ಮನೆಗೆ ತಲುಪಿಸಿದ ನಂತರ ಅವರಿಗೆ ಡೀಲರ್‌ಶಿಪ್‌ ಮಳಿಗೆಗೆ ವಾಪಸಾಲು ಸವಾರಿಯನ್ನು ವ್ಯವಸ್ಥೆಗೊಳಿಸಿ.

 • ಬಿಡಿಭಾಗಗಳ ಡೆಲಿವರಿ

  ಹೆಚ್ಚು ಸಕಾಲಿಕ ರೀತಿಯಲ್ಲಿ ದುರಸ್ತಿ ಪೂರ್ಣಗೊಳಿಸಲು ನಿರ್ದಿಷ್ಟ ವಾಹನ ಭಾಗಗಳ ಪಿಕಪ್ ಮತ್ತು ಡ್ರಾಪ್ ಆಫ್ ಅನ್ನು ವ್ಯವಸ್ಥೆಗೊಳಿಸಲು Central ಬಳಸಿ.

1/4

ಬೆಲ್ಲೆವ್ಯೂನ ಹೋಂಡಾ ಆಟೋ ಸೆಂಟರ್ ಶಟಲ್ ಸೇವೆಯಿಂದ Uber‌ಗೆ ಬದಲಾಯಿಸುವ ಮೂಲಕ 47% ವೆಚ್ಚವನ್ನು ಉಳಿಸಿದೆ.

ಅಗತ್ಯವಿರುವಂತೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ ಮತ್ತು ಟ್ರ್ಯಾಕ್ ಮಾಡಿ

ಆಗಾಗ ಕೇಳಲಾಗುವ ಪ್ರಶ್ನೆಗಳು

 • ಸಂಯೋಜಕರು ಕಾಂಟ್ಯಾಕ್ಟ್ ಆಯ್ಕೆಮಾಡುವ ಮೂಲಕ ಟ್ರಿಪ್‌ನಲ್ಲಿರುವ‌ ಚಾಲಕರಿಗೆ ನೇರವಾಗಿ ಸಂದೇಶ ಕಳುಹಿಸಬಹುದು. ಆ್ಯಪ್ ಹೊಂದಿರುವ ಸವಾರರು ತಮ್ಮ ಚಾಟ್ ವೈಶಿಷ್ಟ್ಯದೊಳಗೆ ಚಾಲಕರಿಗೆ ನೇರವಾಗಿ ಸಂದೇಶ ಕಳುಹಿಸಬಹುದು.

 • ಇಲ್ಲ, Central ಟ್ರಿಪ್‌ಗಳಿಗೆ ಈ ಸವಾರಿ‌ಗಳನ್ನು ವಿನಂತಿಸುವ ಸಂಸ್ಥೆಗಳಿಂದ ಪಾವತಿಸಲಾಗುತ್ತದೆ, ಆದ್ದರಿಂದ ಅತಿಥಿ ಬಳಕೆದಾರರು ತಮ್ಮ ಟ್ರಿಪ್‌ಗಳಲ್ಲಿ ಚಾಲಕರಿಗೆ ಪಾವತಿಸುವ ಅಥವಾ ಟಿಪ್ಸ್ ನೀಡುವ ಅಗತ್ಯವಿಲ್ಲ.

 • ಪ್ರತಿ ಟ್ರಿಪ್ ನಂತರ, ನೀವು ಡ್ಯಾಶ್‌ಬೋರ್ಡ್‌ನ "ಹಿಂದಿನ ಸವಾರಿಗಳು" ವಿಭಾಗಕ್ಕೆ ಹೋಗಬಹುದು ಮತ್ತು ನಮ್ಮ ಬೆಂಬಲ ತಂಡಕ್ಕೆ ಇಮೇಲ್ ಅನ್ನು ಸ್ವಯಂಚಾಲಿತವಾಗಿ ತಲುಪಿಸಲು ಬೆಂಬಲವನ್ನು ವಿನಂತಿಸಿ ಅನ್ನು ಕ್ಲಿಕ್ ಮಾಡಬಹುದು. ಆ್ಯಪ್ ಹೊಂದಿರುವ ಸವಾರರು ಆ್ಯಪ್‌ನಲ್ಲಿ ನೇರವಾಗಿ ಬೆಂಬಲವನ್ನು ಸಂಪರ್ಕಿಸಬಹುದು.

*ಈ ಪುಟದಲ್ಲಿನ ಸವಾರಿ ಆಯ್ಕೆಗಳು Uber ನಲ್ಲಿ ಲಭ್ಯವಿರುವ ಉತ್ಪನ್ನಗಳ ಮಾದರಿಗಳಾಗಿವೆ ಮತ್ತು ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರು Uber ಆ್ಯಪ್‌ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو