ಗ್ರಾಹಕರು, ಅತಿಥಿಗಳು, ಮತ್ತು ಉದ್ಯೋಗಿಗಳಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ
ಜಾಗತಿಕವಾಗಿ ಲಭ್ಯವಿರುವ Central ಮೂಲಕ ಯಾರಿಗಾದರೂ, ಅವರು Uber ಆ್ಯಪ್ ಹೊಂದಿಲ್ಲದಿದ್ದರೂ ಸಹ ಅವರಿಗೆ ಸವಾರಿಯನ್ನು ವಿನಂತಿಸಲು Uber for Business ಬಳಕೆದಾರರಿಗೆ ಜಗತ್ತಿನ ಅತಿದೊಡ್ಡ ಮೊಬಿಲಿಟಿ ನೆಟ್‌ವರ್ಕ್ ಅನ್ನು ಸಮಪರ್ಕಪವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಗ್ರಾಹಕರಿಗೆ ಉತ್ತಮ, ವ್ಯವಹಾರಕ್ಕೆ ಇನ್ನೂ ಉತ್ತಮ
ವೆಚ್ಚಗಳನ್ನು ಆಪ್ಟಿಮೈಸ್ ಮಾಡಿ
ಕೈಗೊಂಡ ಸವಾರಿಗಳಿಗೆ ಮಾತ್ರ ಹಣವನ್ನು ಪಾವತಿಸುವ ಮೂಲಕ ಹಣ ಉಳಿಸಿ ಮತ್ತು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಖರ್ಚನ್ನು ಟ್ರ್ಯಾಕ್ ಮಾಡಿ.
ಗ್ರಾಹಕರ ಅನುಭವವನ್ನು ವೃದ್ಧಿಸಿ
ನಿಮ್ಮ ಗ್ರಾಹಕರಿಗೆ ಸವಾರಿಗಳನ್ನು ನಿಗದಿಪಡಿಸಿ. ಗಂಟೆಯ ಪ್ರಕಾರ ಪ್ರೀಮಿಯಂ ಸವಾರಿಗಳನ್ನು ವಿನಂತಿಸಿ ಅಥವಾ ಸವಾರಿಗಳನ್ನು ಬುಕ್ ಮಾಡಿ.
ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿ
ಪುನರಾವರ್ತಿತ ಸವಾರಿಗಳನ್ನು ನಿಗದಿಪಡಿಸಿ ಅಥವಾ ಕೇಂದ್ರೀಕೃತ ಡ್ಯಾಶ್‌ಬೋರ್ಡ್ ಮೂಲಕ ಅದೇ ಟ್ರಿಪ್ ಅನ್ನು ಸುಲಭವಾಗಿ ವಿನಂತಿಸಿ.
ಎರವಲು ಪಡೆದ ಕಾರುಗಳ ಮೇಲಿನ ನಿಮ್ಮ ಅವಲಂಬನೆಯನ್ನು ಕಡಿಮೆ ಮಾಡಿ
ಎರವಲು ಪಡೆದ ಕಾರು ಮತ್ತು ಶಟಲ್ ಬಳಕೆಯನ್ನು ಕಡಿಮೆ ಮಾಡಿ, ಜೊತೆಗೆ ಅವುಗಳಿಗೆ ಪಾವತಿಸುವ ಶುಲ್ಕವನ್ನೂ ಕಡಿಮೆಗೊಳಿಸಿ.
ಕೇಂದ್ರ ಡ್ಯಾಶ್‌ಬೋರ್ಡ್‌ನಿಂದ ಸವಾರಿಗಳ ಮೇಲ್ವಿಚಾರಣೆ ಮಾಡಿ
ಪ್ರಗತಿಯಲ್ಲಿರುವ ಮತ್ತು ಮುಂಬರುವ ಸವಾರಿಗಳ ಸ್ಟೇಟಸ್ ಅನ್ನು ಒಂದೇ ಸ್ಥಳದಲ್ಲಿ ನೋಡಿ.
ನಿಮ್ಮ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸಿ
ನಿಮ್ಮ ಉದ್ಯೋಗಿಗಳನ್ನು ಅವರಿಗೆ ಹೋಗಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮತ್ತು ಬಳಕೆಯ ಬಗ್ಗೆ ಮಾಹಿತಿ ಪಡೆಯಿರಿ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ ನೋಡಿ
ಸಂಯೋಜಕರು ಸವಾರಿಯನ್ನು ವ್ಯವಸ್ಥೆಗೊಳಿಸುತ್ತಾರೆ
- ಉಚಿತ ಖಾತೆ ರಚಿಸಿ ಅಥವಾ ನಿಮ್ಮ Uber for Business ರುಜುವಾತುಗಳನ್ನು ಬಳಸಿ Central ಗೆ ಲಾಗ್ ಇನ್ ಮಾಡಿ.
- ಸವಾರಿ ರಚಿಸಿ, ನಂತರ ನಿಮ್ಮ ಸವಾರರ ಫೋನ್ ಸಂಖ್ಯೆ ಮತ್ತು ಪಿಕಪ್ ಹಾಗೂ ಡ್ರಾಪ್ಆಫ್ ಸ್ಥಳಗಳನ್ನು ನಮೂದಿಸಿ.
- ನಿಮ್ಮ ಸವಾರರ ಆದ್ಯತೆಯ ವಾಹನ ಪ್ರಕಾರವನ್ನು ಆರಿಸಿ ಮತ್ತು ಚಾಲಕರಿಗೆ ಯಾವುದೇ ಸೂಚನೆಗಳನ್ನು ಸೇರಿಸಿ.
ಸವಾರರಿಗೆ ಅವರ ಸವಾರಿಯ ಬಗ್ಗೆ ಮಾಹಿತಿ ನೀಡಲಾಗುವುದು
4. ಸವಾರರು ತಮ್ಮ ಸವಾರಿ ವಿವರಗಳೊಂದಿಗೆ SMS ದೃಢೀಕರಣ ಮತ್ತು ಅವರ ಟ್ರಿಪ್ ಅನ್ನು ಟ್ರ್ಯಾಕ್ ಮಾಡಲು ಲಿಂಕ್ ಅನ್ನು ಸ್ವೀಕರಿಸುತ್ತಾರೆ—ಇದಕ್ಕಾಗಿ Uber ಆ್ಯಪ್ನ ಅಗತ್ಯವಿಲ್ಲ.
5. ಸವಾರರು Uber ಆ್ಯಪ್ ಹೊಂದಿದ್ದರೆ, ಅವರು ಆ್ಯಪ್‌ನಲ್ಲಿ ಟ್ರಿಪ್ಗಳನ್ನು ಟ್ರ್ಯಾಕ್ ಮಾಡಬಹುದು, ಸುರಕ್ಷತೆ ವೈಶಿಷ್ಟ್ಯಗಳನ್ನು ಆ್ಯಕ್ಸೆಸ್ ಮಾಡಬಹುದು ಮತ್ತು ನಮ್ಮ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸಬಹುದು.
ಸಂಯೋಜಕರು ಟ್ರಿಪ್ಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿರ್ವಹಿಸಬಹುದು
6. ಸಂಯೋಜಕರು ಸವಾರಿಯ ಪ್ರಗತಿಯನ್ನು ಮೇಲ್ವಿಚಾರ ಣೆ ಮಾಡಬಹುದು, ಚಾಲಕನಿಗೆ ಸಂದೇಶವನ್ನು ಕಳುಹಿಸಬಹುದು ಮತ್ತು ಅವರ ಡ್ಯಾಶ್‌ಬೋರ್ಡ್‌ನಲ್ಲಿ ಯಾವುದೇ ಮುಂಬರುವ ಬುಕಿಂಗ್ಗಳನ್ನು ವೀಕ್ಷಿಸಬಹುದು.
7. ಸವಾರಿ ಪೂರ್ಣಗೊಂಡ ನಂತರ, ಸಂಯೋಜಕರು ಟ್ರಿಪ್ ವಿವರಗಳು ಮತ್ತು ವೆಚ್ಚಗಳನ್ನು ವೀಕ್ಷಿಸಬಹುದು—ಮತ್ತು ಖರ್ಚಿನ ವರದಿಗಳನ್ನು ಯಾವುದೇ ಸಮಯದಲ್ಲಿ ಡೌನ್ಲೋಡ್ ಮಾಡಬಹುದು.
ನಿಮ್ಮ ವ್ಯವಹಾರಕ್ಕಾಗಿ ಕಸ್ಟಮೈಸ್ ಮಾಡಬಹುದಾದ ವೈಶಿಷ್ಟ್ಯಗಳು
ಒನ್-ವೇ ಅಥವಾ ರೌಂಡ್-ಟ್ರಿಪ್ ಸವಾರಿಗಳು
ಒನ್-ವೇ ಸವಾರಿಯನ್ನು ವ್ಯವಸ್ಥೆಗೊಳಿಸಿ ಅಥವಾ ಅದನ್ನು ರೌಂಡ್ ಟ್ರಿಪ್ ಆಗಿ ಮಾಡಿ.
ನಿಗದಿತ ಸವಾರಿಗಳು
30 ದಿನಗಳಷ್ಟು ಮುಂಚಿತವಾಗಿ ಸವಾರಿಗಳನ್ನು ಸುಲಭವಾಗಿ ನಿಗದಿಪಡಿಸಿ.
ಫ್ಲೆಕ್ಸಿಬಲ್ ಸವಾ ರಿಗಳು
ನಿಮ್ಮ ಸವಾರರು ತಮ್ಮ ಸವಾರಿಯ ನಿಖರವಾದ ಸಮಯವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಿ.
ವಾಹನ ಪ್ರಕಾರಗಳ ಆಯ್ಕೆ
ಲಭ್ಯವಿರುವ ಸವಾರಿ ಆಯ್ಕೆಗಳಲ್ಲಿ UberX, Uber Green, UberXL, Uber Black ಮತ್ತು ಇನ್ನಷ್ಟು ಸೇರಿವೆ.*
ಚಾಲಕರಿಗೆ ಮೆಮೊಗಳು ಮತ್ತು ಟಿಪ್ಪಣಿಗಳು
ಚಾಲಕರಿಗೆ ಯಾವುದೇ ವಿಶೇಷ ಸೂಚನೆಗಳನ್ನು ಹೊಂದಿರ ುವ ಆಂತರಿಕ ಮೆಮೊ ಅಥವಾ ಟಿಪ್ಪಣಿ ಸೇರಿಸಿ.
ತಡೆರಹಿತ ಬಿಲ್ಲಿಂಗ್ ಮತ್ತು ವರದಿ ಮಾಡುವಿಕೆ
ಪ್ರಯಾಣ ಡೇಟಾ ವರದಿಗಳನ್ನು ಪಡೆದುಕೊಳ್ಳಿ ಮತ್ತು ಮಾಸಿಕ ಸ್ಟೇಟ್‌ಮೆಂಟ್‌ಗಳೊಂದಿಗೆ ಖರ್ಚು ಕುರಿತು ಮಾಹಿತಿಯನ್ನು ಪಡೆಯಿರಿ.
SMS ಸಂವಹನಗಳು
ಪಿಕಪ್ ಸ್ಥಳ, ಚಾಲಕರ ಹೆಸರು ಮತ್ತು ವಾಹನದ ವಿವರಗಳನ್ನು ಒಳಗೊಂಡಂತೆ ಟ್ರಿಪ್ ವಿವರಗಳನ್ನು ಸವಾರರು SMS ಮೂಲಕ ಸ್ವೀಕರಿಸುತ್ತಾರೆ. Uber ಆ್ಯಪ್ನ ಅಗತ್ಯವಿಲ್ಲ.
ಟ್ರಿಪ್ ಲಿಂಕ್ ಮಾಡುವುದು
Uber ಆ್ಯಪ್ ಹೊಂದಿರುವ ಸವಾರರಿಗೆ, ಟ್ರಿಪ್ಗಳನ್ನು ಅವರ Uber ಖಾತೆಗೆ ಸ್ವಯಂಚಾಲಿತವಾಗಿ ಲಿಂಕ್ ಮಾಡಲಾಗುತ್ತದೆ. Central ಮೂಲಕ ತಮ್ಮ ಪರವಾಗಿ ವಿನಂತಿಸಿದ ಟ್ರಿಪ್‌ಗಳಿಗೆ ಸವಾರರಿಗೆ ಶುಲ್ಕ ವಿಧಿಸಲಾಗುವುದಿಲ್ಲ.
ಟ್ರಿಪ್ ಟ್ರ್ಯಾಕ್ ಮಾಡುವುದು
ಸವಾರರು ತಮ್ಮ ಟ್ರಿಪ್ ಅನ್ನು Uber ಆ್ಯಪ್‌ನಲ್ಲಿ ಲೈವ್ ಆಗಿ ಟ್ರ್ಯಾಕ್ ಮಾಡಬಹುದು ಅಥವಾ ಯಾವುದೇ ವೆಬ್ ಬ್ರೌಸರ್ನಲ್ಲಿ ವೆಬ್ವ್ಯೂ ನಕ್ಷೆಯನ್ನು ಬಳಸಬಹುದು.
ಸವಾರ-ಚಾಲಕ ಸಂವಹನ
ಪಿಕಪ್ ಸ್ಥಳದ ಕುರಿತು ನಿರ್ಧರಿಸ ಲು ಸವಾರರು ಚಾಲಕರನ್ನು ಸಂಪರ್ಕಿಸಬಹುದು.
ಭಾಷೆಯ ಆದ್ಯತೆಗಳು
SMS ಸಂವಹನಗಳನ್ನು ಸುಲಭಗೊಳಿಸಲು ಸಂಯೋಜಕರು ಸವಾರರಿಗೆ ಭಾಷೆಯ ಆದ್ಯತೆಯನ್ನು ನಿರ್ದಿಷ್ಟಪಡಿಸಬಹುದು.
ನೀವು ಯಾವುದೇ ಉದ್ಯಮದಲ್ಲಿದ್ದರೂ ನಿಮ್ಮ ವ್ಯವಹಾರವನ್ನು ವೃದ್ಧಿಸುತ್ತಾ ಇರಿ.
ಸೇವೆ ಮತ್ತು ದುರಸ್ತಿ ಸವಾರಿಗಳು
ತಯಾರಕರು ಅಥವಾ ವಿತರಕ ಸಂಸ್ಥೆಯಲ್ಲಿ ತಮ್ಮ ಕಾರನ್ನು ಸರ್ವಿಸ್ ಅಥವಾ ದುರಸ್ತಿಗಾಗಿ ಇರಿಸಿರುವ ಗ್ರಾಹಕರಿಗೆ ಮನೆ ತಲುಪಲು ಸವಾರಿ ಒದಗಿಸಿ.
ಸಾಲದ ಕಾರು ಬದಲಿ
ಕಾಯುವ ಸಮಯ ಮತ್ತು ಲಭ್ಯತೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ನಿಮ್ಮ ಎರವಲು ಪಡೆದ ಕಾರುಗಳು ಮತ್ತು ಶಟಲ್‌ಗಳ ಫ್ಲೀಟ್‌ಗೆ ರೈಡ್‌ಶೇರ್ ಆಯ್ಕೆಯನ್ನು ಸೇರಿಸಿ.
ಹೊಸ ಕಾರಿಗಾಗಿ ಸಾರಿಗೆ ವ್ಯವಸ್ಥೆ
ಉದ್ಯೋಗಿಗಳು ಹೊಸ ಕಾರನ್ನು ಗ್ರಾಹಕರ ಮನೆಗೆ ತಲುಪಿಸಿದ ನಂತರ ಅವರಿಗೆ ಡೀಲರ್‌ಶಿಪ್ ಮಳಿಗೆಗೆ ವಾಪಸಾಲು ಸವಾರಿಯನ್ನು ವ್ಯವಸ್ಥೆಗೊಳಿಸಿ.
ಬಿಡಿಭಾಗಗಳ ಡೆಲಿವರಿ
ಹೆಚ್ಚು ಸಕಾಲಿಕ ರೀತಿಯಲ್ಲಿ ದುರಸ್ತಿ ಪೂರ್ಣಗೊಳಿಸಲು ನಿರ್ದಿಷ್ಟ ವಾಹನ ಭಾಗಗಳ ಪಿಕಪ್ ಮತ್ತು ಡ್ರಾಪ್ ಆಫ್ ಅನ್ನು ವ್ಯವಸ್ಥೆಗೊಳಿಸಲು Central ಬಳಸಿ.
ಟ್ರಕ್ ಮತ್ತು ರೈಲು ಚಾಲಕರಿಗೆ ಸವಾರಿಗಳು
ಶಿಫ್ಟ್ಗಳ ಬದಲಾವಣೆ ಸಂದರ್ಭ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮತ್ತು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಹಾಯ ಮಾಡಲು ಟ್ರಕ್ ಮತ್ತು ರೈಲು ಮುಂತಾದ ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ.
ಗ್ರಾಹಕರು ಸವಾರಿಗಳು
ಗ್ರಾಹಕರು ಟ್ರಕ್ಗಳನ್ನು ಬಾಡಿಗೆಗೆ ನೀಡುವವರಾಗಿದ್ದರೆ ವಾಹನ ಪಿಕಪ್ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿಂದ ವಾಪಸಾಗಲು ಸವಾರಿಗಳನ್ನು ಅವರಿಗೆ ಒದಗಿಸಿ.
ಐಟಂ ಡೆಲಿವರಿ
ಉತ್ಪನ್ನಗಳ ಸಾಗಾಟವನ್ನು ಸುಲಭಗೊಳಿಸಲು ಮತ್ತು ಪ್ಯಾಕೇಜ್ಗಳನ್ನು ತಡೆರಹಿತವಾಗಿ ಕಳುಹಿಸಲು Central ಬಳಸಿ.
ಎಕ್ಸಿಕ್ಯೂಟಿವ್ ಸಾರಿಗೆ ಆಯ್ಕೆಗಳು
ಅಧಿಕಾರಿಗಳು ಅಥವಾ VIP ಕ್ಲೈಂಟ್ಗಳಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ. Uber Comfort Electric, Uber Black ಮತ್ತು ಇನ್ನಷ್ಟು ಇಂತಹ ಸವಾರಿ ಆಯ್ಕೆಗಳಿಂದ ಆರಿಸಿ ಮತ್ತು ಕಾರ್ಯನಿರತ ವೇಳಾಪಟ್ಟಿಗಳಿಗೆ ಅನುವು ಮಾಡಿಕೊಡಲು ಹಲವು ನಿಲುಗಡೆಗಳನ್ನು ಸೇರಿಸಿ.
ತಂಡಗಳಿಗೆ ಸವಾರಿಗಳು
Central ನಲ್ಲಿ UberXL ಟ್ರಿಪ್ಗಳನ್ನು ವಿನಂತಿಸುವ ಮೂಲಕ ಕ್ಲೈಂಟ್ ಸಭೆಗಳು, ತಂಡದ ಡಿನ್ನರ್ಗಳು ಮತ್ತು ಹೆಚ್ಚಿನವುಗಳಿಗೆ ಹೋಗುವ ತಂಡಗಳಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ.
ಅತಿಥಿಗಳಿಗೆ ಸಾರಿಗೆ ವ್ಯವಸ್ಥೆ
ವಿಮಾನ ನಿಲ್ದಾಣಕ್ಕೆ, ಪ್ರವಾಸಿ ತಾಣಗಳಿಗೆ ಅಥವಾ ಅವರಿಗೆ ಬೇಕಿದ್ದಲ್ಲಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸುವ ಮೂಲಕ ಹೋಟೆಲ್ ಅತಿಥಿಗಳಿಗೆ VIP ಅನುಭವವನ್ನು ಒದಗಿಸಿ. ನೀವು ವಿವಿಧ ಸವಾರಿ ಆಯ್ಕೆಗಳಿಂದ ಆಯ್ಕೆ ಮಾಡಬಹುದು, ಬಹು ನಿಲುಗಡೆಗಳನ್ನು ವಿನಂತಿಸಬಹುದು ಮತ್ತು ಇನ್ನಷ್ಟು ಮಾಡಬಹುದು.
ಹೋಟೆಲ್ ಸಿಬ್ಬಂದಿಗಾಗಿ ಸವಾರಿಗಳು
ಹೋಟೆೆಲ್ ಉದ್ಯೋಗಿಗಳಿಗೆ ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿಂದ ಹಿಂತಿರುಗಲು ಸಹಾಯ ಮಾಡಲು ಅವರಿಗೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ.
ಬೆಲ್ಲೆವ್ಯೂನ ಹೋಂಡಾ ಆಟೋ ಸೆಂಟರ್ ಶಟಲ್ ಸೇವೆಯಿಂದ Uberಗೆ ಬದಲಾಯಿಸುವ ಮೂಲಕ 47% ವೆಚ್ಚವನ್ನು ಉಳಿಸಿದೆ.
ಅಗತ್ಯವಿರುವಂತೆ ಸವಾರಿಗಳನ್ನು ವ್ಯವಸ್ಥೆಗೊಳಿಸಿ ಮತ್ತು ಟ್ರ್ಯಾಕ್ ಮಾಡಿ
Uber for Business ನಿಂದ ಹೆಚ್ಚಿನ ಆಫರ್ಗಳು
ಆಗಾಗ ಕೇಳಲಾಗುವ ಪ್ರಶ್ನೆಗಳು
- ನಾನು ಚಾಲಕರೊಂದಿಗೆ ಹೇಗೆ ಸಂಪರ್ಕ ಸಾಧಿಸಬಹುದು?
ಸಂಯೋಜಕರು ಕಾಂಟ್ಯಾಕ್ಟ್ ಆಯ್ಕೆಮಾಡುವ ಮೂಲಕ ಟ್ರಿಪ್‌ನಲ್ಲಿರುವ ಚಾಲಕರಿಗೆ ನೇರವಾಗಿ ಸಂದೇಶ ಕಳುಹಿಸಬಹುದು. ಆ್ಯಪ್ ಹೊಂದಿರುವ ಸವಾರರು ತಮ್ಮ ಚಾಟ್ ವೈಶಿಷ್ಟ್ಯದೊಳಗೆ ಚಾಲಕರಿಗೆ ನೇರವಾಗಿ ಸಂದೇಶ ಕಳುಹಿಸಬಹುದು.
- ಸವಾರರು Central ಟ್ರಿಪ್‌ಗಳಿಗೆ ಪಾವತಿಸಬೇಕೇ?
Down Small ಇಲ್ಲ, Central ಟ್ರಿಪ್‌ಗಳಿಗೆ ಈ ಸವಾರಿಗಳನ್ನು ವಿನಂತಿಸುವ ಸಂಸ್ಥೆಗಳಿಂದ ಪಾವತಿಸಲಾಗುತ್ತದೆ, ಆದ್ದರಿಂದ ಅತಿಥಿ ಬಳಕೆದಾರರು ತಮ್ಮ ಟ್ರಿಪ್‌ಗಳಲ್ಲಿ ಚಾಲಕರಿಗೆ ಪಾವತಿಸುವ ಅಥವಾ ಟಿಪ್ಸ್ ನೀಡುವ ಅಗತ್ಯವಿಲ್ಲ.
- ಟ್ರಿಪ್ ಮುಗಿದ ನಂತರ ನಾನು ಚಾಲಕರನ್ನು ಸಂಪರ್ಕಿಸಬೇಕಾದರೆ ಏನು ಮಾಡಬೇಕು?
Down Small ಪ್ರತಿ ಟ್ರಿಪ್ ನಂತರ, ನೀವು ಡ್ಯಾಶ್‌ಬೋರ್ಡ್‌ನ "ಹಿಂದಿನ ಸವಾರಿಗಳು" ವಿಭಾಗಕ್ಕೆ ಹೋಗಬಹುದು ಮತ್ತು ನಮ್ಮ ಬೆಂಬಲ ತಂಡಕ್ಕೆ ಇಮೇಲ್ ಅನ್ನು ಸ್ವಯಂಚಾಲಿತವಾಗಿ ತಲುಪಿಸಲು ಬೆಂಬಲವನ್ನು ವಿನಂತಿಸಿ ಅನ್ನು ಕ್ಲಿಕ್ ಮಾಡಬಹುದು. ಆ್ಯಪ್ ಹೊಂದಿರುವ ಸವಾರರು ಆ್ಯಪ್‌ನಲ್ಲಿ ನೇರವಾಗಿ ಬೆಂಬಲವನ್ನು ಸಂಪರ್ಕಿಸಬಹುದು.
*ಈ ಪುಟದಲ್ಲಿನ ಸವಾರಿ ಆಯ್ಕೆಗಳು Uber ನಲ್ಲಿ ಲಭ್ಯವಿರುವ ಉತ್ಪನ್ನಗಳ ಮಾದರಿಗಳಾಗಿವೆ ಮತ್ತು ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು.
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ